ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
August 02, 2005
Select your Operating System: Windows XP. Windows 2000. Windows 98 Linux Mac OSX. Read: How to Key in (type in) Kannada using Unicode on your Operating System. Read: How to read emails in Kannada on yahoo, gmail and your favourite web client.
ಲೇಖಕರು: T S GuruRaja
ವಿಧ: Basic page
August 02, 2005
ನಾನು ೧೯೭೭ರಲ್ಲಿ ಹಿರಿಯೂರಿನಲ್ಲಿ ಸರ್ಕಾರಿ ಬಾಲಕರ ಕಿರಿಯರ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾಗ ಈ ಘಟನೆ ನಡೆಯಿತು. ನಮ್ಮ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳಲ್ಲಿ ಬಹುತೇಕರು ಆರ್ಥಿಕವಾಗಿ ತೀರಾ ಹಿಂದುಳಿದ ಹಿನ್ನೆಲೆಯಿಂದ ಬಂದವರಾದ್ದರಿಮ್ದ ಎಷ್ಟೋ ಸಮಯ ಬಹಳಷ್ಟು ಜನರಿಗೆ ಬಟ್ಟೆಬರೆ ಚೆನ್ನಾಗಿರುತ್ತಿರಲಿಲ್ಲ. ನನ್ನ ಮನೆಗೆ ಹತ್ತಿರವೇ ಮನೆ ಇದ್ದ ಸಹಪಾಠಿಯೊಬ್ಬ ಪ್ರತಿದಿನ ಶಾಲೆಯಿಂದ ಹಿತಿರುಗುವಾಗ ನನ್ನನ್ನು ಬಹಳಷ್ಟು ಬಲವಂತ ಮಾಡಿ ಇಡೀ ಶಾಲೆಯಲ್ಲಿ ನನ್ನ ಬಳಿ…
ಲೇಖಕರು: T S GuruRaja
ವಿಧ: Basic page
August 02, 2005
ಈ‌ ಕೆಳಗಿನ ರಚನೆ ಸಂತ ಶಿಶುನಾಳ ಶರೀಫರದ್ದು. ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರೋ ತಂಬೂರಿ ಸರಸ ಸಂಗೀತದ ಕುರುಹುಗಳರಿಯದೆ ಕರದೊಳು ಹಿಡಿಯಬ್ಯಾಡ ತಂಬೂರಿ ಮಧ್ಯದೊಳೇಳು ನಾದದ ತಂಬೂರಿ ಅದ ತಿದ್ದಿ ನುಡಿಸಬೇಕೋ ತಂಬೂರಿ ಸಿದ್ಧ ಸಾಧಕರ ಸುವಿದ್ಯೊಕ್ಕೆ ಒದಗುವ ಬುದ್ಧಿವಂತಗೆ ತಕ್ಕ ತಂಬೂರಿ ಬಾಳ ಬಲ್ಲವರಿಗೆ ತಂಬೂರಿ ದೇವ ಬಾಳಾಕ್ಷ ರಚಿಸಿದ ತಂಬೂರಿ ಬಿತ್ತೀಸ ರಾಗದ ಬಗೆಯನು ತಿಳಿಯದ ಕತ್ತೆಗಿನ್ನ್ಯಾತಕ್ಕ ತಂಬೂರಿ ಅಸಮ ಸುಮ್ಯಾಳಕ್ಕ ತಂಬೂರಿ ಇದು ಹಸನಾಗಿ ಆಡುವ ತಂಬೂರಿ…
ಲೇಖಕರು: olnswamy
ವಿಧ: Basic page
August 02, 2005
ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು ಎನ್ನ ನಿಂದಲ್ಲಿ ನಿಲಲೀಯದು ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ ಎಂದು ನಿಮ್ಮೊಡಗೂಡುವೆನಯ್ಯಾ ಮನಸ್ಸು ಘನ ಮಾತ್ರವಲ್ಲ ಕೋತಿಯೂ ಹೌದು. ನನ್ನ ಮನಸ್ಸು ನನ್ನ ಮೇಲೆ ಮಾಡುವ ದಾಳಿ ಘನವಾದದ್ದು. ಏನು ಮಾಡಲೆಂದು ಹೊಳೆಯುತ್ತಿಲ್ಲ. ಈ ಕ್ಷಣದಲ್ಲಿ ಆಕಾಶಕ್ಕೆ ಎತ್ತಿ ಮರುಕ್ಷಣಕ್ಕೆ ನನ್ನನ್ನು…
ಲೇಖಕರು: T S GuruRaja
ವಿಧ: Basic page
August 02, 2005
ಅನಂತಕೃಷ್ಣನು ರೆಬೆಕಾರ ಬದುಕಿನಲ್ಲಿ ಸಂತಸ ತರಬೇಕೆಂಬ ಪ್ರಯತ್ನದಲ್ಲಿದ್ದಾಗಲೇ ಹೊತ್ತಿಕೊಂಡ ದಳ್ಳುರಿ ಎಂಥದ್ದು? **** ಊರಿನಿಂದ ಹಣ ಬಂದಿದೆಯೇ ಎಂದು ವಿಚಾರಿಸಲು ಸತತವಾಗಿ ಐದನೇಯ ದಿನ ಬ್ಯಾಂಕಿಗೆ ಬಂದಿದ್ದೆ. ಇಂದೂ ಸಹ ಹಣ ಬಂದಿಲ್ಲವೆಂದು ತಿಳಿಯಿತು. ನಾನು ಹಿಂತಿರುಗಿ ಹೊರಡುವಾಗ ಉಳಿತಾಯವಿಭಾಗದಲ್ಲಿದ್ದ ಉದ್ಯೋಗಿ, ನನ್ನನ್ನು ಬಹಳ ದಿನಗಳಿಂದ ಗಮನಿಸಿದ್ದವರು, "ಅನಂತಕೃಷ್ಣ, ಹಣ ತೆಗೆದುಕೊಳ್ಳಬೇಕಿತ್ತೇನು?" ಎಂದು ಕೇಳಿದರು. "ಹೌದು ಮೇಡಮ್, ಆದರೆ ಊರಿನಿಂದ ಹಣ ಬಂದಿಲ್ಲ." "ತುರ್ತಾಗಿ…
ಲೇಖಕರು: tvsrinivas41
ವಿಧ: Basic page
August 01, 2005
ರಾವಣನ ಮಕ್ಕಳು ರಾಮನ ಮಕ್ಕಳಿಗೆ ಹೊಡೆದದ್ದೊಂದು ಸುದ್ದಿ ಎಂದೂ ಎಲ್ಲಿಯೂ ಹೊಡೆಸಿಕೊಳ್ಳುವ ಜಾಯಮಾನದವರೀ ನಮ್ಮ ಮಕ್ಕಳು ದಾಂಡಿಗರಾದ ರಾವಣನ ಮಕ್ಕಳ ಮುಂದೆ ಕುಬ್ಜರಾಗಿ ಲವಲೇಶವೂ ಇಲ್ಲದಂತಾದರು ರಾಮನ ಮಕ್ಕಳು ಬದಿಯ ಬೀದಿಯಲಿ ತೋರಿಸಲಾರರು ಇವರ ಪೌರುಷ ಅದೆಲ್ಲಾ ನಮ್ಮ ಮುಂದೆಯೇ ತೋರಿಸುವ ಉತ್ತರ ಕುಮಾರರಿವರು ಇವರಿಗೆ ಸಿಗುವ ಕೋಚುಗಳೆಂಥವರು ರೈಟ್ ಎಂದು ಒಬ್ಬ ಅಂದು ಬಂದ ಬಂದು ಸ್ವಲ್ಪ ದಿನಗಳಿಗೇ ಇವರ ಮೊಂಡುತನ ನೋಡಿ ರೈಟ್ ಹೇಳಿದ ಈಗ ಬಂದಿಹ ಚಾಪೆಲ್ ಮೊದಲ ಬಾಲಿಗೇ ಮುಗ್ಗರಿಸಿಹ ಇವನಿಗೆ…
ಲೇಖಕರು: hpn
ವಿಧ: Basic page
August 01, 2005
Tasks pending Status - (W - working on it, D - Dropped, F - Finished Task, N - Not sure about the request) Input by Pavanaja: * Comment titles getting curtailed (F). Thanks to UnConeD * 403, 404 Redirect pages to be kept away from other articles (F). * My recent posts option. Input by OLN: * Font Size/Increase (F). * Active registered users count on mainpage. (F) * ಪ್ರಶ್ನೆ ಉತ್ತರ section. * 'links…
ಲೇಖಕರು: modmani
ವಿಧ: Basic page
August 01, 2005
ಓಸಿಮಾಂಡಿಯಾಸ್ ದೂರದೂರಿನ ಯಾತ್ರಿಕನೊಬ್ಬ ಪುರಾತನ ನಾಡಿಂದ ಹಿಂದಿರುಗುವಾಗ ಕಂಡನಂತೆ ಮರಳುಗಾಡಿನ ಮಧ್ಯೆ ಮುಂಡವಿಲ್ಲದ ಕಾಲುಗಳೆರಡು, ಕೆಳಗೆ ಮರಳಲ್ಲಿ ಬಿದ್ದ ಮಸುಕು ಶಿರ, ಮುಖದಲ್ಲಿ ಮುಗುಳ್ನಗೆ, ಬಿರಿದ ತುಟಿ, ತೋರುತಿದೆ ಗತ್ತು, ಶಿಲ್ಪಿ ಕೈಚಳಕದ ಕಸರತ್ತು, ಶಿಥಿಲ ಶಿಲ್ಪದ ಮೇಲೂ ಭಾವಗಳ ಬೆಳಕು, ವಿಧಿಗೆದುರಾಗಿ ನಿಂತಿದೆಯೇನೋ ಈ ಬದುಕು: ಕೆಳಗೊಂದು ಬಿನ್ನವತ್ತಳೆ, ಹೀಗೆ "ಓ ಬಲಶಾಲಿಗಳೇ, ನಾನು ಓಸಿಮಾಂಡಿಯಾಸಿಸ್, ರಾಜಾಧಿರಾಜ. ನನ್ನ ಸಾಧನೆಗಳೆಡೆ ನೋಡಿ, ನೀವು ಹೆದರುವುದೇ ನಿಜ" ಶಿಥಿಲ…
ಲೇಖಕರು: hpn
ವಿಧ: ಚರ್ಚೆಯ ವಿಷಯ
August 01, 2005
ಸದಸ್ಯರೆಲ್ಲರಿಗೂ ಅಭಿನಂದನೆಗಳು. ನೀವುಗಳು ಮತ್ತಷ್ಟು 'ಸಂಪದ'ದಲ್ಲಿ ಕಾರ್ಯಶೀಲರಾಗುವಿರೆಂದು ಆಶಿಸುತ್ತ, 'ಸಂಪದ ಲೈವ್' ನಿಮ್ಮ ಮುಂದಿಡುತ್ತಿದ್ದೇನೆ. 'ಸಂಪದ ಲೈವ್'ನಲ್ಲಿ ನೀವು ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಬಹುದು. ಆದರೆ ಗಮನದಲ್ಲಿಡಿ: ಇದಕ್ಕೆ ಜಾವಾಸ್ಕ್ರಿಪ್ಟ್ ಸಪೋರ್ಟ್ ಇರುವ ಬ್ರೌಸರ್ ಬೇಕು! ಸಂಪದ ಲೈವ್ ಬರಿಯ ಪ್ರಯೋಗವಷ್ಟೆ. ಆದುದರಿಂದ 'ಸಂಪದ'ದಲ್ಲಿ ಅದರ ಇರುವಿಕೆ ನಿಮ್ಮೆಲ್ಲರ ರಿಯಾಕ್ಷನ್ ಮೇಲೆ ನಿಂತಿರುವಂತದ್ದು. ಎಲ್ಲರಿಗೂ ಸರಿ ಕಂಡಲ್ಲಿ ಈ ಸೌಲಭ್ಯ ಮುಂದುವರೆಯುವುದು. [:…
ಲೇಖಕರು: tvsrinivas41
ವಿಧ: Basic page
August 01, 2005
ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್ವಾರಸ್ಯಕರ ಮಾಹಿತಿಯನ್ನು ಕೆಳಗೆ ತಿಳಿಸಲು ಪ್ರಯತ್ನಿಸಿದ್ದೇನೆ. ಕವನವನ್ನೂ ಕೆಳಗೆ ಸೇರಿಸಿರುವೆ, ಓದಿ. ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ…