ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
August 07, 2005
ಆ ಜೋಡಿ ಕಿಟಕಿಯ ಪಕ್ಕದ ಸೀಟಿನಲಿ ಬಿದ್ದು ಬಿದ್ದು ನಗುತಿಹರು ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿಹರು ಮುದುಕ ತರುಣ ಕೂಸು ಎಲ್ಲರ ಕಣ್ಣೂ ಅವರ ಮೇಲೇ ನಾನೂ ಕುತೂಹಲದಿ ನೋಡಿದೆ ಏನಿವರ ಲೀಲೆ ಬೆನ್ನ ಮೇಲೆ ಹರಡಿಹ ನೀಳ ಗಾಢ ಕಪ್ಪು ಕೇಶ ನೋಡುಗರೆಲ್ಲರನೂ ಹಿಡಿದಿಡುವಂತಹ ಪಾಶ ಮಲ್ಲಿಗೆಯ ಚಿಗುರೆಲೆಯಂತಹ ಮೋಹಕ ಮುಂಗುರುಳು ಅಗಲವಾದ ಹಣೆಯ ಮೇಲೆ ಮುತ್ತಿಕ್ಕುತಿರಲು ನಾಸಿಕವಂತೂ ಕೆಂಪನೆಯ ಗೇರು ಹಣ್ಣು ನೋಡಿದರೆ ಮತ್ತೆ ನೋಡಬಯಸುವ ಅವಳನ್ನು ಒಪ್ಪವಾಗಿ ಉಟ್ಟಿಹಳು ನೀಳ ನೆರಿಗೆಯ ಸೀರೆ…
ಲೇಖಕರು: sinchanabhat
ವಿಧ: Basic page
August 06, 2005
ಅಲೆದಾಟ ಹುಡುಕಾಟ ಮುಗಿಯದ ಪರಿಪಾಟ ಆಸ್ವಾದಿಸುವ ಮನಸಿಲ್ಲದಿರೆ ಏನಿದೆ ಬದುಕಿನಲಿ... ಮನಸಿನಾಳದಲಿ ಕನಸ ಲೋಕದಲಿ ಮೈಮರೆಯದಿರೆ ಏನಿದೆ ಬದುಕಿನಲಿ... ಜೊತೆ ನಡೆವವರಾ ಹಿತವನು ಕಂಡು ಖುಶಿಪಡದಿದ್ದರೆ ಏನಿದೆ ಬದುಕಿನಲಿ... ಭಯದ ಕತ್ತಲಲಿ ಜೀವವ ತುಂಬುವ ಬೆಳಕಿಲ್ಲದಿರೆ ಏನಿದೆ ಬದುಕಿನಲಿ... ಕಣ್ಗಳರಳುವ ಪ್ರೇಮದ ಮಿಂಚನು ಅಳೆಯಲಾಗದಿರೆ ಏನಿದೆ ಬದುಕಿನಲಿ... ಇಟ್ಟ ಹೆಜ್ಜೆಯನು ದಿಟ್ಟಿಸಿ ನೋಡಿ ಸಾರ್ಥಕವೆನಿಸದಿರೆ ಏನಿದೆ ಬದುಕಿನಲಿ.....
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 06, 2005
ನನ್ನ ಸ್ನೇಹಿತರೊಬ್ಬರಿಗೆ ನಾನು ಇ-ಅಂಚೆ ಕಳುಹಿಸಿದ್ದೆ. ಅದರಲ್ಲಿ ಮಾಮೂಲಾಗಿ ಇಂತಿ ನಮಸ್ಕಾರಗಳು ಅಂತ ಕೊನೆಯಲ್ಲಿ ಬರೆದಿದ್ದೆ. ಅದಕ್ಕೆ ಅವರು ಇದೇನು ಹೀಗೆ ಬರೆದಿದ್ದೀರಿ. ಹೀಗೆ ಬರೆಯುವ ವಾಡಿಕೆ ಇದೆಯಾ ಅಂತ ಕೇಳಿದರು. ಆಗ ನನಗನ್ನಿಸಿದ್ದು, ಇ-ಮೈಲ್ ಉಪಯೋಗಿಸುವ ಮೂಲಕ ಮೊದಲಿನ ಹಾಗೆ ಪತ್ರ ಬರೆಯುವುದನ್ನು ಸಾರಾಸಗಟಾಗಿ ಈಗೀಗ ಮರೆಯುತ್ತಿದ್ದೇವೆ. ಅದರ ಬಗ್ಗೆ ಸ್ವಲ್ಪ ನೆನಪು ಮಾಡಿಕೊಳ್ಲೋಣ ಅಂದುಕೊಂಡೆ. ಹಾಗೇ ಇದನ್ನೇ ಇಂದಿನ ನನ್ನ ಡೈರಿಯಲ್ಲಿ ಬರೆಯೋಣ ಅಂತಲೂ ನಿರ್ಧರಿಸಿದೆ. ನೀವೂ…
ಲೇಖಕರು: olnswamy
ವಿಧ: Basic page
August 06, 2005
ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು…

ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗ), ಪ್ರಜ್ಞಾವಂತರಾದವರಿಗೆ (ಜಂಗಮ) ಅರ್ಪಿಸಬೇಕು. ಉಳಿದದ್ದನ್ನು ನಮ್ಮದೆಂದು…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 05, 2005
ಕಳೆದ ಮಂಗಳವಾರ ಮತ್ತು ಭಾನುವಾರದ ಮಳೆಯ ಆರ್ಭಟದಿಂದ ತತ್ತರಿಸಿದ್ದ ಜನರ ದೈನಂದಿನ ಕೆಲಸ ಕಾರ್ಯಗಳು ಇಂದಿಗೆ ಸಾಮಾನ್ಯ ಸ್ಥಿತಿಗೆ ಬಂದಿತು. ಅದು ಹೇಗೆ ಇಂದೇ ಸಾಮಾನ್ಯ ಸ್ಥಿತಿಗೆ ಬಂದಿತು ಅಂತ ಹೇಳ್ತೀರಿ ಅಂತ ನೀವು ಕೇಳಬಹುದು. ಇಂದು ಲೋಕಲ್ ಟ್ರೈನಿನಲ್ಲಿ ತುಂಬಾ ಜನಸಂದಣಿ ಇತ್ತು. ಮತ್ತು ನನ್ನ ಸ್ನೇಹಿತನೊಬ್ಬನ ಜೇಬಿಗೆ ಕತ್ತರಿ ಬಿದ್ದಿತ್ತು. ಪ್ರತಿದಿನ ಟ್ರೈನ್ ಹತ್ತುವಾಗ, ಹತ್ತಿದ ಮೇಲೆ, ಇಳಿಯುವಾಗ ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತೀವಿ. ನನಗೇನೋ ಅದು ಆಭ್ಯಾಸವಾಗಿ ಹೋಗಿದೆ…
ಲೇಖಕರು: hpn
ವಿಧ: Basic page
August 05, 2005
ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ ಹಿಂದೊಮ್ಮೆ ವಸ್ತುಗಳ ಬಗ್ಗೆ, ವಿಷಯಗಳ ಬಗ್ಗೆ ಮಾಹಿತಿ ಹುಡುಕಲು ಗ್ರಂಥಾಲಯವೇ ಬೀಡು. ಅಲ್ಲಿರುವ ಪುಸ್ತಕಗಳನ್ನೆಲ್ಲಾ ಹೆಕ್ಕಿ ತೆಗೆದು, ಮಾಹಿತಿ ಹುಡುಕಬೇಕಿತ್ತು. ಮಾಹಿತಿ ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ, ಅಂತರಜಾಲ ಮನೆಮನೆಗಳನ್ನು ಪ್ರವೇಶಿಸಿದಂತೆ ಮಾಹಿತಿ ಹುಡುಕುವುದು ಈಗಾದರೋ ಅತಿ ಸುಲಭವಾಗಿದೆ. ಈಗ ಮಾಡಬೇಕಾದದ್ದು ಇಷ್ಟೆ: ಗಣಕದಲ್ಲಿ ತಮ್ಮ ನೆಚ್ಚಿನ ಬ್ರೌಸರ್ ತೆರೆದು ನೆಚ್ಚಿನ Search engineನಲ್ಲಿ ಟೈಪ್ ಮಾಡಿ ಬಟ್ಟನ್ ಕ್ಲಿಕ್…
ಲೇಖಕರು: olnswamy
ವಿಧ: Basic page
August 05, 2005
ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು. ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ…