ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುರುಕುರು ಚಕ್ಕುಲಿ

Image

ಅಕ್ಕಿಯನ್ನು ತೊಳೆದು, ಬಸಿದು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ. ನೀರಿನ ಪಸೆ ಆರುವವರೆಗೆ ಸ್ವಲ್ಪ ಬಿಸಿ ಮಾಡಿ. ಉದ್ದಿನ ಬೇಳೆಯನ್ನು ಕೆಂಪಗೆ ಹುರಿದು ಅಕ್ಕಿಯೊಂದಿಗೆ ಸೇರಿಸಿ ನುಣ್ಣಗೆ ಹುಡಿ ಮಾಡಿ. ಈ ಹಿಟ್ಟಿಗೆ ಜೀರಿಗೆ, ತುಪ್ಪ, ಇಂಗು, ಉಪ್ಪು ಸೇರಿಸಿ ಕಲಸಿ. ನಂತರ ಈ ಹಿಟ್ಟಿನ ಮಿಶ್ರಣಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.

ಬೇಕಿರುವ ಸಾಮಗ್ರಿ

ಅಕ್ಕಿ - ೪ ಕಪ್, ಉದ್ದಿನಬೇಳೆ - ೧ ಕಪ್, ಜೀರಿಗೆ - ೪ ಚಮಚ, ಇಂಗು - ಕಾಲು ಕಪ್, ತುಪ್ಪ - ೧ ಕಪ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಅಮ್ಮ, ನಿನಗೆ ಈ ದಿನದ ಹಂಗೇಕೆ…?

ನೀನು ನಿತ್ಯ ನಿರಂತರ ಅನಂತ. ವಿಶ್ವ ತಾಯಿ ದಿನದ ಸಂದರ್ಭದಲ್ಲಿ ಅಮ್ಮನ ವಿವಿಧ ಮುಖಗಳು. ಮಾನವೀಯ ಸಂಬಂಧಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ.

Image

ಸ್ಟೇಟಸ್ ಕತೆಗಳು (ಭಾಗ ೯೬೩)- ‘ಮಾ’ ದಾರಿ

ಅವಳ ಕಣ್ಣ ತುಂಬಾ ಕನಸುಗಳಿವೆ, ಎಲ್ಲವೂ ಈಗ ಹುದುಗಿ ಕುಳಿತಿವೆ. ಮರೆಯಾಗಿಲ್ಲ. ಶಾಲೆ ಕಾಲೇಜು ಅವಧಿಯಲ್ಲಿ ವೇದಿಕೆ ಏರಿದವಳು. ಎಲ್ಲರ ಕಣ್ಮಣಿ ಆದವಳು. ಯಾವುದಕ್ಕೂ ಹಿಂಜರಿಯದೇ ಊರಲ್ಲಿ ಮನೆ ಮಾತಾದವಳು. ಬಹುಮಾನಗಳನ್ನ ಮನೆ ತುಂಬಾ ತುಂಬಿಸಿ ಮನೆಯವರ ಹೆಮ್ಮೆಗೆ ಸ್ಫೂರ್ತಿ ನೀಡಿದವಳು. ಕಾಲಕ್ಕೂ ಬೇಸರ ಮೂಡಿತೋ ಏನೋ. ಎಲ್ಳವೂ ಹಾಗೆಯೇ ಮರೆಯಾಯಿತು.

Image

ಇಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತಿಯ ಮೌಲ್ಯ

೧. ಊರಲ್ಲಿ ಉತ್ತಮ ಸಾಹಿತಿಯಾಗಿದ್ದರೂ ಸಾಲದು ; ಕಿಸೆಯು ಯಾವತ್ತೂ ಹಣದಿಂದ ಕಂಗೊಳಿಸುತ್ತಿರಬೇಕು. ನೋಟಿದ್ದರೆ ಎಂಥ ಸಾಹಿತಿಗೂ ಪ್ರಶಸ್ತಿಗೆ ಬರಗಾಲವಿಲ್ಲ, ಇಲ್ಲದಿದ್ದರೆ ಸಾಹಿತಿಗೆ ಬರಿಗಾಲೇ ಗತಿ.

Image

ಪಾಲ್ ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಮತ್ತು ಚುನಾವಣೆಯ ನಂತರದ ದಿನಗಳು...!

ನಾನು ರಾಜಕೀಯ ವಿಮರ್ಶಕನಲ್ಲ; ಅಲ್ಲದೇ, ಹಿಂದೆಂದೂ ರಾಜಕೀಯದ ಆಗು-ಹೋಗುಗಳ ಕುರಿತು, ಅಥವಾ ರಾಜಕೀಯ ಪಕ್ಷಗಳ ಸಮರ್ಥನೆಯಲ್ಲೂ-ವಿರೋಧದಲ್ಲೂ, ಅಥವಾ ರಾಜನೀತಿಜ್ಞ/ರಾಜಕಾರಣಿಯನ್ನು ಪರಿಚಯಿಸುವ ಲೇಖನವನ್ನು ಎಂದಿಗೂ ಬರೆಯಲಿಲ್ಲ. ಬರೆಯುವುದೂ ಇಲ್ಲ ಅಂತ ನನ್ನ ಧೃಢ ನಿರ್ಧಾರವೂ ಇದೆ.

Image

ಸ್ಟೇಟಸ್ ಕತೆಗಳು (ಭಾಗ ೯೬೨)- ಪ್ರಶ್ನೆ

ದೊಡ್ದ ವೇದಿಕೆಯಲ್ಲಿ ಅಜ್ಜಿ ಒಬ್ಬಳನ್ನು ಕರೆಸಿದ್ದಾರೆ. ಅವರ ಸಾಧನೆ ಸನ್ಮಾನಗಳನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ದೊಡ್ಡ ದೊಡ್ಡ ಕ್ಯಾಮರಾಗಳು, ಲೈಟುಗಳು ಅವರ ಮೇಲೆ ಬಿದ್ದು ಅವರನ್ನು ಇಡೀ ಜಗತ್ತಿಗೇ ತೋರಿಸುತ್ತಿದ್ದಾವೆ. ಆ ಕ್ಷಣದಲ್ಲಿ ಅಲ್ಲಿ ಕುಳಿತ ದೊಡ್ಡ ದೊಡ್ದ ಮಂದಿಯ ಕಣ್ಣಲ್ಲಿ ಇಳಿಯುತ್ತಿರುವ ನೀರನ್ನು ಕೇಂದ್ರೀಕರಿಸುತ್ತಿದ್ದಾರೆ.

Image

ಕಲಬುರ್ಗಿ, ಗೌರಿ, ಪಾನ್ಸರೆ ಹಂತಕರಿಗೂ ಶಿಕ್ಷೆಯಾಗಲಿ

ದಶಕದ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದ ವಿಚಾರವಾದಿಗಳು ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರರ ಹತ್ಯೆಗಳು ಜನಮಾನಸದಿಂದ ಇನ್ನೂ ದೂರವಾಗಿಲ್ಲ. ಮಹಾರಾಷ್ಟ್ರದ ಡಾ. ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ, ಕರ್ನಾಟಕದ ಡಾ, ಎಂ ಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಈ ಸರಣಿ ಹತ್ಯೆಗಳು ಶುರುವಾಗಿದ್ದು ಪುಣೆಯ ಡಾ.

Image

ಹಿಂದು - ಮುಸ್ಲಿಂ ಎಂಬ ಜ್ವಾಲಾಮುಖಿ…!

ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ  ತಂತ್ರಗಾರಿಕೆ ದೇಶದ ಮತ್ತೊಂದು ವಿಭಜನೆಗೆ ಕಾರಣವಾಗಬಾರದಲ್ಲವೇ? ಈ ದೇಶ ತನ್ನೊಡಲೊಳಗೆ ಸದಾ ಒಂದು ಜ್ವಾಲಾಮುಖಿಯನ್ನು ಇಟ್ಟುಕೊಂಡಿದೆ. ಅದು ಯಾವಾಗ ಸಿಡಿದು ಅಗ್ನಿ ಪರ್ವತವಾಗಿ ರೂಪಾಂತರವಾಗಿ ಎಲ್ಲ ಕಡೆಯೂ ಚೆಲ್ಲಾಡುತ್ತದೆ ಎಂಬ ಆತಂಕ ಮನದ ಮೂಲೆಯಲ್ಲಿ ಕಾಡುತ್ತಲೇ ಇರುತ್ತದೆ.

Image