ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಲೇಖಕರು: kavinagaraj, ಹಾಸನ

     ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ ಮಾಡಿದ್ದ. ಕರೆ ಸ್ವೀಕರಿಸಿ ರೇಗಬೇಕೆಂದುಕೊಂಡವನಿಗೆ ಸಲೀಮನೇ, "ಹೋಲ್ಡಾನ್, ಗೆಳೆಯಾ ಹೋಲ್ಡಾನ್. ನೀನು ಯಾವ ಅರ್ಜೆಂಟ್ ಕೆಲಸದಲ್ಲೂ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ನಿನ್ನ ಆಫೀಸ್ ಮುಂದುಗಡೆಯಿಂದಾನೇ ಮಾತಾಡ್ತಾ ಇದೀನಿ. ನೀನು ಈಗ ತಾನೇ ಒಳಗೆ ಹೋಗಿ ಕೂತಿದ್ದೀಯಾ ಅಂತಾನೂ ಗೊತ್ತು. ನಾನೇನೂ ನಿನ್ನ ಟೈಮ್ ವೇಸ್ಟ್ ಮಾಡಲ್ಲ. ಒಂದು ಐದು ಸಾವಿರ ದುಡ್ಡು ಬೇಕಿತ್ತು. ನನಗೆ ನಿನ್ನ ಬಿಟ್ರೆ ಯಾರಿದಾರೆ? ಅದಕ್ಕೆ ಬಂದೆ. ಇಲ್ಲಾ ಅನ್ನಬೇಡ" ಅಂದ. ಕಿರಣ ಹೊರಗೆ ಬಂದು ನೋಡಿದರೆ ಸಲೀಮ ಅಲ್ಲಿ ನಗುತ್ತಾ ನಿಂತಿದ್ದುದನ್ನು ಕಂಡು ಮೈ ಉರಿಯಿತು. ಆದರೂ ಹೊರಗೆ ತೋರಿಸಿಕೊಳ್ಳದೆ, "ಕಳೆದ ವಾರವಿನ್ನೂ ಹತ್ತು ಸಾವಿರ ಇಸ್ಕೊಂಡಿದ್ದೆ. ಈಗ ಮತ್ತೆ ಐದು ಸಾವಿರಾನಾ? ನನಗೆ ದಯವಿಟ್ಟು ಹಿಂಸೆ ಮಾಡಬೇಡ. ಇದೇ ಕೊನೆ ಸಲ ಅಂತ ಪ್ರತಿಸಲಾನೂ ಹೇಳ್ತೀಯಾ. ಮತ್ತೆ ಮತ್ತೆ ಬಂದು ಪ್ರಾಣ ಹಿಂಡ್ತೀಯಲ್ಲೋ" ಅಂದ. ಸಲೀಮ ಹೇಳಿದ, "ನಾನೂ ಮತ್ತೆ ಕೇಳಬಾರದೂ ಅಂತಾನೇ ಇದ್ದೆ ಕಣೋ. ಏನು ಮಾಡಲಿ,...

April 18, 2014
4 ಪ್ರತಿಕ್ರಿಯೆಗಳು
260 ಓದು

ಎಲ್ಲ ಪುಟಗಳು

ಇತ್ತೀಚಿನ ಪ್ರತಿಕ್ರಿಯೆಗಳು

ಮೊಬೈಲಿನಲ್ಲಿ ಸಾರಂಗ, ಸಂಪದ

ಸಂಪದ ಆರ್ಕೈವ್

ಟ್ವಿಟ್ಟರಿನಲ್ಲಿ ಸಂಪದ