ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 13, 2024
ಪ್ರತಿಯೊಂದು ಪುಸ್ತಕಕ್ಕೆ ‘ಮುನ್ನುಡಿ' ಇರಬೇಕು ಎನ್ನುವುದು ಅಘೋಷಿತ ನಿಯಮ. ಆದರೆ ಈ ಮುನ್ನುಡಿಗಳನ್ನೇ ಸಂಗ್ರಹ ಮಾಡಿ ಅದರದ್ದೇ ಆದ ಒಂದು ಸಂಕಲನ ಮಾಡಬಹುದು ಎನ್ನುವ ದಿವ್ಯ ಯೋಚನೆ ಹೊಳೆದದ್ದು ಸಾಹಿತಿ ಎಂ ಎಸ್ ಆಶಾದೇವಿಯವರಿಗೆ. ಮುನ್ನುಡಿ ಬರೆಯುವುದೇ ಒಂದು ಕಲೆ. ಮುನ್ನುಡಿ ಬರೆಯುವ ಒಂದು ಅಪರೂಪದ ಸಾಹಿತಿಗಳ ವರ್ಗವೇ ಇದೆ. ಅವರ ಮುನ್ನುಡಿ ಓದಿದರೆ ಪುಸ್ತಕವನ್ನು ಕೂಡಲೇ ಓದಿ ಮುಗಿಸಬೇಕೆಂಬ ಹೆಬ್ಬಯಕೆ ಆಗುತ್ತದೆ. ಹಾಗಿರುತ್ತದೆ ಅವರ ಮುನ್ನುಡಿಯ ಪ್ರಭಾವ. ಅಂತಹ ಲೇಖಕರಲ್ಲಿ ಆಶಾ ದೇವಿಯವರೂ…
ಲೇಖಕರು: Kavitha Mahesh
ವಿಧ: ರುಚಿ
May 12, 2024
ಅಕ್ಕಿಯನ್ನು ತೊಳೆದು, ಬಸಿದು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ. ನೀರಿನ ಪಸೆ ಆರುವವರೆಗೆ ಸ್ವಲ್ಪ ಬಿಸಿ ಮಾಡಿ. ಉದ್ದಿನ ಬೇಳೆಯನ್ನು ಕೆಂಪಗೆ ಹುರಿದು ಅಕ್ಕಿಯೊಂದಿಗೆ ಸೇರಿಸಿ ನುಣ್ಣಗೆ ಹುಡಿ ಮಾಡಿ. ಈ ಹಿಟ್ಟಿಗೆ ಜೀರಿಗೆ, ತುಪ್ಪ, ಇಂಗು, ಉಪ್ಪು ಸೇರಿಸಿ ಕಲಸಿ. ನಂತರ ಈ ಹಿಟ್ಟಿನ ಮಿಶ್ರಣಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಕಲಸಿದ ಹಿಟ್ಟಿನ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದು ಚಕ್ಕುಲಿಯ ಒರಳಿನಲ್ಲಿ (ಅಚ್ಚು) ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿಯಿರಿ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 10, 2024
ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು.. ಕೊನೆಯ ಪುಟ ಮುಗಿಸಿದಾಗ ನನಗೆ ಅನ್ನಿಸಿದ್ದು ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು…
ವಿಧ: ಪುಸ್ತಕ ವಿಮರ್ಶೆ
May 09, 2024
ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊತೆಗೆ ಉತ್ತಮ ವಾಗ್ಮಿಯಾಗಿರುವ ಇವರು ಸಾಹಿತ್ಯದಲ್ಲೂ ಕೃಷಿ ಮಾಡಿ ಸಮರ್ಥರು ಎನಿಸಿಕೊಂಡಿದ್ದಾರೆ. ಹಲವಾರು ಪ್ರಕಾರಗಳಲ್ಲಿ ಬರೆಯಬಲ್ಲ ಈಕೆ ಸ್ವಪ್ನ ಸುಂದರಿ ಕವನ ಸಂಕಲನದ ಮೂಲಕ ಕೃತಿಕಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಸಂತಸದ ವಿಚಾರ. ಬಹಳಷ್ಟು ವರ್ಷಗಳಿಂದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 08, 2024
ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ ಅಂಕಿ ಅಂಶಗಳ ಹುಡುಕಾಟ ನಡೆಸುವುದು ಬಹಳ ಕಷ್ಟ. ಭಾರತ ಯಾವೆಲ್ಲಾ ವಿಷಯಗಳಲ್ಲಿ ಬದಲಾಗಿ, ವಿಶ್ವದ ಭೂಪಟದಲ್ಲಿ ತನ್ನದೇ ಆದ ಉನ್ನತ ಸ್ಥಾನವನ್ನು ಹೇಗೆ ಅಲಂಕರಿಸಿದೆ ಎನ್ನುವುದನ್ನು ತಿಳಿಸಲು ಯೂಟ್ಯೂಬರ್ ಹಾಗೂ ಉದಯೋನ್ಮುಖ ಲೇಖಕರಾದ ರಾಹುಲ್ ಅಶೋಕ್…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 06, 2024
ಇಬ್ಬರು ಪತ್ರಕರ್ತರು ಜಂಟಿಯಾಗಿ ಬರೆದ ಬಿಡಿ ಲೇಖನಗಳ ಸಂಗ್ರಹವೇ “ಜಾಗರ- ಇದು ಪ್ರತಿಸ್ಪಂದನೆಯ ಮೊಳಕೆ.” ಅಶ್ವಿನ್ ಲಾರೆನ್ಸ್ ಮತ್ತು ಶ್ರೀರಾಮ ದಿವಾಣ ಎಂಬ ಇಬ್ಬರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳ ಸಂಗ್ರಹವೇ ಈ ಕೃತಿ. ಈ ಕೃತಿಗೆ ಯಾವುದೇ ಮುನ್ನುಡಿ, ಬೆನ್ನುಡಿ ಇಲ್ಲ. ನೇರವಾಗಿ ಬರಹಗಳನ್ನೇ ಪ್ರಕಟ ಮಾಡಿದ್ದಾರೆ.  ಮೊದಲ ಲೇಖನವೇ ‘ಜಾಗರ : ಇದು ಪ್ರತಿಸ್ಪಂದನೆಯ ಮೊಳಕೆ’ ಇದನ್ನು ಬರೆದಿದ್ದಾರೆ ಅಶ್ವಿನ್ ಲಾರೆನ್ಸ್ ಅವರು. ಅವರು ಈ ಲೇಖನದಲ್ಲಿ “ಸಾಹಿತ್ಯ ಎಂಬುದು ಸಾಮಾಜಿಕ…
ಲೇಖಕರು: rajantvb
ವಿಧ: ಬ್ಲಾಗ್ ಬರಹ
May 06, 2024
ಡಿ ಎಸ್ ನಾಗಭೂಷಣ್ ರವರ ಲೇಖನ (ಪ್ರ ವಾ ಜುಲೈ16) ತುಂಬಾ ಸಮಯೋಚಿತ ಮತ್ತು ಸೂಕ್ತ ವಾಗಿದೆ. ಲೇಖಕರು ತಿಳಿಸಿದಂತೆ ಬಿ ಎಸ್ ಆರ್ ಬಿ ಮೂಲಕ 1980 ರಲ್ಲಿ ಸುಮಾರು 250 ಕೃಷಿ ಅಧಿಕಾರಿಗಳಾಗಿ ಆಗಿನ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ ನೇಮಕಗೊಂಡಿದ್ದೆವು. ಎಲ್ಲರೂ ಕರ್ನಾಟಕದಿಂದ ಮತ್ತು ಕರ್ನಾಟಕದಲ್ಲೇ ಉದ್ಯೋಗಕ್ಕೆ ಸೇರಿದ್ದೆವು. ಎಲ್ಲರೂ ಈಗ 2015 ಮತ್ತು 2016 ರಲ್ಲಿ ನಿವೃತ್ತಿಯಾದೆವು. ನಂತರ 1982, 84,  86 ವರ್ಷಗಳಲ್ಲೂ ಇದೇ ರೀತಿಯ ನೇಮಕಾತಿಗಳು ಆಗಿದ್ದವು. ಆದರೆ ಇತ್ತೀಚಿನ…
ಲೇಖಕರು: Kavitha Mahesh
ವಿಧ: ರುಚಿ
May 05, 2024
ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ, ಇಂಗುಗಳೊಂದಿಗೆ ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ ಸ್ವಲ್ಪ ಹಿಟ್ಟು ತೆಗೆದುಕೊಂಡು ಕೋಡುಬಳೆ ಆಕಾರದಲ್ಲಿ ಸುತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ, ಗರಿಗರಿಯಾದ ಕೋಡುಬಳೆ ಸವಿಯಲು ಸಿದ್ಧ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 03, 2024
‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ... “ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದಾಗ ಮನು ಮತ್ತು ಮೀನು, ಅಕ್ಬರ್-ಬೀರಬಲ್, ತೆನಾಲಿರಾಮ, ಪಂಡಿತ ತಾರಾನಾಥ, ಪುಣ್ಯಕೋಟಿ, ಈ ರೀತಿಯ ಹಲವು ಸ್ವಾರಸ್ಯಕರ ಕಥೆಗಳ ಹೆಸರು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರುತ್ತಿದ್ದ ಛಾಯಾಚಿತ್ರಗಳಿಗೆ ಹೆಚ್ಚು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 01, 2024
ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ... “ʻಒಂದೆಲೆ ಕಾಡಿನ ಮೇಲೆʼ ಪುಸ್ತಕ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯ. ನೆನಪುಗಳು ಕಿಕ್ಕಿರಿದ ಈ ಬರಹಗಳಲ್ಲಿ ಬಾಲ್ಯ, ತಾರುಣ್ಯ, ಮಧ್ಯ ವಯಸ್ಸಿನ ಮೆದು-ಮೆಲು ಮಾತು, ಅನುಭವದಿಂದ ಪಳಗಿ ಪಕ್ವವಾದ ಮೃದು-…