ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 11, 2024
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್…
ಲೇಖಕರು: Kavitha Mahesh
ವಿಧ: ರುಚಿ
March 10, 2024
ತೆಂಗಿನ ತುರಿ, ಕಡಲೇಕಾಯಿ ಬೀಜ, ಹುರಿಗಡಲೆ, ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ, ನಿಂಬೆರಸ, ಉಪ್ಪುಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ ಮಸಾಲೆ ತಯಾರಿಸಿ. ಹಸಿಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿ ಬೀಜಗಳನ್ನು ತೆಗೆದು ರುಬ್ಬಿದ ಮಸಾಲೆಯನ್ನು ತುಂಬಿ, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಮೈದಾ ಹಿಟ್ಟುಗಳನ್ನು ಸೇರಿಸಿ ೨ ಟೀ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ, ಸ್ವಲ್ಪ ನೀರು ಹಾಕಿ ಇಡ್ಲಿ ಹದಕ್ಕೆ ಕಲಸಿಡಿ. ಮಸಾಲೆ ತುಂಬಿದ ಮೆಣಸಿನಕಾಯಿಗಳನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲದ್ದಿ ಕಾದ ಎಣ್ಣೆಯಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 08, 2024
ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ. ಅಲ್ಲಿಯ ಜನರ ನೋವು, ಕಷ್ಟ, ಸಂಕಟಗಳ ಚಿತ್ರಣ ನಮಗೆ ಬೇರೊಂದು ಅನುಭವವನ್ನು ಕೊಡುತ್ತದೆ. ಆ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಡಾ. ಎಚ್.ಎಸ್.ಎಂ. ಪ್ರಕಾಶ್ ಅವರು ಸ್ಥಳೀಯವಾಗಿದ್ದ ಹಾಗೂ ವಿಶಿಷ್ಟವಾಗಿದ್ದ ತಮ್ಮ ಅನುಭವಗಳ ಸಹಾಯದಿಂದ ಕನ್ನಡಕ್ಕೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 06, 2024
ಲೇಖಕ ಕಗ್ಗೆರೆ ಪ್ರಕಾಶ್ ಅವರು ತಮ್ಮ ೨೫ನೇ ಕೃತಿ ‘ಬೆವರ ಹನಿಯ ಜೀವ' ಹೊರತಂದಿದ್ದಾರೆ. ಈ ೧೨೮ ಪುಟಗಳ ಕಿರು ಪುಸ್ತಕದಲ್ಲಿ ೫೦ ಕವಿತೆಗಳನ್ನು ಪ್ರಕಟ ಮಾಡಿದ್ದಾರೆ. ಪುಸ್ತಕದ ಲೇಖಕರ ಮಾತಿನಲ್ಲಿ ಕಗ್ಗೆರೆ ಪ್ರಕಾಶ್ ಅವರು ಬರೆದ ಮಾಹಿತಿಗಳ ಆಯ್ದ ಸಾಲುಗಳು ಇಲ್ಲಿವೆ… “ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ, ಭೂರಮೆ ವಿಲಾಸ ಬಳಿಕ ‘ಬೆವರ ಹನಿಯ ಜೀವ’ ನನ್ನ ೫ನೇ ಕವನ ಸಂಕಲನ. ಇದು ನನ್ನ ೨೫ನೇ ಪುಸ್ತಕ ಕೂಡ. ೨೦೨೧ ರಲ್ಲಿ ‘ಭೂರಮೆ ವಿಲಾಸ’ ಪ್ರಕಟವಾದ ನಂತರದಲ್ಲಿ ಬರೆದ ಐವತ್ತು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 04, 2024
ಓದಲು ಸೊಗಸಾಗಿರುವ ಬಹಳ ಚಂದನೆಯ ಪುಸ್ತಕಗಳನ್ನು ಹೊರತರುವ ‘ಛಂದ ಪುಸ್ತಕ'ವು ಈ ಬಾರಿ ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರ ‘ಇಮೋಜಿ ಭಾಷೆ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ‘ಮಯೂರ' ಮಾಸ ಪತ್ರಿಕೆಗೆ ಬರೆದ ಅಂಕಣ ಬರಹಗಳು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಇತರೆ ಲೇಖನಗಳನ್ನು ಒಟ್ಟು ಸೇರಿಸಿಕೊಂಡು ಸೊಗಸಾದ ಪ್ರಬಂಧ ಸಂಕಲನವನ್ನು ಹೊರ ತಂದಿದ್ದಾರೆ.  ಈ ಕೃತಿಯ ಬಗ್ಗೆ ಸಾಹಿತಿ ಕೆ ವಿ ಅಕ್ಷರ ಅವರು ಸೊಗಸಾದ ಬೆನ್ನುಡಿಯ ಮೂಲಕ ಕರ್ಕಿಯವರನ್ನು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
March 03, 2024
ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿದ್ದವು. ಶಿವಾನಂದ ಕಳವೆ ಪುಸ್ತಕದ “ಮೊದಲ ಮಾತಿ”ನಲ್ಲಿ “ಚಿಟ್ಟೆ ಹಾರಾಡಿದ್ದರ” ಹಿನ್ನೆಲೆಯನ್ನು ಹೇಳುತ್ತಾರೆ: “ಮರದ ಉಂಗುರ ವಿಶ್ಲೇಷಣೆಯಲ್ಲಿ ನೆಲದ ಪರಿಸರ ಚರಿತ್ರೆ ಸಾಧ್ಯ. ಡೆಂಡ್ರಾಕ್ರೊನಾಲಜಿ ತಜ್ನರ ವರದಿಗಳು ಮರಗಳ…
ಲೇಖಕರು: Kavitha Mahesh
ವಿಧ: ರುಚಿ
March 03, 2024
ತೆಂಗಿನ ತುರಿ, ಹುಣಸೆ ಹಣ್ಣು, ಒಣ ಮೆಣಸಿನ ಕಾಯಿ, ಎಳ್ಳು ಹುಡಿ, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಕಲ್ಲಂಗಡಿ ಹಣ್ಣಿನ ತಿರುಳು, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ ರುಚಿಯಾದ ಕಲ್ಲಂಗಡಿ ಹಣ್ಣಿನ ಗೊಜ್ಜು ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ಸವಿಯಲು ರುಚಿಕರ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 02, 2024
ಗೆಳೆಯ ರಾಯ ನಿವೃತ್ತನಾಗಿ ತನ್ನ ಊರು ಸೇರಿಕೊಂಡಿದ್ದ. ಅದಕ್ಕೂ ಮೊದಲು ನನಗೆ ಆಗೀಗ ಭೆಟ್ಟಿಯಾಗುತ್ತಿದ್ದನಷ್ಟೇ. ಆ ಕುರಿತು ಕೆಲ ಸಂಗತಿಗಳನ್ನು ಸುಮಾರು ಮೂರು ವರ್ಷಗಳ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈಗ ಬಹಳ ದಿನಗಳ ನಂತರ ನಮ್ಮ ಊರಿಗೆ ಬಂದಿದ್ದ . ನನಗೆ ಅವನ ಭೆಟ್ಟಿಯಾಯಿತು.   ಈಚಿನ ದಿನಗಳಲ್ಲಿ ಈತ ಏನು ಮಾಡಿಕೊಂಡಿದ್ದಾನೆ ಎಂಬ ನನ್ನ ಕುತೂಹಲವನ್ನು ತಣಿಸಿದ್ದು ಹೀಗೆ - ಇವನಿಗೆ Star Maker ಮತ್ತು Smule ಎಂಬ ಮೊಬೈಲ್ ಆ್ಯಪ್ ಗಳ ಪರಿಚಯ ಆಯಿತಂತೆ. ಅವುಗಳು ಹಾಡುಗಳ ಹುಚ್ಚು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 01, 2024
ಖ್ಯಾತ ಆಂಗ್ಲ ಬರಹಗಾರರಾದ ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್ (Charles Lutwidge Dodgson) ಲೂಯಿ ಕರೋಲ್ ಎಂಬ ಗುಪ್ತನಾಮದಲ್ಲಿ ಬರೆದ ಆಲೀಸ್ ಇನ್ ವಂಡರ್ ಲ್ಯಾಂಡ್ (Alice in Wonderland) ಎಂಬ ಮಕ್ಕಳ ಕಥಾ ಸಂಕಲನವನ್ನು ಹೊರತಂದಿದ್ದರು. ಕನ್ನಡದ ಖ್ಯಾತ ಸಾಹಿತಿ ನಾ ಕಸ್ತೂರಿ ಇವರು ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ನ ಆಲೀಸ್ ಕನ್ನಡಕ್ಕೆ ಬರುವಾಗ ಪಾಪಚ್ಚಿ ಆಗಿದ್ದಾಳೆ.  ಕನ್ನಡ ಪುಸ್ತಕ ಪ್ರಾಧಿಕಾರವು ೧೯೩೫, ೧೯೭೩, ೧೯೯೮ ವರ್ಷಗಳಲ್ಲಿ ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 28, 2024
ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ" ಎಂದು ಪ್ರಾಮಾಣಿಕವಾಗಿಯೇ ಹೇಳುವ ರತ್ನಕ್ಕ ಇದುವರೆಗೆ ಬರೆದ ಗಝಲ್ ಗಳನ್ನೆಲ್ಲಾ ಸೇರಿಸಿ ಸಂಕಲನದ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರ ಸಹೋದರ ಹಾಗೂ ಸಾಹಿತಿ ಹಾ ಮ ಸತೀಶ ಮತ್ತು ಕಥಾಬಿಂದು ಪ್ರಕಾಶನದ…