ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
August 01, 2005
ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು ಅಂತಹ ಪರಮೇಶ್ವರನ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು. ಮನುಷ್ಯನ ಮನಸ್ಸನ್ನು ಕುರಿತು ವಚನಕಾರರು ಬಹಳಷ್ಟು ಹೇಳಿದ್ದಾರೆ. ಸಮುದ್ರ ದೊಡ್ಡದು. ಆದರೆ ಅದು ಭೂಮಿಯಲ್ಲಿ ಅಡಗಿದೆ. ಭೂಮಿ ದೊಡ್ಡದು. ಆದರೆ ಅದು, ಪುರಾಣಗಳು ಹೇಳುವಂತೆ, ಆದಿಶೇಷನ…
ಲೇಖಕರು: tvsrinivas41
ವಿಧ: ರುಚಿ
July 31, 2005
ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ ಆದರೇ ಮಾಡೋದು ತೀರಾ ಸಾಧಾರಣ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ್ಲಿರಲಿ) ಮೊಗಚುವ ಕೈನಲ್ಲಿ ತಿರುವುತ್ತಾ ಇರಿ - ಹತ್ತು ನಿಮಿಷಗಳ ನಂತರ ಆ ಮಿಶ್ರಣ ಪಾಕವಾಗಿ ಸುಮಧುರ ವಾಸನೆ ಬರುವುದು. ಆಗ ಅದನ್ನು ಒಲೆಯ ಮೇಲಿನಿಂದ ಇಳಿಸಿ ಒಂದು ತಟ್ಟೆಗೆ ತುಪ್ಪ ಸವರಿ - ಅದಕ್ಕೆ ಈ ಪಾಕವನ್ನು ಸುರಿದು - ಸಮವಾಗಿ ತಟ್ಟಿಕೊಳ್ಳಿ ಆ ನಂತರ ಯಾವ ಆಕರಕ್ಕೆ ಬೇಕೋ…
ಲೇಖಕರು: Sudhindra
ವಿಧ: ಬ್ಲಾಗ್ ಬರಹ
July 31, 2005
ಪ್ರೀತಿಯ ಮಿತ್ರರೆ, ನಮಸ್ಕಾರ!! ನನ್ನ ಹೆಸರು ಸುಧೀಂದ್ರ. ನಿನ್ನೆಯೆ ಸದಸ್ಯನಾಗಿರುವೆ.... ಸಂಪದ ಒಂದು ಉತ್ತಮ ಮಾಧ್ಯಮ...ನಮ್ಮ ಕನ್ನಡದ ಬೆಳೆವಣಿಗೆಗೆ ಇದನ್ನು ಉತ್ತಮ ರೀತಿಯಲ್ಲಿ ಉಪಯೊಗಿಸೋಣ... ಇಂದು ಕನ್ನಡಕ್ಕೆ ಕುತ್ತು ಬಂದಿದೆ.. ಅನ್ಯ ಭಾಷೆಗಳ ದಾಳಿ ಮೇರೆ ಮೀರಿದೆ... ಸಂಪದದಂತಹ ಪ್ರಯತ್ನಗಳು ಕನ್ನಡದ ಉಳಿವಿಗೆ ಬೆಳವಣಿಗೆಗೆ ನೆರವಾಗುವುದುರಲ್ಲಿ ಸಂಶಯವೇ ಇಲ್ಲ... ಸಿರಿಗನ್ನಡಂ ಗೆಲ್ಗೆ ನಿಮ್ಮವ ಸುಧೀಂದ್ರ
ಲೇಖಕರು: olnswamy
ವಿಧ: Basic page
July 31, 2005
ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ ಬಾರದಯ್ಯಾ ಕೂಡಲಸಂಗಮದೇವಾ ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನು ಗಮನಿಸುವಷ್ಟು ಸುಲಭವಾಗಿ ಸೂಕ್ಷ್ಮವನ್ನು ಗಮನಿಸಲಾರದು. ದೊಡ್ಡ ಆನೆ ಕಣ್ಣಿಗೆ ಕಾಣುತ್ತದೆ, ಅದನ್ನು ನಿಯಂತ್ರಿಸುವ ಅಂಕುಶ ಕಾಣುವುದಿಲ್ಲ. ದಟ್ಟವಾದ ಕತ್ತಲು ಮಾತ್ರವೇ ಮುಖ್ಯವಾಗುತ್ತ ಸ್ವಲ್ಪವಾದರೂ ಬೆಳಕು ನೀಡುವ ಹಣತೆ ಗಮನಕ್ಕೇ ಬರುವುದಿಲ್ಲ. ಆಯಾ ಕ್ಷಣದ ಬದುಕಿನ ಜಂಜಡವೇ ಘನವಾಗಿ…
ಲೇಖಕರು: chitta
ವಿಧ: Basic page
July 31, 2005
ಅಮ್ಮ ಅಮ್ಮ ಎನುತಾಳೆ ಕೂಗಿ ಕೂಗಿ ಅಳುತಾಳೆ ಹತ್ತಿರ ಹೋಗಲು ನಗುತಾಳೆ ಹಾಡಿ ಹಾಡಿ ಕುಣಿತಾಳೆ ಹಾಲು ಬೇಕು ಅಂತಾಳೆ ಕೊಟ್ಟರೆ ಹಾಲು ಚಲ್ತಾಳೆ ಅಮ್ಮ ಪೆಟ್ಟು ಕೊಡುತಾಳೆ ಪೆಟ್ಟಿಗೆ ಹೆದರಿ ಓಡ್ತಾಳೆ ಮತ್ತೆ ಬಂದು ಕರಿತಾಳೆ ಆಟ ಆಡು ಅಂತಾಳೆ ಆಡಲು ಹೋದರೆ ಬೀಳ್ತಾಳೆ ಬಿದ್ದು ಬಿದ್ದು ಏಳ್ತಾಳೆ ಅಮ್ಮ ಅಡಿಗೆ ಮಾಡ್ತಾಳೆ ಇವಳೂ ಹೋಗಿ ನೋಡ್ತಾಳೆ ಊಟ ಹಾಕು ಅಂತಾಳೆ ತರಲು ಊಟ ಓಡ್ತಾಳೆ ಅಮ್ಮ ಹೋಗಿ ಹಿಡಿತಾಳೆ ಹೈಚೇರ್ ಮೇಲೆ ಕೂರ್‍ಸ್ತಾಳೆ ಭಾರೀ ಜೋರು ಮಾಡ್ತಾಳೆ ಇವಳು ಸುಮ್ನೆ ತಿಂತಾಳೆ ಊಟ ಮುಗಿಸಿ…
ಲೇಖಕರು: tvsrinivas41
ವಿಧ: Basic page
July 30, 2005
ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ ೫೦ ವಸಂತಗಳ ಕಳೆಯುತಿಹ ತಾಯಿ ಇವಳ ಬಹು ಮಕ್ಕಳದು ಬರಿಯ ಬಡಾಯಿ ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು ಪರರ ಮಕ್ಕಳದೇ ಎಲ್ಲಾ ಕಾರುಬಾರು ಬಹು ಮಕ್ಕಳೆಲ್ಲಾ ಇವರ ದಾಸರು ಕೆಲ ಮಕ್ಕಳಷ್ಟೇ ತಾಯ ಮಾನ ಕಾಪಾಡಹತ್ತಿಹರು ಆಗಲಿ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
July 30, 2005
ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್ವಾರಸ್ಯಕರ ಮಾಹಿತಿಯನ್ನು ಕೆಳಗೆ ತಿಳಿಸಲು ಪ್ರಯತ್ನಿಸಿದ್ದೇನೆ. ಕವನವನ್ನೂ ಕೆಳಗೆ ಸೇರಿಸಿರುವೆ, ಓದಿ. ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ…
ಲೇಖಕರು: hpn
ವಿಧ: ಚರ್ಚೆಯ ವಿಷಯ
July 30, 2005
[kn:ಅಕಿರಾ ಕುರೋಸಾವಾ] ಜಪಾನಿನ ಹೆಸರಾಂತ [kn:Category:ಚಿತ್ರರಂಗ|ಸಿನೆಮಾ ನಿರ್ದೇಶಕರು]. ಇವರ ಬಗ್ಗೆ ಮಾಹಿತಿ, ಇವರ ಸಿನೆಮಾಗಳ ಬಗ್ಗೆ ಚುಟುಕಾದ ಮಾಹಿತಿ ಇರುವುದು... ಸಾಧ್ಯವಾದಲ್ಲಿ ಓದಿ: [kn:ಅಕಿರಾ ಕುರೋಸಾವಾ] - ಮುಖ್ಯ ಲೇಖನ [kn:Category:ಕುರೋಸಾವಾ ಚಿತ್ರಗಳು|ಚಿತ್ರಗಳು] - ಕುರೋಸಾವಾರವರ ಚಲನಚಿತ್ರಗಳ ಬಗ್ಗೆ ಇರುವ ಲೇಖನಗಳ ಪಟ್ಟಿ.
ಲೇಖಕರು: hpn
ವಿಧ: ಚರ್ಚೆಯ ವಿಷಯ
July 30, 2005
Members can link articles from Kannada wikipedia in their write-ups, comments and work, if they wish to. Just add [ + kn: + WORD + ]. For example, [kn:ಜೋನ ಆಫ್ ಆರ್ಕ್] ಕ್ಯಾಥೊಲಿಕ್ ಚರ್ಚಿನ ಸಂತರಲ್ಲೊಬ್ಬಳು. * * * ಸದಸ್ಯರು ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳಿಗೆ ಸಂಪದದಿಂದ ನೇರವಾಗಿ ಲಿಂಕ್ ಕೊಡಬಹುದು. ಲಿಂಕ್ ಕೊಡಲು, ನೀವು ಲೇಖನ ಸೇರಿಸುವಾಗ ಆಯಾ ಪದಕ್ಕೆ [ + kn: + ಪದ + ] ವೆಂಬಂತೆ ಸೇರಿಸಿದರಾಯಿತು. ಉದಾ: [kn:ಜೋನ ಆಫ್ ಆರ್ಕ್]…
ಲೇಖಕರು: olnswamy
ವಿಧ: Basic page
July 30, 2005
ಬಿದಿರಲಂದಣವಕ್ಕು ಬಿದಿರಲಿ ಸತ್ತಿಗೆಯಕ್ಕು ಬಿದಿರಲ್ಲಿ ಗುಡಿಯು ಗುಡಾರವಕ್ಕು ಬಿದಿರಲ್ಲಿ ಸಕಲ ಸಂಪದವೆಲ್ಲವು ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ ಈ ವಚನವು ಬಿದಿರನ್ನು ಒಂದು ರೂಪಕವಾಗಿ ಬಳಸಿಕೊಂಡು ನಮ್ಮ ಬದುಕು ಹೇಗೆ ಇರಬೇಕು ಎಂಬ ಆಶಯವನ್ನು ಹೇಳುತ್ತಿದೆ. ಬಿದಿರು ಏನೇನೆಲ್ಲ ಆಗಬಹುದು- ದೊಡ್ಡವರನ್ನೋ ದೇವರನ್ನೋ ಮೆರೆಸುವ ಪಲ್ಲಕ್ಕಿಯಾಗುತ್ತದೆ, ಬಿಸಿಲು ಮಳೆಯಿಂದ ಕಾಪಾಡುವ ಛತ್ರಿಯಾಗುತ್ತದೆ, ಬಡವರ ಮನೆಯ ಚಾವಣಿಯೂಗುತ್ತದೆ, ಬಾವುಟದ ಕೋಲು ಕೂಡ ಆಗುತ್ತದೆ. ಸೆಟೆದು ನಿಲ್ಲುವ…