ರುಚಿ ಸಂಪದ

  • ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ  ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ  ಸಾಸಿವೆ, ಚಿಟಿಕೆ ಉದ್ದಿನಬೇಳೆ, ಜೀರಿಗೆ, ಒಣಮೆಣಸು, ಎಣ್ಣೆ, ಅರಶಿನ ಹುಡಿ, ಚಿಟಿಕೆ…

    0
  • ಮೊದಲಿಗೆ ಲಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯ ರಸವನ್ನು ಮಾಡಿ ಇಟ್ಟುಕೊಂಡಿರಿ. ಮೆಂತ್ಯೆ, ಕೊತ್ತಂಬರಿ ಮತ್ತು ಬ್ಯಾಡಗಿ ಮೆಣಸನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿರಿ. ಹಾಗಲಕಾಯಿಯನ್ನು ವೃತ್ತಾಕಾರದಲ್ಲಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಕತ್ತರಿಸಿ ಇಟ್ಟುಕೊಂಡಿರಿ. ಒಲೆಯ ಮೇಲೆ ಬಾಣಲೆಯನ್ನು…

    0
  • ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ನೀರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಆ ರುಬ್ಬಿದ ಮಿಶ್ರಣಕ್ಕೆ ಬೆರೆಸಿರಿ. ದೋಸೆಯ ಕಾವಲಿಯನ್ನು ಒಲೆಯ ಮೇಲಿಟ್ಟು ಸಣ್ಣ ಸಣ್ಣ ದೋಸೆ ಆಕಾರದಲ್ಲಿ ಈ ರುಬ್ಬಿದ ಮಿಶ್ರಣವನ್ನು ಹಾಕಿರಿ. ಬೇಕಾದಲ್ಲಿ ಕಾವಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿರಿ. ದೋಸೆಯನ್ನು ಎರಡೂ ಬದಿ ಕಾಯಿಸಿರಿ. ಬಿಸಿ ಬಿಸಿಯಾಗಿ ಊಟದ ಜೊತೆ ತಿನ್ನಲು ಹಿತಕರ…

    0
  • ಮೊದಲಿಗೆ ಗೋಧಿಯನ್ನು ೧-೨ ಗಂಟೆ ನೆನೆಸಿ. ಹೆಚ್ಚು ಮೆದುವಾಗುವುದು ಬೇಡ. ನೆನೆದ ಮೇಲೆ ಅದಕ್ಕೆ ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿರಿ. ನಯವಾಗಿ ರುಬ್ಬ ಬಾರದು. ಗೋಧಿ ತುಂಡು ಕೈಗೆ ಸಿಗುವಂತಿರಬೇಕು. ರುಬ್ಬಿದ ಬಳಿಕ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಒಂದು ಕಾವಲಿಯನ್ನು ಬಿಸಿಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ. ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಕಾವಲಿಯ ಮೇಲೆ ತಟ್ಟಬೇಕು. ಕಾಯುವಾಗ ರೊಟ್ಟಿಯ ಮೇಲೆ ಸ್ವಲ್ಪ ತುಪ್ಪ ಹಾಕಿದರೆ ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ…

    0
  • ಮಿಕ್ಸಿ ಜಾರ್ ಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗೇರುಬೀಜ, ಸ್ವಲ್ಪ ನೀರು ಸೇರಿಸಿ ನಯವಾಗಿ ಮಸಾಲೆ ರುಬ್ಬಿರಿ. ತಾವರೆ ಬೀಜಗಳನ್ನು ಸ್ವಲ್ಪ ಹುರಿದು ತೆಗೆದಿರಿಸಿ.

    ಬಾಣಲಿಗೆ ೨ ಚಮಚ ತುಪ್ಪ ಹಾಕಿ ಬಿಸಿ ಆದಮೇಲೆ ಜೀರಿಗೆ ಹಾಕಿ ಸಿಡಿದ ಮೇಲೆ ಮೊದಲು ತಯಾರಿಸಿದ ಮಸಾಲೆ ಸೇರಿಸಿ ಹುರಿಯಬೇಕು. ಅರಶಿನ ಹುಡಿ, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಗರಂ ಮಸಾಲೆ ಹುಡಿ, ಉಪ್ಪು ಕ್ರಮವಾಗಿ ಹಾಕಿ ಹುರಿಯುತ್ತಾ ಇರಬೇಕು. ತುಪ್ಪ ಬಾಣಲಿ…

    0
  • ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು. ಒಂದು ಕಪ್ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, 4 ಗಾಂಧಾರಿ ಮೆಣಸು, ಸಣ್ಣ ತುಂಡು ಹಸಿ ಶುಂಠಿ, ಚಿಟಿಕೆ ಜೀರಿಗೆ ಮತ್ತು ಅರಶಿನಹುಡಿ ಸೇರಿಸಿ ನುಣ್ಣಗೆ ರುಬ್ಬಿ, ಎರಡು ಸೌಟು ಮಜ್ಜಿಗೆ ಸೇರಿಸಿ ಮಿಶ್ರ ಮಾಡಬೇಕು.ಒಗ್ಗರಣೆ ಕೊಟ್ಟರೂ ಕೊಡದಿದ್ದರೂ ಆಗುತ್ತದೆ. ಸಾಸಿವೆ, ಒಣಮೆಣಸು, ಬೇಕಾದರೆ ಬೆಳ್ಳುಳ್ಳಿ ಹಾಕಬಹುದು. ಹಾಕಿ ತುಪ್ಪದಲ್ಲಿ…

    0
  • ೧. ಜೀರಿಗೆ ಮೆಣಸಿನ ಕಾಳಿನ ತಂಬ್ಳಿ:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಬೇಕಿದ್ದರೆ ಚೂರು ಬೆಲ್ಲ ಹಾಕಿ. ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ. ಜ್ವರ ಬಂದಾಗ ಒಳ್ಳೆಯದು.

    ೨. ಸಾಸಿವೆ ತಂಬ್ಳಿ:- ಕಾಯಿತುರಿ ಜೊತೆ ಸಾಸಿವೆ, ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. ಅಜೀರ್ಣ ಆದಾಗ ಒಳ್ಳೆಯದು.

    0
  • ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ಕೊತ್ತಂಬರಿಸೊಪ್ಪು, ಕಾರ್ನ್, ಚೀಸ್, ಗರಂ ಮಸಾಲೆ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಸರಿಯಾಗಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅವುಗಳ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಆ ಉಂಡೆಗಳನ್ನು ಚಪ್ಪಟೆ ಆಕಾರಕ್ಕೆ ಬರುವಂತೆ ಕೈಯಿಂದ ಒತ್ತಿ, ಬ್ರೆಡ್ ಹುಡಿಯಲ್ಲಿ ಹೊರಳಿಸಿ…

    0
  • ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾದ ರುಚಿ ಕಡಿಮೆಯಾಗುತ್ತದೆ. ಹಲಸಿನ ಬೀಜಗಳನ್ನು ಸಣ್ಣದಾಗಿ ಕತ್ತರಿಸಿಟ್ಟು, ನಂತರ ಈ ಕತ್ತರಿಸಿದ ಕಣಿಲೆ ಮತ್ತು ಹಲಸಿನ ಬೀಜವನ್ನು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ೨-೩ ಶೀಟಿ ಬೇಯಿಸಿದರೆ ಸಾಕು. 

    ಕೊತ್ತಂಬರಿ, ಮೆಂತೆ,…

    0
  • ಅಕ್ಕಿಯನ್ನು ೨ ಗಂಟೆ ನೆನೆಸಿ ತೆಗೆದಿಡಿ. ಅದನ್ನು ಹಲಸಿನ ಹಣ್ಣಿನ ಸೊಳೆ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿ ದಪ್ಪನೆ ಬರುವಂತೆ ನೀರು ಹಾಕದೇ ರುಬ್ಬಿ. ಅದಕ್ಕೆ ಎಳ್ಳು ಸೇರಿಸಿ. ಒಂದು ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ಬಳಿಕ ರುಬ್ಬಿದ ಹಿಟ್ಟನ್ನು ಗೋಲಿಯಾಕಾರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸರಿಯಾಗಿ ಕರಿದ ಮೇಲೆ ಗಾರಿಗೆಯನ್ನು ಹೊರ ತೆಗೆದು ಬಿಸಿ ಬಿಸಿಯಾಗಿ ತಿನ್ನಿರಿ. ಇದಕ್ಕೆ ಹಲಸಿನ ಹಣ್ಣಿನ ಮುಳಕ ಎಂದೂ ಕರೆಯುತ್ತಾರೆ.

    0