ಅವಲಕ್ಕಿಯನ್ನು ಒಮ್ಮೆ ತೊಳೆದಿಟ್ಟುಕೊಂಡು ನೆಂದಿರುವ ಹೆಸರು ಬೇಳೆ ಹಾಗೂ ಹಸಿರು ಮೆಣಸಿನಕಾಯಿಯೊಂದಿಗೆ ಮಿಕ್ಸರಿನಲ್ಲಿ ನೀರು ಹಾಕದೆ ಸ್ವಲ್ಪ ನುಣುಪಾಗಿಸಿಟ್ಟುಕೊಳ್ಳಿ.
ಇದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು, ನಿಂಬೆ ರಸ, ಸಕ್ಕರೆ, ಉಪ್ಪು ಹಾಕಿ ಕಲೆಸಿ.
ಮತ್ತಷ್ಟು ಖಾರ ಬೇಕಿದ್ದರೆ ಇನ್ನಷ್ಟು ಹಸಿರು ಮೆಣಸಿನಕಾಯಿ ಹೆಚ್ಚಿ ಇದಕ್ಕೆ ಹಾಕಬಹುದು.
ಕಲೆಸಿಟ್ಟುಕೊಂಡದ್ದನ್ನು ಚಪ್ಪಟೆಯಾಗಿ ಪುಟ್ಟ ಪುಟ್ಟ ತಟ್ಟೆಯಾಕಾರದಲ್ಲಿ ಕಟ್ಲೆಟ್ ತಟ್ಟಿಟ್ಟುಕೊಳ್ಳಿ.
ಹೆಂಚು ಅಥವ ಪ್ಯಾನಿನಲ್ಲಿ ಐದು ಚಮಚ ತೆಂಗಿನ ಎಣ್ಣೆ ಕಾಯಿಸಿ ಕಟ್ಲೆಟ್ಟನ್ನು ಫ್ರೈ ಮಾಡಿ…