ಚಿತ್ರ ಕಲಾ ಶಿಕ್ಷಕ, ರಾವಳೇಶ್ವರನ ಸಂಶೋದಕ !

ಚಿತ್ರ ಕಲಾ ಶಿಕ್ಷಕ, ರಾವಳೇಶ್ವರನ ಸಂಶೋದಕ !

ಕೊಳ್ಳೇಗಾಲ ನಿವಾಸಿ ಆರ್.ರಘು ಯಳಂದೂರು ತಾಲ್ಲೋಕಿನ
ಕೆಸ್ತೂರು ಗ್ರಾಮದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ !ಇವರ
ಹವ್ಯಾಸವೆಂದರೆ ರಾವಳೇಶ್ವರನ ಸಂಶೋದನೆ ಮಾಡುವ್ದು
ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಂಚರಿಸಿ
ರಾವಳೇಶ್ವರನ ಫೋಟೋಗಳನ್ನು ತೆಗೆದು ಸಂಗ್ರಹಿಸಿದ್ದಾರೆ.
ಕರ್ನಾಟಕ ಇತಿಹಾಸ ಅಕಾಡೆಮಿ ನಡೆಸುವ ವಾರ್ಷಿಕ
ಸಮ್ಮೇಳನಗಳಲ್ಲಿ ಭಾಗವಹಿಸಿ ರಾವಳೇಶ್ವರನ ಶಿಲ್ಪಗಳು
..ಶಿಲ್ಪ ಮತ್ತು ಸಂಸ್ಕ್ಕುತಿ, ತಾಯಿ ಮತ್ತು ಮಗು.
ಕಂಚು ಮತ್ತು ಕಲ್ಲಿನ ಮೂರ್ತಿ.ಕಲೆ ಮತ್ತು ಸಂಸ್ಕ್ರುತಿ.
ಸಂಶೋದನೆಯ ಹೊಸ ಸಾಧ್ಯತೆಗಳು,ಆದಿ ಶಕ್ತಿ ಕೆಸ್ತೂರು
ಮಾರಮ್ಮನ ಕೊಳಗ ಇತ್ಯಾದಿ ವಿಷಯಗಳ ಮೇಲೆ
ಪ್ರಬಂಧ ಮಂಡಿಸಿದ್ದಾರೆ.ತಲಕಾಡಿನಲ್ಲಿ ನಡೆದ
ಪಂಚಲಿಂಗ ದರ್ಷನ ಮಹೋತ್ಸವದಲ್ಲಿ ಗಂಗ-ಚೋಳರ
ಕಾಲದ ಶಿಲ್ಪಕಲಾ ಫೋಟೋ ಪ್ರದರ್ಶನ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ರಾವಳೇಶ್ವರನ
ಶಿಲ್ಪಗಳ ಫೋಟೋ ಪ್ರದರ್ಶನ ಮಾಡುತ್ತಾರೆ !
-ನಾನಾ ಕೊಳ್ಳೇಗಾಲ !
.

Comments