ಹೂ ತೋಟದ ಶೋಭೆಗೆ ಪಾರಿಜಾತ ಸಸ್ಯ
1 day 5 hours ago- Ashwin Rao K Pಹೂ ತೋಟದಲ್ಲಿ ವೈವಿಧ್ಯಮಯ ಪುಷ್ಪ ಗಿಡಗಳ ಸಾಲಿನಲ್ಲಿ ಕೆಲವು ಪರಿಮಳದ ಹೂ ಗಿಡಗಳಿದ್ದರೆ ಅದರ ಶೋಭೆಯೇ ಬೇರೆ. ಪರಿಮಳದ ಹೂ ಬಿಡುವ ಪುಷ್ಪಗಳಲ್ಲಿ ಮಲ್ಲಿಗೆ, ಜಾಜೀ ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂವುಗಳ ಜೊತೆಗೆ ರಾತ್ರೆ ಹೊತ್ತು ಹೂ ಬಿಟ್ಟು ಬೆಳಗ್ಗೆ ಏಳುವಾಗ ನಮ್ಮನ್ನು ಆಕರ್ಷಕ ಪರಿಮಳದೊಂದಿಗೆ ಸ್ವಾಗತಿಸುವ ಹೂ ಎಂದರೆ ಪಾರಿಜಾತ (Night-flowering Jasmine). ಪುಷ್ಪ ಮುಸ್ಸಂಜೆಯಲ್ಲಿ ಸ್ವಲ್ಪ ಸ್ವಲ್ಪವೇ ಅರಳಲು ಪ್ರಾರಂಭವಾಗಿ ಮಧ್ಯರಾತ್ರಿಗೆ ಪೂರ್ತಿ ಅರಳುತ್ತದೆ. ಬೆಳಗಾಗುವಾಗ ಅರಳಿದ ಹೂವು ತೊಟ್ಟಿನಿಂದ ಉದುರಿ ನೆಲದಲ್ಲಿ ಬಿದ್ದಿರುತ್ತದೆ. ವಿಶಿಷ್ಟ ಆಕರ್ಷಕ ಸುವಾಸನೆ ಸುಮಾರು ೨೫ ಮೀಟರು ವ್ಯಾಪ್ತಿಯವರೆಗೂ ಪಸರಿಸುತ್ತದೆ. ಪಾರಿಜಾತ ಹೂವನ್ನು ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದರ ತೊಟ್ಟು ಕೇಸರಿ ಬಣ್ಣ, ಪುಷ್ಪದಳ ಬಿಳಿ ಬಣ್ಣ.… ಮುಂದೆ ಓದಿ...