ತಿಂಗಳ ಮಾತು

ಅಪ್ಪ ಮಾಡುವ ಒಕ್ಕಲುತನ ಪ್ರಯೋಜನವಿಲ್ಲದ್ದು. ಅಪ್ಪನ ಸಂಪ್ರದಾಯವನ್ನು 'ಮೂಢನಂಬಿಕೆ' ಎಂದೆವು . ಒಂದೇ ಬೆಳೆಯನ್ನು ಬೆಳೆದು ಹೆಚ್ಚು ಹಣ ಗಳಿಸಿ ದಿಡೀರನೆ ಶ್ರೀಮಂತರಾಗುವ ಕನಸು ಕಂಡೆವು. ಕಬ್ಬು, ಹತ್ತಿ, ತಂಬಾಕು ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯತೊಡಗಿದೆವು, ಪರ್ಯಾಯ ಬೆಳೆ ಮಾಡುತಿದ್ದ ಅಪ್ಪನ ಹೊಲದಲ್ಲಿ ಒಂದೇ ಬೆಳೆಯನ್ನು ಹತ್ತಾರು ವರುಷ ಬೆಳೆಯತೊಡಗಿದೆವು. ಕಾಲಗೈಯಂತಹ ಪದ್ದತಿ ಅನುಸರಿಸುವುದನ್ನೇ ಬಿಟ್ಟೆವು. ಹೆಚ್ಚು ಹೆಚ್ಚು ನೀರು ಹಾಯಿಸಿ, ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ,...
ಸಾಂವಿ, ಬರಗ ಮತ್ತು ನವಣೆ ಈ ಮೂರು ಒಂದೇ ಪ್ರಕಾರದ ಬೆಳೆಗಳಾಗಿವೆ. ಆಕಾರದಲ್ಲಿ ಸಣ್ಣ ಕಾಲುಗಳಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತವೆ. ಬರಗ ಎರಡೇ ತಿಂಗಳಿನಲ್ಲಿ ಕೊಯ್ಲಿಗೆ ಬಂದರೆ ಸಾಂವಿ, ನವಣೆ ಮೂರು ತಿಂಗಳಿಗೆ ಕೊಯ್ಲಿಗೆ ಬರುತ್ತವೆ. ಸಾಂವಿಯನ್ನು ಬಿತ್ತಲು ಜೂನ್ ತಿಂಗಳ ಮೊದಲನೆ ವಾರ ಸಕಾಲ. ಉಸುಕು ಮಿಶ್ರೀತ ಕೆಂಪು ಮಣ್ಣಿನ ಮಸಾರಿ ಜಮೀನಿನಲ್ಲಿ ಮತ್ತು ಕಲ್ಲಿನ ಹಕ್ಕಲು ಜಮೀನಿನಲ್ಲೂ ಬೆಳೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸಾಂವಿಯನ್ನು ಬೆಳೆಯುತ್ತಾರೆ. ಅತಿ ಕಡಿಮೆ...