ತಿಂಗಳ ಮಾತು

 ೨೯ ಜುಲೈ ೨೦೧೭ ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ ರಾಮಚಂದ್ರ ಭಟ್ ಅವರ ಟೆರೇಸ್ ಸಭಾಂಗಣದಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಏರ್ಪಡಿಸಿದ್ದ ಕಾರ್ಯಾಗಾರ “ಕೈತೋಟ ನಿರ್ವಹಣೆ".   ಸಂಜೆ ೪.೩೦ರಿಂದ ೬.೩೦ ವರೆಗೆ ಜರಗಿದ ಈ ಕಾರ್ಯಾಗಾರದಲ್ಲಿ ಮೂವರು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಣೆ ಮತ್ತು ಪ್ರಾತ್ಯಕ್ಷಿಕೆ. ಆರಂಭದಲ್ಲಿ ಮನೆಯ "ಕೊಳೆಯುವ ಕಸ”ವಾದ ತರಕಾರಿ ತ್ಯಾಜ್ಯ, ಹಣ್ಣಿನ ಸಿಪ್ಪೆಇತ್ಯಾದಿಗಳಿಂದ ಸುಲಭವಾಗಿ ಕಂಪೋಸ್ಟ್ ತಯಾರಿಸುವ ವಿಧಾನದ ಬಗ್ಗೆ ತಿಳಿಸಿ, ಬಳಿಕ ಅಲ್ಲೇ...
೧೯ ಆಗಸ್ಟ್ ೨೦೧೭ರಂದು ಮಂಗಳೂರಿನ ಶರವು ದೇವಸ್ಥಾನ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಸಂಜೆ ೪.೩೦ಕ್ಕೆ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ ಕಾರ್ಯಕ್ರಮ “ಕೈತೋಟ ಕ್ರಾಂತಿಯಾಗಲಿ”.   ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದವರು ಮೂಡಬಿದ್ರೆ ಬಳಿಯ ತಾಕೊಡೆಯ ಎಡ್ವರ್ಡ್ ರೆಬೆಲ್ಲೋ. ಆರಂಭದಲ್ಲಿ ಅವರನ್ನು ಪ್ರದೀಪ್ ಸೂರಿ ಪರಿಚಯಿಸಿದರು. ಎಡ್ವರ್ಡರದು ತರಕಾರಿ ಹಾಗೂ ಹಣ್ಣುಗಳ ಕೃಷಿಯಲ್ಲಿ ನಾಲ್ಕು ದಶಕಗಳ ವ್ಯಾಪಕ ಅನುಭವ. ಅಪ್ಪಟ ಸಾವಯವ ಕೃಷಿಕರಾದ ಅವರು ಡಾ. ಎಂ.ಎಚ್. ಮರಿಗೌಡ ಪ್ರಶಸ್ತಿ ಮತ್ತು...
ಇತ್ತೀಚೆಗೆ ಧಾರವಾಡದಲ್ಲಿ ಜರಗಿದ ಕೃಷಿಮೇಳದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹಾಗೂ ಕೃಷಿ ಬಗ್ಗೆ ಪ್ರಚಾರ ನೀಡಲಾಯಿತು. ಬೆಳೆಯುವ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳ ಸೇವನೆ ಪರಿಹಾರ ಎಂಬುದು ಆಹಾರತಜ್ನರ ಅಭಿಪ್ರಾಯ. ಅದಕ್ಕಾಗಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಕೇಂದ್ರದಿಂದ ಕೃಷಿಮೇಳಕ್ಕೆ ಭೇಟಿ ನೀಡಿದವರಿಗೆ ಸಿರಿಧಾನ್ಯಗಳ ಬಳಕೆ ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಲಾಯಿತು. ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿತಿನಿಸುಗಳನ್ನು ಜನರಿಗೆ ಪರಿಚಯಿಸುವ ಮೂಲಕ...