ತಿಂಗಳ ಮಾತು

ಒಮ್ಮೆ ಕಾಡಿನ ಎತ್ತರದ ಗುಡ್ಡಗಳನೆಲ್ಲ ಒಂದೊಂದಾಗಿ ಏರಲು ಹೊರಟಿದ್ದೆ. ಉತ್ತರ ಕನ್ನಡ ಜಿಲ್ಲೆಯ ಎತ್ತರದ ಗುಡ್ಡಗಳ ಪಟ್ಟಿ ಬೇಕಿತ್ತು. ಗುಡ್ಡಗಳು ಕಾಡಿನ ಭೂಮಿ, ಅರಣ್ಯ ಇಲಾಖೆಯವರಲ್ಲಿ ವಿವರ ಕೇಳಿದರೆ ಸಿಗಬೇಕಿತ್ತು. ಆದರೆ ಎಲ್ಲರೂ ಹಳೆಯ ಬ್ರಟಿಷ್ ದಾಖಲೆಯತ್ತ ಬೆರಳು ತೋರಿಸಿದರು. ಕ್ರಿ.ಶ1884ರ ಕ್ಯಾಂಬೆಲ್ ಗೆಜೆಟಿಯರ್ ಪುಟ ತಿರುವಿದರೆ ಗುಡ್ಡದ ಹೆಸರು, ಎತ್ತರದ ವಿವರ ದೊರೆಯಿತು. ಕಾಳಿ ಕಣಿವೆಯ ಎಂಡಾತೇಮ್, ದೇವತ್ತೇಮ್ ನೋಡಲು ಕರೆದೊಯ್ದು ಕುಣಬಿ ವನವಾಸಿಗ ದಟ್ಟ ಕಾಡಲ್ಲಿ ತೋರಿಸಿದ್ದು ಪುನಃ...
"ಹೆಸರು ಗುರುತಿಸುವಾಗ ಯಾವತ್ತೂ 'ಅವಳು ಬಸುರಿ' ಎಂದು ಕರಿಬಸರಿಯನ್ನು ತಮಾಷೆಗೆ ಕರೆಯುತ್ತಿದ್ದೆವು. ಬಸುರಿಯಾದವಳು ಹೆರಬೇಕು. ಇದು ನಿಸರ್ಗ ನಿಯಮ. ಈಗ ಕರಿಬಸರಿ ಹೆಸರಿಗೆ ತಕ್ಕಂತೆ ಹಸಿರು ಹೆರಿಗೆಯ ಸಾರ್ಥಕ ಕೆಲಸ ಮಾಡುತ್ತಿದೆ. “ ಕರಿಬಸರಿ ಮರ ನೋಡಿದಾಗ ವಿಚಿತ್ರ ಕಾಣುತ್ತಿದೆ. ಎಳ್ಳಿನ ಗಾತ್ರದ ಇದರ ಬೀಜಕ್ಕೆ ನೇರ ನೆಲಕ್ಕೆ ಬಿದ್ದರೆ ಹುಟ್ಟುವುದಕ್ಕೆ ತಾಕತ್ತಿಲ್ಲ. ಪಕ್ಷಿಗಳು ಹಣ್ಣು ತಿಂದು ಅವುಗಳ ಹೊಟ್ಟೆಸೇರಿ ಬೀಜೋಪಚಾರ ಪಡೆದು ಹಿಕ್ಕೆಯ ಮೂಲಕ ಹೊರಬರಬೇಕು. ಯಾವುದೋ ಮರದ ಟೊಂಗೆಗಳ ಮೇಲೆ...