ತಿಂಗಳ ಮಾತು

ಮಣಿಪಾಲದಿಂದ ಪರ್ಕಳ ರಸ್ತೆಯಲ್ಲಿ ಒಂದೂವರೆ ಕಿಮೀ ಸಾಗಿ, ಬಲಕ್ಕೆ ತಿರುಗಿದರೆ ಸಿಗುವ ಈಶ್ವರ ನಗರ ಬಡಾವಣೆಯಲ್ಲಿದೆ ಮಣಿಪಾಲ ಹಾಲಿನ ಡೈರಿ. ಅದನ್ನು ದಾಟಿ ಮುಂದಕ್ಕೆ ಹೋಗಿ, ಕೊನೆಯ ಅಡ್ಡರಸ್ತೆಗೆ ತಿರುಗಿ ಗುಡ್ಡವೇರಿದರೆ ಡಾ.ಕೆ. ಎನ್. ಪೈ ಅವರ ಮನೆ ತಟಕ್ಕನೆ ಕಣ್ಸೆಳೆಯುತ್ತದೆ – ಮನೆಯ ಸುತ್ತಲು ಇರುವ ಹಸುರು ಮರಗಳಿಂದಾಗಿ. ಹದಿನೈದು ಸೆಂಟ್ಸ್ ಜಾಗದ ಆ ನಿವೇಶನದಲ್ಲಿರುವ “ಕೈತೋಟ ನೋಡಲು ಸಂಜೆ ೫ ಗಂಟೆಗೆ ಬನ್ನಿ” ಎಂಬ ಡಾ. ಪೈ ಅವರ ಆಹ್ವಾನಕ್ಕೆ ಸ್ಪಂದಿಸಿ ನಾವು ಮಂಗಳೂರಿನಿಂದ ೧೯ ಮಾರ್ಚ್...
ಜೂನ್ ೨೬, ೨೦೧೬ರಂದು ನಾವು ಹೊರಟದ್ದು ಕನ್ಯಾನದ ಗೋಪಾಲಕೃಷ್ಣ ಶರ್ಮರ ಮನೆಗೆ. ಮಂಗಳೂರಿನಿಂದ ಕಾರಿನಲ್ಲಿ ಮುಡಿಪು, ಬಾಕ್ರಬೈಲು ಹಾದಿಯಲ್ಲಿ ಸಾಗಿ ಒಡಿಯೂರು ಸಂಸ್ಥಾನದ ಪ್ರವೇಶದ್ವಾರದಲ್ಲಿ ಎಡಕ್ಕೆ ತಿರುಗಿ ಕನ್ಯಾನ ತಲಪಿದೆವು. ಅಲ್ಲಿಂದ ಅರ್ಧ ಕಿಲೋಮೀಟರ್ ಮುಂದಕ್ಕೆ ಹೋಗಿ, ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಗೆ ಬಲಕ್ಕೆ ತಿರುಗಿದೆವು. ಅನಂತರ ಎಡಕ್ಕೆ ತಿರುಗಿ ಇಳಿಜಾರಿನ ಕಚ್ಚಾ ಹಾದಿಯಲ್ಲಿ ಸಾಗಿ ಶರ್ಮರ ಮನೆ ಮುಟ್ಟಿದೆವು. ಅವರ ತಂದೆ ಕಟ್ಟಿಸಿದ ೮೦ ವರುಷಗಳ ಹಳೆಯ ಮನೆ. ಹಂಚಿನ ಚಾವಣಿ. ಮನೆಯ...