ನುಡಿಮುತ್ತುಗಳು

February 23, 2013
0

ಯಾವ ರಾಜನು ಗೂಢಾಚಾರರನ್ನು ನೇಮಿಸಿಕೊಂಡಿಲ್ಲವೋ,

ಯಾವನು ಉಚಿತ ಕಾಲದಲ್ಲಿ ಪ್ರಜೆಗಳಿಗೆ  ದರ್ಶನ ನೀಡುವುದಿಲ್ಲವೋ,

ಯಾವನು ಕಂಡವರ ಮಾತಿಗೆ ಕಟ್ಟುಬಿದ್ದು ಪರಾಧೀನನಾಗಿ ವರ್ತಿಸುವನೋ,

ಅವನನ್ನು ಪ್ರಜೆಗಳು ನದಿಯ ಕೆಸರನ್ನು ಆನೆಗಳಿಗೆ ವರ್ಜಿಸುವಂತೆ ದೂರವಿಡುತ್ತಾರೆ.

February 21, 2013
0

ಲೋಕದಲ್ಲಿ ನಮ್ಮ ಒಳಿತಿಗಾಗಿಯೇ ಇರುವ ಒಬ್ಬ ವ್ಯಕ್ತಿ ದೈವ ಯೋಗದಿಂದ ಎಲ್ಲಿಯೋ ಇರುತ್ತಾನೆ.

February 21, 2013
0

ನೀನೇ ಭಗವಂತನ ದೇವಾಲಯ, ಭಗವಂತ ನಿನ್ನಲ್ಲಿಯೇ ಇದ್ದಾನೆ ಎನ್ನುವುದು ನಿನಗೆ ತಿಳಿಯದೇ?

February 21, 2013
0

ನಮ್ಮ ನಾಡಿನವರೀಗ ತಮ್ಮನ್ನು ತಾವು ಎಷ್ಟು ಮರೆತುಕೊಂಡರೆ ಅಷ್ಟು ಮುಂದುವರಿದವರು ಎಂಬ ಭಾವವನ್ನು ತಳೆದಿರುವಂತೆ ತೋರುತ್ತದೆ.

ಅವರಿಗೆ ತಾವು ರಾಮಾಯಣ ಮಹಾಭಾರತದಂತಹ ಮಹಾಸಂಸ್ಕೃತಿಗೆ ಸೇರಿದವರೆಂಬ ಸ್ಮರಣೆ ಬೇಡದಂತಿದೆ.

February 21, 2013
0

ಚಿಂತೆಯೊಂದನ್ನು ಹೊರತು ಪಡಿಸಿದರೆ, 'ಅಸೂಯೆ' ಮನುಷ್ಯನ ಪ್ರಬಲ ಶತ್ರು.

February 21, 2013
0

ನಿಜವಾದ ಪ್ರೀತಿ ಸಂಯೋಗದಲ್ಲೂ , ವಿಯೋಗದ ಮಧುರ ವೇದನೆಯನ್ನು ಅನುಭವಿಸುತ್ತದೆ.

February 20, 2013
0

ಅರ್ಥವು ಮಾತಿನಲ್ಲಿ ಇದೆ. ಅರ್ಥಕ್ಕೆ ಮಾತು ಮೂಲ. ಅರ್ಥವು ಮಾತಿನೊಡನೆ ಬೆರೆತಿದೆ.

ಯಾರು ಆ ಮಾತನ್ನು ಸುಳ್ಳಾದ ಅರ್ಥ ಕೊಡುವಂತೆ ಆಡುತ್ತಾನೆಯೋ ಅವನು ಎಲ್ಲ ರೀತಿಯ ಕಳ್ಳತನವನ್ನೂ ಮಾಡಿದ ಹಾಗೆ ಆಗುತ್ತದೆ.

February 20, 2013
0

ಅನ್ಯಾಯವನ್ನು ಸಹಿಸುವುದಕ್ಕಿಂತ ಅನ್ಯಾಯವನ್ನು ಮಾಡುವುದು ಒಳ್ಳೆಯದು!

ಆದರೆ ಯಾರೂ ಈ ಸಿದ್ದಾಂತವನ್ನು ಒಪ್ಪುವುದಿಲ್ಲ.

February 20, 2013
0

ಕಾದಂಬರಿ ಕರತಲ ರಂಗಭೂಮಿ, ಅಂಗೈ ಮೇಲಣ ನಾಟಕ ಶಾಲೆ.

February 20, 2013
0

ಸುಳ್ಳುಗಾರನ ಅತಿ ಸಮೀಪದ ಸ್ನೇಹಿತ 'ಭೀತಿ',

ಸತ್ಯವಂತನ ಅತಿ ಸಮೀಪದ ಸ್ನೇಹಿತ 'ನಿರ್ಭೀತಿ'.

February 20, 2013
0

ಅಂತಃಕರಣ ಹಾಗೂ ಸರಳ ನೇರ ನಡೆ ನುಡಿಯೇ ಎಲ್ಲಕ್ಕಿಂತ ದೊಡ್ಡ ಗುಣ.

February 19, 2013
0

ಬರವೇ ಇರಲಿ, ಸಮೃದ್ಧಿ ಬರಲಿ- ತಾಳುವ ಬಾಳಿನ ಬಾವುಟವಿರಲಿ.

February 19, 2013
0

ಪ್ರೇಮಕ್ಕೂ ಮಿಲಿಟರಿ ಆಡಳಿತಕ್ಕೂ ವ್ಯತ್ಯಾಸ ಇಲ್ಲ.

February 19, 2013
0

ಶಿಸ್ತಿನ ಬಹುಮತವೇ ಸತ್ಯದ ಅಪಾಯಕಾರಿ ಶತ್ರು.

February 19, 2013
0

'ಬದುಕಿ, ಇತರರನ್ನು ಬದುಕಲು ಬಿಡಿ' ಎಂಬುದೇ ನಮ್ಮ ಜೀವನದ ಮಂತ್ರವಾಗಬೇಕು.

February 19, 2013
0

ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ,ನಾವು ಬದುಕುವ ರೀತಿ ಮುಖ್ಯ.

February 18, 2013
0

ಏನೂ ಇಲ್ಲದವನು ಬಡವನಲ್ಲ; ಇನ್ನೂ ಬೇಕು ಅನ್ನುವವನೇ  ಬಡವ.

February 18, 2013
0

ಬಡತನವೇ ಕ್ರಾಂತಿ ಹಾಗೂ ಅಪರಾಧಗಳ ತಾಯಿ ತಂದೆ.

February 18, 2013
0

ಯಶಸ್ಸು ಸತತ ಪ್ರಯತ್ನದ ಫಲ. ಕೊನೆಯ ಹೊಡೆತಕ್ಕೆ ಕಲ್ಲು ತುಂಡಾಗುತ್ತದೆ;

ಅದರರ್ಥ ಮೊದಲ ಹೊಡೆತ ವ್ಯರ್ಥವೆಂದಲ್ಲ.

February 18, 2013
0

ಅನ್ನದೊಳಗೊಂದಗುಳ, ಸೀರೆಯೊಳಗೊಂದೆಳೆಯ, ಚಿನ್ನದೊಳಗೊಂದೊರೆಯ ಇಂದಿಂಗೆ ನಾಳಿಂಗೆ , ಎಂದುಕೊಂಡೆನಾದೊಡೆ ತಲೆ ದಂಡ.

February 18, 2013
0

ಇತರರ ಗುಣಗ್ರಹಣ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತ್ಯಜಿಸಬೇಕು.

ಅಹಂಕಾರಿಗಳಲ್ಲಿ ಗುಣಗ್ರಾಹಿತ್ವ ಇರಲಾರದು.

February 17, 2013
0

ಅಸತ್ಯದಿಂದ ಸತ್ಯ ಎಂದಿಗೂ ಹುಟ್ಟುವುದಿಲ್ಲ.

February 17, 2013
0

ಕೈ ಶುದ್ಧಿ, ವಾಕ್ ಶುದ್ಧಿ , ಮನಶುದ್ಧಿ ಉಳ್ಳವನು

ಮತ್ತಾವುದರ ಬಗೆಗೂ ಚಿಂತಿಸಬೇಕಾದುದಿಲ್ಲ.

February 17, 2013
0

ಆತ್ಮ ಪ್ರಶಂಸಕರನ್ನು, ದುರಭಿಮಾನಿಗಳನ್ನು, ಸ್ವತಃ ಜಿಪುಣತೆ ತೋರುವವರನ್ನು ಮತ್ತು ಇತರರನ್ನು

ಜಿಪುಣತೆಗೆ ಪ್ರೇರೇಪಿಸುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.

 

Pages