ನುಡಿಮುತ್ತುಗಳು

March 26, 2013
0

ಯಾವ ಮನೆಯಲ್ಲಿ ಅತಿಥಿ ಸತ್ಕಾರ ಇರುವುದಿಲ್ಲವೋ ಅದು ಸ್ಮಶಾನದಂತೆ.

March 26, 2013
0

ಕುರಿಯಂತೆ ನಡೆಯುವವರು ಬಹಳಷ್ಟು ಜನರು,

ಗುರಿಯಿಟ್ಟು ನಡೆಯುವವರು ತುಂಬಾ ಕಡಿಮೆ.

March 26, 2013
0

ಸಂಸ್ಕಾರಗಳ ಬಗ್ಗೆ ನನಗೆ ನಂಬಿಕೆಯಿಲ್ಲ, ಸ್ವಾಭಾವಿಕ ಉನ್ನತಿಯನ್ನು ನಾನು ನಂಬುತ್ತೇನೆ.

March 26, 2013
0

ನಿಮಗೆ ಏನು ಬೇಕು ಎಂದು ತಿಳಿದುಕೊಂಡಾಗ ಮಾತ್ರ ಅದನ್ನು ಪಡೆಯುವ ಹಾದಿಯೂ ನಿಮಗೆ ತಿಳಿಯುತ್ತದೆ.

 

March 23, 2013
0

ಸಜ್ಜನರು ಸದಾ ದಯೆ, ಕರುಣೆಯಿಂದ ಜೀವನ ನಡೆಸುತ್ತಾರೆ.

March 23, 2013
0

ಹಸಿದವರಿಗೆ ಒಂದು ತುತ್ತು ಅನ್ನ ನೀಡಿ,

ಅವರು ನಿಮ್ಮನ್ನು ದೇವರು ಎಂದೇ ತಿಳಿಯುತ್ತಾರೆ.

March 23, 2013
0

ಹೆಚ್ಚು ದಿನ ಬದುಕುವುದಕ್ಕಿಂತ ಬದುಕಿದ್ದ ಸಮಯದಲ್ಲಿ ಏನು ಸಾಧಿಸುತ್ತೇವೆ ಎನ್ನುವುದು ಮುಖ್ಯ.

March 23, 2013
0

ಯಾರ ಮನೆಯಲ್ಲಿ ಅತಿಥಿ ಸತ್ಕಾರ ಚೆನ್ನಾಗಿ ನಡೆಯುತ್ತದೆ,

ಅಲ್ಲಿಯವರೆಗೆ ಅತಿಥಿ ಆ ಮನೆಯಲ್ಲಿ ಇರಬೇಕು.

ಸತ್ಕಾರದ ಕೊರತೆ ಕಂಡುಬಂದ ಕೂಡಲೇ ಅಲ್ಲಿಂದ ಹೊರಟುಬಿಡಬೇಕು.

March 23, 2013
0

ಅಸಹನೆಯಿಂದ ಭಾವೋದ್ವೇಗ, ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ.

ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು.

March 22, 2013
0

ನಾವು ಸದಾ ತೆರೆದಿರುವ ಬಾಗಿಲಿನ ಮೂಲಕವೇ ದೌರ್ಭಾಗ್ಯ ಪ್ರವೇಶಿಸುತ್ತದೆ!

March 22, 2013
0

ಆಸೆ ತೃಣದಷ್ಟಿದ್ದರೂ ಭಗವಂತನ ಸಾಕ್ಷಾತ್ಕಾರವಾಗದು.

ಚಿಕ್ಕ ಚಿಕ್ಕ ಆಸೆಗಳನ್ನು ದೂರ ಮಾಡುವುದೊಳ್ಳೆಯದು.

March 22, 2013
0

ಮನೆ ಎನ್ನುವುದು ಪುಣ್ಯ ಕ್ಷೇತ್ರ ಇದ್ದಂತೆ. ಗೃಹಸ್ಥಾಶ್ರಮ ಎಲ್ಲ ಧರ್ಮಗಳ ಮೂಲ.

March 22, 2013
0

ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ, ನಾವೆಂದೂ ದೊಡ್ಡವರಾಗುವುದಿಲ್ಲ.

March 22, 2013
0

ಕಾಣದೆ ತುಳಿಯಲ್ಪಟ್ಟ ಕತ್ತಿಯಾಗಲೀ ಹಾವಾಗಲೀ ಅಪಾಯವನ್ನು ಉಂಟುಮಾಡುತ್ತವೆ.

ಆದರೆ ಅವುಗಳಿಗಿಂತ ಹೆಚ್ಚಾಗಿ ಶರೀರದಲ್ಲಿರುವ ಸಿಟ್ಟು ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.

March 21, 2013
0

ಶೂದ್ರರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಹೋರಾಡುವವರು ಬ್ರಾಹ್ಮಣರ ವಿರುದ್ಧ ಅನಗತ್ಯವಾಗಿ ಬರೆಯಬೇಕಿಲ್ಲ.

ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕು.

March 21, 2013
0

ಭಯಂಕರವಾದ ಕಷ್ಟದಲ್ಲಿ ಮುಳುಗುತ್ತಿರುವವರನ್ನು

ನೆಂಟರಾಗಲೀ, ಮಿತ್ರರಾಗಲೀ, ಬೇಕಾದಷ್ಟು ಹಣವಾಗಲೀ - ರಕ್ಷಿಸಲಾರದು.

March 21, 2013
0

 ಮನುಷ್ಯನ ಉತ್ಕ ರ್ಷವೇ  ಮತದ ಗುರಿ.

March 20, 2013
0

ಬುದ್ದಿಮತ್ತೆ, ಚಾಕಚಕ್ಯತೆ ಎಲ್ಲ ಇದ್ದೂ ತನ್ನ ಸ್ವಾರ್ಥವನ್ನು ಮಾತ್ರ ನೋಡಿಕೊಳ್ಳುವವನು ಎಂದೂ ನಾಯಕನಾಗಲಾರ.

ತಾನು ಪ್ರತಿನಿಧಿಸುವ ಸಮೂಹದ ಹಿತವನ್ನು ಕಾಪಾಡುವವನು ನಾಯಕನೆನಿಸಿಕೊಳ್ಳುತ್ತಾನೆ.

March 20, 2013
0

ಪ್ರಜಾ ರಕ್ಷಣೆಗಾಗಿ ಮಾಡುವ ಕಾರ್ಯವು ಕ್ರೂರವಾಗಿರಲಿ ಇಲ್ಲದಿರಲಿ,

ಪಾಪಹೇತುವಾಗಿರಲಿ ದೋಷಮುಕ್ತವಾಗಿರಲಿ,

ಪ್ರಜಾಪಾಲನೆಯ ಹೊಣೆ  ಹೊತ್ತವನು ಅದನ್ನು ಮಾಡಲೇಬೇಕು.

March 20, 2013
0

ಮದುವೆ ಹಾಗೂ ಸ್ನೇಹಗಳಲ್ಲಿ 'ಆಕಸ್ಮಿಕ'ದ ಪಾತ್ರ ಮಹತ್ವದ್ದು.

March 20, 2013
0

ಕಾನೂನುಗಳಿಂದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಗಳಿಗೆ ಗುರಿ ಆಗಬೇಕಾಗುತ್ತದೆ.

ಪ್ರಾಪಂಚಿಕ ಕಾನೂನುಗಳ ರೀತಿಯೇ ಹೀಗೆ.

March 20, 2013
0

ನಮಗೆ ಅವಶ್ಯಕತೆ ಇಲ್ಲದುದನ್ನು ಪಡೆದಿದ್ದರೂ ಕಳ್ಳತನ ಮಾಡಿದಂತೆ.

March 20, 2013
0

ಎಲ್ಲರೂ ತಮ್ಮದೇ ಅತೀ ದೊಡ್ಡ ಕಷ್ಟ ಎಂದುಕೊಳ್ಳುತ್ತಾರೆ!

March 19, 2013
0

 ಓದಿ ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.

Pages