ನುಡಿಮುತ್ತುಗಳು

November 05, 2013
0

ಸಾಕಷ್ಟು ಪ್ರಶ್ನೆಗಳಿಗೆ  ಒಂದೇ ಉತ್ತರ‌

            ''ಮೌನ‌"

ಮೌನದ ಮೊದಲ ಮುಖ  "ತಾಳ್ಮೆ"

 

November 01, 2013
0

ಸಿಗುವುದು  'ಆಕಸ್ಮಿಕ‌"

ಉಪಯೊಗಿಸಿಕೊಳ್ಳುವುದು "ಅನಿವಾರ್ಯ"

ಕಳೆದುಕೊಳ್ಳುವುದು "ಅಚಾತುರ್ಯ‌"

ಅನುಭವಿಸುವುದು "ಅಸಾಯಕ‌"

ಹಂಚಿಕೊಳ್ಳುವುದು "ಆಘಾತ‌"

ಸುಮ್ಮನಿರುವುದು "ಅಸಂಭವ‌"

 

October 31, 2013
0

ನೀವು ಬದಲಾಗಲು ಸಾದ್ಯವಾಗದಿದ್ದಲ್ಲಿ

ಹವ್ಯಾಸಗಳನ್ನು ಬದಲಾಯಿಸಿ, ಅದು 

ನಿಮ್ಮನ್ನು ನಿಮ್ಮ ವ್ಯಕ್ತಿತ್ವವನ್ನು  ಬದಲಾಯಿಸುತ್ತದೆ.

 

October 25, 2013
0

ಚಿಂತೆಯೇ ಮುಪ್ಪು,

ಸಂತೋಷವೇ ಯೌವನ.

 

October 24, 2013
0

ಏಸು ಕಾಸು ಕೂಡಿದರೇನು!

ಏಸು ಕಾಲ ಬಾಳಿದರೇನು!

'ಘಾಸಿ' ತಪ್ಪದು ಈ ಜೀವಕ್ಕೆ.

October 21, 2013
0

ನೀವು ನಿನ್ನೆಗಿ0ತ ಈ ದಿನವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳದಿದ್ದರೆ‍!

‍    ನಿಮಗೆ ನಾಳೆ ಏಕೆ ಬೇಕು?

October 20, 2013
0

ಬೆಳಕನ್ನು ನೋಡಲು ಬೆಳಕಿನ ಅವಶ್ಯಕತೆ ಬೇಕಿಲ್ಲ ...........ಶ್ರೀ ರಮಣ ಮಹರ್ಷಿಗಳು

October 05, 2013
0

"ಮೌನ" ವೆಂಬುದೆ ಅತ್ಯುನ್ನತವಾದ ಗೌರವ ಸೂಚಕ ............ಶ್ರೀ ರಮಣ ಮಹರ್ಷಿಗಳು

September 28, 2013
2

ಭೂತ ಕಾಲವಾಗಲಿ, ಭವಿಷ್ಯತ್ ಕಾಲವಾಗಲಿ ಇಲ್ಲ ಇರುವುದು ವರ್ತಮಾನ ಕಾಲ ಮಾತ್ರ ಅದು ಕೂಡ ಒಂದು ಭ್ರಮೆ ಅಷ್ಟೆ ...... ಶ್ರೀ ರಮಣ ಮಹರ್ಷಿಗಳು

September 15, 2013
0

" ಸಹಾಯ " ಎಂಬುವುದು ಬಹು ಅಮೂಲ್ಯವಾದ  " ಉಡುಗೊರೆ " ಆದುದರಿಂದ ಅದನ್ನು ಎಲ್ಲರಿಂದಲು ಅಪೇಕ್ಷಿಸ ಬೇಡ ಯಾಕೆಂದರೆ ಕೆಲವರು ಮಾತ್ರ ಹೃದಯದಿಂದ " ಶ್ರೀಮಂತ" ರಾಗಿರುತ್ತಾರೆ

September 14, 2013
4

ಒಬ್ಬನು ಸತ್ಯವನ್ನು ಕೂಗಿ ಸಾರಿದ‌

ಯಾರೂ ಕಿವಿಗೊಡಲಿಲ್ಲ, 

ಇನ್ನೊಬ್ಬ ಸುಳ್ಳನ್ನು ಮೆಲ್ಲನುಸುರಿದ 

ಎಲ್ಲರೂ ತಲೆದೂಗಿದರು.

July 04, 2013
0

ಆಧ್ಯಾತ್ಮದಲ್ಲಿ ಸಾಧನೆ ಮುಖ್ಯ. ವಾಕ್ಯಾರ್ಥದಿಂದ ಸಾಧನೆಯಿಲ್ಲ, ಸಾಧಿಸಿದ ಮೇಲೆ ವಾಕ್ಯಾರ್ಥದ ಅವಶ್ಯಕತೆಯಿಲ್ಲ.

June 20, 2013
0

ಪ್ರತಿಯೊಬ್ಬರಲ್ಲೂ ಒಬ್ಬ ದೇವರಿದ್ದಾನೆ.  ಆದರೆ ಪ್ರತಿಯೊಬ್ಬನೂ ದೇವರಾಗಲಾರ.

May 06, 2013
0

ತಾಳ ಮಾನ ಸರಿಸವನರಿಯೆ,

ಓಜೆಬಜಾವಣೆ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ,

ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ

                                                -ಬಸವಣ್ಣ

March 28, 2013
0

ಕ್ರೋಧದ ಕಾರಣದಿಂದ ನೀವು ದುರ್ಬಲರಾಗುತ್ತೀರಿ, ಕ್ಷೀಣರಾಗುತ್ತೀರಿ.

ಕ್ರೋಧ ಸ್ವಯಂಚಾಲಕನನ್ನೇ ಘಾಸಿಕೊಳ್ಳುವಂಥದು.

March 28, 2013
0

ಪಾಪವನ್ನು ತಿರಸ್ಕರಿಸು, ಪಾಪಿಯನ್ನಲ್ಲ

March 28, 2013
0

ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು.

ಇದನ್ನು ಸರಿಯಾಗಿ ಎದುರಿಸದೆ  ನಾಳೆಗಳನ್ನು ಕಟ್ಟಲಾಗುವುದಿಲ್ಲ.

ಆದ್ದರಿಂದ ನಾಳೆಗಿಂತ ಇಂದಿನ ಬಗ್ಗೆ ಹೆಚ್ಚು ಯೋಚಿಸಿ.

March 28, 2013
0

ಇಂದು ಮಿತಿಮೀರಿದ ಆಸೆಯೇ ಜಗತ್ತಿನ  ಜೀವನವನ್ನೆಲ್ಲಾ ರೂಪಿಸುತ್ತಿದೆ.

ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಸಹಿಸಲು ಸಿದ್ಧವಾಗಿದೆ.

March 27, 2013
0

ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ.

March 27, 2013
0

ದಾರಿದ್ರ್ಯ ಮತ್ತು ಐಶ್ವರ್ಯ ತುಲನಾತ್ಮಕ ಪಾಪ.

March 27, 2013
0

ನಾವು ಪಾಪವನ್ನು ಮಾಡುವುದಿಲ್ಲ, ಪುಣ್ಯವನ್ನೂ ಮಾಡುವುದಿಲ್ಲ.

ನಾವು ಏನು ಮಾಡಬೇಕಾಗಿದೆ ಅದನ್ನು ಮಾತ್ರ ಮಾಡುತ್ತೇವೆ.

March 27, 2013
0

'ಸ್ನೇಹಿತ ನಿಸರ್ಗ ಕೊಟ್ಟಿರುವ ಸೋದರ' ಸ್ನೇಹಿತರನ್ನು ಹೊಂದಿರುವವರೇ ನಿಜವಾಗಿ ಧನ್ಯರು.

March 27, 2013
0

ಸ್ವತಃ ತನ್ನನ್ನು ತಾನು ತಿಳಿದುಕೊಂಡವನು ಬೇರೆಯವರಿಗೆ ತಿಳಿಹೇಳುವ ಪ್ರಯತ್ನ ನಡೆಸುವುದಿಲ್ಲ.

March 26, 2013
0

ನ್ಯಾಯ ಎನ್ನುವುದು ಬಂದೇ ಬರುತ್ತದೆ. ಆದರೆ ಅದು ತಡವಾಗಿ ಬರುತ್ತದೆ.

Pages