ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

To prevent automated spam submissions leave this field empty.

ಈ ಪುಟವನ್ನು ೩, ಮೇ, ೨೦೧೭ ರಂತೆ ಆರ್ಕೈವ್ ಮಾಡಲಾಗಿದೆ. ಈ ಪುಟದ ಹೊಸ ಆವೃತ್ತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
 

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.

 1. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
 2. ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ.
 3. ನಿಮ್ಮ ಬರಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ. ಹಾಗೆಂದು ಈಗಾಗಲೇ ನಡೆಯುತ್ತಿರುವ ಚರ್ಚೆ ಸಂವಾದಗಳನ್ನು ದಾರಿ ತಪ್ಪಿಸುವಂತಿರಬಾರದು. ಹಾಗೆಯೇ ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.
 4. ನಿಂದನೆಗಳಿಗಿಂತ ನಿಮ್ಮ ಖಚಿತ ಅಭಿಪ್ರಾಯವನ್ನು ಗಂಭೀರವಾಗಿ ತಿಳಿಸಿರಿ.
 5. ಮೊಬೈಲ್ ಸಂಖ್ಯೆ, ಅಂಚೆ ವಿಳಾಸ ಇತ್ಯಾದಿಗಳಂತಹ ಕೆಲವೊಂದು ಖಾಸಗಿ ಮಾಹಿತಿಗಳನ್ನು ತಿಳಿಸುವಾಗ ಎಚ್ಚರವಿರಲಿ. ಅಂತರ್ಜಾಲ ತಾಣಗಳಲ್ಲಿ ಇವುಗಳನ್ನು ಪ್ರಕಟಿಸುವುದು ಕ್ಷೇಮವಲ್ಲ. ಇವುಗಳನ್ನು ಲೇಖನದೊಂದಿಗೆ ಹಾಕದಿರುವುದು ಉತ್ತಮ.
 6. ಒಮ್ಮೆ ಪ್ರಕಟಗೊಂಡ ಲೇಖನ, ಸೇರಿಸಲ್ಪಟ್ಟ ಪ್ರೊಫೈಲ್ ಸಂಪದದ ಆರ್ಕೈವಿನಲ್ಲಿ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಹೊರತುಪಡಿಸಿ, ಲೇಖನವನ್ನು ಅಳಿಸಿಹಾಕಿ ಅಥವ ಪ್ರೊಫೈಲ್ ಅಳಿಸಿಹಾಕಿ ಎಂಬ ಕೋರಿಕೆಯನ್ನು ಪುರಸ್ಕರಿಸಲಾಗುವುದಿಲ್ಲ.
 7. ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವ ದಪ್ಪ ಅಕ್ಷರ ಬಳಸಕೂಡದು. ಅಂತಹ ಬರಹಗಳನ್ನು ಕೂಡಲೆ ತೆಗೆದುಹಾಕಲಾಗುವುದು.
 8. ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದು ಬಣ್ಣದ ಅಕ್ಷರಗಳಿರಕೂಡದು. 
 9. ಸಂಪದದಲ್ಲಿ ಸೇರಿಸಿದ ಪುಟ ಯಾವುದೇ ಹೊರಗಿನ ಬ್ಲಾಗಿನ ಅಥವ ಅಂತರ್ಜಾಲ ಪುಟದ ನಕಲು ಆಗಿರಕೂಡದು. ಲೇಖನ ನಿಮ್ಮದೇ ಆಗಿರಬೇಕು. 
 10. ಸಂಪದಕ್ಕೆ ಸೇರಿಸಿದ ಪುಟದಲ್ಲಿ ನಿಮ್ಮ ಸ್ವಂತದ ಬ್ಲಾಗಿನ ಲಿಂಕ್ ಅಥವ ಅಂತರ್ಜಾಲ ಪುಟದ ಲಿಂಕ್ ಹಾಕಕೂಡದು. ಇಂಥವುಗಳನ್ನು ಹಾಕಿಕೊಳ್ಳಲು ಪ್ರೊಫೈಲ್ ಪುಟ ಬಳಸಿ.

  ಸದಸ್ಯರ ಐ ಡಿ/ಬಳಕೆಯ ಐಡಿ: ಸದಸ್ಯರ ಬಳಕೆಯ ಹೆಸರುಗಳು (user id) ಸಾಧ್ಯವಾದಷ್ಟೂ ಸ್ವಂತ ಹೆಸರು ಅಥವ ಇನಿಶಿಯಲ್ಸ್ ಆಗಿದ್ದಲ್ಲಿ ಒಳ್ಳೆಯದು. ಯೂಸರ್ ಐಡಿ ಗಳು ಅನ್ಯ ವ್ಯಕ್ತಿತ್ವವೊಂದನ್ನು ನಕಲು ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ಅಂತಹ ಐಡಿಗಳನ್ನು ಬ್ಲಾಕ್ ಮಾಡಲಾಗುವುದು. ಸಂಪದ ಪ್ರೊಫೈಲಿನಲ್ಲಿ ಸೇರಿಸಲ್ಪಟ್ಟಿರುವ ಮಾಹಿತಿಯನುಗುಣ ನಕಲು ಯೂಸರ್ ಐಡಿ ಎಂದು ಗುರುತುಮಾಡಲ್ಪಟ್ಟ ಸದಸ್ಯರ ಪ್ರೊಫೈಲುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಬ್ಲಾಕ್ ಮಾಡುವ ಹಕ್ಕು ಸಂಪದ ನಿರ್ವಾಹಕ ತಂಡಕ್ಕಿರುತ್ತದೆ. ಹೊರಗಿನ (ಬೇರೆಯವರ) ಚಿತ್ರ, ಕಂಟೆಂಟ್ ಬಳಕೆ ಹೊರಗಿನಿಂದ ಅಂದರೆ ಬೇರೆಯವರ ಚಿತ್ರ ಬರಹದಲ್ಲಿ ಬಳಸಿಕೊಂಡರೆ ಮರೆಯದೆ ಅದಕ್ಕೆ ಕ್ರೆಡಿಟ್ಸ್ ಸೇರಿಸಿ. ಅಂತರ್ಜಾಲ ತಾಣವೊಂದರಿಂದ ತೆಗೆದುಕೊಂಡಿದ್ದರೆ ಸಾಧ್ಯವಾದಲ್ಲಿ ಅದಕ್ಕೆ ಒಂದು ಲಿಂಕ್ ಹಾಕಿ. ಹೊರಗಿನಿಂದ ಸಂಪೂರ್ಣ ಲೇಖನಗಳನ್ನು (ಅದು ನಿಮ್ಮದಲ್ಲದಿದ್ದರೆ) ಕಾಪಿ/ಪೇಸ್ಟ್ ಮಾಡಿ ಸಂಪದದಲ್ಲಿ ಹಾಕುವಂತಿಲ್ಲ. ಲೇಖನ ಅಥವ ಪುಟದ ಆಯ್ದ ಭಾಗಗಳನ್ನು ಸರಿಯಾದ ಕ್ರೆಡಿಟ್ಸ್ ನೀಡಿ ಹಾಕಬಹುದು. ಆದರೆ ಕೃತಿಚೌರ್ಯವಾಗಕೂಡದು. ಸದಸ್ಯರ ಚಿತ್ರ ಬಳಕೆ: ಸಾಧ್ಯವಾದಷ್ಟೂ ಸದಸ್ಯರ ಚಿತ್ರ ಸ್ವಂತದ ಭಾವಚಿತ್ರವಾಗಿದ್ದಲ್ಲಿ ಒಳ್ಳೆಯದು. ಸಮುದಾಯದ ಅಭಿರುಚಿಗೆ ಕುಂದು ತರುವಂತಹ ಚಿತ್ರಗಳನ್ನು ಸದಸ್ಯರು ಬಳಸಕೂಡದು. ಸಮುದಾಯ ಸಂಹಿತೆ:

 • ಬಣ್ಣ ಬಣ್ಣದ ಅಕ್ಷರಗಳನ್ನು ಬರಹಗಳಲ್ಲಿ ಬಳಸಕೂಡದು.
 • ಶೀರ್ಷಿಕೆ ಚಿಕ್ಕದಾಗಿ ಚೊಕ್ಕವಾಗಿ ಇರಬೇಕು.
 • ಬೇರೆಡೆಯಿಂದ ಕಂಟೆಂಟ್ ಕಾಪಿ ಪೇಸ್ಟ್ ಮಾಡಕೂಡದು.

ಇನ್ನಷ್ಟುಃಸಂಪದದಲ್ಲಿ ವಿಶೇಷ: ಕನ್ನಡದಲ್ಲಿ ನೇರ ಟೈಪ್ ಮಾಡುವುದು ಹೇಗೆ?ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?ಸಂಪದದಲ್ಲಿ ಮಾಡರೇಶನ್ - ಹೇಗೆ?ಸಂಪದದ ಮುಖಪುಟದಲ್ಲಿ ('ವಿಶೇಷ ಬರಹ'ವಾಗಿ) ಪ್ರಕಟವಾಗಲು ಬರಹ ಹೇಗಿರಬೇಕು?ಸದಸ್ಯರ ಗಮನಕ್ಕೆ: ಲೇಖನಗಳ ನಕಲು ಮಾಡ ಕೂಡದುಕಂಗ್ಲಿಷ್ ಲೇಖನಗಳು ಅಳಿಸಿಹಾಕಲಾಗುತ್ತವೆ

ಲೇಖನ ವರ್ಗ (Category):