ಕವನಗಳು

ಬಾಳ ಪಥ
April 25, 2018
0
20
ಚೈತ್ರನಾಗಮನದ  ಸುಳಿವು ತೋರುತಿರೆ  ತರು-ಲತಾದಿಗಳು ಮೈ-ಪುಳಕಗೊಂಡಿವೆ    ಗೆಲುವು ತೋರಿವೆ  ಸಿಂಗರಿಸಿ ಕೊಂಡಿವೆ  ಮುಗುಳು ನಕ್ಕಿವೆ  ನಸು-ಬಾಗಿ ತುಸು-ಓರೆಯಾಗಿವೆ..
ನೀ ಬಾಲಕೃಷ್ಣ
April 25, 2018
0
19
ಹೊನ್ನ ಕಿರಣದಿ ಮಿಂದು  ತಂಪಾದ ಗಾಳಿಯನು ಸವಿದು    ನೆನಹು ಮನದಾಗ ಅರಳಿ  ಪ್ರೀತಿ ಎದೆಯಾಗ ತುಂಬಿ    ನೀ ನಡೆವಾಗ ನುಡಿವಾಗ  ನಗುವಾಗ ಅಳುವಾಗ   
ಜಗದಿ ನನಗಾಗಿ..
April 25, 2018
0
15
ಮನೆ ಖಾಲಿಯಾಗಿ ಮನ ಬರಿದಾಗಿ ನಾ ಕುಳಿತಾಗ ಗಳಿಗೆ ಎಣಿಸಿ   ಪವನ ವಾಹನವೇರಿ  ನೀ ಬಂದೆ ನೆನಪಾಗಿ   ಅರಿದೆ ಆಸರೆಯಾಗಿ  ಕತ್ತಲಲಿ ಬೆಳಕಾಗಿ  ಬೆಂದವಗೆ ನೆಳಲಾಗಿ   
ಮೂಢ ಉವಾಚ - 349
April 23, 2018
0
27
ನಂಬಿಕೆಯ ಮಿತ್ರರಲಿ ಮತ್ಸರವು ಒಳನುಸುಳೆ ಗೆಳೆತನವ ಕೊಳೆಸುವ ಅರ್ಬುದವು ಕಾಡುವುದು| ಚಣಚಣಕೆ ನೋವಿನಲಿ ನರಳುವ ಪಾಡೇಕೆ ಚಿಗುರಿನಲೆ ಚಿವುಟಿಬಿಡು ಮಚ್ಚರವ ಮೂಢ||  -ಕ.ವೆಂ.ನಾ.
ಮೂಢ ಉವಾಚ - 348
April 22, 2018
0
27
ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ| ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ|| -ಕ.ವೆಂ.ನಾ.
ಮೂಢ ಉವಾಚ - 333
April 17, 2018
0
50
ನಂಬಿಕೆಯೆ ಕುಸಿದಲ್ಲಿ ಪ್ರೀತಿ ವಿಶ್ವಾಸವದೆಲ್ಲಿ ನಂಬಿದರೆ ಬಾಳು ನಂಬದಿರೆ ಗೋಳು| ಹಿತ್ತಾಳೆ ಕಿವಿಯಿರಲು ಕಾಮಾಲೆ ಕಣ್ಣಿರಲು ನಂಬಿಕೆಗೆ ಎಡೆಯೆಲ್ಲಿ ಹೇಳು ಮೂಢ||
ಮೂಢ ಉವಾಚ - 332
April 16, 2018
0
38
ನಿನ್ನ ನೀ ನಂಬಿರಲು ಚಾರಿತ್ರ್ಯ ಸರಿಯಿರಲು ಅವರಿವರನೊಪ್ಪಿಸುವ ಹಂಬಲವು ನಿನಗೇಕೆ?| ನಿನ್ನಾತ್ಮ ಒಪ್ಪಿರಲು ಪರಮಾತ್ಮನೊಪ್ಪನೆ ಟೀಕೆ ಟಿಪ್ಪಣಿ ಸಹಜ ಅಳುಕದಿರು ಮೂಢ||
ಮೂಢ ಉವಾಚ - 331
April 15, 2018
0
39
ಹೊಗಳುವವನಲ್ಲ ಶಪಿಸುವವನಲ್ಲವೇ ಅಲ್ಲ ಬಿಟ್ಟಿ ಉಪದೇಶಿಗನಲ್ಲ ತುಟಿಮಾತಿಗನಲ್ಲ| ನೋವನನುಭವಿಸಿ ಸಂತಯಿಸಿ ಜೊತೆಜೊತೆಗೆ ನಿಲುವವನೆ ಗೆಳೆಯ ಮೂಢ||
ಮೂಢ ಉವಾಚ - 330
April 14, 2018
0
50
ಹಣಕಾಗಿ ಪರದಾಡಿ ಹಣಕಾಗಿ ಹೆಣಗಾಡಿ ಹಣದೊಡೆಯನಾದೊಡೆ ಬೀಗದಿರು ಜಾಣ| ಕುಣಿಕುಣಿವ ಕಾಂಚಾಣ ತುಳಿದೀತು ಜೋಪಾನ ಹಣಕೆ ದಾಸನವ ಕಡುಬಡವ ಮೂಢ|| -ಕ.ವೆಂ.ನಾ.
ಮೂಢ ಉವಾಚ - 329
April 13, 2018
0
35
ಅದು ಏಕೆ ಹೇಗೆಂದು ಭೂತಕಾಲವ ಕೇಳಿ ಸರಿಯಿಲ್ಲವೆಂದು ವರ್ತಮಾನವ ದೂರಿ| ಭವಿಷ್ಯವನು ನೆನೆದು ಭಯಪಡುವ ಪರಿಯ ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ||