ಕನ್ನಡವೇ ನಿತ್ಯ

0

[:http://kannada-kathe.blogspot.com/|'ಕನ್ನಡವೇ ನಿತ್ಯ'] ಶ್ರೀರಾಮ್ ರವರು blogspot ನಲ್ಲಿ ಇತ್ತೀಚೆಗೆ ಪ್ರಾರಂಭ ಮಾಡಿರುವ ಬ್ಲಾಗು. ಇದರಲ್ಲಿ ಕೆಲವು ಬಹಳ ಚೆನ್ನಾಗಿರುವ ಲೇಖನಗಳಿವೆ, ನೋಡಿ.

ಸೂ: ಇವರ ಬ್ಲಾಗಿನ RSS ಫೀಡ್ [:http://planet.sampada.net|planet Kannadaಕ್ಕೆ] ಸೇರಿಸಿರುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬಾರಿಯ ಅತ್ಯುತ್ತಮ ಕನ್ನಡ ಇಂಡಿಕ್ ಬ್ಲಾಗ್ ಪ್ರಶಸ್ತಿ ಶ್ರೀರಾಮ್ ಅವರ "ಕನ್ನದವೇ ನಿತ್ಯ" ಬ್ಲಾಗಿಗೆ ಬಂದಿದೆ. ಇವರಗಳಿಗೆ ಕೆಳಗಿರುವ ಕೊಂಡಿ ನೊಡಬಹುದು.
http://indibloggies.org/results-2005

ಅರ್ಥವಿಲ್ಲದ ಅವಾರ್ಡು, ಕಣ್ರೀ ಅದು. ಅವರು ಈ ಅವಾರ್ಡು ನಡೆಸಿದ ರೀತಿ ನೋಡಿದ್ರೆ ಅದಕ್ಕೆ ಒಂದಷ್ಟು ಪ್ರಾಮುಖ್ಯತೆ ಕೊಡುವುದೂ ನಿರರ್ಥಕ.

ಈ‌ ಅವಾರ್ಡು ನಡೆಸಿದವ ಕೆಲ ದಿನಗಳ ಹಿಂದೆ ಶ್ಯಾಮ್ ಕಶ್ಯಪ್ ರವರಿಗೆ ಬರೆದಿದ್ದ ಪತ್ರ ಅವರ ಮೂಲಕ ನನಗೂ ತಲುಪಿತ್ತು. ಅವರ ಕನ್ನಡ judgeಗೆ nominate ಮಾಡಲು ಕನ್ನಡ ಬ್ಲಾಗುಗಳೇ ಸಿಕ್ಕಿರಲಿಲ್ಲವಂತೆ! (ಮಾರಾಯನಿಗೆ ಕನ್ನಡ ಬ್ಲಾಗುಗಳೂ ಇವೆಯೆಂಬುದು ತಿಳಿದಿತ್ತೋ ಇಲ್ವೊ!)
ಕೊನೆಗೆ ಶ್ಯಾಮ್ ರವರೇ ಶ್ರೀರಾಮ್ ರವರ ಬ್ಲಾಗನ್ನ, ಸಂಪದದಲ್ಲಿರುವ ಓ ಎಲ್ ಎನ್ ರವರ ಬ್ಲಾಗನ್ನ, ಇಸ್ಮಾಯಿಲ್ ರವರ ಬ್ಲಾಗನ್ನ nominate ಮಾಡಿದ್ರು.

ಪಬ್ಲಿಕ್ ಪೋಲ್ ನಡೆಸಿ ಕೊಡೋ ಅವಾರ್ಡುಗಳು ಎಷ್ಟು ಅರ್ಥಪೂರ್ಣವೆಂಬುದು ಎಲ್ಲರಿಗೂ ತಿಳಿದ ವಿಷಯವೇ. (Indian Idolನ ಪಬ್ಲಿಕ್ ಎಸ್ ಎಮ್ ಎಸ್ ಪೋಲ್ ಮಾಡಿರುವ ರಗಳೆ ಬಗ್ಗೆ ನ್ಯೂಸ್ ಕೇಳಲಿಲ್ಲವಾ?) ಅದೇನೆ ಇರಲಿ, ಸೈಟು ತುಂಬ ads ತುರುಕಿಕೊಂಡು ಕೊನೆಗೆ ಡೊನೇಶನ್ ಕೂಡ ತೆಗೆದುಕೊಳ್ಳುತ್ತಿರುವ ಈ ಅವಾರ್ಡು ನನಗೆ ಬೇರೇನನ್ನೋ ತಿಳಿಸುತ್ತಿದೆ.

ಅವಾರ್ಡುಗಳನ್ನು ಪಡೆಯುವವರ recognitionಗೆ ಅವಾರ್ಡುಗಳಿದ್ದಾಗ, ಒಂದು ತರಹ ಚೆನ್ನಾಗಿರುತ್ತೆ. ಆದರೆ ಅವಾರ್ಡು ಕೊಡುವವರು ತಮಗಾಗಿ spotlight ಹಾಗೂ attention ಸೃಷ್ಟಿಸಿಕೊಳ್ಳುವ ಸಾಧನವನ್ನಾಗಿ ಅವಾರ್ಡನ್ನು ಉಪಯೋಗಿಸಿಕೊಂಡಾಗ, ಅಥವಾ ದುಡ್ಡು ಮಾಡಿಕೊಳ್ಳುವ ರೀತಿ ಕಂಡುಕೊಂಡಾಗ ಅವಾರ್ಡು ನೀರಸವಾಗಿ ಕಾಣತ್ತೆ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಸ್ವಲ್ಪ publicity stunt ಥರ ಕಾಣಿಸಿತು. ಆದರೆ ಅದರ ಹಿಂದಿರುವ ರಾಜಕಾರಣ ತಿಳಿದಿರಲಿಲ್ಲ. ನೆನ್ನೆ ಒಂದು ಬ್ಲಾಗ್ ನೊಡುತ್ತಿರುವಾಗ ಸಿಕ್ಕ ಕೊಂಡಿ. ಹಾಗೇ ಸಂಪದದಲ್ಲಿ ಹಾಕಿದೆ.