llಎಚ್ಚರಗೊಂಡ ಕವಿll

5

ಬರೆದೆ ನಾ ಎಷ್ಟೋ ಕವಿತೆಗಳ ನಿನಗಾಗಿ 
ಓದದೇ ನೀ ಕಾದಿರಿಸಿದೆ ಅವಮಾನ ನನಗಾಗಿ 
 
ಹೇಳು ನೀ ನನಗೆ 
ನಿಲ್ಲಿಸಲೇ ನಾ ಬರೆಯುವುದಾ 
ಕೇಳುವೆ ನಾ ನಿನಗೆ 
ಹೇಗೆ ಮರೆಯಲಿ ನೀ ತಂದ ಅನುರಾಗ 
 
ಮಲಗಿದ್ದ ಕವಿಯ ಎಬ್ಬಿಸಿ 
ನೀ ದೂರ ಹೋದೆಯಲ್ಲೆ 
ಎಚ್ಚರಗೊಂಡ ಕವಿ ನಿನ್ನರಸಿ 
ಬರೆಯುತ್ತಿರುವನು ಪ್ರೇಮದ ಓಲೆ ನಲ್ಲೆ 
 
ನನ್ನ ಗಂಡೆದೆ ನಿನಗೆ ಕರಗಿ ಹೋಯಿತು
ನಿನ್ನ ಹಣ್ಣೆದೆ ಕಲ್ಲೆಂದು ನನಗೆ ಅರಿವಾಯಿತು 
 
ಮೋಹನ ರಾಗದಿ ಕೊಳಲನೂದಿ 
ನಿನ್ನ ಸೆಳೆಯಲೆತ್ನಿಸಿದೆ 
ಮಂದ್ರ ಸ್ಥಾಯಿಯ ನನ್ನ ಭಾವನೆ 
ನಿನಗೆ ತಲುಪುವ ಮೊದಲೇ ಮಾಯವಾಗಿದೆ 
 
ತಾರಸ್ಥಾಯಿಯಲ್ಲಿ ನನ್ನ ಕವಿತೆ ಹಾಡಲಾಗುತ್ತಿಲ್ಲ 
ಮಂದ್ರ ಸ್ಥಾಯಿಯ ಮನದ ಭಾವನೆ ನಿನಗೆ ಕೇಳುತ್ತಿಲ್ಲ 
 
ಮನದ ಭಾವ ಸಾಗರದಿ 
ಪ್ರೇಮದಲೆಯು ಏಳುತ್ತಿದೆ 
ನಿನ್ನ ಹುಡುಕುತ್ತ ದಡದವರೆಗೂ ಬಂದು 
ನೀ ಸಿಗದೇ ಬೇಸರದಿ ಹಿಂತಿರುಗುತ್ತಿದೆ 
 
ದುಃಖದಿ ಮರಳುವ ಅಲೆಗಳ ನಾ ಹೇಗೆ ಸಂತೈಸಲಿ 
ನನ್ನ ಪ್ರೇಮವ ನಿನಗೆ ನಾ ಹೇಗೆ ಅರ್ಥೈಸಲಿ 
 
ದೂರದಿ ನಿನ್ನ ನೋಡಿದರೆ ಅನಿಸುವುದು 
ನೀ ನನಗೆ ಕಾಯುತ್ತಿರುವೆ ಎಂದು 
ಸನಿಹದಲ್ಲಿ ನನಗೆ ಅರಿವಾಗುವುದು 
ನಿನ್ನ ಮನದಲ್ಲಿ ನಾನಿಲ್ಲವೆಂದು 
 
ದೂರದ ಈ ಸನಿಹ ಭಾವನೆಯೇ ಚೆಂದ 
ಹೇಗೆ ಅಳಿಸಲಿ ಹೃದಯದಿ ಮೂಡಿದ ನಿನ್ನ ಅಂದ 
 
-ಕೆಕೆ (ಕೀರ್ತನ್ ಕೆ)
 
 
llಎಚ್ಚರಗೊಂಡ ಕವಿll
 
ಬರೆದೆ ನಾನು ಎಷ್ಟೋ ಕವಿತೆಗಳ ನಿನಗಾಗಿ 
ಓದದೇ ನೀನು, ಅವಮಾನವ ನೀಡಿದೆ ಬಹುಮಾನವಾಗಿ
 
ಹೇಳು ನೀ ನನಗೆ 
ನಿಲ್ಲಿಸಲೇ ನಾ ಬರೆಯುವುದಾ 
ಕೇಳುವೆ ನಾ ನಿನಗೆ 
ಹೇಗೆ ಮರೆಯಲಿ ನೀ ತಂದ ಅನುರಾಗ 
 
ಮಲಗಿದ್ದ ಕವಿಯ ಎಬ್ಬಿಸಿ 
ನೀ ದೂರ ಹೋದೆಯಲ್ಲೆ 
ಎಚ್ಚರಗೊಂಡ ಕವಿ ನಿನ್ನರಸಿ 
ಬರೆಯುತ್ತಿರುವನು ಪ್ರೇಮದ ಓಲೆ ನಲ್ಲೆ 
 
ಮೋಹನ ರಾಗದಿ ಕೊಳಲನೂದಿ 
ನಿನ್ನ ಸೆಳೆಯಲೆತ್ನಿಸಿದೆ 
ಮಂದ್ರ ಸ್ಥಾಯಿಯ ನನ್ನ ಭಾವನೆ 
ನಿನಗೆ ತಲುಪುವ ಮೊದಲೇ ಮಾಯವಾಗಿದೆ 
 
ಮನದ ಭಾವ ಸಾಗರದಿ 
ಪ್ರೇಮದಲೆಯು ಏಳುತ್ತಿದೆ 
ನಿನ್ನ ಹುಡುಕುತ್ತ ದಡದವರೆಗೂ ಬಂದು 
ನೀ ಸಿಗದೇ ಬೇಸರದಿ ಹಿಂತಿರುಗುತ್ತಿದೆ 
 
ದೂರದಿ ನಿನ್ನ ನೋಡಿದರೆ ಅನಿಸುವುದು 
ನೀ ನನಗೆ ಕಾಯುತ್ತಿರುವೆ ಎಂದು 
ಸನಿಹದಲ್ಲಿ ನನಗೆ ಅರಿವಾಗುವುದು 
ನಿನ್ನ ಮನದಲ್ಲಿ ನಾನಿಲ್ಲವೆಂದು 
 
ದೂರದ ಈ ಸನಿಹ ಭಾವನೆಯೇ ಚೆಂದ 
ಹೇಗೆ ಅಳಿಸಲಿ ಹೃದಯದಿ ಮೂಡಿದ ನಿನ್ನ ಅಂದ 
 
-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.