ಜ್ಞಾನವಾಹಿನಿ ವರ್ಗದ ಚಿತ್ರಗಳು

ಹೊಳಲ್ಕೆರೆಯ ಪ್ರಸನ್ನ ಗಣಪತಿ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿರುವ ಈ ಗಣಪತಿ ಸುಮಾರು ಹನ್ನೆರಡು ಅಡಿಗಳಷ್ಟು ಎತ್ತರವಾಗಿದ್ದು, ಭಕ್ತರ ಕಷ್ಟಗಳನ್ನು ಪರಿಹರಿಸುವ ದೈವವಾಗಿದ್ದಾನೆ. ಮಕ್ಕಳಿಗಂತೂ ಈತ ಅತ್ಯಂತ ಪ್ರಿಯ ಆರಾಧ್ಯ ದೈವ. ಪರೀಕ್ಷೆಗೆ ಹೋಗುವ ಮುನ್ನ ಮಕ್ಕಳೆಲ್ಲಾ ಈತನಿಗೆ ನಮನ ಸಲ್ಲಿಸಿಯೇ ಹೊರಡುತ್ತಾರೆ. ಇಷ್ಟು ಎತ್ತರವಿದ್ದರೂ ಈತ ಬಾಲಗಣಪ.

ದೊಡ್ಡಮುದವಾಡಿಯ ದತ್ತಾತ್ರೇಯ

ಕನಕಪುರ ತಾಲ್ಲೂಕಿನ ದೊಡ್ಡಮುದವಾಡಿ ಗ್ರಾಮದಲ್ಲಿರುವ ಶ್ರೀ ದತ್ತಸದಾನಂದಾಶ್ರಮದಲ್ಲಿರುವ ದತ್ತಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಕುಳಿತಿರುವ ಭಂಗಿಯಲ್ಲಿರುವ ಶ್ರೀ ದತ್ತಾತ್ರೇಯ ಪ್ರಭು. ಈ ಆಶ್ರಮದ ಬಗೆಗೆ `ಸಂಪದ' ದಲ್ಲಿರುವ ಇತರೆ ಚಿತ್ರಗಳು ಹಾಗೂ ಲೇಖನಗಳನ್ನೂ ನೋಡಿ.
ಚಿತ್ರಕೃಪೆ: `ಸತ್ಸಂಗಿ'

ಪೂಜ್ಯ ಸಹಜಾನಂದರ ಸಮಾಧಿ

ಶ್ರೀ ದತ್ತಸದಾನಂದಾಶ್ರಮದಲ್ಲಿರುವ ಪ.ಪೂ. ಶ್ರೀ ಶ್ರೀ ಸಹಜಾನಂದ ಸರಸ್ವತೀ ಸ್ವಾಮೀಜಿಯವರ ಸಮಾಧಿಯ ಚಿತ್ರವಿದು. ಪೂಜ್ಯರು ಬೆಂಗಳೂರಿನಲ್ಲಿ ಹೆಚ್ ಎ ಎಲ್ ನಲ್ಲಿ ಇಂಜಿನಿಯರ್ ಆಗಿದ್ದವರು ತಮ್ಮ ನಿವೃತ್ತಿಯ ಬಳಿಕ ಇಲ್ಲಿಗೆ ಬಂದು ದತ್ತಸೇವೆಯಲ್ಲಿ ನಿರತರಾಗಿ ಬಹಳ ವರ್ಷಗಳು ಇಲ್ಲಿ ಏಕಾಂತವಾಸ (ಜೊತೆಗೆ ದತ್ತನೇನೋ ಇದ್ದ ಎನ್ನಿ!) ಮಾಡಿ ತಪಸ್ಸನ್ನಾಚರಿಸಿದರು.

ಧ್ಯಾನಮಂದಿರ

ದೊಡ್ಡಮುದವಾಡಿಯ ಶ್ರೀ ದತ್ತಸದಾನಂದಾಶ್ರಮದಲ್ಲಿರುವ ಈ ಧ್ಯಾನಮಂದಿರವು ಬಹಳ ಪವಿತ್ರವಾದುದಾಗಿದೆ. ಇದರಲ್ಲಿ ಅನೇಕ ಸಾಧು ಸಂತರು ಧ್ಯಾನ ಮಾಡಿದ್ದಾರೆ. ಬಹಳ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ಸ್ಥಳದಲ್ಲಿ ಧ್ಯಾನ ಮಾಡಲು ತೊಡಗಿದರೆ ಮನಸ್ಸು ತಾನಾಗಿಯೇ ನಿರ್ಮಲವಾದ ಪ್ರಶಾಂತತೆಯನ್ನು ಹೊಂದಿ ಧ್ಯಾನವು ತಾನಾಗಿಯೇ ಸಿಧ್ಢಿಸುತ್ತದೆ.

ಗುರುಪ್ರಸಾದ

ಪ.ಪೂ.ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗ ತಮ್ಮ ಶಿಷ್ಯ ಶ್ರೀಯುತ ಡಾ; ಶ್ರೀಪಾದ್ ರವರ ಮನೆಗೆ ಆಗಮಿಸಿದ್ದಾಗ ಚಿ|| ಓಂಕಾರ್ ನಿಗೆ ಫಲಪ್ರಸಾದವನ್ನು ನೀಡಿದಾಗ ತೆಗೆದಿರುವ ಚಿತ್ರವಿದು. ಪುಟ್ಟಮಕ್ಕಳನ್ನು ಕಂಡರೆ ಪೂಜ್ಯರಿಗೆ ಅದಮ್ಯ ಪ್ರೀತಿ.

ದೊಡ್ಡ ಮುದವಾಡಿ ದತ್ತಾತ್ರೇಯ ಮಂದಿರ

ದೊಡ್ಡಮುದವಾಡಿ ಎಂಬುದು ಕನಕಪುರ ತಾಲ್ಲೂಕಿನ ಒಂದು ಪುಟ್ಟಗ್ರಾಮ. ಅಲ್ಲಿ ಶ್ರೀ ದತ್ತಸದಾನಂದಾಶ್ರಮ ಎಂಬ ಪುಟ್ಟ ಸುಂದರ ಪವಿತ್ರವಾದ ಆಶ್ರಮವಿದೆ. ಅಲ್ಲಿರುವ ದೇವಾಲಯದಲ್ಲಿ ಬಂಡೆಯ ಮೇಲೆ ಕುಳಿತಿರುವ ದತ್ತಾತ್ರೇಯರ ಮೂರ್ತಿಯಿದೆ. ಇದನ್ನು ಅರ್ಧಶತಮಾನದ ಹಿಂದೆ ಅದೇ ಊರಿನಲ್ಲಿ ಶಾನುಭೋಗರಾಗಿದ್ದ ಶ್ರೀಯುತ ಸೀತಾರಾಮಯ್ಯ ಎಂಬುವವರು ಸ್ಥಾಪಿಸಿದ್ದಾರೆ.

ಧ್ಯಾನಸ್ಥಿತಿಯಲ್ಲಿರುವ ಯತಿವರ್ಯರು

ಪ.ಪೂ. ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರು ಕಳೆದ ವರ್ಷ ಭದ್ರಾವತಿಯಲ್ಲಿ ನೆಲೆಸಿದ್ದಾಗ ಅಲ್ಲಿಗೆ ಹತ್ತಿರವೇ ಇರುವ ತುಂಗಾ-ಭದ್ರಾ ನದಿಗಳ ಸಂಗಮ ಪ್ರದೇಶವಾದ ಕೂಡಲಿ ಎಂಬ ಪವಿತ್ರವಾದ ಕ್ಷೇತ್ರಕ್ಕೆ ಭದ್ರಾವತಿಯ ಕೆಲವು ಭಕ್ತರೊಂದಿಗೆ ತೆರಳಿದ್ದರು. ಪೂಜ್ಯರಿಗೆ ಅಲ್ಲಿಯ ವಾತಾವರಣವನ್ನು ನೋಡಿದೊಡನೆಯೇ ತಮ್ಮ ಸಹಜ ಸ್ಥಿತಿಗೆ ತೆರಳುವ ಮನಸ್ಸಾಯಿತು.

ಹಾರುತ್ತಿರುವ ಹಲ್ಲಿ ನೋಡಿದಿರೇನು ? ಅದೇ, ಪೂರ್ಣಚಂದ್ರತೇಜಸ್ವಿ ತಮ್ಮ ಪುಸ್ತಕದಲ್ಲಿ ಬರೆದಿದ್ದರಲ್ಲ ಅದು ?

ವಿರಾಜ್ಪೇಟೆ, ಸಮೀಪದ ಅಮ್ಮತ್ತಿಯಲ್ಲಿ ಈ ಹಾರುವ ಹಲ್ಲಿಯನ್ನು ನೋಡಬಹುದು. ಪೂರ್ಣಚಂದ್ರತೇಜಸ್ವಿ ತಮ್ಮ ಪುಸ್ತಕ ’ಕರ್ವಾಲೊ,’ ದಲ್ಲಿ ಬರೆದಿದ್ದರಲ್ಲ, ಹಾರುವ ಒತಿಕ್ಯಾತದ ಬಗ್ಗೆ; ಅದನ್ನು ಜ್ಞಾಪಿಸಿಕೊಳ್ಳಿ.

-ಚಿತ್ರ. ಕನ್ನಡ ಪ್ರಭ.

ಮುಂಬೈ ನ ಆಕಾಶದಲ್ಲಿ ಈಗಲೇ ಮೋಡಗಳು ದಾಳಿಇಡಕ್ಕೆ ಮೊದಲು ಮಾಡಿವೆ ; ಮಾನ್ಸೂನ್, ಬೇಗ ಬರಬಹುದೇ ?

ಅಬ್ಬಬ್ಬ ಏನ್ ಸೆಖೆ ! ಇದು ಪ್ರತಿದಿನ ನಾವು ಭಾರತದೇಶದ ಎಲ್ಲೇ ಇದ್ರೂ ಆಡಿಕೊಳ್ಳುವಮಾತಾಗಿದೆ. ಕಾಶ್ಮೀರ, ಶಿಮ್ಲಾ ಬಿಟ್ಟು. ಸುಮಾರಾಗಿ ಯಾವಊರಿಗೆ ಹೋದ್ರು ಇದೇ ರಾಗ ಕೇಳ್ಸುತ್ತೆ.

-ನಾನೇ ಕ್ಲಿಕ್ಕಿಸಿದ ಚಿತ್ರ.

ಚಾರ್ಲಿ ಚಾಪ್ಲಿನ್ ಇಂದಿಗೂ ಎಲ್ಲರಿಗೂ ಮುದಕೊಡುವ ಹಾಸ್ಯಪುರುಷ !

ಆ ಉಯ್ಯಾಲೆಯ ತೂಗುವ ಓಡಾಟ, ಮುಖದಲ್ಲಿನ ಅಸಹಾಯಕತೆ, ಮೌಢ್ಯದ ಖಳೆ , ಎಲ್ಲದರಲ್ಲೂ ಏನನ್ನೋ ಹೊಸದನ್ನು ಅರಸುವ ಸ್ವಭಾವ, ಇತ್ಯಾದಿಗಳು, ಇಂದಿಗೂ ಅಬಾಲ ವೃದ್ಧರಿಗೆಲ್ಲಾ ಮುದಕೊಡುವ ಆಸಾಮಿಯಾಗಿದ್ದಾರೆ, ಚಾರ್ಲಿಯವರು !

ವಿಶ್ವದ ಅತಿ ಉದ್ದದ ಕಡಲ್ -ಸೇತುವೆಯನ್ನು ಚೈನದಲ್ಲಿ ಉಧ್ಘಾಟಿಸಲಾಯಿತು !

೩೬ ಕಿಲೋ ಮೀಟರ್ ಉದ್ದದ ವಿಶ್ವದ ಅತಿ ಉದ್ದನೆಯ ಕಡಲಮೇಲಿನ ಸೇತುವೆಯನ್ನು ಚೈನದ ಶಾಂಘೈ ನಗರದ ಕಡಲಿನ ಮೇಲೆ, ನಿರ್ಮಿಸಿದ್ದಾರೆ. ಚೈನಿಯರು ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವುದೆಲ್ಲಾ ಒಂದೊಂದು ದಾಖಲೆಯ ರೀತಿಯಲ್ಲೇ ಇರುವುದನ್ನು ನಾವು ಇಲ್ಲಿ ಗಮನಿಸಬಹುದು.

-ಪ್ರಜಾವಾಣಿ ಫೊಟೊ ಗ್ಯಾಲರಿ.

ಕುಮಾರನಹಳ್ಳಿಯ ಶ್ರೀ ರಂಗನಾಥಾಶ್ರಮದ ಮೇಲ್ವಿಚಾರಕರು, ದಿವಂಗತ. ಶ್ರೀಮತಿ. ಜಾನಮ್ಮನವರು

ಕುಮಾರನಹಳ್ಳಿಯ ಶ್ರೀ ರಂಗನಾಥಾಶ್ರಮದ ಮೇಲ್ವಿಚಾರಕರು, ದಿವಂಗತ. ಜಾನಮ್ಮನವರು, ಮೂಲತಃ ಹೊಳಲ್ಕೆರೆ, ವಂಶಕ್ಕೆ ಸೇರಿದವರು. ಚಿಕ್ಕ ಪ್ರಾಯದಲ್ಲೇ ವೈಧವ್ಯದ ಬೇಗುದಿಯಲ್ಲಿ ನೊಂದ ಆಕೆ, ಶ್ರೀ. ಶ್ರೀ. ಶಂಕಲಿಂಗ ಭಗವಾನರ ಆಶ್ರಮದಲ್ಲಿ ಸೇರಿಕೊಂಡು ತಮ್ಮ ಜೀವತವನ್ನೆಲ್ಲಾ ಆಶ್ರಮದ ಸೇವೆಯಲ್ಲೇ ಕಳೆದರು.

ಬನ್ನಿ, ನಂಜತೆ ಮುಂಬೈ ನೋಡ್ರಿ !

ಇದು ಪ್ರಸಿದ್ಧ ವಿ. ಟಿ. ಚಿತ್ರ. ಇದನ್ನ ಈಗ ಛತ್ರಪತಿ ಶಿವಾಜಿ ಟರ್ಮಿನಸ್ ಅಂತಾರೆ. ನಮ್ಮ ದೇಶದ ಪ್ರಪ್ರಥಮ ರೈಲ್ವೆ ಸಾರಿಗೆ ವ್ಯವಸ್ಥೆ ಇಲ್ಲೆ ಶುರುವಾಗಿದ್ದು. ನೂರಾ ಐವತ್ತು ವರ್ಷಗಳ ಹಿಂದೆ. ಇದು ಸೆಂಟ್ರೆಲ್ ರೈಲ್ವೆ ಹೆಡ್ ಕ್ವಾರ್ಟಸ್. ಚರ್ಜ್ ತರ್ಹ ಕಟ್ಟಿದಾರೆ. ಒಂಬತ್ತು ವರ್ಷ ಬೇಕಾಯ್ತು, ಇದನ್ನ ಕಟ್ಟ್ಲಿಕ್ಕೆ. ಅರಮನೆ ತರ್ಹ ಇದೆ.

ಒನ್ನಿಗನಳ್ಳಿ ಅಸ, ಎಲ್ಡ್ ಕರು ಆಕದೆ ! ಇದ್ರಾಗೇನೈತೆ, ಆಟೊಂದ್ ಕಣ್ಣಿನ್ ಉಬ್ಬು ಮ್ಯಾಲೆತ್ತಿ ಏಳೊ ಇಚಾರ ಅಂತೀನಿ ?

ಔದು. ಏನೀಗ ? ಏನ್ ನ್ಯೂಸು ಅಂತ ಕೊಡ್ತಿಯಪ್ಪ, ಅಜ್ಜಪ್ಪ ಅನ್ರಿ. ಪರ್ವಾಗಿಲ್ಲ. ಸರಿ ಒಸಿ ಮುಂದೆ ಓದ್ ನೋಡಿ. ಈ ಐಬ್ರಿಡ್ ಅಸ ಆಕಿರೋ ಎಲ್ಡ್ ಕರ್ಗಳಾಗೆ, ಒಂದ್ ಎಣ್ ಕರ, ಮತ್ತೊಂದು ಗಂಡಾಗದೆ ! ಇದು ಒಸಾ ಸುದ್ದಿ ಅಲ್ದೆ ಮತ್ತೇನು. ಇಂತಾ ಇಸ್ಯ ನಿಮ್ಗೇನಾದ್ರು ಕಿವಿಗ್ ಬಿದ್ದೈತಾ ? ಐಬ್ರಿಡ್ ಅಸು ಅಲ್ವ್ರಾ. ಇನ್ಮೇಲ್ ಒಸ್ದಾಗಿ ಬರೊ ತಳಿಗಳೆಲ್ಲಾ ಇಂಗೇ ಇರ್ಬೊದ ಎಂಗೆ ?

ಎರೆಹುಳುಗಳ ಕೃಷಿ, ಅತ್ಯಾವಶ್ಯಕ !

ಕಾಂಕ್ರೀಟ್ ಜಂಗಲ್ ಗಳಲ್ಲಿ ವಾಸ, ಅಲ್ಲಿನ ’ ಟೆರೇಸ್ ಮೇಲೆ ಮಾಡಿದ ಉದ್ಯಾನಗಳ ಒಡೆಯರಿಗೆ ”, ಒಂದು ಕಿವಿಮಾತು. ಮಣ್ಣಿನ ಮಾಲಿನ್ಯತೆ ಯನ್ನು ತಡೆಯಲು ಉಪಾಯವೆಂದರೆ, ಎರೆಹುಳುಗಳನ್ನು ಸಾಕಿ. ಇದು ಸೋವಿಯಾದ ಉಪಾಯ.

-ಪ್ರಜಾವಾಣಿ ಫೊಟೊ ಗ್ಯಾಲರಿ.

ವಿಧಾನ ಸೌಧದ ಒಳ್ಗಡೆ ಚೀರಾಟ, ಬೈದಾಟ, ನೋಡಕ್ಕೆ ಕಾಲ ಬಂದಿಲ್ಲ ; ಮರದ್ಮ್ಯಾಗಿನ್ ಪಕ್ಸಿಗಳ್ನಾದ್ರು ನೋಡ್ಕಲ್ತಳ್ಳಿ. ಎಷ್ಟ್ ನೀಟಾಗ್ ಮಾತಾಡ್ಕತವೆ !

ಪಕ್ಸಿಗಳ್ ಕಾನ್ಫರೆನ್ಸ್ ಅನ್ನಕಾದೀತಾ. ಏನು ಸಿಸ್ತು. ಎಷ್ಟ್ ಸಂಯಮ, ಯಾರ್ಗು ತೊಂದ್ರೆ ಗಿಂದ್ರೆ ಅನ್ನೊದೆ ಇಲ್ಲ. ಮಾತಾಡ್ಕಳ್ತವೆ. ಮತ್ತೆ ಫುರ್ ಅಂತವ ಆರೋಬಿಡ್ತವೆ. ಮುಂಡೆವು, ಒಂದಂಡಿ ಕರ್ಚಿಲ್ಲ. ಏನೂ ಇಲ್ಲ. ಆದ್ರೆ, ಅವ್ ಕುಂತ್ಗಂಡಿರೊದು ವಿದಾನ್ ಸೌಧತ್ ತಾವ. ಒಂದಲ್ಲ ಒಂದ್ ದಿನ ಬಾಗಲ್ತೆಗ್ದು ಅಲ್ಲಿ ಚೀರಾಟ, ಕೂಗಾಟ್ದ ಸೆಸೆನ್ ಸುರು ಆಗ್ಬೊದಲ್ಲ್ವ್ರ !

' Blitz Weekly,’ ಇಂಗ್ಲೀಷ್, ಪತ್ರಿಕೆಯ ಸಂಪಾದಕ, ರುಸ್ಸಿ ಕಾರಂಜಿಯ ಇನ್ನಿಲ್ಲ !

ರುಸ್ಸಿ ಕಾರಂಜಿಯ, ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ಈಬಾರಿ ಅವರು ಸತ್ತು ಮತ್ತೆ ಸುದ್ದಿಯಲ್ಲಿ ಗೋಚರಿಸಿ, ಪತ್ರಿಕೋದ್ಯಮದ ವಲಯದಲ್ಲಿ ಅಮರರಾಗಿದ್ದಾರೆ. ಮೊದಲು ಅವರೊಬ್ಬ ಪಾರ್ಸಿ. ಎರಡನೆಯದು, ೭೦ ರ ದಶಕದಲ್ಲಿ ಅತ್ಯಂತ ಜನಪ್ರಿಯರಾಗಿದ್ದ ಪತ್ರಿಕಾಕರ್ತರು. ಪಾರ್ಸಿ ಅಂದಕೂಡಲೇ, ಅವರು ಏನನ್ನಾದರು ಪ್ರಪ್ರಥಮವಾಗಿ ಸಾಧಿಸಿರಲೇಬೇಕು. ಹೌದು.

ರುದ್ರಾಕ್ಷಿ

ನೀಲಿ ಬಣ್ಣದ ನಯವಾದ  ಈ ಕಾಯಿಯೇ  ( http://www.flickr.com/photos/wcampelo/1814422187/ )


 ಒಣ,ಮುಳ್ಳುಮುಳ್ಳಾದ ರುದ್ರಾಕ್ಷಿ ಕಾಯಿ ಆಗುವುದು. ರುದ್ರ+ಅಕ್ಷಿ -ರುದ್ರ ಅಂದರೆ ಶಿವನ ರೌದ್ರ ಅವತಾರ,ಅಕ್ಷಿ ಅಂದರೆ ಕಣ್ಣು. ಶಿವನ ಶಾಂತ ನೀಲ ಕಣ್ಣುಗಳು ರುದ್ರನ ಕಣ್ಣುಗಳಂತೆ ಆಯಿತು ಎಂದರ್ಥವೋ ಏನೋ? ನಾವು ದಕ್ಷಿಣ ಭಾರತೀಯರು ರುದ್ರಾಕ್ಷಿ ಎಂದೂ ಉತ್ತರದವರು ರುದ್ರಾಕ್ಷ ಎಂದು ಕರೆಯುವರು.


ಫೊಟೊದಲ್ಲಿ ಸೆರೆಹಿಡಿದ ಅದ್ಭುತ ಚಲನೆ ಹಾಗೂ ಸಮಯಗಳ, ಸಂಯೋಜನೆ !

ಬ್ರಾಹ್ಮಿನಿ ಕೈಟ್ ಇನ್ ಫ್ಲೈಟ್ ನೇಚರ್ ಪ್ರಿಂಟ್ ವಿಬಾಗದಲ್ಲಿ, ಬೆಂಗಳೂರಿನ ಅರುಣ್ ಕುಮಾರ್ , ತೀರ್ಪುಗಾರರ ಸಮಾಧಾನಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
-ಪ್ರಜಾವಾಣಿ ಫೊಟೊ ಗ್ಯಾಲರಿ.

ವಾಟರ್ ಕಲರ್ ನ ಕ್ವಿಲ್ಟ್ಸ್ ಗಳು, ನೋಡಲು ಬಲು-ಸೊಗಸು !

ಇದರ ವಿನ್ಯಾಸಕರು, ಶ್ರೀಮತಿ. ಡಾ. ಮೀರಾರವರು. ಇವರು ವೈವಿಧ್ಯಮಯ ಆಸಕ್ತಿಗಳನ್ನು ಬೆಳೆಸಿಕೊಂಡವರು. ಅವರ ಹೆಣ್ಣುಮಕ್ಕಳಿಗೆ, ಭರತನಾಟ್ಯದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ, ತರಪೇತು ಮಾಡಿದ್ದಾರೆ. ಅನೇಕರು ತಮ್ಮ ಮಕ್ಕಳ "ಅರಂಗೆಟ್ರಂ", ನ ಆರಂಭದಲ್ಲಿ ಬಂದು, ಮೀರಾರವರ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಮೀರಾ ಏನುಮಾಡಿದರೂ, ಅಚ್ಚುಕಟ್ಟಾಗಿರಬೇಕು.

ಹತ್ತಿ ಕಾಯಿ ದಪ್ಪಕ್ಕೆ ಧೃಢವಾಗಿದ್ದಷ್ಟೂ ಒಳ್ಳೇದು. ಒಳ್ಳೆ ಹತ್ತಿ ಸಿಗತ್ತೆ !

ಇದು ಆರೋಗ್ಯಕರವಾದ ಹತ್ತಿ ಕಾಯಿ. ಹೀಗಿದ್ದ ಕಾಯಿ ಚೆನ್ನಾಗಿ ಬಲಿತು, ಒಣಗಿ , ಬಿರಿದು ಹತ್ತಿ ಅದರಒಳಗಿಂದ ಹೊರಹೊಮ್ಮಿದಾಗ, ಅದನ್ನು ನೋಡಲು ಸೊಗಸು !

ಹತ್ತಿ ಗಿಡ ; ಅಲ್ಲ ...ಮರದಲ್ಲಿ, ....ಹತ್ತಿಕಾಯ್ ಬಿಟ್ಟಿದೆ. ನಿಮಿಗ್ ಕಾಣ್ಸ್ತಾಇದ್ಯಾ ?

ಹತ್ತಿ ಗಿಡ ; ಅಲ್ಲ ಮರದಲ್ಲಿ, ಹತ್ತಿಕಾಯ್ ಬಿಟ್ಟಿದೆ. ನೀಮಗ್ ಕಾಣಿಸ್ತಾ ಇದ್ಯಾ ?

ಹೌದು. ಕಾಣಿಸ್ತಿದೆ ; ಅದ್ರಲ್ಲೇನು ಮಹಾ ? ಹತ್ತಿಗಿಡ್ದಲ್ಲಿ ಕಾಯ್ ಬಿಡ್ದೆ ಬೇವಿನ್ಗಿಡ್ದಲ್ಲಿ ಬಿಡುತ್ತಾ ಅಂತ ಹುಬ್ಬೇರಿಸ್ಬ್ಯಾಡಿ !

ಈಗ್, ನಾನ್ ನಿಮ್ಗ್ ತೋರಿಸ್ತಿರೊ ಹತ್ತಿಗಿಡ, ನಮ್ಮ್ ಪಬ್ಲಿಕ್ ಪಾರ್ಕ್ ನಲ್ಲಿ ಬೆಳ್ದಿರೊದು ! ಮತ್ ವಿಶೇಷ ಅಲ್ದೇ ಏನು ?

ಶೃಂಗೇರಿ ಸಂಸ್ಥಾನದ ಅಧಿದೇವತೆ, ಶ್ರೀ. ಶ್ರೀ. ಶಾರದಾಂಬ !

ನವರಾತ್ರಿಯ ಸಂದರ್ಭದಲ್ಲಿ, ವಿಶೇಷವಾಗಿ, ಶಾರದಾದೇವಿಯ ಪೂಜೆಯ ಪರಿಪಾಠವಿದೆ.

ಮುಂಬೈನ ಪ್ರತಿಷ್ಠಿತ ವಿ. ಜೆ. ಟಿ. ಐ- ಭಾರತದ ಪ್ರಪ್ರಥಮ "ಟೆ ಕ್ಸ್ ಟೈಲ್ಸ್ ಶಾಲೆ," ಪಾದಾರ್ಪಣೆ ಮಾಡಿದ್ದು ಇಲ್ಲೇ !

ಬೊಂಬಾಯಿನ ಹತ್ತಿಗಿರಣಿಗಳಲ್ಲಿ ಕೆಲಸಮಾಡಲು ಬೇಕಾದ ತಂತ್ರಜ್ಞಾನಗಳನ್ನು ಕೊಡಲೆಂದೇ ನಗರ ಹಿರಿಯನೇಕರು ಸುಮಾರು ೧೨೫ ವರ್ಷಗಳ ಹಿಂದೆಯೇ ರಾಷ್ಟ್ರದ ಪ್ರಪ್ರಥಮ ವೃತ್ತಿಶಿಕ್ಷಣ ಸಂಸ್ಥಾನವನ್ನು ಬೊಂಬಾಯಿನಲ್ಲಿ ಕಟ್ಟಿಬೆಳೆಸಿದರು. ಅದೇ ಅಂದಿನ, " ವಿಕ್ಟೋರಿಯ ಜ್ಯುಬಿಲಿ ಟೆಕ್ನಿಕಲ್ ಇನ್ಸ್ಟಿಟ್ಯೂಟ್ " !

ಓಹ್ ಮೆಹಿಂದಿ- ರಂಗ್ ಜಮ್ ಗಯಾ ಹೈ ಕ್ಯಾ ?

ಅದೇನೋ ಹೆಣ್ಣು-ಮಕ್ಕಳಿಗೆ ಮೆಹೆಂದಿಯೆಂದರೆ ಪ್ರಾಣ ! ಬಹುಶಃ ಜೀವನದಲ್ಲಿ ಅದು ಒಂದು ಹೊಸಚೇತನ, ವೈವಿಧ್ಯತೆಯನ್ನು ತಂದು ಇನ್ನೂ ಜೀವನೋತ್ಸಾಹದ ಅನುಭವವನ್ನು ತರಲೆನ್ನುವ ಆಸೆ, ಆಕಾಂಕ್ಷೆಯ ಸಂಕೇತವೇ- ಈ ಮೆಹೆಂದಿ, ಅಂಗೈನ ಬಣ್ಣದಲ್ಲಿ ಪ್ರತಿಬಿಂಬಿಸುತ್ತಿದೆ.

ಮಹಾರಾಷ್ಟ್ರದ ಅಷ್ಟವಿನಾಯಕ ಮಂದಿರಗಳು :

ಮಹಾರಾಷ್ಟ್ರದ ಅಷ್ಟವಿನಾಯಕ ಕ್ಷೇತ್ರಗಳು :

೧. ಮೋರೆಗಾಂವ್ ನ ಮಯೂರೇಶ್ವರ್ [ತಾಲೂಕ, ಪುರಂದರ್, ಪುಣೆ. ಡಿ.]
ಬಾರಾಮತಿ ತಾಲ್ಲೂಕಿನ ಕೃಷ್ಣಾ ನದಿಯ ದಂಡೆಯಮೇಲೆ ಕಟ್ಟಿರುವ ಈ ದೇವಾಲಯ, ಈ ಸ್ಥಳದ ಆಕಾರ, ನವಿಲಿನಂತೆ ಇರುವುದರಿಂದ ಮೋರೆಗಾಂವ್, ಹೆಸರು ಬಂದಿದೆ.

೨. ಶ್ರೀ ಚಿಂತಾಮಣಿ, ತೇವೂರ್, ತಾಲ್ಲೂಕ ಹವೇಲಿ, ಪುಣೆ. ಡಿ.]

ಹೋರಾಟ ಮುಗಿಯಿತು, ಗಾಂಧಿಯವರು, ದೇಶಕ್ಕೆ ಪ್ರಾಣಕೊಟ್ಟು, ಅಮರರಾದರು !

ಗಾಂಧಿ ನೆನಪು : ೫

ಸ್ವರಾಜ್ಯ ಸಿಗುವವರೆಗೂ ಭಾರತದಜನ ಅತ್ಯಂತ ಸಂಯಮದಿಂದ ನಡೆದುಕೊಂಡಿದ್ದರು. ಗಾಂಧೀಜಿಯವರಜೊತೆಗೆ ಸೊಂಟಕ್ಕೆ ಸೊಂಟಕೊಟ್ಟು, ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆದರೆ, ಸ್ವತಂತ್ರ್ಯಬಂದ ಕೆಲವೇ ತಿಂಗಳುಗಳಲ್ಲಿ ಅವರು ತೋರಿಸಿದ ಮುಖವಾಡವೇ ಬೇರೆಯದಾಗಿತ್ತು. ಇಲ್ಲಿ ದ್ವೆಷ, ಅಸೂಯೆ, ಅಸಮಧಾನ, ಅಪನಂಬಿಕೆ, ಅನಾದರ, ಅವಿಶ್ವಾಸಗಳ ಮಹಾಪೂರವೇ ಹರಿದುಬರುವಂತೆ ಭಾಸವಾಗುತ್ತಿತ್ತು. ಒಮ್ಮೆ ನಿಧಾನವಾಗಿ ಯೋಚಿಸಿದಾಗ, ಇದೇ ಜನರೇ ಈಗ ಹೀಗೆ ವರ್ತಿಸುತ್ತಿರುವುದು, ಎನ್ನುವಷ್ಟು ಅವರು ಬದಲಾಯಿಸಿದ್ದರು. ಎಲ್ಲರ ಮೇಲು ಅಪನಂಬಿಕೆ. ಶಾಂತಿ, ಸೌಹಾರ್ದತೆಗಳು ಕೇವಲ ಕಾಗದದ ತುಂಡಿನಮೇಲೆ ಇರುವಂತೆ ಭಾಸವಾಗುತ್ತಿತ್ತು. ಈಗ ಯಾರಿಗೂ ಗಾಂಧೀಜಿಯವರು ಬೇಡ. ಅವರ ತತ್ವಗಳೂ ಆಷ್ಟೆ. ಮಹಾತ್ಮಾ ಗಾಂಧಿಯವರೂ ಇದನ್ನು, ಕಣ್ಣಾರೆಕಂಡರು. ಅವರ ಆಪ್ತ ಸ್ವಾತಂತ್ರ್ಯ ಚಳುವಳಿಯ ಹಿಂಬಾಲಕ, ಕೊಂಡವೆಂಕಪ್ಪಯ್ಯ, ಎಂಬ ೮೦ ವರ್ಷದ ಹಿರಿಯ ಕಾಂಗ್ರೆಸ್ ಕೆಲಸಗಾರ, ೧೯೦೦ ರಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದಿದ್ದ. ಆತ, ಗಾಂಧೀಜಿಯವರಿಗೆ ಪತ್ರಬರೆದು, ದೇಶದಲ್ಲಿ ಬೆಳೆಯುತ್ತಿರುವ, ಸಾಮಾಜಿಕ ವಲಯಗಳಲ್ಲಿನ ಅಸ್ಥಿರತೆಯನ್ನು ಕುರಿತು ಬರೆದ ಪತ್ರ, ಹೀಗಿದೆ.

ಬ್ಯಾರಿಸ್ಟರ್ ಎಮ್. ಕೆ. ಗಾಂಧಿಯವರು !

ಗಾಂಧಿ ನೆನಪು : ೨

ಮಹಾತ್ಮಾಗಾಂಧಿಯವರು ಬ್ಯಾರಿಸ್ಟರ್ ಆಗಿ ಭಾರತಕ್ಕೆ ಬಂದು, ತಮ್ಮ ಲಾಯರ್ ಕೆಲಸಕ್ಕೆ ದಕ್ಷಿಣಆಫ್ರಿಕಕ್ಕೆ ಹೋದರು. ಆದರೆ, ಬೇರೆ ಎಲ್ಲ ಲಾಯರ್ ಗಳಂತೆ ಅವರು, ಹಣ ಸಂಪಾದನೆಯನ್ನೊಂದನ್ನೇ ತಮ್ಮ ಧ್ಯೇಯವಾಗಿ ಇಟ್ಟುಕೊಳ್ಳಲಿಲ್ಲ. ಎಲ್ಲ ವಿಷಯಗಳಲ್ಲೂ ಅವರು ಹೊಸತನ, ಹೊಸ ಆಲೋಚನಾ ಸರಣಿಯನ್ನು ತಮ್ಮ ಕಾರ್ಯಚರಣೆಗಳಲ್ಲಿ ತೋರಿಸುತ್ತಿದ್ದರು.

ಜೋಳಿಗೆಯ ಪವಾಡ -ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಆತ್ಮಚರಿತ್ರೆ,

ಈಗಾಗಲೇ ತಾವುಗಳು, ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗ್ಗೆ ಅನೇಕ ಲೇಖನಗಳನ್ನು ಓದಿರಬಹುದು.
ಅವರ ಆತ್ಮಚರಿತ್ರೆ , " ಜೋಳಿಗೆಯ ಪವಾಡ." ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಲಭ್ಯವಿದೆ. ಆಸಕ್ತರು ಆಶ್ರಮಕ್ಕೆ ಪತ್ರಬರೆದು ಅದರ ಪ್ರತಿಯನ್ನು ಪಡೆಯಬಹುದು.

ವಿಳಾಸ :
ಪದಾಧಿಕಾರಿಗಳು,
ಅನಾಥ ಸೇವಾಶ್ರಮ,
ಮಲ್ಲಾಡಿಹಳ್ಳಿ,
ಹೊಳಲ್ಕೆರೆ ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ,
ಕರ್ನಾಟಕ ರಾಜ್ಯ.

ಬೆಂಗಳೂರಿನಲ್ಲಿ ಕಿಟ್ಟೆಲ್ಲರ ಪ್ರತಿಮೆ.

ಕಿಟ್ಟೆಲ್ಲರ ಪ್ರತಿಮೆಯ ಅನಾವರಣ, ಈಗಾಗಲೇ ೨೦೦೩ ರಲ್ಲೇ ಆಗಿತ್ತು- ಅವರ ೧೦೦ ವರ್ಷದ ಪುಣ್ಯ-ತಿಥಿಯದಿನದಂದು ! ಕನ್ನಡಕ್ಕೆ ಅವರ ಕೊಡುಗೆ ಅನನ್ಯ.

-ಡೆಕ್ಕನ್ ಹೆರಾಲ್ಡ್ ಪತ್ರಿಕೆಯಿಂದ.

ಮೈಸೂರಿನ ಜಯಲಕ್ಷ್ಮಿ ಪ್ಯಾಲೇಸ್, ಈಗ ನೋಡಲು ಬಲು ಚೆನ್ನ !

ಜಯಲಕ್ಷ್ಮಿ ಪ್ಯಾಲೇಸ್, ನ್ನು ಹೋದವರ್ಷ ದುರಸ್ತಿಮಾಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದೆ. ಅಲ್ಲಿ ಈಗ ಸೊಗಸಾದ ಖಾಯಂ-ವಸ್ತುಕಲಾಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ದಸರಾ ಸಮಯದಲ್ಲಿ ಇದು ವಿದ್ಯುತ್ ದೀಪಗಳಿಂದ ಝಗ- ಝಗಿಸುತ್ತಿರುತ್ತದೆ.

-ಫೋಟೋ ಆಲ್ಬಮ್ ನಿಂದ.

ಸೀರೆಗಳ ಅಂಚಿಗೆ, ಜರಿ ಒದಗಿಸುವ ಮಗ್ಗದಜಾಲಕಿ !

ನಾವು ನೋಡುವ ರೇಷ್ಮೆಸೀರೆಗಳ ಜರಿ ಕೆಲಸದಲ್ಲಿ ನಿಷ್ಣಾತರು- ಗುಜರಾತಿನ ಸೂರತ್ ಕಾರೀಗಾರರು. ತಮ್ಮ ಈ ಕಲೆಯ ಗುಟ್ಟನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಈ ಕೆಲಸವನ್ನು ಯಂತ್ರಗಳಲ್ಲಿ ಮಾಡಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟು ಕಾರ್ಯಕುಶಲತೆ, ಕ್ಷಮತೆಯನ್ನು ಸಾಧಿಸಿದ್ದಾರೆ, ಇವರು !

-ನನ್ನ ಆಲ್ಬಮ್ ನಿಂದ.

ರಂಗೋಲಿಕಲೆಯ ಅದ್ಭುತ ಪ್ರಯೋಗ !

ರಂಗೋಲಿ ಹಾಕುವ ಕಲಾವಿದರು, ೧೬,೦೦೦ ಸ್ಕೇರ್ ಅಡಿ ರಂಗೋಲಿಯ "Canvas, " ಅಣಿಮಾಡಲು ೨,೫೦,೦೦೦ ಬಣ್ಣದ ಚುಕ್ಕಿಗಳ ಬಳಕೆ ಮಾಡಿದ್ದಾರೆ. ಇದು ಮಹಾರಾಷ್ಟ್ರದ ಗಾಂದೇವಿ ಮೈದಾನ, ಥಾಣೆಯಲ್ಲಿ ಹೋದ ವರ್ಷದ "ಯುಗಾದಿ ಹಬ್ಬ, "ವನ್ನು ಆಚರಿಸಲು ಮಾಡಿದ ವಿಶೇಷ ಪ್ರಯತ್ನ.

ಶ್ರೀ ಆಂಜನೇಯಸ್ವಾಮಿ.

ಇದು ಶ್ರೀ ಆಂಜನೇಯಸ್ವಾಮಿ ವಿಗ್ರಹ. ಇದರ ವೈಶಿಷ್ಠ್ಯತೆಯೆಂದರೆ, ನಮ್ಮ ಡಾ. ವಿಶ್ವೇಶ್ವರಯ್ಯನವರ ತಾಯಿಯವರ ಆರಾಧ್ಯ ದೈವ. ಅದನ್ನು ಅವರೇ ತಂದು ಪ್ರತಿಷ್ಠಾಪಿಸಿದರೆಂದು ವದಂತಿ.

ಬೇಲೂರಿನ ಶಿಲಾಬಾಲಿಕೆ !

ಬೇಲೂರಿನ, ನವಯವ್ವನದ ಸುಂದರಾಂಗಿ, ಶಿಲಾಬಾಲಿಕೆ, ದರ್ಪಣದಲ್ಲಿ ತನ್ನ ಸೌಂದರ್ಯವನ್ನು ಸಜಾಯಿಸುತ್ತಿದ್ದಾಳೆ.

ಡಾ. ಕಲಾಂ, ಕಲಾಂರನ್ನು ಭೇಟಿಯಾದಾಗ !

ಒಬ್ಬ ವ್ಯಕ್ತಿ, ತನ್ನದೇ ವ್ಯಂಗ್ಯಚಿತ್ರವನ್ನು [ಕ್ಯಾರಿಕೇಚರ್ ] ಕಂಡಾಗ, ಪ್ರತಿಕ್ರಯಿಸುವುದು, ಹೀಗೂ, ಇರಬಹುದು !

-ಟೈಮ್ಸ್ ಆಫ್ ಇಂಡಿಯ ದ ಕೃಪೆ.

ಸೂರ್ಯಾಸ್ತ.

ಸೂರ್ಯೋದಯ, ಅಥವಾ ಸೂರ್ಯಾಸ್ತ, ಎರಡನ್ನೂ ನಮ್ಮ ಕ್ಯಾಮರ ಕಣ್ಣಿನಲ್ಲಿ ನೋಡಿದಾಗ !
ಎರಡೂ ಒಂದೇ ತರಹ ಕಾಣುತ್ತದೆ.

ಇದು ಸರಿಯೆ ? ತಿಳಿಸಿ.

ಕಲ್ಲುಗಳು ಹೇಳುವ ಮೌನ ಗೀತೆ !

ಚಿತ್ರದುರ್ಗ ಒಂದು ಐತಿಹಾಸಿಕ ಸ್ಥಾನ. ಅಲ್ಲಿ ನಾವೇನಾದರೂ ಹೋದರೆ, ಪ್ರತಿಕಲ್ಲೂ ಹೇಳುವ ಮೌನಗೀತೆಯ ನಾದಕ್ಕೆ ನಾವು ತತ್ತರಿಸುತ್ತೇವೆ !

ಹತ್ತಿಯ ಹಾಸಿಗೆ, (ಕ್ವಿಲ್ಟ್). ಇದನ್ನು ಮನೆಯ ಪಡಸಾಲೆಯಅಂದಕ್ಕೂ ಉಪಯೋಗಿಸ ಬಹುದು

ಹತ್ತಿಯ ಹಾಸಿಗೆ, (ಕ್ವಿಲ್ಟ್). ಇದನ್ನು ಮನೆಯ ಪಡಸಾಲೆಯಅಂದಕ್ಕೂ ಉಪಯೋಗಿಸಬಹುದು. ಹತ್ತಿಯ ಹಾಸಿಗೆಯನ್ನು ಬಟ್ಟೆಯೊಳಗೆ ಹತ್ತಿ ತುಂಬಿ ಹೊಲಿದು, ಅದನ್ನು ನಾವು ಮಕ್ಕಳಿಗೆ ಮಲಗಲು ಅನುಕೂಲ ಮಾಡಿಕೊಡಬಹುದು.

- ಮನೆಯ ಆಲ್ಬಮ್ ನಿಂದ.

ಕಾಳೀ ನದಿಯಲ್ಲಿ ವಿಹಾರ

ಕೈಗಾ ನೇಚರ್ ಕ್ಲಬ್ ಆಯೋಜಿಸಿದ ಕದ್ರಾದಿ೦ದ ಸದಾಶಿವಗಡದವರೆಗೆ ಕಾಳೀ ನದಿಯಲ್ಲಿ ಕೈಗೊ೦ಡ ವಿಹಾರದಲ್ಲಿ ತೆಗೆದ ಚಿತ್ರ .

ಚಿತ್ರದುರ್ಗದ ಕೋಟೆಯ ಪ್ರವೇಶದ್ವಾರದಲ್ಲಿರುವ ಕಲ್ಲಿನ ಪ್ರತಿಮೆ !

ಚಿತ್ರದುರ್ಗ- ಕಲ್ಲಿನಕಾವ್ಯ ಸಂಗ್ರಹ. ಮದಕರಿನಾಯಕರ ಪ್ರೀತಿಯ ತಾಣ !

ಕಾಂಚೀಪುರದ ಕೈಲಾಸನಾಥ ದೇವಾಲಯದಲ್ಲಿನ ಒಂದು ಭಿತ್ತಿ ಚಿತ್ರ

ಚಿತ್ರ ಕೃಪೆ: ಹಿಂದೂ ಪತ್ರಿಕೆಯಲ್ಲಿ ಬಿನಯ್.ಕೆ.ಬೆಹ್ಲ್ ರವರ ಲೇಖನವೊಂದರಿಂದ

http://www.hinduonnet.com/fline/fl2121/stories/20041022000406400.htm

ವೀಣೆ ಮತ್ತು ಡಾ. ಕಲಾಂ !

ಈ ಅಪರೂಪದ ಚಿತ್ರ, ಕೆಲವು ತಿಂಗಳಹಿಂದೆ ಪತ್ರಿಕೆಯಲ್ಲಿ ಸುದ್ದಿಯಲ್ಲಿತ್ತು. ತಮಿಳುನಾಡಿನವರಾದ ಕಲಾಂ, ವೀಣೆ ನುಡಿಸಿವಷ್ಟು ಪ್ರೌಢಿಮೆ ಪಡೆದಿರಲೂ ಸಾಕು.

ಅದರ ಬಗ್ಗೆ ನಮಗೆ ಸ್ವಲ್ಪ ಮಾಹಿತಿ ಬೇಕು. ಯಾರು ಕೊಡ್ತೀರಿ ?

- " ಟೈಮ್ಸ್ ಆಫ್ ಇಂಡಿಯ "ದಿಂದ.

ಹಾಂಕಾಂಗಿನ ಓಷನ್ ಪಾರ್ಕ್ ನಲ್ಲಿ ಪುಟಾಣಿ ಪಾಂಡ !

ಹಾಂಕಾಂಗಿನ "ಓಷನ್ ಪಾರ್ಕ್" ನಲ್ಲಿ ಒಂದು "ಚಿಕ್ಕ ಪಾಂಡ " ವನ್ನು ಪ್ರೀತಿಯಿಂದ ಸಾಕಿದ್ದಾರೆ. ಅದಕ್ಕೆ ಆಹಾರ, ಚಿಕ್ಕ-ಚಿಕ್ಕ ಬಿದುರಿನ ಎಳೆಯ ಚಿಗುರೆಲೆಗಳು. ಇದು ಅತಿ ಸೂಕ್ಷ್ಮವಾದ ಜಂತು. ನಿಧಾನವಾಗಿ ನಡೆಯುತ್ತದೆ. ಮಕ್ಕಳಿಗಂತೂ ಇದು ಅತಿ ಮುದ್ದಿನ ಪ್ರಾಣಿ.

-ಮನೆ ಆಲ್ಬಮ್ ನಿಂದ,.

ಲಂಡನ್ನಿನ ಮಹಾ ವಸ್ತು ಪ್ರದರ್ಶನ- ೧೮೫೧ ರಲ್ಲಿ !

ಈ ವಸ್ತು ಪ್ರದರ್ಶನ ನಡೆದದ್ದು ಲಂಡನ್ನಿನ ಕ್ರಿಸ್ಟಲ್ ಅರಮನೆಯ ಭವ್ಯ ಹಾಲಿನಲ್ಲಿ. ಆದ ಕಾಲ- ೧೮೫೧ !

Mule, ಅಂದರೆ ಹೇಸರಕತ್ತೆಯಲ್ಲ !

"ಮ್ಯುಲ್ " Mule, ಅಂದ್ರೆ ಹೇಸರ್ ಕತ್ತೆ, ಅಂತ ಯಾರೋ ಅಂದ್ಕೊಂಡ್ರಂತೆ. ಹಾಗೇನಿಲ್ಲ. ಅದೇ Industrial Revolution ಸಮಯದಲ್ಲಿ ವಿಲಿಯಮ್ ಆರ್ಕ್ ರೈಟ್, " ಸ್ಪಿನ್ನಿಂಗ್ ಜೆನ್ನಿ" ಯಂತ್ರವನ್ನು ತಯಾರಿಸಿ ಇಂಗ್ಲೆಂಡ್ ಜನರನ್ನೆಲ್ಲಾ ಚಕಿತಗೊಳ್ಸ್ದಾ ಅಂತ ಹೇಳಿದ್ದೆ. ಅದಾದ್ ಮೇಲೆ ಇನ್ನೊಬ್ಬ ಮಹಾನುಭಾವ, ’ಸ್ಯಾಮ್ಯುಯೆಲ್ ಕ್ರಾಂಟನ್ ” ೧೭೭೫ ರಲ್ಲಿ ಮತ್ತೊಂದ್ ಯಂತ್ರ ತಯಾರಿಸಿ, ಇನ್ನೊಂದ್ ವಿಕ್ರಮನ ಸಾಧಿಸಿದನಂತೆ. ಮ್ಯೂಲ್ ಯಂತ್ರ, ಸ್ಪಿನ್ನಿಂಗ್ ಜೆನ್ನಿ, ಮತ್ತು ವಾಟರ್ ಫ್ರೇಮ್ ಯಂತ್ರಗಳ, ಕಾರ್ಯ ವೈಖರಿಯ ಮುಂದಿನ ಹೆಜ್ಜೆ, ಅಂತ ಎಲ್ರೂ ಹೆಳ್ತಾರೆ. ಅವನು ಎಷ್ಟು ಪ್ರಸಿದ್ಧಿ ಹೊಂದಿದ ಅಂದ್ರೆ, ಅವನ್ ಸತ್ಮೇಲೆ ಅಲ್ಲಿನ್ ಜನ ಒಂದ್ ಸ್ಮಾರಕ ಮಾಡಿದಾರೆ.

ಥಳ ಥಳಿಸುವ ಹಳದಿ ಬಣ್ಣದ ’ಮುಗಾ ರೇಷ್ಮೆ” ಮತ್ತು ರೇಷ್ಮೆ ಹುಳುಗಳು.

”ಮೂಗಾ ರೇಷ್ಮೆ’ ನಾನು ಈಗಾಗಲೇ ವಿವರಿಸಿದ ೪ ರೇಷ್ಮೆ ಪ್ರಜಾತಿಗಳಲ್ಲಿ ಒಂದು.

೧. ಹಿಪ್ಪು ನೇರಳೆ ಸೊಪ್ಪನ್ನು ತಿಂದು ಅದರಿಂದ ಬೆಳೆದು, ರೇಷ್ಮೆ ಕೊಡುವ ’ಮಲ್ಬರಿ ಸಿಲ್ಕ್’. ಇದು ’ಬಾಂಬಿಕ್ಸ್
ಮೋರಿ’ ಎನ್ನುವ ಪ್ರಜಾತಿಗೆ ಸೇರಿದೆ. ಭಾರತದ ರೇಷ್ಮೆ ಉದ್ಯಮದಲ್ಲಿ, ಇದರದೇ ಸಿಂಹಪಾಲು. ನಮ್ಮ

ಪರಮ ಯೋಗಾಚಾರ್ಯ, ಶ್ರೀ ಶ್ರೀ ಮಲ್ಲಾಡಿಹಳ್ಳಿ ಸ್ವಾಮೀಜಿಯವರು ತಮ್ಮ ’ ಯೋಗಶಿಬಿರ ’ದಲ್ಲಿ ತೋರಿಸಿದ ಒಂದು ಕಸರತ್ತಿನ ದೃಷ್ಯ

ಪರಮ ಯೋಗಾಚಾರ್ಯ, ಯತಿವರ್ಯ, ಶ್ರೀ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ತಮ್ಮ " ಅನಾಥ ಸೇವಾಶ್ರಮ " ದ ಭವ್ಯ ಪ್ರಾಂಗಣದಲ್ಲಿ ಸಹಸ್ರಾರು ಭಕ್ತವರ್ಯರ ಸಮ್ಮುಖದಲ್ಲಿ "ವಾರ್ಷಿಕ ಯೋಗ ಶಿಬಿರ "ದಲ್ಲಿ ಕುಸ್ತಿ, ಕಸರತ್ತು, ಯೋಗ, ಮಲ್ ಖಂಬ್, ಇತ್ಯಾದಿಗಳನ್ನು ಪ್ರದರ್ಶಿಸುತ್ತಿದ್ದರು. ಈಗ ಅದು ಒಂದು ಕಳೆದು ಹೋದ ’ವಾರಿತ್ರ್ಯಿಕ ಘಟನೆ ’ಯಾಗಿದೆ.

ಖಾದಿಯ ಪ್ರಸಾರಕ್ಕೆ ಮಹಾತ್ಮ ಗಾಂಧಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ; ಖಾದಿ ಬಳಕೆ ಸ್ವಾತಂತ್ರ್ಯಸಂಗ್ರಾಮದ ಮಹತ್ತರ ಪ್ರಯೋಗಗಳಲ್ಲೊಂದಾಗಿತ್ತು !

ಮಹಾತ್ಮ ಗಾಂಧಿಯವರು ಖಾದಿಯನ್ನು ಬಳಕೆಗೆ ತರಲು ಬಹಳ ಶ್ರಮ ಪಟ್ಟರು. ಖಾದಿಯ ಪ್ರಚಾರದ ಪ್ರಾರಂಭ ಹೇಗಾಯಿತೆನ್ನುವುದರ ಬಗ್ಗೆ ಬಹಳ ಜನರಿಗೆ ಹೆಚ್ಚು ತಿಳಿದಿಲ್ಲ. ಮಹಾತ್ಮರಿಗೆ ಅದೊಂದು ದೊಡ್ಡ ಸವಾಲಾಗಿತ್ತು. ಚರಖದಲ್ಲಿ ಹತ್ತಿ ನೂಲನ್ನು ನೇಯುವ ಕಲೆ ಮಹಾತ್ಮರಿಗೇನು ಗೊತ್ತು ?

ಡಾ. ಸಿ. ವಿ. ರಾಮನ್, ಟೆಕ್ನೊಲಾಜಿಕಲ್ ಲ್ಯಾಬಿಗೆ ಭೇಟಿಕೊಟ್ಟು, ಹತ್ತಿ ಸಂಶೋಧನೆಯ ಮಗ್ಗಲುಗಳನ್ನು ನೋಡಿದ್ದರು

ನಿಜವಾದ ವಿಜ್ಞಾನಿಗೆ ವಿಷಯಗಳ ಸೀಮೆಯೆಲ್ಲಿದೆ ? ಭೌತಶಾಸ್ತ್ರದ ವಿಜ್ಞಾನಿ, ಹತ್ತಿ- ಸಂಶೋಧನೆಯ ತಂತ್ರಜ್ಞಾನಗಳ ವಿವರಗಳನ್ನು ಅತ್ಯಂತ ಆಸಕ್ತಿಯಿಂದ ಅವಲೋಕಿಸುತ್ತಿದ್ದಾರೆ. ೧೯೫೬ ರಲ್ಲಿ ಈ ಭೇಟಿ ಆಗಿತ್ತೆಂದು ಮೂಲಗಳು ತಿಳಿಸುತ್ತವೆ.

*ನಾನು ಬರೆದ " My Spin Lab" ಪುಸ್ತಕದ ಪುಟಗಳಿಂದ .

ಮೊಹೆಂಜೋದಾರೋ ನಲ್ಲಿ ಭೂಮಿಯನ್ನು ಅಗಿದಾಗ ಅಲ್ಲಿನ ಒಂದು ವಾಝಿನ ಕೆಳಗೆ ಆಂಟಿಕೊಂಡಿದ್ದ ವಸ್ತು, ಹತ್ತಿ ಬಟ್ಟೆ ಎಂದು ತಿಳಿದುಬಂತು !

೧೯೨೮- ೩೦ ರಲ್ಲಿ ಉತ್ತರ ಭಾರತದ ಮೊಹೆಂಜೋದಾರೋ ನಲ್ಲಿ, ನೆಲವನ್ನು ಅಗಿದು ಸರ್ವೆ ಮಾಡಿದಾಗ ಅಲ್ಲಿ ಸಿಕ್ಕ ಒಂದು ವಾಝಿನಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಟ್ಟೆ ಚೂರು/ ತುಂಡು, ಹತ್ತಿಯದೆಂದು ತಿಳಿದು ಬಂತು. ಅದನ್ನು ವಿಶ್ಲೇಶಿಸಿದ್ದು, ಟೆಕ್ನೋಲಾಜಿಕಲ್ ಲ್ಯಾಬೋರೇಟರಿಯಲ್ಲಿ !

CIRCOT, Mumbai - ಭಾರತದ ಹತ್ತಿಬೆಳೆಯ ಗುಣ ಮತ್ತು ಉತ್ಪನ್ನಗಳನ್ನು, ಅಭಿವೃದ್ಧಿಪಡಿಸಿ, ಗಮನಾರ್ಹಸೇವೆಸಲ್ಲಿಸುತ್ತಿರುವ ಸಂಸ್ಥೆ


ಅಂದಿನ " ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿ," ಬೊಂಬಾಯಿ- ಈಗ ಸಿರ್ಕಾಟ್. ( Central Institute for Research on Cotton Technology ) ಭಾರತದ ಹತ್ತಿ ಬೆಳೆಯಲ್ಲಿ, ಉತ್ಪಾದನೆ ಮತ್ತು ಗುಣದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಆಗಿನ ಬ್ರಿಟಿಷ್ ಸಂಸ್ಥೆ, ಅಂದಿನ ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿ- ಇದು ಪ್ರಾರಂಭವಾದದ್ದು ೧೯೨೪ ನೆ ಇಸವಿಯಲ್ಲಿ, ಆಗಿನ ಭಾರತದ ಗವರ್ನಲ್ ಜನರಲ್/ ವೈಸ್ರಾಯ್, ಡೇನಿಯಲ್ ಐಸಾಕ್ಸ್, 'ಅರ್ಲ್ ಆಫ್ ರೀಡಿಂಗ್' ರವರ ಸ್ವಂತ ಹಸ್ತದಿಂದ ! ದೆಹಲಿಯಿಂದ ಇದಕ್ಕೋಸ್ಕರ ಅವರು ಬೊಂಬಾಯಿಗೆ ಬಂದಿದ್ದರು. ಇದನ್ನು ಹೇಳಬೇಕಾಗಿಬಂದ ಪ್ರಸಂಗ ಅಂತಹದು !


ಹತ್ತಿಯಿಂದ ಬೀಜ ಬೇರ್ಪಡಿಸುವ ಯಂತ್ರ ಅಮೆರಿಕದ ಕೊಡುಗೆ- ಅದು ವಿಶ್ವದ ಹತ್ತಿ ವಸ್ತ್ರೋದ್ಯಮದ ದ್ವಾರವನ್ನು ತೆರೆದು ಕ್ರಾಂತಿಯನ್ನೇ ಮಾಡಿತು !

ಇಂದಿನ ದಿನಗಳಲ್ಲಿ ಹತ್ತಿಯಿಂದ ಬೀಜ ಬೇರ್ಪಡಿಸೋ ಕೆಲ್ಸ ಯಾಕೆ ಅಷ್ಟು ಪ್ರಾಮುಖ್ಯತೆ ಪಡೀತು, ಅಂತ ಕೇಳೋ ಜನ ಇದಾರೆ. ಅದ್ರಲ್ಲಿ ತಪ್ಪೂ ಕಾಣ್ಸಲ್ಲ. ಆದ್ರೆ, ಅಮೆರಿಕೆಯ ಹತ್ತಿ ಬೆಳೆಯುವ ಬೃಹತ್ ಪ್ರಮಾಣದ ಹೊಲಗಳಲ್ಲಿ ಟನ್ ಗಟ್ಟಲೆ ಹತ್ತಿ ಬೆಳೆದರೂ ಅದನ್ನು ರಫ್ತು ಮಾಡುವುದು ಒಂದು ಹರ -ಸಾಹಸವಾಗಿತ್ತು. ಏಕೆಂದರೆ ಬೀಜ ತೆಗೆಯದೆ ಅದನ್ನು ಬೇಲ್ ಮಾಡುವಂತಿಲ್ಲ.

೧೮ ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ "ಔದ್ಯೋಗಿಕ ಪ್ರಗತಿಯ ಮೂಲ" - ಹತ್ತಿಯಿಂದ ದಾರ ನೂಲುವ ಯಂತ್ರದಿಂದ !

೧೮ ನೆಯ ಶತಮಾನದ ಪ್ರಾರಂಭದಲ್ಲಿ ಹತ್ತಿಯ ವಸ್ತ್ರದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇಲ್ಲದೆ, ಭಾರತಕ್ಕೆ ಬಂದು ಹೋದ ಯಾರೋ ನಾವಿಕರಿಂದ ಕೇಳಿದ ಮಾತುಗಳು, ಮತ್ತು ಅಲ್ಲಿ -ಇಲ್ಲಿ ಸಂಗ್ರಹಿಸಿದ ಭಾರತದ ಗ್ರಾಮೀಣ ಕಲೆಯಲ್ಲಿ ಮಂಚೂಣಿಯಲ್ಲಿದ್ದ ಹತ್ತಿ ವಸ್ತ್ರೋದ್ಯಮದ ವಿವಿಧ ಪ್ರಾಕಾರಗಳ ಮಾಹಿತಿಗಳಿಂದಲೇ ಒಂದು ನೂಲಿನ ಯಂತ್ರವನ್ನು ಸ್ಥಾಪಿಸಿ, ಮುಂದಿನ ದಿನಗಳಲ್ಲಿ ಅದ

ಮಲ್ಲಾಡಿಹಳ್ಳಿ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳು, ಮಲ್ಲಾಡಿಹಳ್ಳಿ

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ,  ಪ್ರಾತಃಸ್ಮರಣೀಯರು. ಅವರು ಒಬ್ಬ ಶ್ರೇಷ್ಟ ಯೋಗಿಗಳು, ಪ್ರಸಿದ್ಧ ಆಯುರ್ವೇದಾಚಾರ್ಯರು, ಲೇಖಕರು, ಕವಿಗಳು, ಶ್ರೇಷ್ಟ ನಟರು, ಗಾಯಕರು, ಪ್ರಭಾವಿ ಚಾಲಕರು, ಮತ್ತು ಸಾಧಕರು. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಶ್ರೇಷ್ಟಮಾನವರು ! ಮಾನವ ಮೌಲ್ಯಗಳನ್ನು ತಮ್ಮ ವಿಪತ್ತಿನ ಮಧ್ಯೆಯೂ ಎತ್ತಿ

 

ಹಿಡಿದು, ಅದಕ್ಕೆ  ಚ್ಯುತಿ'ಬರದಂತೆ ಅನುಪಾಲನೆಯನ್ನು ಸ್ವತಃ ಮಾಡಿ ಬೇರೆಯವರಿಗೂ ಮಾರ್ಗದರ್ಶನ ಮಾಡಿದ, ಮಹಾನುಭಾವರು ! [ತಮ್ಮನ್ನು ಸ್ವಾಮಿಗಳೆಂದು ಎಂದೂ ಅವರು ಕರೆದುಕೊಳ್ಳಲು ಇಷ್ಟಪಡಲಿಲ್ಲ- ಅವರು ತಿರುಕರು ; ಸದಾ ಜೊಳಿಗೆ ಹಿಡಿದು, ಮನೆ ಮನೆಗೆ ಹೊಗಿ, ಭಿಕ್ಷೆಬೇಡುವ ಭಿಕ್ಷಾರ್ಥಿ ! ಜನರ ಹಿತಕ್ಕಾಗಿ, ಇದನ್ನು ಅವರು ಅತಿ ಶ್ರದ್ಧೆಯಿಂದ, ದಶಕಗಳ ಸಮಯದಲ್ಲಿ ಮಾಡುತ್ತಲೇ ಬಂದರು.] ಅವರು ಕಟ್ಟಿ ಬೆಳಸಿದ ಮಲ್ಲಾಡಿಹಳ್ಳಿಯ ಆಶ್ರಮ, ಯಾವುದೋ ಆಶ್ರಮದ ಪರಂಪರೆಗೊ, ಅಥವಾ ಒಂದು ವರ್ಗದ ಜನರ ಹಿತಸಾಧನೆಗೊ, ಸಂರಚಿಸಿದ ಒಂದು ಸಂಸ್ಥೆಯಾಗಿರದೆ ಸರ್ವ ಜನರ ಹಿತರಕ್ಷಣೆಗೆ ಮುಡುಪಾಗಿಟ್ಟ, ಆರ್ತರ, ಬಡವರ, ನಿರ್ಗತಿಕರ ಆಲಯ ; 'ಅನಾಥಸೇವಾಶ್ರಮ'- 'ಅನ್ವರ್ಥನಾಮ' ವಾಗಿದೆ. ಸ್ವಾಮಿ ಶಿವಾನಂದರ ಶಿಷ್ಯರಾಗಿದ್ದ ಅವರು, ದೇವರಹುಡುಕಾಟದಲ್ಲಿ ತಮ್ಮ ಬಾಲ್ಯದ ಅಮೂಲ್ಯ ಸಮಯವನ್ನು ವಿನಿಯೊಗಿಸಿದರು. ಅವರು ಕೇಳಿದ ಪ್ರವಚನಗಳಿಗೆ ಮಿತಿಯಿಲ್ಲ. ಸೇವಿಸಿದ ಯತಿವರ್ಯರಿಗೆ ಕೊನೆಯಿಲ್ಲ. ಅವರಿಗೆ ದೈವಸಾಕ್ಷಾತ್ಕಾರವಾಗಲಿಲ್ಲ. ಆಗ ಅವರಿಗೆ ದೇವರಬಗ್ಗೆ ಸ್ಪಷ್ಟ ಕಲ್ಪನೆ ನೀಡಿದವರು, ಮಹಾನುಭಾವರಾದ ಸ್ವಾಮಿ ಶ್ರಿ ಶಿವಾನಂದರು. ದೀನ- ದಲಿತರಲ್ಲಿ, ಆರ್ತರಲ್ಲಿ, ರೋಗಿಗಳಲ್ಲಿ ಸಹ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಆವಶ್ಯಕ, ಎಂದು ಸ್ವಾಮಿಗಳು, ರಾಘವರಿಗೆ ತಿಳಿಯಹೇಳಿದರು.

Subscribe to ಜ್ಞಾನವಾಹಿನಿ ವರ್ಗದ ಚಿತ್ರಗಳು