misc (Uncategorized) pictures

ಅಪರೂಪದ ಚಿತ್ರ

ಈ ಮಹಾನ್ ಕವಿಗಳನ್ನು ಗುರುತಿಸಬಲ್ಲಿರಾ.....?

(ಈ ಚಿತ್ರ ಎಲ್ಲಿ ದೊರಕಿತು ಎಂದು ನೆನಪಾಗುತ್ತಿಲ್ಲ..... ದಯವಿಟ್ಟು ಕ್ಷಮಿಸಿ )

Taxonomy upgrade extras: 

ಮೌನ ಚಿಂತನೆ...

ಇತ್ತೀಗೆ ನಮ್ಮ ಊರಲ್ಲಿ ಕಂಡ ಚಿತ್ರ. ಭತ್ತದ ಪೈರಿನ ಕಟಾವಿನ ನಂತರ ಗದ್ದೆಯಲ್ಲಿ ಕುಳಿತ ಬಾನಾಡಿಗಳು.... ಏನು ಚಿಂತಿಸುತ್ತಿವೆ.....

ಬೆಂಗಳೂರಿನ ಸೌಂದರ್ಯವು ಇನ್ನು ಉಳಿದಿದೆಯೇ?

ಈ ಭಾವಚಿತ್ರವನ್ನು ನಾನು ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಸುಮಾರು ೨ ವರುಷಗಳ ಹಿಂದೆ ತೆಗೆದೆ :) ಇದನು ನೀವು ನಂಬುತೀರೆ? ನಮ್ಮ ಬೆಂಗಳೂರಿನ ಸೊಬಗು ಇನ್ನು ಉಳಿದಿದೆಯೇ?

Taxonomy upgrade extras: 

ವರ್ಷಾಗಮನದ ನಿರೀಕ್ಷೆಯಲ್ಲಿ- ನಾಟ್ಯಕ್ಕೆ ಸಿದ್ಧತೆ?

ನರ್ತಿಸಲು ಅಣಿಯಾಗುತ್ತಿರುವ ನವಿಲು. ಮಳೆ ಬರಲಿ ಬೇಗ-ಎಲ್ಲೆಡೆ ಹಸಿರು ತುಂಬಿ ನಳಿನಳಿಸುತಿರಲಿ ಎಂದು ಹಾರೈಸುವಂತಿದೆ.

Taxonomy upgrade extras: 

ನವಿಲ ನರ್ತನ

ಮಳೆ ತರುವ ಮೇಘಗಳ ಸ್ವಾಗತವೆ?

ಅಪರೂಪಕ್ಕೆ ಕ್ಯಾಮರಾ ಕಣ್ಣಿಗೆ ಸಿಕ್ಕ ಚಿತ್ರ. ಮಳೆ ಬರುವದಕ್ಕೂ ಮೊದಲು ನರ್ತಿಸುತ್ತಿರುವ ನವಿಲು...

Taxonomy upgrade extras: 

ಭಲೇ ಭಲೇ

ಭಲೇ ಭಲೇ

ಏ ಪುಟಾಣಿ, ಮೆಚ್ಚಿದೆ ಕಣೇ ನಿನ್ನ ನಯನದ ಸೊಬಗನ್ನು

Taxonomy upgrade extras: 

ಬೊಗಸೆ ಕಣ್ಣುಗಳಲ್ಲಿ ಆಸೆ

ಬೊಗಸೆ ಕಣ್ಣುಗಳಲ್ಲಿ ಆಸೆ

ಬಾಲೆಯ ಕಣ್ಣುಗಳಲ್ಲಿ ತುಂಬಿದೆ ಐಸ್...ಕ್ರೀಮ್
ಅತ್ತ ಆಸೆ, ಇತ್ತ ವಾರೆನೋಟ,
ನನ್ನ ಚಿತ್ರಕ್ಕೆ ಒಂದು ಸುಂದರ ಮಾಡೆಲ್
ಅವಳು ........................?
ಮತ್ತಾರು ಅಲ್ಲ......................?

ನನ್ನ ಬಾಳಕಥೆಯ ಬೊಂಬೆ ಅವಳು
ನನ್ನ ಸ್ನಿಗ್ಧ ಚೆಲುವೆ ಅವಳು
ನನ್ನ ಬಾಳಶರಧಿಯ ಸಾಗರಿ ಅವಳು!

Taxonomy upgrade extras: 

ನಮ್ಮನಾಡಿನ ಹೆಣ್ಣುಮಕ್ಕಳ ರಂಗೋಲಿ ಕಲೆಯ ಪ್ರದರ್ಶನಕ್ಕೆ- ಮನೆಯಮುಂದಿನ ಅಂಗಳವೇ ಕ್ಯಾನ್ವಾಸ್ !

ಶಿವಮೊಗ್ಗೆಗೆ ಹೋದಾಗ, ನನ್ನ ಕ್ಯಾಮರಾ ಕಣ್ಣಿಗೆ ಕಂಡ ಕೆಲವು ದೃಷ್ಯಗಳಲ್ಲಿ ಇದೂ ಒಂದು !

Taxonomy upgrade extras: 

ಬಿಗ್-ಬಿ

ಅಮಿತಾಭ್ ಬಚ್ಚನ್ ಅಂತ ಬರೆದಿದ್ದು... ತಮಗೆ ಗೊತ್ತಾದ್ರೆ ಸಾಕು:)

Taxonomy upgrade extras: 

ಫೈರ್‍ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು (ಸರಿಯಾಗಿದೆಯೆಂದು!)

ಫೈರ್‍ಫಾಕ್ಸ್ ೩ ಬೀಟ ಆವೃತ್ತಿಯಲ್ಲಿ ಕನ್ನಡ ಬಹಳ ಚೆನ್ನಾಗಿ ಮೂಡಿಬರುತ್ತದೆ. ಜೊತೆಗೆ ಹಿಂದಿದ್ದ ಎಲ್ಲ ತೊಂದರೆಗಳನ್ನೂ ಸರಿಪಡಿಸಿದ್ದಾರೆ. :-)

Taxonomy upgrade extras: 

ಕರ್ಮಯುಧ್

ನಮ್ಮ ಕರ್ಮ!

ಅಲ್ಪಸ್ವಲ್ಪ ಕೂಡಿಟ್ಟಿದ್ದ ದುಡ್ಡನ್ನು ಮ್ಯಾಚ್ ನೋಡಲು ಅವ್ರು ಹೇಳಿದ್ದನ್ನು ಕುಡಿಯಲು,ತಿನ್ನಲು ಖರ್ಚು ಮಾಡುವ ಕರ್ಮ.
ತಮ್ಮ ಕೆಲಸ ಕಾರ್ಯ ಬಿಟ್ಟು ಟಿ.ವಿಯೆದುರು ಬಾಯಿಬಿಟ್ಟು ಕುಳಿತುಕೊಳ್ಳುವ ಕರ್ಮ.

ಅವರಿಗೆ-
ಇದು ಕರ್ಮಯುದ್ಧವಲ್ಲ-ಧನ(ಯೋಗ)ಯುದ್ಧ.

Taxonomy upgrade extras: 

ಪ್ರೀತಿ, ಪ್ರೀತಿಯಿಂದ ಪ್ರೀತಿಗಾಗಿ

ಪ್ರೀತಿ
ಪ್ರೀತಿಯಿಂದ ಪ್ರೀತಿಗಾಗಿ
ಪ್ರೀತಿಯನ್ನು ಪ್ರೀತಿಯನ್ನು ಪ್ರೀತಿಸುತ್ತಾ ಹೋದಂತೆಲ್ಲಾ
ಬಿರುಗಾಳಿಗೆ ಸಿಕ್ಕ ಎಲೆಯಾಗಿದ್ದೇನೆ.............
ಕಾದು ನೋಡಿ.. ಜಿ.ವಿಜಯ್ ಹೆಮ್ಮರಗಾಲ.

Taxonomy upgrade extras: 

ಈಗೆಲ್ಲಿ ನಲ್ಲೆ ಈಗೆಲ್ಲಿ

ಬಾಳಿನ ದಾರಿಯಲಿ
ಬಾಳಿನ ದಾರಿಯಲಿ
ಪ್ರೀತಿಯೆ ಸಾಲು ಮರ
ಅರೆ ಘಲಿಗೆ ನೆರಳಿನಲಿ
ಕುಳಿತು ಸಾಗುವ
ಸಾಗಿ ಬಂದ ಹಾದಿ
ಆಗಿ ಹೋದ ಘಟನೆ
ಏಕೆ ಸುಮ್ಮನೆ
ನೆನೆಯುತ ಕೊರಗುವೆ
ಮರೆತು ಹಳೆಯ ಗೋಳು
ಕಣ್ಣು ಬಿಟ್ಟು ನೋಡು
ಹೊಸ ಹಾದಿ
ತೆರೆದಿದೆ ಎದುರಿಗೆಯೆ
ಚಿಂತೆ ಏಕೆ ಇನ್ನು
ಏಕೆ ಅಂಜಿಕೆ
ಪ್ರೀತಿ ಬುತ್ತಿ ಹೊತ್ತು
ಸಾಗುವ ಮುಂದಕೆ
ದುಗುಡ ಬೇಡ ಸಾಕು
ನಗುತ ಹೆಜ್ಜೆ ಹಾಕು

Taxonomy upgrade extras: 

ಜಗನ್ಮೋಹನ ಅರಮನೆ, ಮೈಸೂರು

ಮೈಸೂರಿನ ಜಗನ್ಮೋಹನ ಅರಮನೆ, ಉತ್ತಮವಾದ ಸಭಾಂಗಣವನ್ನು ಹೊಂದಿ ಆಕರ್ಶಕವಾಗಿದೆ. ಹಳೆಯ ಕಾಲದ ಕಲಾಕೃತಿಗಳ ಪ್ರದರ್ಶನ ಶಾಲೆಯೂ ಇದೆ. ಹೊರಗೆ ಪುರಾತನ ಕಲಾಕೃತಿಗಳ ಮಾರಾಟ ಮಳಿಗೆಗಳೂ ಇವೆ. ನಗರ ಸಾರಿಗೆ ತಾಣದಿಂದ ನಡೆದುಕೊಂಡೇ ಹೋಗಬಹುದಾಷ್ಟು ದೂರದಲ್ಲಿದೆ.

Taxonomy upgrade extras: 

ಸುವರ್ಣ ವಾಹಿನಿಯ ನ್ಯೂಸ್ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ - (೨)

ಸುವರ್ಣ ವಾಹಿನಿಯ ನ್ಯೂಸ್ ನ್ಯೂಸ್ ಕಾರ್ಯಕ್ರಮದಲ್ಲಿ ನಡೆದ "ಅಧಿಕಾರ ಹಸ್ತಾಂತರ' ಕುರಿತ ಚರ್ಚೆಯಲ್ಲಿ [:http://sampada.net/user/ismail|ಇಸ್ಮಾಯಿಲ್].

Taxonomy upgrade extras: 

ಸುವರ್ಣ ವಾಹಿನಿಯ ನ್ಯೂಸ್ ಕಾರ್ಯಕ್ರಮದಲ್ಲಿ ಇಸ್ಮಾಯಿಲ್

ಸುವರ್ಣ ವಾಹಿನಿಯ ನ್ಯೂಸ್ ನ್ಯೂಸ್ ಕಾರ್ಯಕ್ರಮದಲ್ಲಿ ನಡೆದ "ಅಧಿಕಾರ ಹಸ್ತಾಂತರ' ಕುರಿತ ಚರ್ಚೆಯಲ್ಲಿ [:http://sampada.net/user/ismail|ಇಸ್ಮಾಯಿಲ್].

Taxonomy upgrade extras: 

ಸಿ.ಡಿ - ಕಾಂಪ್ಯಾಕ್ಟ್ ಡಿಸ್ಕ್ (Compact Disk)

ಚಿತ್ರ ಕೃಪೆ: [:http://commons.wikimedia.org/wiki/User:Kulshrax|ಅರುಣ ಕುಲಶ್ರೇಷ್ಟ].

ಲೈಸೆನ್ಸ್ ಮಾಹಿತಿ: [:http://creativecommons.org/licenses/by-sa/2.5/|ಕ್ರಿಯೇಟಿವ್ ಕಾಮನ್ಸ್]

Taxonomy upgrade extras: 

ಕವಿಸಮಯ

ಫೋಟೋ ಕೃಪೆ - ಪ್ರಭು - floatingcreeper@gmail.com

ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...

Taxonomy upgrade extras: 

ಪ್ರವಾಹ

ಪ್ರವಾಹ ಹಿ೦ದೆ ಎ೦ದು ಆಗದಷ್ಟು ಆಗಿದೆಯ೦ತೆ.
ಪ್ರಳಯದ ಸೂಚನೆಗಳಿದೇನು ??
ಅ೦ತಕನೂ ತಾಳ್ಮೆ ಗೆಟ್ಟಿರುವನೇ ?
ರುದ್ರನ ನೊಸಲಾಗ್ನಿ ನೀರಾಯಿತೇ ??
ಗ್ಲೋಬಲ್ ವಾರ್ಮಿ೦ಗ್ ನಿ೦ದ ಇನ್ನು ಏನೇನು ಅನಾಹುತ ಕಾದಿದೆಯೋ?

Taxonomy upgrade extras: 

ಮತ್ತೊಂದು ಗಿಡ: ಯಾವುದು ಹೇಳಬಲ್ಲಿರಾ?

ಇತ್ತೀಚೆಗಂತೂ ಈ ಗಿಡದ ಕಾರುಬಾರು ಎಲ್ಲೆಲ್ಲೂ. ಶಾಂಪೂವಿನಿಂದ ಹಿಡಿದು ಆಫ್ಟರ್ ಶೇವ್ - ಹಲವು ಜಾಹಿರಾತುಗಳಲ್ಲಿ ಈ ಗಿಡದ extract ಇದೆ ಎಂದು ಹೇಳಿಕೊಳ್ಳುತ್ತಿರುತ್ತಾರೆ.

Taxonomy upgrade extras: 

ದೊಡ್ಡ ಪತ್ರೆ ಅಥವ ದೊಡ್ಪತ್ರೆ (Coleus aromaticus)

ದೊಡ್ಡ ಪತ್ರೆ ಅಥವ Coleus aromaticus.

ಹೊರಗಿನ ಸಂಪರ್ಕ: [:http://saffrontrail.blogspot.com/2006/08/coleus-aromaticus-coleus-fritte...|ಡಾಕ್ಟರರೊಬ್ಬರ ಲೇಖನ ಇದರ ಬಗ್ಗೆ]

Taxonomy upgrade extras: 

ಯಾವುದೀ ಎಲೆ? ಹೇಳಿ ನೋಡೋಣ...

ಮಲೆನಾಡಿನಲ್ಲಿ ಎಲ್ಲಂದರಲ್ಲಿ ಬೆಳೆದಿರುತ್ತದೆ ಇದು... ಗಿಡಗಳ ಬುಡದಲ್ಲಿ ಉದ್ದಕ್ಕೂ ಬೆಳೆದುಕೊಂಡು ಹೋಗುವ ಈ ಗಿಡದ ವೈಜ್ಞಾನಿಕ ನಾಮಧೇಯ - Bacopa monnieri. Centella Asiatica.

ಕನ್ನಡದ ಹೆಸರು ಹೇಳಬೇಕು!

update:Aug 1, 2007
ಉತ್ತರ ಕೆಳಗೆ ಕಾಮೆಂಟಿನಲ್ಲಿದೆ. :-)

Taxonomy upgrade extras: 

ಲಂಕೇಶರು

ಎಸ್.ದಿವಾಕರ್‍ ಸಂಪಾದಕತ್ವದ "ಶತಮಾನದ ಸಣ್ಣ ಕತೆಗಳು" ಬಿಡುಗಡೆಯ ಹೊತ್ತು ತೆಗೆದುಕೊಂಡ ಲಂಕೇಶರ ಚಿತ್ರ

Taxonomy upgrade extras: 

ಇದು ವಟವೃ‍ಕ್ಷವಲ್ಲ !

ವಟವೃಕ್ಷ- ನಮ್ಮ ದೇಶದ ಎಲ್ಲರಿಗೂ ಪ್ರಿಯವಾದ ಮರ. ಆದರೆ ತೋರಿಸಿರುವ ಚಿತ್ರ, ಒಂದು ಬೃಹತ್ ವೃಕ್ಷದ್ದು. ವಟವೃಕ್ಷವಲ್ಲ.

Taxonomy upgrade extras: 

ಕಾಡಿನಲ್ಲಿ ಸೂರ್ಯನ ಕಿರಣಗಳು ತಯಾರಿಸಿದ ಒಂದು ಭವ್ಯ ಚಿತ್ರವಿನ್ಯಾಸ !

ಪ್ರಕೃತಿದೇವಿ ತನ್ನ ಮೈಯೊಳಗೆ ಅದೆಷ್ಟು ವೈವಿಧ್ಯತೆಯನ್ನು ಇಟ್ಟುಕೊಂಡಿದ್ದಾಳೆಯೋ ?

ಕಾಡೂ ಅದೇ, ಮರಗಳೂ ಅವೆ, ನೆಲವೂ ಅದೆ. ಇದೆಲ್ಲಕ್ಕಿಂತ ಮಿಲಾದದ್ದು ಇವೆಲ್ಲವನ್ನೂ ಲಕ್ಷಣವಾಗಿ ಕಲಸಿತಯಾರಿಸಿದ, ಈ ಸುಂದರ ಅಧ್ಬುತ ಚಿತ್ರ ವಿನ್ಯಾಸ !

Taxonomy upgrade extras: 

ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

ಈಗಿನ ರಾಷ್ಟ್ರಪತಿ, ಡಾ. ಕಲಾಂ ಮತ್ತೆ ಮರುಚುನಾವಣೆಗೆ ತಮ್ಮ ಒಪ್ಪಿಗೆ ನೀಡುವರೆ ? ಇದು ಇನ್ನೂ ಬಗೆಹರಿಯದ ಪ್ರಶ್ನೆ. ಈಗಾಗಲೇ ಹೊಸ ಅಭ್ಯರ್ಥಿಗಳು ಬರುತ್ತಲೇ ಇದ್ದಾರೆ. ಎಲ್ಲಾ ಪಕ್ಷೀಯರಿಗು ತಮ್ಮ ಅಭ್ಯರ್ಥಿಯೇ ಬರುವನೆಂಬ ನಂಬಿಕೆ. ನಾವು ಕಾದು ನೋಡಬೇಕಾಗಿದೆ.

ಆರ್. ಕೆ. ಲಕ್ಷ್ಮಣ್, ಕಲಾಂ ರವರನ್ನು ಕಂಡ ಬಗೆ ಹೀಗಿದೆ !

-ಟೈಮ್ಸ್ ಆಫ್ ಇಂಡಿಯ ಕೃಪೆಯಿಂದ.

Taxonomy upgrade extras: 

ಮರಳು ದಿಣ್ಣೆ !

ಬೀಚಿನಲ್ಲಿ [ಸಮುದ್ರದ ದಂಡೆಗೆ] ಹೋದಾಗ ನಾವೆಲ್ಲ ಮಾಡಿದ್ದು ಮರಳು ಗುಡ್ಡೆ. ಇಂದಿನ ಮಕ್ಕಳಿಗೂ ಅದು ಇಷ್ಟ !

Taxonomy upgrade extras: 

ಕಿವಿಯಲ್ಲಿನ ಕೊಗ್ಗೆ ತೆಗೆಯುವ ದೃಷ್ಯ !

ಬೊಂಬಾಯಿನಲ್ಲಿ, ಕಿವಿಯಲ್ಲಿರುವ ಕೊಳೆ ತೆಗೆಯಲು, ಕೆಲವು ಜನ ರೋಡುಗಳಲ್ಲಿ ಸುತ್ತುತ್ತಿರುತ್ತಾರೆ. ನಿಮ್ಮ ಹತ್ತಿರ ಬಂದು ವಿಚಾರಿಸುತ್ತಾರೆ. " ಕೊಗ್ಗೆ ತೆಗೆಸುತ್ತೀರ, ಹೇಗೆ, " ಎಂದು.

ಈಗ ಅದು ಸ್ವಲ್ಪ ಕಡಿಮೆಯಾಗುತ್ತಿದೆ. ಕೆಲವು ಕಡೆ, Fort Area ದಲ್ಲಿ ಇನ್ನೂ ನೋಡಬಹುದು.

Taxonomy upgrade extras: 

ಇದು ಯಾವ ಚಿತ್ರಕಾರ ರಚಿಸಿದ್ದು ?

ರೇಡಿಯೋದಲ್ಲಿ, "ಎಹ್ ಕೌನ್ ಚಿತ್ರಕಾರ ಹೈ." " ಎಹ್ ಕೌನ್ ಚಿತ್ರಕಾರ ಹೈ. " ಎಂಬ ಹಾಡು ಅಲೆ- ಅಲೆ,

ಯಾಗಿ ಬರುತ್ತಿತ್ತು. ಆ ಸಂದರ್ಭದಲ್ಲಿಯೇ ನಾನು ನೋಡುತ್ತಿದ್ದ ನಮ್ಮ ಮನೆಯ "ಫೋಟೋ ಆಲ್ಬಮ್ "

ಚಿತ್ರವನ್ನೇ ನೊಡಿ, ರೇಡಿಯೋ ಸಂಗೀತಕಾರ, ಆ ಹಾಡು ಹಾಡುತ್ತಿದ್ದಾನೆಯೇ ?

ಅನ್ನುವ ಭ್ರಮೆ ಆಯಿತು !

ಹೌದು. ಇದು ಯಾವ ಚಿತ್ರಕಾರ ರಚಿಸಿದ್ದು ...?

Taxonomy upgrade extras: 

ಕೊಕ್ಕರೆ.

ಕೊಕ್ಕರೆ, ಅಂದರೆ (ಒಂಟಿಕಾಲಿನದು) ಎಂದು ಬ್ರಾಕೆಟ್ ನಲ್ಲಿ ಬರೆಯಬೇಕಂತೆ !

ಇದು ’ ಪೆಲಿಕನ್ ” ಇರಲಿಕ್ಕೂ ಸಾಕು. ಆದರೆ ಪೆಲಿಕನ್ ಕಾಲುಗಳು ಬಾತ್ ಕೋಳಿಯತರಹ ಇರುತ್ತೆ. ಅಲ್ವೆ ?

ಇದು. ಕೊಕ್ಕರೆಯೇ ಅಂತಕಾಣ್ಸತ್ತೆ. ವಿಶೇಷತರಹದ್ದು !

-ನಮ್ಮ ಮನೆಯ ಆಲ್ಬಮ್

Taxonomy upgrade extras: 

ಗೇ ಗೇ ಮಂಗಣ್ಣ !

’ಗೇ” ’ಗೇ’ ಮಂಗಣ್ಣ.

ನಾವ್ ಚಿಕ್ಕೊರ್ ಆಗಿದ್ದಾಗೂ, ಯಾವಾಗ್ ಮಂಗಣ್ಣನ್ ನೋಡ್ದಾಗಲೆಲ್ಲಾ ಇದನ್ನೆ ಹೇಳ್ತಿದ್ವಿ. ಇದು ಸರಿಯಲ್ಲ.

ಬಹುಶಃ, ಅದು ಘೇ -ಘೇ ಮಂಗಣ್ಣ ಇರಬೇಕು.

ಮರಾಠಿಯಲ್ಲಿ " ಘೇ " ಎಂದರೆ ” ತೊಗೋ ’ ಎಂದರ್ಥ.

ಅಲ್ವಾ ?

-ಮನೆ ಆಲ್ಬಮ್ ನಿಂದ.

Taxonomy upgrade extras: 

ಹೂದೋಟ !

ಇದರ ವಿಶೇಷತೆಯೆಂದರೆ, ಹಾಂಕಾಂಗಿಗೆ ಹೋದಾಗ ಅಲ್ಲಿ ಕ್ಲಿಕ್ಕಿಸಿದ್ದು. ಇಂತಹ ತೋಟ ನಮ್ಮ ಬೆಂಗಳೂರಿನಲ್ಲಿ ಸಿಗತ್ತೆ. ಬಹುಶಃ ಇದಕ್ಕಿಂತ ಬೊಂಬಾಟಾಗಿರುವುದು ಕೂಡ !

ಏನಂತೀರಿ ?

-ಆಲ್ಬಮ್

Taxonomy upgrade extras: 

ಹಸುವಿನ ಕರು.

ಕೆಲವರಿಗೆ ಹಸು, ಕರು, ಎತ್ತು, ಎಮ್ಮೆ, ಮೇಕೆ, ಬೆಕ್ಕು, ನಾಯಿ, ಕುರಿ, ಮುಂತಾದ ಪ್ರಾಣಿಗಳನ್ನು ಮುಟ್ಟಿ ಆನಂದಿಸುವುದು ಇಷ್ಟ.

ಅಷ್ಟೇಕೆ, ಪಾರಿವಾಳ, ಗಿಣಿ, ಇನ್ನೂ ಹಲವು ಪಕ್ಷಿಗಳು ಅವರಿಗೆ ಬಹಳ ಇಷ್ಟ.

-ಮನೆ ಆಲ್ಬಮ್ ನಿಂದ

Taxonomy upgrade extras: 

ಇವರಂತೂ ಖಂಡಿತ ಮಹಾತ್ಮ ಗಾಂಧಿಯವರಲ್ಲ !

ಮಹಾತ್ಮ ಗಾಂಧಿಯವರಂತೆ ವೇಷಧರಿಸಿ, ದಿನವಿಡೀ ಕಾಸಿಗಾಗಿ ಮಟ-ಮಟ ಮಧ್ಯಾನ್ಹವೆನ್ನದೆ ಬಿಸಿಲಿನಲ್ಲಿ ನಿಂತು ಬೇಡುವ ಭಿಕ್ಷಾರ್ಥಿ.

ಮೈಗೆಲ್ಲಾ ಪೇಂಟ್ !

ಉದರನಿಮಿತ್ತಂ ಬಹುಕೃತ ವೇಷಂ ! ಅವರಿಗೆ ಬಂದ Idea ಚೆನ್ನಾಗಿದೆಯಲ್ಲ. ಗಾಂಧಿಯವರ ರೂಪದರ್ಶಿಗೆ ಇಂಥಾ ಅವಸ್ಥೆ ಬರಬಾರದು.

- ಆಲ್ಬಂ ನಿಂದ.

Taxonomy upgrade extras: 

ಜೋಗಿಗೆ ಮನೆಯೆಲ್ಲಿ ಮಠವೆಲ್ಲಿ ; ಕೂತಲ್ಲೇ ಶಿವನ ಧ್ಯಾನ !

ಕರ್ನಾಟಕದಲ್ಲಿ ಜೋಗಿಗಳು ರಸ್ತೆಯ ಬದಿಯಲ್ಲಿ ಕುಳಿತು ಶಿವನ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ. ಅವರುಗಳು ಸಿಕ್ಕಷ್ಟರಲ್ಲೇ ತೃಪ್ತಿಹೊಂದುತ್ತಿದ್ದರು. ಬಿಕ್ಷೆ ಬೇಡಿ ತಮ್ಮ ಜೀವನ ವಿರ್ವಹಣೆ ಮಾಡುತ್ತಿದ್ದ ಇವರುಗಳ ಸಂಖ್ಯೆ ಇಳಿದಿದೆ.
ಅಲ್ಪ ತೃಪ್ತರು ಇವರು. ಕೈಯಲ್ಲಿರುವ ಕಿಂದರಿಯೇ ಇವರ ಆಸ್ತಿ.

-ನಮ್ಮ ಮನೆಯ ಫೋಟೋ ಆಲ್ಬಮ್ ನಿಂದ.

Taxonomy upgrade extras: 

ಶಿವರಾಮ ಕಾರಂತರು

ಈ ತೈಲವರ್ಣಚಿತ್ರ ಉದಯ್ ಜಾದೂಗಾರ್ ತೆಗೆದ ಒಂದು ಛಾಯಾಚಿತ್ರದ ಕಾಪಿ.
ಇದನ್ನು ಹಿಡಿದುಕೊಂಡು ’ಸುಹಾಸ’ ಕ್ಕೆ ೯೨ ರಲ್ಲಿ ಹೋಗಿದ್ದೆ. ಅಂದು ಕಾರಂತರ ಹುಟ್ಟುಹಬ್ಬದ ದಿನ. ಸಾಲಿಗ್ರಾಮದ ನನ್ನ ಒಬ್ಬ ಗೆಳೆಯ ಡಾ.ಹರಿಪ್ರಸಾದ್ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು.

Taxonomy upgrade extras: 

ಇದಾವ ಹೂವು?

ಸಂಪದಿಗರಿಗೊಂದು ಜಿ.ಕೆ. ಪ್ರಶ್ನೆ.
ಇದೊಂದು ತುಂಬ ಸಾಮಾನ್ಯವಾಗಿ ಉಪಯೋಗಿಸುವ ತರಕಾರಿಯೊಂದರ ಹೂವು.
ಆ ತರಕಾರಿ ಯಾವುದು?

Taxonomy upgrade extras: 

ಏ.... ಔದು ಕಣಣ್ಣೋ, ಅಣ್ಣಾವ್ರು , ಕನಸ್ನಾಗೆ ಬಂದಿದ್ರು .......ನಿಜ್ವಾಗ್ಲು ... !

ರಾಜ್ ಕುಮಾರ್ ಅಂದ್ರೆ, ಅದೇನೊ ಮೈಯಲ್ಲಾ ’ಜುಂ” ಅನ್ನುವಷ್ಟು ನಮ್ಮ ಮೇಲೆ ಮೋಡಿ ಮಾಡಿಹೋಗಿಬಿಟ್ಟಿದ್ದಾರೆ. ನಿನ್ನೆ ನಮ್ಮ ಪಕ್ಕದ ಮನೆಯ ಮನೋಜ್, " ಅಂಕಲ್ , ನಿನ್ನೆ ನನಗೆ ಕನಸ್ ನಲ್ಲಿ ಆಣ್ಣಾವ್ರು ಬಂದಿದ್ರು " ಅಂದಾಗ ನನಗೇನು ಅದು ಹೊಸದೆಂದು ಅನ್ನಿಸಲಿಲ್ಲ. ಅವರ ಕೆಲಸಗಳು ಕರ್ನಾಟಕದ ಜನತೆಯ ಮೇಲೆ ಮಾಡಿರುವ ಪ್ರಭಾವ ಅಳಿಸಲಾಗದ್ದು.

Taxonomy upgrade extras: 

ಕುವೆಂಪು

ಇದು ನಾನು 1991 ರಲ್ಲಿ ಬರೆದ ಎಣ್ಣೆಬಣ್ಣಚಿತ್ರ. (ಅಸಲೀ photography ಯಾರದ್ದೆಂದು ಗೊತ್ತಿಲ್ಲ. ಗೊತ್ತಿದ್ದರೆ ದಯವಿಟ್ಟು ತಿಳಿಸಿ.ಇದು ಆ ಛಾಯಾಚಿತ್ರದ ಕಾಪಿ; ಅಷ್ಟೇ.)

Taxonomy upgrade extras: 

ನಿರೀಕ್ಷೆ

ಇದು ನಾನು ಬರೆದ ಇನ್ನೊಂದು ಎಣ್ಣೆ ಬಣ್ಣಚಿತ್ರ. (1999).
ಎಲ್ಲೋ ಸಿಕ್ಕಿದ ಒಂದು ಕಪ್ಪು-ಬಿಳುಪು ಛಾಯಾಚಿತ್ರವನ್ನು ಆಧರಿಸಿ ಬರೆದದ್ದು.

Taxonomy upgrade extras: 

ನಾನು ತನ್ಮಯಾ....!

ಇದು ನನ್ನ ಮಗಳು `ತನ್ಮಯಿ'ಯ ಫೋಟೋ (ತನ್ಮಯಿ ಇನ್ನೂ ಈ ಪ್ರಪಂಚದಲ್ಲಿ ಕಣ್ಬಿಡುವ ಮುನ್ನ `ನನ್ನ ಮಗುವಿಗೊಂದು ಹೆಸರು ಕೊಡಿ' ಅಂತ ನಾನು `ಸಂಪದ'ವಾಸಿಗಳ ಬಳಿ ಕೇಳಿಕೊಂಡಿದ್ದೆ. ನೀವೆಲ್ಲ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದಿರಿ. ನೆನಪಿರಬೇಕಲ್ಲ?).

Taxonomy upgrade extras: 

ಕುಂದಾಪುರದ ಕಡಲು

ನಾನು ಈ ತೈಲ ವರ್ಣಚಿತ್ರ ಬರೆದು ಸುಮಾರು ಹತ್ತು ವರುಷಗಳೇ ಆಗಿವೆ. ಆಗ ನಾನು ಉಡುಪಿ ಆಯುರ್ವೇದ ಕಾಲೇಜಿನಲ್ಲಿ ಬಹುಶಃ ಕಿರುವೈದ್ಯ.

Taxonomy upgrade extras: 

ಗುರುವಾಯೂರಿನಲ್ಲಿ ದೇವಸ್ಥಾನದ ವೇದಿಕೆಯಮೇಲೆ, " ನಾರಾಯಣೀಯಂ " ಓದುತ್ತಿರುವ ಸ್ತ್ರೀ ಭಕ್ತ ವೃಂದ !

ಗುರುವಾಯೂರ್ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ಕಲಾವಿದರ ವೇದಿಕೆಯ ಮೇಲೆ " ನಾರಾಯಣೀಯಂ " ಪಾರಾಯಣ ಮಾಡುತ್ತಿರುವ, ಸ್ತ್ರೀ ಭಕ್ತ ವೃಂದ ! ಈ ಸ್ತೊಸ್ತ್ರಗಳ ಪಾರಾಯಣ ಶುರುವಾಗಿದ್ದು, ಬೆಳಿಗ್ಯೆ ೧೧ ಗಂಟೆಗೆ, ಮುಗಿಯುವ ಹೊತ್ತಿಗೆ ಮಧ್ಯಾನ್ಹ ೩-೩೦ ಆಗಿತ್ತು. ಗುರುವಾಯಿರಪ್ಪ ದೇವರ ಸನ್ನಿಧಿಯಲ್ಲಿ ಕಳೆದ ನಿಮಿಷಗಳು ಅಮೂಲ್ಯ !

ಗುರುವಾಯಿರಪ್ಪ ನಮೋ ನಮಃ

Taxonomy upgrade extras: 

ಶೃಂಗೇರಿಯ ನದಿಯ ಸಮೀಪದಲ್ಲಿ ಮಠದ ಆನೆಗಳು, ಮಾವುತರ ಜೊತೆಗೆ ಗಾಳಿ ಸಂಚಾರದಲ್ಲಿವೆ.

ಶೃಂಗೇರಿ ಮಠದ ಆನೆಗಳು ಮಾವುತರ ಜೊತೆಯಲ್ಲಿ ನದಿಯ ಬಳಿ ಗಾಳಿ-ವಿಹಾರದಲ್ಲಿವೆ !

-ನಮ್ಮ ಮನೆಯ ಖಾಸಗಿ ಫೋಟೋ ಆಲ್ಬಮ್ ನಿಂದ.

Taxonomy upgrade extras: 

ವಿಶ್ವದ ಅತ್ಯಂತ ಉತ್ಕೃಷ್ಟವಾದ ಹತ್ತಿ- ಸೀ ಐಲೆಂಡ್ ಹತ್ತಿ ; ವಿಶ್ವದ ಹತ್ತಿ ಗುಣವನ್ನು ಸುಧಾರಿಸುವ ದಿಕ್ಕಿನಲ್ಲಿ ಇದರದು ಅಮೂಲ್ಯ ಕೊಡುಗೆ

"ಸೀ ಐಲೆಂಡ್ ಹತ್ತಿ " ತಾಯಿಯಂತೆ ಪಾತ್ರವಹಿಸಿದ್ದು ವಿಶ್ವದ ಸೂಕ್ಷ್ಮಹತ್ತಿಗಳಿಗೆ ದಾರಿಯಾಗಿದೆ !

ಹತ್ತಿಗಳ ಬಗ್ಗೆ ಈ ಒಂದು ಕಿರುಲೇಖನ ಸಂಪದಿಗರಿಗೆ ಇಷ್ಟವಾಗಬಹುದು. ವಿಶ್ವದ ಹತ್ತಿಗಳು ಕೇವಲ ೪ ಎಂದು ಪರಿಗಣಿಸಲಾಗಿದೆ. ಒಟ್ಟು ೩೨ ಹತ್ತಿ ಜಾತಿಗಳಿದ್ದರೂ ಫೈಬರ್ ಹೊಂದಿದ ಹತ್ತಿಗಳು ನಾಲ್ಕು ಮಾತ್ರ !

Taxonomy upgrade extras: 

ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ

ಗಾಂಧಿಯವರು ಇಂಗ್ಲೆಂಡ್ ಭೇಟಿ ಮಾಡಿದ ಸಮಯ :

ಮ್ಯಾಂಚೆಸ್ಟರ್ ನಲ್ಲಿ ಮಹಾತ್ಮ ಗಾಂಧಿಯವರನ್ನು ಅಲ್ಲಿನ ಹತ್ತಿ-ಗಿರಣಿ ಕೆಲಸಗಾರರು ಸಂಧಿಸಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡರು. ಬ್ಯಾರಿಸ್ಟರ್ ಗಾಂಧಿಯವರು, ಆಗಲೇ ಅಹ್ಮದಾಬಾದಿನ ಹತ್ತಿ- ಗಿರಣಿ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡಿ ತಮ್ಮ ಸಹಾಯಹಸ್ತವನ್ನು ನೀಡಿದ್ದರು.

Taxonomy upgrade extras: 

ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !

[ಜುಲೈ, ೩೧ ರ ೧೯೦೨- ಡಿಸೆಂಬರ್, ೨೬, ೧೯೮೯]

" ಶಂಕರ್ಸ್ ವೀಕ್ಲಿ "ಯ ಬಗ್ಗೆ ಎಷ್ಟುಜನ ಕೇಳಿದ್ದೀರಿ ? ಈ ವ್ಯಂಗ್ಯ-ಚಿತ್ರ ಸಾಪ್ತಾಹಿಕವನ್ನು ದೆಹಲಿಯಲ್ಲಿ ನಡೆಸಿಕೊಂಡು ಬಂದ ಶ್ರೇಯಸ್ಸು, ಶಂಕರ್ ರವರದು. ಅವರು ನೆಹರೂರವರಿಗೆ ಪ್ರಿಯರಾದವರು. ಆದರೆ ಅವರ ತಪ್ಪುಗಳನ್ನು ಮುಲಾಜಿಲ್ಲದೆ, ತಮ್ಮ ಚಿತ್ರಗಳಲ್ಲಿ ವರದಿ ಮಾಡುತ್ತಿದ್ದರು.

Taxonomy upgrade extras: 

ನವೀನ ಪದ್ಧತಿಯಲ್ಲಿ, ಯಂತ್ರದಲ್ಲಿ ನೂಲು ತೆಗೆಯುವ- ಹತ್ತಿ ನೂಲು ಉತ್ಪಾದಿಸುವ ಯಂತ್ರ.

ಹೊಸ ಹೊಸ ಪದ್ಧತಿಗಳು, ಬಳಕೆಗೆ ಬಂದು, ಹತ್ತಿದಾರ ತಯಾರಿಕೆಯಲ್ಲಿ ಉತ್ಪಾದನೆ, ಮತ್ತು ಗುಣದಲ್ಲಿ ಅತ್ಯಂತ ಗಮನಾರ್ಹ ಅಭಿವೃದ್ಧಿಗಳನ್ನು ತಂದಿವೆ. ಹತ್ತಿ- ದಾರ ತಯಾರಿಸುವ ಯಂತ್ರಗಳನ್ನು ಜರ್ಮನಿ, ಸ್ವಿಸ್, ಇಟಲಿ, ರಷ್ಯ, ಜಪಾನ್, ಅಮೆರಿಕದಂತಹ ದೇಶಗಳು ತಯಾರಿಸಿ ನಮಗೆ ಮಾರುತ್ತಿದ್ದಾರೆ.

Taxonomy upgrade extras: 

ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !

ಹತ್ತಿ ಬೆಳೆ, ನಮ್ಮ ದೇಶದ ಅತಿಪ್ರಮುಖ ಬೆಳೆಗಳಲ್ಲೊಂದು. ಹತ್ತಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಬೃಹತ್ ಹತ್ತಿ ವಸ್ತ್ರೋದ್ಯಮದ ಹಲವು ಶಾಖೆಗಳಲ್ಲಿ, ಮತ್ತೆ, ಹತ್ತಿ ಸಂಶೋಧನೆ, ಹತ್ತಿ ಶಿಕ್ಷಣ ಸಂಸ್ಥೆಗಳು, ಮುಂತಾದವುಗಳನ್ನು ಗಮನಕ್ಕೆ ತೆಗೆದುಕೊಂಡರೆ, ಸುಮಾರು ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರ ಸಂಖ್ಯೆ ಎಷ್ಟು ಅಂತೀರ ?

Taxonomy upgrade extras: 

ಹತ್ತಿ ಬೀಜವನ್ನು ಬಿತ್ತಿದ ಮೇಲೆ ವಾರಗಳಲ್ಲಿ ಹತ್ತಿ ಹೂವು ಕಾಟಿಸಿಕೊಳ್ಳುತ್ತದೆ ನಂತರ ಕಾಯಿ ; ಮತ್ತೆ ಅದು ಒಣಗಿ ಬಿರಿದು ಶುಭ್ರ ಹತ್ತಿ, ತಯಾರು !

ಹತ್ತಿ ಬೀಜವನ್ನು ಬಿತ್ತಿ, ೧೮೦ ದಿನಗಳಲ್ಲಿ ಅದು ಹತ್ತಿ ಯನ್ನು ಬಿಡುತ್ತಿತ್ತು. ಮತ್ತು ಕಟಾವ್ ಮಾಡಲಾಗುತ್ತಿತ್ತು. ಆದರೆ ವಿಶ್ವದ ಎಲ್ಲಾ ಭಾಗಗಳಲ್ಲೂ ನಡೆಸಿದ ತೀವ್ರ ಸಂಶೋಧನೆಗಳು, ಮತ್ತು ವೈಜ್ಞಾನಿಕ ಪದ್ಧತಿಗಳಿಂದಾಗಿ, ಅದು ಸುಮಾರು ೧೩೦ ದಿನಗಳಲ್ಲೇ ಕೊಯ್ಲಿಗೆ ತಯಾರಾಗುತ್ತದೆ.

Taxonomy upgrade extras: 

ಚಿತ್ರದುರ್ಗದ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ !

’ಪರಿಸರ ಪ್ರಜ್ಞೆ ” ಜನರಿಗೆ ಬಂದಿಲ್ಲ, ಎನ್ನುವ ಕಲ್ಪನೆ ಈಗ ಹೋಗಿದೆ. ಚಿತ್ರದುರ್ಗದ ಊರಿನ ಮಧ್ಯೆ ಇರುವ ಹೂಳುಬಿದ್ದಿದ್ದ ’ಸಂತೆಹೊಂಡ ’ವನ್ನು ಊರಿನ ಪ್ರಮುಖರೆಲ್ಲಾ ಮುತುವರ್ಜಿವಹಿಸಿ ಎಲ್ಲರ ಸಹಯೋಗದಿಂದ ಕೊಳೆತೆಗೆಯುವ, ಹೂಳುತೆಗೆಯುವ ಕೆಲಸವನ್ನು ಆರಂಭಿಸಿ, ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

Taxonomy upgrade extras: 

ಮುಂಬೈನ ಪಂ. ಟೀ. ಎನ್. ಅಶೋಕ್, ಮತ್ತು ಪಂ. ವಝೆ ( ಮುಂಬೈ ಸೋದರರು) ಯವರ ಜುಗಲ್ ಬಂದೀ ಸಂಗೀತ ಕಾರ್ಯಕ್ರಮ

"ಮುಂಬೈ ಸೋದರರೆಂದು" ಪ್ರಸಿದ್ಧರಾದ ಪಂಡಿತ್. ಅಶೋಕ್ ಮತ್ತು ಪಂಡಿತ್. ಚಂದ್ರಶೇಖರ ವಝೆಯವರ, ’ಜುಗಲ್ ಬಂದೀ ಸಂಗೀತ ಕಾರ್ಯಕ್ರಮ’ ೨೦೦೭ ರ ಜನವರಿ, ೫ ರಂದು, ಮುಂಬೈನ ಸಹ್ಯಾದ್ರಿಯ ಡೀ. ಡಿ ನಲ್ಲಿ ರಾತ್ರಿ ೧೧ ಘಂಟೆಯ ಕಾರ್ಯಕ್ರಮದಲ್ಲಿ ಮೂಡಿಬಂದಿತ್ತು.

Taxonomy upgrade extras: 

ರವೇಸಿಸ್ ಮೂಲೆ

ಸಿಡ್ನಿಯ ಹೆಸರಾಂತ ಬೋಂಡೈ ಬೀಚಿನ (bondi beach) ಎದುರಿರುವ ರವೇಸಿಸ್ ಮೂಲೆ. ಸುಮಾರು ತೊಂಬತ್ತಕ್ಕೂ ಮಿಕ್ಕ ಶರತ್ಕಾಲದಂತೇ ಈ ಶರತ್ಕಾಲವೂ, ಸಂಜೆ ಸಮುದ್ರದ ಮೇಲಿಂದ ಬೀಸುತ್ತಿದ್ದ ತಂಪಾದ ಗಾಳಿಗೆ ಮೈಯೊಡ್ಡಿ ನಿಂತಿರುವುದು.

Taxonomy upgrade extras: 

ಮಿನಾಲ್ ಪಾಂಚಾಲ್ ಒಬ್ಬ ಮುಂಬೈ ಪೋರಿ ; ಅಮೆರಿಕೆಯಲ್ಲಿ ನಡೆದ ಅನಿಷ್ಟ ಗುಂಡಿನೇಟಿನಲ್ಲಿ ಮೃತಳಾಗಿದ್ದಾಳೆ.

ಮುಂಬೈಕರರಿಗೆಲ್ಲಾ, ಮತ್ತು ಭಾರದವಾಸಿಗಳಿಗೆ ಬೇಸರ ತರುವ ಸಂಗತಿಯೆಂದರೆ, ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಬೆಳಿಗ್ಯೆ ೭-೩೦ ರ ಹೊತ್ತಿನಲ್ಲೇ ಬರ್ಬರ ಹತ್ಯೆ ನಡೆದು ೩೦ ಜನ ಮೃತರಾಗಿದ್ದದ್ದು ನೆನ್ನೆ- ಮೊನ್ನೆಯ ಸುದ್ದಿ. ಅದರಲ್ಲಿ ಚೆನ್ನೈನ ಪ್ರೊಫೆಸರ್ ಡಾ.

Taxonomy upgrade extras: 

ಡಾ. ಜೀ. ವಿ. ಲೋಗನಾಥನ್ ಮತ್ತು ಮಿನಾಲ್ ಪಾಂಚಾಲ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !

ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಪ್ರೊ. ಲೋಗನಾಥನ್ ಅಲ್ಲದೆ, ಒಟ್ಟು ೩೦ ಜನರ ಬರ್ಬರ ಹತ್ಯೆ !

Taxonomy upgrade extras: 

ಮಂತ್ರಾಲಯಂ ಹತ್ತಿರ, ಬೃಹತ್ ಕಲ್ಲಿನ ಬಂಡೆಗಳು ಒಂದರ ಮೇಲೊಂದು.- ಒಂದು ಪುಷ್ಪಕ ವಿಮಾನ, ಇನ್ನೊಂದು ದಿಂಬು. ಉಳಿದ ನಾಲ್ಕು...

* ಮಂತ್ರಾಲಯಂ ರೋಡಿನ ರಾಘವೇಂದ್ರಸ್ವಾಮಿಗಳ ಮಠವನ್ನು ಸಂದರ್ಶಿಸಿ, ಸೇವೆ ಮಾಡಿದವರು ಮೇಲಿನ ಆರು ಭಾರಿ ಕಲ್ಲುಗಳ ಬಗ್ಗೆ ಖಂಡಿತ ತಿಳಿದಿರುತ್ತಾರೆ. ಹತ್ತಿರದಲ್ಲೇ, ಶ್ರೀ ಆಂಜನೇಯ ಸ್ವಾಮಿ ದೇಗುಲವಿದೆ. ಅಲ್ಲಿ ರಾಘವೇಂದ್ರರು ತಮ್ಮ ಯತಿಗಳಾಗುವ ಪೂರ್ವಾಶ್ರಮದಲ್ಲಿ, ಅಲ್ಲಿಗೆ ಬಂದು ತಪಸ್ಸನ್ನು ಮಾಡಿದ್ದರಂತೆ. ಹತ್ತಿರದಲ್ಲೇ ೬ ಬೃಹತ್ ಬಂಡೆಗಳು ಒಂದರ ಮೇಲೊಂದು ಪೇರಿಸಿಟ್ಟರೀತಿಯಲ್ಲಿ ಹಲವಾರು ವರ್ಷಗಳಿಂದ ನಿಂತಿವೆ. ಮಳೆ- ಗಾಳಿ ಅವಕ್ಕೆ ಲೆಕ್ಕಕ್ಕಿಲ್ಲ. ಒಂದು ಶ್ರೀರಾಮನಿಗೆ ತಲೆದಿಂಬಂತೆ . ಇನ್ನೊಂದು ಪುಷ್ಪಕವಿಮಾನ,... ಉಳಿದ ೪ ಬಂಡೆಗಳು ಬೇರೆ ಬೇರೆ ಕೆಲಸಗಳಲ್ಲಿ ಉಪಯೋಗಕ್ಕೆ ಬರುವುದಂತೆ. ಅದರ ಬಗ್ಗೆ ಅನೇಕ ಜನ ಅನೇಕ ರೀತಿಯಲ್ಲಿ ಅರ್ಥೈಸಿದ್ದಾರೆ.

Taxonomy upgrade extras: 

ನಮ್ಮ ಕರ್ನಾಟಕದ ಹೆಣ್ಣುಮಕ್ಕಳು ಪ್ರದರ್ಶಿಸುವ ರಂಗೋಲಿ ಕಲೆಯ ಸಿರಿವಂತಿಕೆ.

ಹೆಣ್ಣು ಮಕ್ಕಳು ರಂಗೋಲಿಯನ್ನು ತಮ್ಮ ಮನೆಗಳ ಮುಂದೆ ಹಾಕಿ ಮನೆಗೆ ಒಂದು ಸಂದರ್ಯದ "ಕ್ಯಾನ್ವಾಸ" ನ್ನೆ ನಿರ್ಮಿಸುತ್ತಾರೆ.

Taxonomy upgrade extras: 

ಡಾ. ರಾಜ್ , ದಿವಂಗತರಾಗಿ ಒಂದು ವರ್ಷವಾಗಿದೆ.

ಡಾ. ರಾ‍ಜ್ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವರ್ಷವಾಯಿತು.

ಎಲ್ಲಾ ಒಂದು ಕನಸಿನಂತೆ ನಡೆಯಿತು. ಅವರು ಕಣ್ಮರೆಯಾದರೆಂದು ಭಾವಿಸುವುದೂ ಕಷ್ಟ !

ಅವರೊಬ್ಬ ಅಮರ ಕಲಾಕಾರರು, ಅತ್ಯುತ್ತಮ ಗಾಯಕರು, ಮೇಲಾಗಿ ಅವರೊಬ್ಬ ದೇವ ಮಾನವರು.

ಮತ್ತೆ ಅವರ ಆತ್ಮಕ್ಕೆ ಶಾಂತಿಸಿಗಲೆಂದು ಹರಸೋಣ. ದಿವ್ಯ ಚೇತನಕ್ಕೆ ಶರಣು !

Taxonomy upgrade extras: 

ಮುಂಬೈನ ಪ್ರಭಾದೇವಿಯಲ್ಲಿರುವ [ವರ್ಲಿ] ಶ್ರೀ ಸಿದ್ಧಿವಿನಾಯಕನ ಮಂದಿರ

ಮುಂಬೈನ ಪ್ರಭಾದೇವಿಯಲ್ಲಿರುವ [ವರ್ಲಿ] ಶ್ರಿ ಸಿದ್ಧಿವಿನಾಯಕನ ಮಂದಿರ. ಈ ವಿನಾಯಕ ಪ್ರತಿಮೆಯ ಒಂದು ವಿಶೇಷತೆಯೆಂದರೆ ಸೊಂಡಿಲು ಬಲಭಾಗದಲ್ಲಿರುವುದು. ಇದಕ್ಕೆ ಬಲಮುರಿ ಮೂರ್ತಿ ಎಂದು ಹೇಳುತ್ತಾರೆ.

Taxonomy upgrade extras: 

ಸುರೇಖರ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆಯ (ವಿಡಿಯೊ ಮತ್ತು ಫೋಟೋ ಪ್ರತಿಷ್ಠಾಪನಾ ಕಲೆ) ಕಲಾಪ್ರದರ್ಶನ

ಕಲಾವಿದೆ ಸುರೇಖರಿ೦ದ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆ (ವಿಡಿಯೊ ಮತ್ತು ಫೋಟೋ ಪ್ರತಿ

Taxonomy upgrade extras: 

ನನ್ನ ರಾಜಕುಮಾರ

ಅಪ್ಪನ  ಜೊತೆ ಮೈಸೂರು ಅರಮನೆಗೆ ಹೋಗಿದ್ದಾಗ ನನ್ನ ಡಿಜಿಕ್ಯಾಮೆರಾದಲ್ಲಿ ಸೆರೆಸಿಕ್ಕ ರಾಜಕುಮಾರ ಈತ

Taxonomy upgrade extras: 

DLI scans

DLI (http://dli.iiit.ac.in/) ನಲ್ಲಿರುವ ಸ್ಕ್ಯಾನ್ ಮಾಡಿದ ಪುಟಗಳು ನನ್ನ ಕಂಪ್ಯೂಟರಿನಲ್ಲಿ ಕಂಡುಬಂದದ್ದು ಹೀಗೆ.

Taxonomy upgrade extras: 

ಮನಮೋಹನ ಸಿಂಗ್

ಹೂಂ ರೀ. ನಾನೇ ಗೀಚಿದ್ದು! ಕಾಲೇಜಿನಲ್ಲಿದ್ದಾಗ ಸಿಕ್ಕಾಪಟ್ಟೆ ಸಮಯ ಇರುತ್ತಿತ್ತು. ಆಗ ಏನೋ ಹೀಗೆ ಹಾಗೆ ಗೀಚ್ತಾ ಇದ್ದೆ. ವ್ಯಂಗಚಿತ್ರ ಬರೆಯುವವ ನಾನು ಅಂದುಕೊಂಡಿದ್ದೆ. ;)

Taxonomy upgrade extras: 

ರಾ ಶಿವರಾಂ

ರಾ ಶಿವರಾಂ

ಚಿತ್ರ ವಿಕಿಪೀಡಿಯದಿಂದ ತೆಗೆದುಕೊಂಡದ್ದು. ಕಾಪಿರೈಟ್ ಮಾಹಿತಿ, ಲೈಸೆನ್ಸ್ ಮಾಹಿತಿ ತಿಳಿದವರು ದಯವಿಟ್ಟು ತಿಳಿಸಿ.

Taxonomy upgrade extras: 

ರಾ ಶಿವರಾಂ

ರಾ ಶಿವರಾಂ

ಚಿತ್ರ ವಿಕಿಪೀಡಿಯದಿಂದ ತೆಗೆದುಕೊಂಡದ್ದು. ಕಾಪಿರೈಟ್ ಮಾಹಿತಿ, ಲೈಸೆನ್ಸ್ ಮಾಹಿತಿ ತಿಳಿದವರು ದಯವಿಟ್ಟು ತಿಳಿಸಿ.

Taxonomy upgrade extras: 

sampada

ಇಂಕ್ ಸ್ಕೇಪ್ ನಲ್ಲಿ ತಯಾರಿಸಿದ್ದು.

Taxonomy upgrade extras: 
Subscribe to misc (Uncategorized) pictures