ಅನುಭವ ಕಥನ ಚಿತ್ರಗಳು

ಬಿಳಿ ಗರುಡ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

ಧಾರವಾಡದ ಪುಂಡರ ಕೈಗೆ ಸಿಕ್ಕು ರೆಕ್ಕೆ-ಪುಕ್ಕ ಎರಡನ್ನೂ ಕಳೆದುಕೊಂಡ ಬಿಳಿ ಗರುಡ. ಸದ್ಯ ಪ್ರೊ. ಗಂಗಾಧರ ಕಲ್ಲೂರ್ ಅವರ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

ಪುಕ್ಕ ಕತ್ತರಿಸಿಕೊಂಡು ಬೋಳಾಗಿರುವ Brahminy Kite ಬಿಳಿ ಗರುಡದ ಅಸಹನೀಯ ಸ್ಥಿತಿ. ಬಾನಾಡಿಯನ್ನು ನೆಲೆದ ಮೇಲೆ ಓಡುವಂತೆ ಮಾಡಿದ ಈ ಪರಿ ವಿಘ್ನ ಸಂತೋಷಿತನಕ್ಕೆ ಏನೇನ್ನುವುದು?

‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

ಮಾನವರ ಈ ರೆಕ್ಕೆ ಕತ್ತರಿಸುವ ಬುದ್ಧಿ ಒಂದು ದಿನ ಬುಡವನ್ನೇ ಕತ್ತರಿಸೀತು ಎಂದು ಸೂಚ್ಯವಾಗಿ ಹೇಳಬಹುದೇನೋ? ಪ್ರೊ. ಗಂಗಾಧರ ಕಲ್ಲೂರ್ ಅವರ ಮನೆಯ ಆವರಣದಲ್ಲಿ ರೆಕ್ಕೆ ಕತ್ತರಿಸಿಕೊಂಡ Brahminy Kite ವಿಹರಿಸಲು ಅಣಿಯಾಗಿರುವುದು.

‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

ಧಾರವಾಡದ ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ಕೆಲಗೇರಿ ಕೆರೆಯ ಗುಡ್ದದ ಮೇಲಿಂದ ‘ಹವ್ಯಾಸಿ’ ಯುವ ಶಿಕಾರಿಗಳ ಕೈಯಿಂದ ಜೀವಸಹಿತವಾಗಿ ಬಿಡಿಸಿಕೊಂಡು ಬಂದ Brahminy Kite -ಬಿಳಿ ಗರುಡ ತನ್ನ ರೆಕ್ಕೆ ಕತ್ತರಿಸಿಕೊಂಡು ಅಸಹಾಯಕ ಸ್ಥಿತಿಯಲ್ಲಿರುವುದು.

ನಿಧಿ ಬಲಿ ಕೇಳುತ್ತಿದೆಯೇ!?

ಕೇಳಲೆಷ್ಟು ಭಯಂಕರವೋ ಅಷ್ಟೇ ಸತ್ಯವೂ ಕೂಡಾ.

ಮೇಲಿನ ಚಿತ್ರದಲ್ಲಿ ದುರ್ಮರಣಕ್ಕೀಡಾಗಿರುವವರು ತಮಗೆ ಇಂಥಾ ಧಾರುಣ ಸಾವು ಬರುತ್ತದೆಂದು ತಮ್ಮ ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲವೇನೋ. ಇಂಥಹಾ ಅವಘಡಗಳು ಪ್ರತಿ ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎಂದರೆ ತಪ್ಪಾಗಲಾರದು.

ಮೂರು ಗುಲಾಬಿಗಳ ಹೆಸರಿನಲ್ಲಿ ಕನ್ನಡಕ್ಕೆ ಮೂರು ನಾಮ ಹಾಕಿದ್ದಾರೆ ರೀ..

ಬೆಂಗಳೂರಿನಲ್ಲಿ, ಅದ್ಯಾಕೆ, ಬಹುಶಹ ಇಡೀ ಕರ್ನಾಟಕದಲ್ಲೇ ದೊರೆಯುವ "3 roses" ಹೆಸರಿನ ಚಹ ಪುಡಿಯ ಪೊಟ್ನದ ಮೇಲೆ ಇತ್ತೀಚೆಗೆ ನೀವೇನಾದ್ರು ಕಣ್ಣು ಹಾಯಿಸಿ ನೋಡಿದ್ದರೆ, ಈ ಬರಹದಲ್ಲಿ ಅಡಗಿರುವ ನನಗಾಗಿರೋ (ಕನ್ನಡಿಗನಿಗೆ ಆಗಲೇಬೇಕಿರೋ) ಅವಮಾನ/ಬೇಜಾರಿನ ಗಾತ್ರ ಅರ್ಥವಾದೀತು. ಈ ಲೇಖನದಲ್ಲಿ ನಾ ಸೇರಿಸಿರೋ ಚಿತ್ರ ನೋಡಿ. ಕನ್ನಡ ನಾಡಿನ ಲಕ್ಷಾಂತರ ಜನ ಇವರ ಟೀ ಪುಡಿ ಕೊಳ್ತಾರೆ, ಇವರಿಗೆ ನಮ್ಮ ಜನರಿಂದ ಅದೆಷ್ಟು ಕೋಟಿಗಟ್ಟಲೆ ಲಾಭ. ಆದರೂ, ಇವರು ಪ್ಯಾಕ್ ಮಾಡೀ ಕಳ್ಸೋ ಈ ಪೊಟ್ನದ ಮೇಲೆ ಒಂದು ಬಿಡಿಗಾಸಿನಷ್ಟೂ ಕನ್ನಡಾಕ್ಷರ ಬಳಕೆ ಆಗಿಲ್ಲ. ಆದ್ರೆ, ಅದೇ ನೋಡಿ, ಆಂಗ್ಲದ ಜೊತೆ, ಯಕ್ಕ ಮಕ್ಕ ತೆಲುಗು ತಮಿಳು ತುಂಬಿ ತುಳುಕುತ್ತಿದೆ. HUL ಸಂಸ್ಥೆಯ ಈ ಹುನ್ನಾರದ ಹಿಂದಿನ ಉದ್ದೇಶ ಅದೇನೇ ಇರ್ಬೋದು, ಆದರೆ ಇದರಿಂದ ಕನ್ನಡಿಗರಿಗೆ ಸಕ್ಕತ್ ಬೇಜಾರು ಅಂತೂ ಖಂಡಿತ.

ನಾನೇ ರಕ್ತಪಿಪಾಸಿ

ರಕ್ತ ರಕ್ತ ಹೀರುವೆನು ಮಾನವ ರಕ್ತ
ನನಗದುವೇ ಮೃಷ್ಟಾನ
ಇರುವೆನು ಸಣಕಲ ಹೀರಿ ಆಗುವೆನು ದಡಿಯ
ಚ೦ಗನೆ ಜಿಗಿದ೦ಟುವೆ ಮೈಯ
ಬೇರ್ಪಟಾಗ ಮೂಡುವುದು ಗಾಯ
ಆನೆಕಾಲಿಗೆ ರಕ್ತಪಿಪಾಸಿಯೇ ವೈದ್ಯ
ಗೋತ್ತಾಗದಿದ್ದರೆ ತಿಳಿದುಕೊ
ನಾನೇ ಆ ಜಿಗಣೆ

ಕಸದ ಕಂತೆಗಳು ದಾರಿಕಾಯುತ್ತಿವೆ !

ಆದರೆ ಇವುಗಳನ್ನು ಸರಿಯಾಗಿ ರಸ್ತೆಯ ಪಕ್ಕಕ್ಕಿಟ್ಟು, ಹೇಸಿಗೆ, ಕೊಳಚೆಯನ್ನು ವಿಸ್ತರಿಸದಂತೆ ನೋಡಿಕೊಳ್ಳುವ ನಾಗರಿಕರು ಅಭಿನಂದನೀಯರಾದರೆ, ಸರಿಯಾದವೇಳೆಗೆ ಅವನ್ನು ತಮ್ಮ ವಾಹನದಲ್ಲಿ ಏರಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಎಲ್ಲರ ಆದರ-ಪ್ರೀತಿ ಗೌರವಗಳಿಗೆ ಹಕ್ಕುದಾರರಾಗಿರುವ ಮ್ಯುನಿಸಿಪಲ್ ಸಿಬ್ಬಂದಿಯರೂ ವಂದನಾರ್ಹರು !

’ವಿಶ್ವರೂಪದರ್ಶನ’, ನಾಟ್ಯರೂಪಕದ ಭಾಗ, ’ಅಕ್ಕ ವಿಶ್ವಕನ್ನಡ ಸಮ್ಮೇಳನ ’, ದ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಶಿಷ್ಠ್ಯಗಳಲ್ಲೊಂದು !

’ಅಕ್ಕ ವಿಶ್ವಕನ್ನಡ ಸಮ್ಮೇಳನ ’, ದ ಮೂರುದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಚೆನ್ನಾಗಿನಡೆದು, ಸಭಿಕರಮೇಲೆ ಇನ್ನೆರಡು ವರ್ಷಗಳು ಮೆಲುಕುಹಾಕುವಷ್ಟು, ಪ್ರಭಾವವನ್ನು ಬೀರಿದವು. ಇವು ನಡೆದದ್ದು, ಚಿಕಾಗೋನಗರದ, ’ಸ್ಟೀಫನ್ ಹಾಲ್’, ನ ವಿಶಾಲ ಪ್ರಾಂಗಣದಲ್ಲಿ.

(HYATT) ’ಹಯಟ್ ಹೋಟೆಲ್,’ ನ ಒಳಗೆ ಕೆಳಗಿನ ಅಂತಸ್ತಿನ ಲಾಬಿಯಲ್ಲಿ ರಚಿಸಿದ ಮೇಲ್ಛಾವಣಿಯ ವಿನ್ಯಾಸ, !

ಸಿಯಾಟೆಲ್ ನಗರದ ಡೌನ್ ಟೌನ್ ನಲ್ಲಿರುವ ೨೩ ಅಂತಸ್ತಿನ ಭಾರಿಕಟ್ಟಡದ ಒಳಗೆ, ಕಾಣಿಸುವ ಕೆಳ-ಅಂತಸ್ತಿನ, ಲಾಬಿಯಲ್ಲಿ ಕಟ್ಟಿರುವ ಚಿಕ್ಕ-ವಿಶೇಷ ಮೇಲ್ಛಾವಣಿ. ಅದೇ ಸೊಗಸಾದ ಹಾಲ್ ನಲ್ಲಿ ಏರ್ಪಡಿಸಿದ್ದ ಚಿತ್ರಕಲಾ-ಪ್ರದರ್ಶನ ನಿಜಕ್ಕೂ ಆಕರ್ಷಣೀಯವಾಗಿತ್ತು. -ನಾನೆ ತೆಗೆದ ಚಿತ್ರ

ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ

ಈ ಚಿತ್ರದಲ್ಲಿರುವಂತೆ ಪ್ರಕೃತಿ ಸೌಂದರ್ಯ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ, ಅಲ್ಲವೇ, ಮಾಲಿನ್ಯದಿಂದ ರಕ್ಷಿಸಲು ಪರಿಸರ ಉಳಿಸಿ. ಈ ಸೌಂದರ್ಯ ನೋಡಲು ಎಷ್ಟು ಚೆಂದ ಅಲ್ಲವೇ.

ಹತ್ತಿಗಿಡನ ನಿಮ್ ಮಕ್ಳಿಗೆ ತೋರ್ಸಿ ಸ್ವಾಮಿ ; ಇದನ್ನು ನೀವು ಮುಂಬೈನ ಹಿಮಾಲಯ ಸೊಸೈಟಿಯ ಜಾಗರ್ಸ್ ಪಾರ್ಕ್ ನಲ್ಲಿ ಕಾಣ್ತೀರಿ !

ನಾನು ಹಿಂದೆ ಇದರಬಗ್ಗೆ ಆಗಾಗ ಬರಿತಿದ್ದೆ. ಹಿಂದಿನ ಹತ್ತಿಗಿಡ ಹೂಬಿಟ್ಟು ಒಂದೆರಡು ಕಾಯಿಬಿಟ್ಟಮೇಲೆ, ಅದರ ಕಾಂಡದ ಭಾರತಡೆಯಲಾರದೆ ಮುರಿದು ಬಿತ್ತು. ಹತ್ತಿ ಗಟ್ಟಿಗಿಡವಲ್ಲ. ಕಾಂಡಗಳು ಟೊಳ್ಳು. ಈ ವರ್ಷ ಅದು ಚಿಗಿತು, ಒಳ್ಳೆ ಪೊದೆ ತರಹ ಹಬ್ಬಿದೆ. ಈಗ ಅದರ ತುಂಬಾ ಹೂ, ಹೀಚು, ಕಾಯಿಗಳೆಲ್ಲಾ ನಿಮಗೆ ಕಾಣಿಸ್ತಿದೆಯಲ್ಲ.

ಅಲಂಕಾರದ ಸಾಮಾನುಗಳು, ಮದುವೆ, ಮುಂತಾದ ಸಮಾರಂಭಗಳಲ್ಲಿ ವಿಶೇಷ ಕಳೆಕೊಡುತ್ತವೆ !

ಇವೆಲ್ಲಾ ಈಗಿನ ಮದುವೆ ಮನೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ, ಅಲಂಕಾರದ ಪರಿಕರಗಳು.

-ನನ್ನ ಕ್ಯಾಮರದಲ್ಲಿ ಕ್ಲಿಕ್ಕಿಸಿದ್ದು.

ತಾಯ್ತನದ ಹಿರಿಮೆ-೨ !

ಸ್ವಲ್ಪ ಮಕ್ಕಳು ಕೂತಲ್ಲೆ ಕೂಡ್ರುವ ಸ್ತಿತಿಗೆ ಬಂದಮೇಲೆ ತಾಯಿಹಕ್ಕಿ ಪ್ರಥಮಬಾರಿ ಆಹಾರ ತರಲು ಹೋಗಿದೆ. ಮರಿಹಕ್ಕಿಗಳು, ತಲೆ ಮೇಲೆತ್ತಿ ಹಿಂದೆಮುಂದೆ ಆಡಿಸುವುದನ್ನು ಬಿಟ್ಟರೆ ಏನೂ ಮಾಡಲು ಶಕ್ತರಲ್ಲ. ತಾಯಿ ಆಗಮನ ಆಗಿದೆ. ಮತ್ತೆ ಮರಿಗಳೊಡನೆ ಬಿಸಿಯಪ್ಪುಗೆಯ ಒಡನಾಟ ಪ್ರಾರಂಭ. ಈಗಾಗಲೇ ೨೪ ದಿನಗಳಾಗಿವೆ.

ದೇವರಮನೆಗಳು

ಮೈಸೂರಿಗೆ ಹೋಗಿದ್ದಾಗ ನಾನು ಕಂಡ ವೈವಿಧ್ಯಮಯ ದೇವರಮನೆಗಳನ್ನು, ಇಲ್ಲಿ ದಾಖಲಿಸುವ ಆಶೆಯಾಯಿತು. ಮತ್ತೆ ನಮ್ಮ ಕಾಂಕ್ರೀಟ್ ಜಂಗಲ್ ಮುಂಬೈಗೆ ಬಂದಾಗ, ಅಂಧೇರಿ ಪ್ರದೇಶದ ಲೋಖಂಡವಾಲ ಕಾಂಪ್ಲೆಕ್ಸ ನಲ್ಲಿ ಗೆಳೆಯರೊಬ್ಬರ ಮನೆಗೆ ಭೆಟ್ಟಿಯಾದ ಸಂದರ್ಭದಲ್ಲಿ ಅವರ ದೇವರ ಮನೆ ನನ್ನ ಗಮನ ಸೆಳೆಯಿತು. ವಾಸ್ತುಶಿಲ್ಪದ ಪ್ರಕಾರ ನಿರ್ಮಿಸಿರುವುದಾಗಿ ಅವರು ತಿಳಿಸಿದರು.

ಯೆಮು ಪಕ್ಷಿ ಮೊಟ್ಟೆಗಳು. ಇವು ನಿಜಕಣೋ ಅಣ್ಣ, !

ಬೆಂಗಳೂರಿನ ಬಳಿಯ ಫಾರಂ, ಒಂದರಲ್ಲಿ "ಯೆಮು ಪಕ್ಷಿಗಳು", ನೀಡಿದ ಮೊಟ್ಟೆಗಳಿವು.

-’ ಸಂಜೆವಾಣಿ ’ಪತ್ರಿಕೆಯ ಕೊಡುಗೆ.

ಮಹಾ ಮಾನವ - ಬೇರ್ ಫುಟ್ ಕಾಲೇಜಿನ ಅಧ್ಯಾಪಕ

ಈತ ಬೇರ ಫುಟ್ ಕಾಲೇಜಿನಲ್ಲ ಅಧ್ಯಾಪಕ ನಾಗಿದ್ದಾನೆ. ತನ್ನ ದೇಹ ಸ್ಥಿತಿ ಯನ್ನು ಮೀರಿ ಬದುಕುವ ಕರ್ಮ ಯೋಗಿ..

ಹತ್ತಿಯಷ್ಟು- ಹಾಲಿನಷ್ಟು, ಬಿಳುಪು . ಯಾವುದು ಸರಿ ? !

ಹಾಲಿನಷ್ಟು ಬಿಳುಪು -ಸರಿಯಾದ ಮಾತು.

ಅದರೆ, ಹತ್ತಿಯೂ ಗಿಡದಿಂದ ಬಿಡಿಸಿದಾಗ ಅಷ್ಟೆ, ಬಿಳುಪಾಗಿರುವುದು. ಕೊಳೆಸೇರಿಸುವವರು ನಾವೇ !

ಅದರೆ, ಎಲ್ಲಾ ಹತ್ತಿಗಳೂ ಅಲ್ಲ.

ನಮ್ಮದೇಶದ ದೇಸಿ-ಹತ್ತಿ ಮಾತ್ರ.

ಇಜಿಪ್ಟಿಯನ್ , ಮತ್ತು ಅಮೆರಿಕನ್ ಹತ್ತಿಗಳಲ್ಲ . ಅವೆಲ್ಲಾ ಸ್ವಲ್ಪ ಕಂದು ಬಣ್ಣಕ್ಕಿರುತ್ತವೆ. ಆದರೆ ಗುಣಮಟ್ಟದ

ಮೈಸೂರಿನ "ಜಂಬೂಸವಾರಿಯ" ಗತ ವೈಭವ !

ಮೈಸೂರಿನ "ಜಂಬೂಸವಾರಿ," ಅದರದೇ ಆದ ಪರಂಪರೆ, ಮತ್ತು ವೈಭವಗಳನ್ನು ಪಡೆದಿದೆ. ಇದರ ಛಾಯಾ-ಚಿತ್ರಗಳು ಇಂದಿಗೂ ಲಭ್ಯ.

-ಆಲ್ಬಮ್.

ನಮ್ಮ ಬೊಂಬಾಯಿನ ಪುಟಾಣಿ ರಸಿಕರು -೨ !

ನಾನು ಒಮ್ಮೆ ನಮ್ಮ ಪಕ್ಕದ ಸ್ಕೂಲಿಗೆ, ಅವರ ಪುಟ್ಟಸಮಾರಂಭಕ್ಕೆ ಹೋದಾಗ, ಅಲ್ಲಿ ಕಂಡ ದೃಷ್ಯ ಇದು ! ನಾನು ಗೋರೂರು ರಾಮಸ್ವಾಮಿ ಯ್ಯಂಗಾರ್ಯರ " ನಮ್ಮ ಊರಿನ ರಸಿಕರು, " ಎಂಬ ಪುಸ್ತಕವನ್ನು ಹಲವು ಬಾರಿ ಓದಿ ಆನಂದಿಸಿದ್ದೆ. ಇಲ್ಲಿನ ಕೆಲವು ಸನ್ನಿವೇಷಗಳು ಆ ಪುಸ್ತಕದಲ್ಲಿ ಬರುವ ದೃಷ್ಯಗಳನ್ನು ಮತ್ತೆ ಮೆಲಕು ಹಾಕುವಂತಾಯಿತು.

ನಮ್ಮ ಬೊಂಬಾಯಿನ ಪುಟಾಣಿ ರಸಿಕರು -೧ !

ಈ ಚಿಕ್ಕ ರಸಿಕರಲ್ಲಿ ಒಬ್ಬ, ಶೇಖ್, ಇನ್ನೊಬ್ಬ ಮಹಾರಾಜ, ಒಬ್ಬ, ತೋಟದ ಕೆಲಸಗಾರ, ಕೊನೆಯಲ್ಲಿ ಒಬ್ಬಳು, ತರಕಾರಿಮಾರುವವಳು. ಇಲ್ಲಿ ಕೊನೆಯವಳು, ಮತ್ತು ತೋಟದ ಕೆಲಸಗಾರ ತರಹ ಕಾಣಿಸಲಿಲ್ಲ.

ಪಾರ್ಕ್ ನಲ್ಲಿ ಹತ್ತಿ ಗಿಡ !

ಹೌದು. ಹಿಮಾಲಯ ಜಾಗರ್ಸ್ ಪಾರ್ಕ್, ಘಾಟ್ ಕೋಪರ್ , ಮುಂಬೈ ನಲ್ಲಿ, ಒದು ಆಳೆತ್ತರದ ಹತ್ತಿಗಿಡ ಬೆಳೆದಿದೆ. ಒಂದೆರಡು ಹತ್ತಿ ಕಾಯಿಗಳು ಬಲಿತು, ಒಡೆದು ಹತ್ತಿ ಹೊರಗೆ ಹೊಮ್ಮಿ-ಬಂದಿದೆ. ಮಕ್ಕಳಿಗೆ ಇದನ್ನು ನೋಡಲು ಆನಂದ !

ಗೆಳೆಯ ...... ಹುಟ್ಟಿ-ಬೆಳೆದ ಊರನ್ನಾಗಲಿ, ಹಳ್ಳಿಯನ್ನಾಗಲಿ ಮರೆಯಬೇಡ .....

ಗೆಳೆಯ ......

ಹುಟ್ಟಿ-ಬೆಳೆದ ಊರನ್ನಾಗಲಿ, ಹಳ್ಳಿಯನ್ನಾಗಲಿ ಎಂದೆದಿಗು ಮರೆಯಬೇಡ .....

ನಿಮ್ಮ ಊರಿಗಾಗಿ, ಹಳ್ಳಿಗಾಗಿ, ನೀ ಓದಿದ ಶಾಲೆಗಾಗಿ, ಅಲ್ಲಿನ ಮಕ್ಕಳಿಗಾಗಿ ಏನಾದರು ಸಹಾಯ ಮಾಡು ....
ಆಗ ಊರು ನಿನ್ನನ್ನು ಸದಾ ನೆನಪಿಸಿಕೊಳ್ಳುತ್ತದೆ .....

ಏನಂತೀರ ಮಿತ್ರರೆ?

ಕನ್ನಡಿಗ
-ಗಿರೀಶ

೧೧/೭, ೨೫/೮, ೨೮/೭, ೧೩/೩, ೨೭/೧, ೬/೧೨, ೨/೧೨, ೧೨/೩ ; ಸಾಕುಮಾಡಿ, ನಿಮ್ಮ ದುಷ್ಕರ್ಮಗಳನ್ನು.

೧೧/೭, ೨೫/೮, ೨೮/೭, ೧೩/೩, ೨೭/೧, ೬/೧೨, ೨/೧೨, ೧೨/೩ ಮತ್ತು ಮುಂಬೈ ಮೇಲೆ ಅವುಗಳ ಪರಿಣಾಮ !

೧೧-೦೭-೨೦೦೭ ರ ದಿನ, ನಮ್ಮ ಮುಂಬೈ ನಗರದ " ಬಾಂಬ್ಸ್ಫೋಟದ ದಿನಾಚರಣೆ" ಯ ದಿನವಾಯಿತೇ, ನಾಚಿಕೆಗೇಡು ! ಭಯೋತ್ಪಾದಕರೇ, ನಿಮ್ಮ ಕಿಡಿಗೇಡು ಕಾರ್ಯ-ಚಟುವಟಿಕೆಗಳಿಗೆ ಧಿಕ್ಕಾರ ! !

ಪರಾಗನ ತಾಯಿ, ಮಾಧುರಿ !

ಈ ಚಿತ್ರದ ವಿಶೇಷವೆಂದರೆ, ಸರಿಯಾಗಿ ಒಂದು ವರ್ಷವಾಗಿದೆ, ಮುಂಬೈನ ಲೋಕಲ್ ಟ್ರೇನ್ ಅಪಘಾತವಾಗಿ. ಪರಾಗ್, ಎಂದಿನಂತೆ ಪ್ರಧಮ ದರ್ಜೆಯಲ್ಲಿ ಪ್ರಯಾಣಮಾಡುತ್ತಿದ್ದ. ಮೀರಾ ರೋಡ್ ಇನ್ನು ದಾಟಿಲ್ಲ. "ಢಮ್, ಢಮ್ " ಶಬ್ದ. ರೈಲಿನಲ್ಲಿ ಬಾಂಬ್ ಸ್ಪೋಠ . ಅದು ಪರಾಗ್ ತಲೆಯನ್ನು ಘಾಸಿಕೊಳಿಸಿತ್ತು. ಶಹರಿನ ಹಿಂದೂಜಾ ಆಸ್ಪತ್ರೆಯಲ್ಲಿ, ಅವನಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ.

"Builder of IT City" -- ನಾರಾಯಣ ಮೂರ್ತಿ ??

ನಾರಯಣ ಮೂರ್ತಿ "is the Builder of IT City" ಎ೦ದು ಪತ್ರಿಕೆಗಳಲ್ಲಿ ಹೇಳಿರೋದು ಕೇಳಿದ್ದೇವೆ.
ಆದರೆ ನಿಜವಾಗಲೂ ನಮ್ಮ ಊರನ್ನು ಕಟ್ಟಿದವರು ನಮ್ಮ ಊರಿನಲ್ಲಿ ಇಲ್ಲಾ.
ಯಾವುದೋ ಊರಿ೦ದ ಬ೦ದು ಈ ಊರು ಕಟ್ಟಿ ಮತ್ತೊ೦ದು ಊರಿಗೆ ಹೋಗುವ ಮ೦ದಿ.
"ನಿಮ್ಮದು ಯಾವ ಊರು ??" ಅ೦ದರೆ ಸುಮ್ಮನೆ ನಗುವ ಜನ.
ನಿಜವಾಗಲೂ ತಾವೇ ಊರಿ೦ದ ಹೊರಗೆ ಊಳಿದು,

ಹವಾಯಿನ ಅದ್ಬುತ ಪುಷ್ಪಗಳು -೧

ಇವು ಪುಷ್ಪಗಳೊ, ಅಥವ ಕೀಟರಾಶಿಯೋ !
ಹವಾಯ್ ದ್ವೀಪದ ಸೊಬಗೇ ಹಾಗೆ. ಅದೆಂತಹ ಪುಷ್ಪರಾಶಿ ; ಎಲೆ, ಗಿಡ, ಮರ, ಬಳ್ಳಿ, ಮೊಗ್ಗು, ಹೂ, ಕಾಯಿ, ಹಣ್ಣುಗಳು, ಇವೆಲ್ಲಾ ಇಲ್ಲಿನ ಪರಿಸರದ್ದೇ ! ( Exotic ) ಅವನ್ನು ಎಲ್ಲೂ ಕಾಣಲು ಅಸಾಧ್ಯ. ಹವಾಯಿನ ಪರ್ಯಟನೆ, ಕಣ್ಣಿಗೆ ಒಂದು ಹಬ್ಬವಿದ್ದಂತೆ. ಮನಸ್ಸಿಗೆ ಉಲ್ಲಾಸಮಯ ; ಅದೇನೋ ಅವರ್ಣನೀಯ ಆನಂದ ನಿಮಗೆ ಅಲ್ಲಿ ದೊರೆಯುತ್ತದೆ.

ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಲ್ವ್ರ" ? ನೀವಾದ್ರು ಒಸಿ ಏಳ್ಬಾರ್ದ್ರಾ !

ಎಂಕ್ಟೇಸಪ್ಪ : ಏನ್ ಎಂಟಣ್ಣಾ ಗೊತ್ತಾಯ್ತ, 'ಯಾಹು ಇಂಡಿಯಾದೊರು', ಕನ್ನಡದಲ್ಲಿ ಒಂದು 'ಸೈಟ್' ತೆಗೆದಿದ್ದಾರೆ. ಅದೊಂದು 'ದಿನ ಪತ್ರಿಕೆ' ತರ್ಹ ಇದೆ. ನಿನ್ಗೂ ಹೆಮ್ಮೆ ಅಲ್ಲೇನಪಾ ?

Subscribe to ಅನುಭವ ಕಥನ ಚಿತ್ರಗಳು