ಪ್ರಚಲಿತ ಲೇಖನ ವರ್ಗದ ಚಿತ್ರಗಳು

ದಕ್ಷಿಣ ಮುಂಬೈ ನ ಟಾಜ್ ಹೋಟೆಲ್, ಸಿ. ಎಸ್. ಟಿ, ರೈಲ್ವೆ ನಿಲ್ದಾಣ, ಮತ್ತೆಲ್ಲಿಯೋ ಆತಂಕವಾದಿಗಳ ಕಾರ್ಯಾಚರಣೆ !

ಕೆಲವು ವರ್ಷಗಳ ಹಿಂದೆ, ಗೇಟ್ ವೇ ಆಫ್ ಇಂಡಿಯ, ದ ಮುಂದೆ, ಟ್ಯಾಕ್ಸಿಯಲ್ಲಿ ಭಯೋತ್ಪಾದಕರು, ಬಾಂಬ್ ಸಿಡಿಸಿದ್ದರು. ಅದೇ ದಿನ, ಜವೇರಿಬಝಾರ್ ನಲ್ಲಿ. ಆದರೆ, ತಾಜ್ಮಹಲ್ ಹೋಟೇಲಿನ ಒಳಗೆ, ಇದುವರೆವಿಗೂ ಈ ದುಷ್ಕೃತ್ಯವಾಗಿರಲಿಲ್ಲ. ನೆನ್ನೆ, ಅದೂ ನಡೆದಿದೆ. ನಾಗರಿಕರ ಕೊಲೆಯಿಂದ ಸಿಗುವ ಲಾಭವಾದರೂ ಏನು ? ಇದಕ್ಕೆ ಉತ್ತರ ಕೊಡುವವರು ಯಾರು ?

-ಚಿತ್ರ. ನನ್ನ ಆಲ್ಬಮ್ ನಿಂದ.

೧೪ ಅಡಿ ಎತ್ತರದ ಶಿವಲಿಂಗ, ಒಂದು ಲಕ್ಷ ೮ ಸಾವಿರ ರುದ್ರಾಕ್ಷಿಗಳಿಂದ ಅಲಂಕರಿಸಲ್ಪಟ್ಟಿದೆ. ಆದಿ ಶಂಕರಾಚಾರ್ಯರ, 'ಲಿಂಗಾಷ್ಟಕಮ್, ' ನೆನಪಿಗೆ ಬರುತ್ತದೆ

ಸೂರತ್ ನಗರದ ಭಕ್ತಾದಿಗಳು, ೧೪ ಅಡಿ ಎತ್ತರದ (’ ೧,೦೦೦೦೮ ರುದ್ರಾಕ್ಷಿಗಳಿಂದ ಅಲಂಕರಿಸಿದೆ’) ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಓಂ ನಮಃ ಶಿವಾಯ ; ಶ್ರಾವಣಮಾಸ ಆರಂಭವಾಯ್ತು. ಆದಿಶಂಕರಾಚಾರ್ಯರ, 'ಲಿಂಗಾಷ್ಟಕಮ್,' ನೆನಪಿಗೆ ಬರುತ್ತದೆ.

ಲಿಂಗಾಷ್ಟಕಮ್

ಬ್ರಹ್ಮಮುರಾರಿ-ಸುರಾರ್ಚಿತ-ಲಿಂಗಂ ನಿರ್ಮಲ-ಭಾಷಿತ-ಶೋಭಿತ-ಲಿಂಗಮ್.

" ಕರ್ಣಾಟಕ ಭಾಗವತ " ದ ವಿಶ್ವಾರ್ಪಣಾ ಸಮಾರಂಭದ ’ಯೂ ಟ್ಯೂಬ್,’ ಲಭ್ಯವಿದೆ. ನೋಡಿ ಆನಂದಿಸಿ !

ಅಮೆರಿಕದ ’ಹೂಸ್ಟನ್ ಕನ್ನಡ ವೃಂದ,’ ದ ಪದಾಧಿಕಾರಿಗಳು, ಡಾ. ಚಂದ್ರಶೇಖರ್ ಪರಿವಾರದೊಂದಿಗೆ ಕಳೆದ ಕೆಲವು ಸಂತಸದ ಕ್ಷಣಗಳು !

ಕನ್ನಡ ಮಹಾಕಾವ್ಯ, "ಕರ್ಣಾಟಕ ಭಾಗವತದ " ದ ಬಗ್ಗೆ ಕೆಲವು ಅನಿಸಿಕೆಗಳು :

ಓಲಿವ್ ರಿಲೇ, ೧೦೮ ವರ್ಷಪ್ರಾಯದ ಬ್ಲಾಗ್ ಲೋಕದ ಮುತ್ತಜ್ಜಿ , ಬ್ಲಾಗ್ ಬರೆಯುತ್ತಾ, ಬರೆಯುತ್ತಾ, ಈ ಲೋಕದಿಂದ ಹೊರಟೇಹೋದರು !

ಆಸ್ಟ್ರೇಲಿಯದ ಸಿಡ್ನಿನಗರವಾಸಿ, ಓಲಿವ್ ರಿಲೇ, ಯೆಂಬಹೆಸರಿನ ಮುತ್ತಜ್ಜಿ, ಬ್ಲಾಗ್ ಬರೆಯುತ್ತಾ ಬರೆಯುತ್ತಲೇ ಕಣ್ಣುಮುಚ್ಚಿದರು !

ಮುಂಬೈ ಮಾನ್ಸೂನ್, ಪ್ರತಿವರ್ಷದಂತೆ ಈ ವರ್ಷವೂ ಸುದ್ದಿಮಾಡದಿದ್ದರೆ ಹೇಗೆ ? ರಸ್ತೆ, ಚರಂಡಿ, ನಾಲಗಳದುರಸ್ತಿ -ಇವೆಲ್ಲಾ ಮೀಡಿಯದಲ್ಲಿ ಓದಬೇಕು ಅಷ್ಟೆ !

ಜುಲೈ , ೧ ರಂದು ಬಿದ್ದ ೨೦೦ ಮಿ. ಮೀಟರ್ ಮಳೆಯಿಂದ ತತ್ತರಿಸಿದ ಮುಂಬೈ- ಜನಸ್ಥೋಮ.

-ರೆಡಿಫ್ ಮೇಲ್ ಸೌಜನ್ಯದಿಂದ.

ಯೂರೋ ಫುಟ್ಬಾಲ್ ಕಪ್ -೨೦೦೮, ಪ್ರತಿಯೋಗಿತೆಯಲ್ಲಿ, ಬಲಿಷ್ಟ ಜರ್ಮನಿ, ಪ್ರಚಂಡ ಟರ್ಕಿತಂಡವನ್ನು ಮಣಿಸಿ, ಮೊದಲನೆಯ ಸುತ್ತಿನ ಫೈನಲ್ಸ್ ತಲುಪಿದೆ !

ಧೃಢವಿಶ್ವಾಸ ಹಾಗೂ ಕೊನೆಯವರೆಗೆ ಹೋರಾಡುವ ಅಮೂಲ್ಯಗುಣಗಳ ಭಂಡಾರವಾಗಿರುವ ಜರ್ಮನ್ ಟೀಮ್ ನ ಫಿಲಿಪ್ ಲಾಮ್ ರವರ, ೯೦ ನೆ ನಿಮಿಷದ ಹೊಡೆತದಿಂದಮಾಡಿದ ಗೋಲ್ ನಿಂದಾಗಿ, ಯುವ- ಸಮರ್ಥ ಆಟಗಾರರ ಟರ್ಕಿಟೀಮ್ ನ್ನು ೩-೨ ಗೋಲ್ ಗಳ ಅಂತರದಲ್ಲಿ ಸೋಲಿಸುವುದರ ಮೂಲಕ, ಜರ್ಮನಿ, ಪ್ರಥಮ ಸುತ್ತಿನ ಫೈನಲ್ಸ್ ನ್ನು ಪ್ರವೇಶಿಸಿದೆ.

- ಇಂಟರ್ನೆಟ್ ನ ರೆಡಿಫ್ ಮೇಲ್ ಸೌಜನ್ಯದಿಂದ

ಯೂರೋ-೨೦೦೮ ರ ನಾಲ್ಕನೆ ಸುತ್ತಿನ ಸೆಮಿಫೈನಲ್ಸ್ ಗೆ ಧುಮುಕಿದ ಜರ್ಮನಿ, ಯ ಫ್ಯಾನ್ ಗಳ ಹರ್ಷೋತ್ಸಾಹ !

ಸ್ವಿಟ್ಸರ್ ಲ್ಯಾಂಡ ನ ಬಸಲ್ ನಗರದಲ್ಲಿ, ನಡೆದ ಯೂರೋ ಕಪ್ ಫುಟ್ಬಾಲ್ ಪಂದ್ಯದಲ್ಲಿ ಜರ್ಮನಿ, ಪೋರ್ಚುಗಲ್ ತಂಡವನ್ನು ೩-೨ ಗೋಲುಗಳ ಅಂತರದಲ್ಲಿ ಸೋಲಿಸಿ, ನಾಲ್ಕನೆಸುತ್ತಿನ ಸೆಮಿಫೈನಲ್ಸ್ ವಲಯಕ್ಕೆ ಹಾರಿಕುಳಿತಿದೆ. ಸ್ವಾಭಾವಿಕವಾಗಿಯೇ ಜರ್ಮನಿಯ ಫುಟ್ಬಾಲ್ ಪ್ರೇಮಿಗಳು, ಆನಂದದ ಹುಚ್ಚುಹೊಳೆಯಲಿ ಮುಳುಗಿ ಆನಂದತುಂದಿಲರಾಗಿದ್ದಾರೆ. ನೋಡಿ.

ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !

ಸಾಲ್ಟ್ ಬರ್ಗ್ ನಲ್ಲಿ ಸ್ಪೇನ್ ದೇಶ ಹಾಗೂ ಗ್ರೀಸ್ ದೇಶಗಳ ವಿರುದ್ಧ, ಯೂರೋ ಕಪ್ ಲೀಗ್ ಮ್ಯಾಚಿನ ’ಡಿ” ಸುತ್ತಿನಲ್ಲಿ ಸ್ಪೇನ್ ೨-೧ ಗೋಲ್ ನಿಂದ ಮಣಿಸಿ, ಜಯಗಳಿಸಿದೆ. ಸ್ಪೇನ್ ದೇಶದ ಪುಟ್ಬಾಲ್ ಫ್ಯಾನ್ ಒಬ್ಬಳು (ಪರಮ ಪ್ರೇಮಿ) ತನ್ನ ದೇಶದ ಗೆಲುವನ್ನು ಅತ್ಯಂತ ಸಂತಸದಿಂದ, ಸಂಭ್ರಮಿಸುತ್ತಿರುವ ರೀತಿ ನೋಡಿ.

-ಪ್ರಜಾವಾಣಿ ಫೋಟೊ ಆಲ್ಬಮ್ ನಿಂದ.

ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ, ಹೊಸ ಬಿಜೆಪಿ ಸರ್ಕಾರ !

ಬೆಂಗಳೂರು, ಜೂ. 6 : ಪ್ರತಿಪಕ್ಷಗಳ ಕೂಗಾಟ, ಸಭಾತ್ಯಾಗಗಳ ನಡುವೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ವಿಶ್ವಾಸಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ದ್ವನಿಮತದ ಮೂಲಕ ವಿಶ್ವಾಸಮತ ಯಾಚನೆ ನಿರೀಕ್ಷೆಯಂತೆ ಯಾವುದೇ ವಿಘ್ನಗಳಿಲ್ಲದೇ ನಿರಾಂತಕವಾಗಿ ನಡೆಯಿತು.

ಒಂದು ರಾಜ್ಯದ ಮುಖ್ಯ-ಮಂತ್ರಿ, ಮಹಾತ್ಮಗಾಂಧಿಯವರ ಸ್ಮಾರಕಕ್ಕೆ ನಮನ ಸಲ್ಲಿಸಲೋಸುಗವೇ, ದೆಹಲಿಗೆ ಹೋಗಬೇಕೆ ?

ಆಗಸ್ಟ್ ಹತ್ತಿರ ಬರ್ತಿದೆ. ಆ ಸಮಯದಲ್ಲಿ ಹೋಗ್ಬೋದಾಗಿತ್ತು. ಓಹ್ ಹೇಗಿದ್ರೂ ಮನಮೋಹನ್ ಸಿಂಗ್ ರವರನ್ನು ಕಾಣಬೇಕಿತ್ತು. ಅದರ್ಜೊತೆ ಇದನ್ನೂ ಹಾಕ್ಕೊಂಡಿದಾರೆ. ಇನ್ಮೇಲೆ ಡಿಲ್ಲಿಗೆ ಹೋಗೋದು, ಭೇಟಿಮಾಡಿ ಅಥವಾ ಭೇಟಿಮಾಡದೆಯೇ ಬರೋದು ಸರ್ವೇಸಾಮಾನ್ಯ.

’ಹಾಪೂಸ್,” ಮಾವಿನಹಣ್ಣಿನಬೆಲೆ ಈಗ ಕಡಿಮೆಯಾಗಿದೆ, ಆಗಲೇ ಸೀಸನ್ ಕೊನೆಯಾಗುತ್ತಿದೆ. ಮಾನ್ಸೂನ್ ಮುಂದಿನವಾರ ಆರಂಭವಲ್ಲವೇ !

ಮಹಾರಾಷ್ಟ್ರದ ಹಾಪೂಸ್ ಮಾವಿನಹಣ್ಣಿನ ಸವಿಯೇ ಬೇರೆ. ಆದರೆ ಮಧ್ಯಮವರ್ಗದ ಜನರ ಕೈಗೆಟುಕದಷ್ಟು ಬೆಲೆ ಇರುವ ಇದನ್ನು ಸೇಠ್ ಗಳು, ಹಣವಂತರು, ಉದ್ಯೋಗಸ್ತರು ತೆಗೆದುಕೊಳ್ಳುತ್ತಾರೆ. ಈಗ ಸೀಸನ್ ಮುಗಿಯುವ ಹೊತ್ತಿಗೆ ಅದರ ಬೆಲೆ, ಕಡಿಮೆಯಾಗುತ್ತಿದೆ. ಆದರೆ, ಅತ್ಯಂತ ಉತ್ತಮಮಟ್ಟದ ಹಣ್ಣುಗಳು, ವಿದೇಶಗಳನ್ನು ತಲುಪುತ್ತವೆ.

೨೫ ನೆಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಬಿ. ಜೆ. ಪಿ ಯ ಮಾನ್ಯ ಯಡಿಯೂರಪ್ಪನವರು ಪ್ರಮಾಣವಚನ, ಸ್ವೀಕಾರಮಾಡಿದರು !

ಇತ್ತೀಚಿನ ದಿನಗಳಲ್ಲಿ ಪೂರ್ಣಬಹುಮತವನ್ನು ಅಪೇಕ್ಷಿಸುವುದು ಬಹಳ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅಂತಹದರಲ್ಲಿ ಮಾನ್ಯ ’ಯೆಡ್ಡಿ” ಯವರು, ಪ್ರಚಂಡ ಜನಮಾನ್ಯತೆಯನ್ನು ಗಳಿಸಿ, ಅದರ ಸಾಧ್ಯತೆಯನ್ನು ಎಲ್ಲರಿಗೂ ಮನವರಿಕೆಮಾಡಿ ತೋರಿಸಿದ್ದಾರೆ.

ಮಂಡ್ಯದ ರೈತ, ಸೋಮಶೇಖರ್ , ಬೆಳೆದ ೩೦ ರಾಗಿತಳಿಗಳು !

ಮಂಡ್ಯ ಜಿಲ್ಲೆಯ ಶಿವಳ್ಳಿಗ್ರಾಮವಾಸಿ, ರೈತ ಶ್ರೀ. ಸೋಮಶೇಖರ್ ರವರು, ೩೦ ಜಾತಿಯ ರಾಗಿತಳಿಗಳನ್ನು ತಮ್ಮ ಅರವತ್ತು ಗುಂಟೆ ಹೊಲದಲ್ಲಿ ಯಶಸ್ವಿಯಾಗಿ ಬೆಳೆದು ವಿಶಿಷ್ಟಸಾಧನೆಮಾಡಿದ್ದಾರೆ.

-ಪ್ರಜಾವಾಣಿ ಫೊಟೊ ಗ್ಯಾಲರಿ.

ದುರಂತನಾಯಕ ಈಗ ಹೀರೊ ! ಇದು ಪ್ರಜಾವಾಣಿ ಪತ್ರಿಕೆ, ಮುಂದಿನ ಮುಖ್ಯಮಂತ್ರಿ, ಯಡಿಯೂರಪ್ಪನವರನ್ನು ಅಭಿನಂದಿಸುವ ಪರಿ !

ಕರ್ನಾಟಕದ ಜನ ನಿಜವಾಗಿಯೂ ತಮ್ಮ ಕೈಚಳಕವನ್ನು ತೋರಿಸಿಯೇಬಿಟ್ಟರು. ಧರಮ್ ಸಿಂಗ್, ವಾಟಾಳ್ ನಾಗರಾಜ್, ಅಂಬರೀಶ್, ರಂತಹ ನುರಿತ ಖಿಲಾಡಿಗಳ ಮಾತೇ ಇಲ್ಲದಂತೆ ಮಾಡಿದರು.

ಡಾ. ನಿಸ್ಸಾರ್ ಅಹ್ಮದ್ ರವರಿಗೆ, ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು !

’ ನಿತ್ಯೋತ್ಸವ ಗೀತೆ ’ ಯೊಂದಿಗೆ ನಮ್ಮೆಲ್ಲರ ಮನದಲ್ಲಿ ತುಂಬಿ, ಹೃದಯಕ್ಕೆ ಹತ್ತಿರವಾಗಿರುವ, ಡಾ. ನಿಸ್ಸಾರ್ ರವರಿಗೆ, ನಮ್ಮೆಲ್ಲಾ ಸಂಪದೀಯರ ಪರವಾಗಿ ಹಾರ್ದಿಕ ಅಭಿನಂದನೆಗಳು.

-ಪ್ರಜಾವಾಣಿ ಪತ್ರಿಕೆಯ ಫೊಟೊ ಆಲ್ಬಮ್ ನಿಂದ.

ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !

ಏನೂ ಅರಿಯದ ಸೈಕಲ್ ರಿಕ್ಷಾದವನನ್ನು ಕೊಂದು ಸಾಧಿಸಿದ್ದಾದರೂ ಏನು ? ಯಾಕೆ ಈ ಮಾರಣ ಹೋಮ ? ಯಾವ ದೇವರಿಗೆ ಪ್ರೀತಿ ಇದೆಲ್ಲಾ ?

-ಪ್ರಜಾವಾಣಿ ಫೋಟೊ ಗ್ಯಾಲರಿ.

ಭಾರತಸರ್ಕಾರದ ಶ್ರೇಷ್ಠ ಪ್ರಶಸ್ತಿಗಳು ಈ ಮಹಾನ್ ಉದ್ಯಮಿಗಳಿಗಲ್ಲದೆ ಯಾರಿಗೆತಾನೇ ಸೇರಬೇಕು ?

ಖ್ಯಾತ ಉದ್ಯಮಿ ಲಕ್ಷ್ಮಿ ಮಿತ್ತಲ್, ರತನ್ ಟಾಟಾ ರವರನ್ನು ಅಭಿನಂದಿಸುತ್ತಿದ್ದಾರೆ.

-ಪ್ರಜಾವಾಣಿ ಪತ್ರಿಕೆಯ ಫೊಟೊ ಆಲ್ಬಮ್ ನಿಂದ.

ಎಲೆಕ್ಸನ್ ಅಂದ್ರೆ ಏನ್ ಉಡ್ಗಾಟನಾ ; ನೋಡಿ ಏಟ್ ಜನ ಪೊಲಿಸ್ ಸಿಬ್ಬಂದಿ ಐತೆ, ಏನ್ ಬಿಗಿ ವಾತಾವರ್ಣ, ಅಲ್ವಾ ಮತ್ತೆ !

ಇವತ್ತೇ ಅಲ್ವರಾ ಎಲೆಕ್ಸನ್. ಅಂಗೆ ಇಂಗೆ ಅನ್ನಸ್ಟರಾಗೆ ಬಂದೇ ಬಿಡ್ತು ನೋಡಿ. ಏನಾಗ್ತದೊ ಆ ಸಿವ್ನೆ ಬಲ್ಲ.

-ಪ್ರಜಾವಾಣಿ ಫೊಟೊ ಗ್ಯಾಲರಿ.

ಅಮೆರಿಕದ, ಕನ್ನಡ ಕವಿತೆಯ ರಚನಾಕಾರರಾದ, ಶ್ರೀ. ನಾಗಭೂಷಣ್ ಮೂಲ್ಕಿ ಯವರಿಗೆ ಅಭಿನಂದನೆಗಳು !

ಕನ್ನಡಾಂಬೆ ಸ್ತುತಿಸುವ ಈ ಪದ್ಯ ರಚಿಸಿದ್ದು ನಾಗಭೂಷಣ ಮೂಲ್ಕಿ, ಶಿಕಾಗೊ, ಅಮೆರಿಕಾ. ಮೋಹನ ರಾಗದಲ್ಲಿರುವ ಈ ಪದ್ಯವನ್ನು ಯಾವುದೇ ಸಭೆ, ಸಮಾರಂಭದಲ್ಲಿ ರಾಗ ಸಂಯೋಜಿಸಿ ಹಾಡಬಹುದು.

ರಚನೆ -- ನಾಗಭೂಷಣ್ ಮೂಲ್ಕಿ

ರಾಗ -- ಮೋಹನ.

ಕನ್ನಡ ಮಾತೆ ಹೇ ಭುವನೇಶ್ವರಿ

ಚಂದ್ರಮನೋಹರಿ ಪ್ರಿಯಕರೀ... ಪ್ರಿಯಕರೀ.. ||ಕನ್ನಡ||

ಭೂತ ಭೌತಗತ ಆಶಾಛಾಯದಿ

" ಯುಗಯುಗಗಳು ಕಳೆದರೂ, ಯಗಾದಿ ಮರಳಿ ಬರುತಿದೆ "- ಬೇಂದ್ರೆಯವರ ಅಮರಗೀತೆ, ಇಂದಿಗೂ ಎಂದೆಂದಿಗೂ ಪ್ರಸ್ತುತ !

ಹೊಸ ವರುಷವು , ಹೊಸ ಹರುಷವ ಹೊಸತು- ಹೊಸತು ತರುತಿದೆ "

ಚಾಂದ್ರಮಾನ ಯುಗಾದಿಯ ಶುಭ ಸಂದರ್ಭದಲ್ಲಿ, ನಮ್ಮ ಆತ್ಮೀಯ ಸಂಪದೀಯರಿಗೆಲ್ಲಾ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ! ಹೊಸ ’ ಸರ್ವಧಾರಿ ಸಂವತ್ಸರ ’, ನಿಮ್ಮೆಲ್ಲರ ಜೀವನದಲ್ಲಿ ಸಂಮೃದ್ಧಿ, ಶಾಂತಿ-ಸಮಾಧಾನಗಳನ್ನು ತರಲಿ.

-ವೆಂ

ಸಿದ್ಧಗಂಗಾ ಕ್ಷೇತ್ರದ ಶ್ರೀ. ಶ್ರೀ. ಶಿವಕುಮಾರ ಸ್ವಾಮಿಗಳ ವರ್ಧಂತಿಯ ಸಮಯದಲ್ಲಿ ಅವರಿಂದ ಆಶೀರ್ವದಿಸಲ್ಪಟ್ಟ ಸನ್ಯಾಸಿಗಳು !

ನಿಮ್ಮ ಹುಟ್ಟುಹಬ್ಬದ ಪ್ರಸಂಗಕ್ಕೆ ನಮ್ಮೆಲ್ಲ ಸಂಪದೀಯರ ನಮಸ್ಕಾರಗಳನ್ನು ಸ್ವೀಕರಿಸಿ ಗುರುವೆ !

-ಪ್ರಜಾವಾಣಿ ಫೊಟೊ ಆಲ್ಬಮ್

"ಕರ್ಣಾಟಕ ಭಾಗವತ "- ಅಮೆರಿಕೆಯಲ್ಲಿ ಬಿಡುಗಡೆಯಾಗಿದೆ !

ಎರಡು ಸಂಪುಟಗಳ ಬೃಹತ್ ಗಾತ್ರದ " ಕರ್ಣಾಟಕ ಭಾಗವತ ", ವಿಶ್ವದ ಜನತೆಗೆ ಲಭ್ಯವಾಗಲಿದೆ. ರಾಮಾಯಣ- ಮಹಾಭಾರತಗಳನ್ನು ಬಿಟ್ಟರೆ, ಭಾಗವತಪುರಾಣವು ಅತಿ ಶ್ರೇಷ್ಠವೂ, ಸುಪ್ರಸಿದ್ಧವೂ ಆದ ಗ್ರಂಥ. ಶ್ರೀಕೃಷ್ಣಚರಿತ್ರೆಯ ಪೂರ್ಣವಿಸ್ತಾರಕ್ಕೆ ಇದೇ ಆಧಾರ ಕೃತಿ.

ಚೈನದ ದಬ್ಬಾಳಿಕೆಯ ವಿರುದ್ಧ, ಟಿಬೆಟ್ ನ ಬಾಲೆಯರ ಪ್ರದರ್ಶನ !

ಟಿಬೆಟ್, ಚೈನದ ಕಪಿಮುಷ್ಟಿಯಿಂದ ಸೊರಗಿದೆ. ಸ್ವಾತಂತ್ರ್ಯಕ್ಕೆ ಹಾತೊರೆಯುತ್ತಿರುವ ಯುವ- ಜನ ಚೈನದ ವಿರುದ್ಧ, ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ.

-ಪ್ರಜಾವಾಣಿ ಫೊಟೊ ಗ್ಯಾಲರಿ.

ಬಂಗಾರದಂತಹ ನಮ್ಮ ಕನ್ನಡಿಗ, ಅನಿಲ್ ಕುಂಬ್ಳೆಯವರಿಗೆ ಬಂಗಾರದ ವಜ್ರಲೇಪಿತ ಕ್ರಿಕೆಟ್ ಚೆಂಡಿನ ಉಡುಗೊರೆ !

ಬಿ. ಸಿ. ಸಿ. ಐ ನ ಅಧ್ಯಕ್ಷ, ಶ್ರೀ ಶರದ್ ಪವಾರ್ , ಚೆನ್ನೈ ನಲ್ಲಿ ನಮ್ಮ ಕನ್ನಡಿಗ, ಕ್ರಿಕೆಟ್ ಕಪ್ತಾನ್, ಅನಿನ್ ಕುಂಬ್ಳೆಯವರಿಗೆ ವಜ್ರಲೇಪಿತ ಬಂಗಾರದ ಚೆಂಡಿನ ಉಡುಗೊರೆ ಕೊಟ್ಟು ಗೌರವಿಸಿದರು.

ಸಂಪದೀಯರ ಪರವಾಗಿ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು. ಅನಿಲ್ ನಿಮಗೆ ಒಳ್ಳೆಯದಾಗಲಿ. ವಿಜಯ ಪತಾಕೆಯನ್ನು ಹಾರಿಸಿ.

-ಪ್ರಜಾವಾಣಿ ಫೊಟೊ ಗ್ಯಾಲರಿಯಿಂದ.

ಕಾಮನ ಬಿಲ್ಲನು ಕಾಣುವ ಕವಿವೊಲು, ತೆಕ್ಕನೆ ಮನ ಮೈ ಮರೆಯುವುದು !

ಕವಿಪುಂಗವರ ಮಾತುಗಳು ಕಿವಿಯಲ್ಲಿ ಭೋರ್ಗರೆಯುತ್ತವೆ, ಕಾಮನ ಬಿಲ್ಲನ್ನು ಕಂಡೊಡನೆ. ಅಲ್ಲವೇ ? ! ಕನ್ನಡ ಭಾಷೆಯ ಸೊಬಗನ್ನು ವಿವರಿಸುವಾಗ ಹೇಳಿದ ಮಾತು. ಕವಿ, ಕಾಮನ ಬಿಲ್ಲನ್ನು ಉಪಮೆಯಾಗಿ ಬಳಸಿದ್ದಾರೆ.

-ಪ್ರಜಾವಾಣಿ ಫೋಟೋ ಆಲ್ಬಮ್.

ಕನ್ನಡ ಮಾಸಪತ್ರಿಕೆ, ’ಸದ್ಬೋಧ ಚಂದ್ರಿಕೆ,’ ಶತಮಾನೋತ್ಸವದ ಸಂಭ್ರಮದಲ್ಲಿ !

ಅಗಡಿಯ, ’ಆನಂದವನ,” ಈಗ ಕನ್ನಡಿಗರೆಲ್ಲರ ಗಮನವನ್ನು ಸೆಳೆಯುತ್ತಿರುವ ಕೇಂದ್ರ. ಇಲ್ಲೆಯೇ ಶೇಷಾಚಲ ಸದ್ಗುರುಗಳು ಒಂದು ನೂರು ವರ್ಷಗಳ ಹಿಂದೆ, ಕನ್ನಡ ಪತ್ರಿಕೆ ’ಸದ್ಬೋಧ ಚಂದ್ರಿಕೆ,’ ಯೊಂದನ್ನು ಖಾಸಗಿಯಾಗಿ ಪ್ರಾರಂಭಿಸಿ, ಇತಿಹಾಸವನ್ನು ಸೃಷ್ಟಿಸಿದರು. ವೇದ ಸಂಸ್ಕೃತಪಾಠಶಾಲೆಯನ್ನೂ ಅವರು ಸ್ಥಾಪಿಸಿದ್ದರು.

ನೂತನ ದಂಪತಿಗಳು, " ಗಣೇಶ್ ಹಾಗೂ ಶಿಲ್ಪ, ಅವ್ರ ಆರತಕ್ಷತೆಯ ಚಿತ್ರ, " -ತುಮಕೂರು ಹತ್ರದ ರೆಸಾರ್ಟ್ ಹೋಟೆಲ್ ನಲ್ಲಿ !

ಆರತಕ್ಷತೆ ಶಾಸ್ತ್ರ, ಭಾನುವಾರದ ರಾತ್ರಿ ಆಯಿತು. ಸರಿ, ಮತ್ತೊಮ್ಮೆ ಅಭಿನಂದನೆಗಳನ್ನು ನಮ್ಮೆಲ್ಲ ಸಂಪದೀಯರ ಪರವಾಗಿ ಹೇಳಿಬಿಡೋಣವೇ ?

-ಪ್ರಜಾವಾಣಿ ಫೊಟೊ ಆಲ್ಬಮ್.

ತಕ್ಕಳಪ್ಪ, (ಸ) ಗೌಡ್ರು (?) ಸುರುಮಾಡೇಬಿಟ್ರು, ಆ ದರ್ಮೇಂದ್ರಪ್ಪನ್ ಡೈಲಾಗ್ನ !

ಬಯ್ಯಾದಾದ್ರೆ, ಮಂಜುಳಾ, ರಾಜ್ ಕುಮಾರ್ ಮಕ್ಕ್ಳುಗ್ಳ ಬಯ್ಯೊದ್ಯಾವ್ದಾರಾ ಡೈಲಾಗ್ ಐತಾ, ಇಚಾರ್ಸ್ಕಳ್ಳಿ. ಓಗೋಗಿ ನೀವ್ ಆ ಇಂದಿ ಆಕ್ಟ್ರು ದರ್ಮೇಂದ್ರಪ್ಪನಾ ಕಾಪಿ ಮಾಡೋದು ? ಮಮ್ತಾ ಬ್ಯಾನರ್ಜಿ, ಜಯ್ಲಲಿತಾ, ಉಮಾಬಾರ್ತಿ ಇವ್ರೆಲ್ಲಾ ಇರೋದ್ನ ಮರ್ತ್ ಬಿಟ್ರಾ ಗೌಡ್ರೆ ?

ಒಳ್ಳೆ ಕೆಲ್ಸ ಮಾಡಿದ್ರಿ, ಉಲಿ ಸಂರಕ್ಸ್ನೆ ಅಂದ್ರೆ ಯೇನ್ ಮತೆ, ಇದೆ ಅಲ್ಲವ್ರಾ !

ನಿನ್ನಿನ್ ಪ್ಯಾಪರ್ನಾಗೆ, ಕೊಟ್ಟಿದ್ರಲ್ಲ. ಬಂಗಾಳ್ದಾಗೆ, ಒಂದ್ ಅಳ್ಳಿನಗೆ, ಉಲಿರಾಣಿ ನುಗ್ಗಿ, ಬಾಳ ಲೇವ್ಡಿ ಮಾಡಿದ್ಲಂತೆ, ಅರಣ್ಯದ ಇಲಾಕೆನೊರು, ಅದನ್ನ ಇಡ್ದು, ಕೂಡಾಕಿ, ಸಣ್ಣ ದೋಣಿನಾಗೆ ಕುಂಡರ್ಸ್ಕಂಡು, ಓಗಿ, ನದಿನೀರ್ನಾಗೆ ಬಿಟ್ಟ್ರಂತೆ. ಇದು ಆ ಉಲಿಯಮ್ಮಂಗೂ ಒಳ್ಳೇದು, ಮತ್ತೆಲ್ರುಗು. ಅಲ್ಲ್ವರಾ ?

-ಪ್ರಜಾವಾಣಿ ಫೋಟೊ ಆಲ್ಬಮ್.

ಇದು ನಮ್ಮ ನೈಜ ಭಾರತ -ಝಾರ್ಖಂಡ್ ನಲ್ಲಿ ನಾಯಿಜೊತೆ, ಪುಟ್ಟ ಕಂದನ ಮದುವೆ ? !

ಹೀಗೂ ನಡಿಯತ್ಯೆ ? ಹೌದು. ಹೀಗೇ ನಡೀತಾ ಇರೋದು. ನಮ್ಮ ದೇಶದಲ್ಲಿ. ಇದೇ ನಮ್ಮ ಅಸಲಿ ಭಾರತ !

-ಪ್ರಜಾವಾಣಿ ಫೊಟೊ ಗ್ಯಾಲರಿ.

ಇದು ಖಂಡಿತ ’ಫೋಟೋ,” ಅಲ್ಲ. ಕಲಾವಿದನ ಕುಂಚದಿಂದ ಮೂಡಿದ ’ಕಲಾಕೃತಿ,’ ಯಂತಿದೆ !

’ಪ್ರಜಾವಾಣಿ ಫೋಟೋ ಗ್ಯಾಲರಿ,’ ಯಿಂದ ಅತ್ಯುತ್ತಮ ಕಲಾಕೃತಿಗಳು, ಮೂಡಿಬರುತ್ತಿವೆ. ಅದರ ಶ್ರೇಯಸ್ಸು, ಕಲಾವಿದರುಗಳಲ್ಲೊಬ್ಬರಾದ, ಅನಂತ ಸುಬ್ರಮಣ್ಯ ರಂತಹವರಿಗೆ ಸೇರಬೇಕು !

ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !

ಗಣೇಶ್, ಶಿಲ್ಪ ಮದ್ವೆ ಆಗೇ ಹೋಯ್ತು !

ಎರ್ಡ್ ವರ್ಷದಿಂದ ಈ ಚಕ್ಕರ್ ನಡೀತಾನೆ ಇತ್ತಂತೆ. ಬೇರೆ ಕನ್ನಡದ್ ಹುಡ್ಗೀರು, ನೀವ್ ಮದ್ವೆ ಆಗ್ದೆ ಹೋದ್ರೆ, ಆತ್ಮಹತ್ಯೆ ಮಾಡ್ಕತೀವಿ” ಅಂತ ಹೆದ್ರಿಕೆ ಹಾಕಿದ್ ಮೇಲೆ, ಪಾಪ ಗಣೇಶ್ ಇಂಥ ಕ್ರಮ ತೊಗೊಳ್ಲೆಬೇಕಾಯ್ತಲ್ವ. ಏನ್ಮಾಡ್ತಾರ್ ಹೇಳಿ. ಧರ್ಮಸಂಕಟ !

-kannada prabha, news paper

’ ವ್ಯಾಲೆಂಟೈನ್ ದಿನ ’ ಕ್ಕೆ ಶುಭಕೋರಲು, ದೇಸಿ ಮಾಡೆಲ್ ’ಶುಭಾಶಯಪತ್ರ” !

ಗೆರೆಗಳು, ನಮ್ಮ ಹೆಬ್ಬಾರ್ ರವರ ನಮೂನೆಯನ್ನು ಹೋಲುತ್ತಿವೆಯಲ್ಲ.

-ಕನ್ನಡ ಪತ್ರಿಕೆ.

’ಆರ್ಟ್ ಫ್ ಲಿವಿಂಗ್” ಜನಪ್ರಿಯತೆ, ವಿದೇಶಗಳಲ್ಲಿ ಸಕತ್ತಾಗಿದೆ !

ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಅಮೆರಿಕದ ಯುವಜನರನ್ನು ಸೂಜಿಕಲ್ಲಿನ ತರಹ ಆಕರ್ಶಿಸುತ್ತಿದೆ. ಅದರ ಲಾಭವನ್ನು ಅಬಾಲವೃದ್ಧರಾದಿಯಾಗಿ ಪಡೆಯುತ್ತಿದ್ದಾರೆ.

ಖ್ಯಾತಕೃಷಿತಜ್ಞ, ಶ್ರೀ. ಎಮ್. ಎಸ್. ಸ್ವಾಮಿನಾಥನ್ ಸೇರಿದಂತೆ, ಕೆಲವು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನಮಾಡಲಾಯಿತು !

ಮೈಸೂರ್ ವಿಶ್ವವಿದ್ಯಾಲಯದ, ’ಘಟಿಕೋತ್ಸವದ ಸಮಾರಂಭ ’ ದ ಸಮಯದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಸಲ್ಲಿಸಿದ ಮಹನೀಯರನ್ನು ಗೌ. ಡಾಕ್ಟರೇಟ್ ಕೊಡುವುದರ ಮೂಲಕ, ಗೌರವಿಸಲಾಯಿತು.

-ಕೃಪೆ : ಪ್ರಜಾವಾಣಿ ಫೊಟೊ ಆಲ್ಬಮ್.

ಮಹೇಶ್ ಯೋಗಿಯವರ ನಿಧನ !

ಹೇಗ್ ನಗರ : ೯೧ ವರ್ಷದ ಮಹರ್ಷಿ ಮಹೇಶ್ ಯೋಗಿಯವರು, ’ Beatles ಸಮಾಜ ’ ಕ್ಕೆ ಗುರುವಾಗಿದ್ದರು. ಪಾಶ್ಚಿಮಾತ್ಯದೇಶಗಳಿಗೆ ’ transcendental meditation ” ಪದ್ಧತಿಯನ್ನು ಬೋಧಿಸಿದ್ದರು. ತಮ್ಮ ಡಚ್ ಹಳ್ಳಿ ’ Vlodrop, ” ಯ ಮನೆಯಲ್ಲಿ ಮಂಗಳವಾರ, ಮೃತರಾದರು.

’ Transcendental Meditation ’ ಸಂಸ್ಥೆಯ ವಕ್ತಾರರ ಪ್ರಕಾರ, ರಾತ್ರಿ ೭ ಘಂಟೆ ಸಮಯದಲ್ಲಿ ತೀರಿಕೊಂಡಾಗ. ಶಾಂತಿ ಸಮಾಧಾನಗಳಿಂದ ಇದ್ದರು.

ವಾಟಾಳ್ (What All) ಪ್ರತಿಭಟನೆಯ ಇನ್ನೊಂದು ಮುಖ !

ಅಬ್ಬ. ’ಪ್ರತಿಭಟನೆ ”, ಎನ್ನುವ ಪದಕ್ಕೆ ಅರ್ಥ ಹುಡುಕಿದರೆ, ಅದನ್ನು ನೀವು ’ ವಾಟಾಳ್ ” ಎಂಬ ಪದವನ್ನು ನೋಡಿದರೆ ಸಿಗುತ್ತದೆ. ಆದರೆ ಇದನ್ನು ಹೇಗೆ ಅರ್ಥಪೂರ್ಣವಾಗಿ ಮಾಡುವುದು ಎನ್ನುವುದನ್ನು ಕಲಿಯಲು, ಮಹಾರಾಷ್ಟ್ರದ ಮುಂಬೈನಗರಕ್ಕೆ ಬಂದು, ’ ಶಿವಸೇನೆ ’ಯ ನಾಯಕರನ್ನು ಭೇಟಿಮಾಡಿದರೆ, ಸಾಕು ಸಿಗುತ್ತದೆ. ಅವರು ಅಂತಹ ಪ್ರತಿಭಟನೆಯಲ್ಲಿ ನಿಷ್ಣಾತರು.

ಮಾಸ್ತಿಪ್ರಶಸ್ತಿವಿಜೇತ, ಬಂಡಾಯ, ಹೇಮಂತಗಾನ, ಉತ್ತರಾಯಣ, ವಾತ್ಸಲ್ಯಪಥ ದಂತಹ ಕಾದಂಬರಿಗಳ ರಚೇತ, ಮುಂಬೈನ ಕವಿ, ವ್ಯಾಸರಾಯ ಬಲ್ಲಾಳರ ನಿಧನ !

೮೫ ವರ್ಷವಯಸ್ಸಿನ ಬಲ್ಲಾಳರು, ತಮ್ಮ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಸ್ವಗೃಹದಲ್ಲಿ ಬುಧವಾರ ಮೃತರಾದರು. ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿ, ಉತ್ತರಾಯಣದ ಪ್ರಾರಂಭದಲ್ಲೇ ನಮ್ಮನ್ನಗಲಿಹೊರಟು ಹೋದರು. ಮೃತರ ಆತ್ಮಕ್ಕೆ ಶಾಂತಿಕೋರೋಣ.

ನಾರಾಯಣಮೂರ್ತಿಗಳಿಗೆ ಅಭಿನಂದನೆಗಳು !

ನವದೆಹಲಿ, ಜ.27: ಐಟಿ ವಲಯದ ಸಾಧಕ, ಕನ್ನಡಿಗ ಇನ್ಫೋಸಿಸ್ ನ ಎನ್ .ಆರ್. ನಾರಾಯಣಮೂರ್ತಿ ಅವರಿಗೆ ಫ್ರಾನ್ಸ್ ದೇಶದ ಅತ್ಯುತ್ತಮ ನಾಗರಿಕ ಗೌರವವಾದ "ಆಫೀಸರ್ ಆಫ್ ದಿ ಲೇಜಸ್ ಆಫ್ ಹಾನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತಣ್ಣಿಗ್ ಬಾಳಪ್ಪ- ಏನಾದ್ರು ಒಳ್ಳೆ ಕೆಲ್ಸ ಮಾಡ್ತಿರು

ದೊಗ್ನಾಳ್ ಮುನ್ಯಪ್ಪ,
ದೊಗ್ನಾಳ್,
ಚಿತ್ರದುರ್ಗ ಡಿ.
ಕರ್ನಾಟಕ ಸ್ಟೇಟ್.

ಯೆಂಕ್ಟೇಸಪ್ಪಂಗೆ,
ಆಸೀರ್ವಾದ್ಗಳು.

ಏನಪಾ ಯಾವತ್ತಿತ್ತು ನಿನುಟ್ದಬ್ಬ ! ನಮ್ಗೆ ಅದ್ರ್ ಗುಟ್ಟೇ ತಿಳೀಲಿಲ್ಲಪಾ !

ಸರಿಕಣಪ. ತಣ್ಗ್ ಬಾಳಪ್ಪ. ನಮ್ ನಾಗೇಶ್ ಏಳಿದ್ಮ್ಯಾಗ್ ತಿಳೀತ್ ನೋಡು. ಪಾರವ್ವ ನಿನ್ಗೆ ಏನೋ 'ಸಿ' ಕೊಡ್ಬೇಕೂ ಅಂತ ಮಾಡವ್ಳೆ. ಮನೀಕಡ್ಗೆ ಬಾರಪ್ಪ.

ಯೆಂಕ್ಟೇಶ,

ಥಟ್ಟಂಥೇಳ್ರಿಮತ್ತ !

ಥಟ್ಟಂಥೇಳ್ರಿಮತ್ತ.

ಮಗ್ಗಲ್ನಾಗ್ ಕೊಟ್ಟಿರೋ, ಚಿತ್ರದೊಳ್ಗಿನ್ ಹುಡ್ಗ, ಯಾರ್ ಅಂಥೇಳ್ರಿಮತ್ತ ?

ಛಲೊ ಸುಳ್ಹುಗಳು ೬ ಇದಾವು. ಬೇಕಾದ್ ಹಾಂಗ್ ಆರ್ಸ್ ಕೊಳ್ರಿ ; ನಡೀತದ.

೧. ಮತ್ತ, ೩, ೧೨೦ ವಾರಗ್ಳ ಹಿಂದೆ, ಈ ಭೂಮಿ ಮ್ಯಾಲೆ ಬಂದಕೂಡ್ಲೇ ರೋದ್ನಮಾಡ್ಲಿಕ್ ಹತ್ತಿದರಂತ್ರಿ !

೨. ತಾಯಿ-ತಂದಿ, ಇವ್ರ ಕೈಲಿ ಸಾಲೀಮಣಿ [ಸ್ಲೇಟ್] ಕೊಟ್ಟಾಗ, ಗೀಚಕ್ ಸುರುಮಾಡಿದ್ರಂತ್ರಿ.

೩. ಹುಟ್ಟಿದ್ ಹಳ್ಳೀನಾಗ್ರಿ, ಈಗ ಭಾರತದ್ ವಾಣಿಜ್ಯ ರಾಜ್ಧಾನೀಯಾಗ್ ವಾಸ್ತವ್ಯಂತ್ರಿ.

೪. ಈಗ್ಲೂ ಅದೇ ಹುಚ್ಚ್ ಮುಂದ್ವರ್ದೈತಿ, ಅಂತಾರ್ರಿ, ಇವ್ರುತಿರ್ಪತಿ ತಿಮ್ಮಪ್ಪನ್ ಒಂದು ಹೆಸರ್ನ ಎರ್ವುಲು ಪಡಕೊಂಡಾರಂತ್ರಿ.

೫. ಗೊತ್ತಿರ್ಲಿ ಬಿಡ್ಲಿ, ಎಲ್ಲಾ ವಿಷಯಗಳ್ಮೇಲೂ, ಯಾರಾರು ಕೇಳ್ಲಿ ಇಲ್ಲ ಬಿಡ್ಲಿ, ಏನಾರು ಒದರ್ತಾನೇ ಇರ್ತಾರಂತ್ರಿ.

೬. ಸಂಪದೀಯರೆಲ್ರಿಗು ಇವೃ ಆಪ್ತರಂತ್ರಿ. ಅವ್ರ್ ಅಂತಾರ್ರಿ. ನಮ್ಗೆ ತಿಳಿವಲ್ದು. ಅದರ್ ಖಬರ್ ಇಲ್ರಿ.

ಡಾ. ಎಸ್. ಎಲ್. ಭೈರಪ್ಪನವರು, ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !

ಡಾ. ಎಸ್. ಎಲ್. ಭೈರಪ್ಪನವರು, ಮುಂಬೈನ ಮೈಸೂರ್ ಅಸೋಸಿಯೇಷನ್ ನ ದತ್ತಿ ಉಪನ್ಯಾಸ ಸಮಾರಂಭಕ್ಕೆ , ಆಹ್ವಾನಿತ ಉಪನ್ಯಾಸಕಾರರಾಗಿ ಬಂದಿದ್ದರು. ಅಸೋಸಿಯೇಷನ್ ನ ಅಧ್ಯಕ್ಷರಾದ, ಶ್ರೀ ದೊರೈಸ್ವಾಮಿಯವರ ಜೊತೆ ಮಾತು-ಕತೆಯಲ್ಲಿದ್ದಾಗ ಸೆರೆಹಿಡಿದ ಚಿತ್ರ !

ವಾಹ್ ಗಿಲ್ಕ್ರಿಸ್ಟ್ ರೆ, ಹೇಗ್ ಹಾರಿದ್ರಿ ಮಾರಾಯ್ರೆ ; ಎಂತದು ಮಾರಾಯ, ಅವ ಹಾರಿದ್ ನೋಡಿದ್ರ ? !

ಆಸ್ಟ್ರೇಲಿಯದ ಕ್ಷ್ಗೇತ್ರರಕ್ಷಕರ ಗಮ್ಮತ್ತು ನೋಡಿ ಮಾರಾಯ್ರೆ. ೩೬ ವರ್ಷದ ಹರೆಯದ ಗಿಲ್ ಕ್ರಿಸ್ಟ್ ಹಾರೋದ್ ನೋಡಿದ್ರೆ, ಅವರಿಗೆ ಮೂವತ್ ಹಾರೋ ವರ್ಷದ್ ತರ್ಹ ಕಾಣಿಸ್ತದ. ಇಂಥ ಒಂದು ಕ್ಯಾಚ್ ನೋಡಿದ್ರೆ ಸಾಕು, ಪೈಸ ವಸುಲ್ ಅಲ್ವಾ ?

-ಪ್ರಜಾವಾಣಿ ಫೊಟೊ ಆಲ್ಬಮ್.

ರಾಷ್ಟ್ರೀಯ ಯುವದಿನ- ಸ್ವಾಮಿವಿವೇಕಾನಂದರ ಜನ್ಮದಿನ !

" ವಿದ್ಯುತ್ ವಾಣಿ, " ಯಿಂದ ಸಂಗ್ರಹಿಸಿದ ಸ್ವಾಮೀಜಿಯವರ ಅಮೃತವಾಣಿ :

ಜನವರಿ, ೧೨, ರಾಷ್ಟ್ರೀಯ ಯುವದಿನ, ಸ್ವಾಮಿಯವರ ಹುಟ್ಟಿದ ಹಬ್ಬದ ಶುಭದಿನ.

ರತನ್ ಟಾಟಾ ರವರ ಸಣ್ಣ ಕಾರು, " ನ್ಯಾನೊ," ದೇಶಕ್ಕೆ ಸಮರ್ಪಣೆ !

Tata Group ಛೇರ್ ಮನ್, ಶ್ರೀ. Ratan Tata ರವರು, ಗುರುವಾರ ದೆಹಲಿಯಲ್ಲಿ ಹಮ್ಮಿಕೊಂಡ 9ನೆಯ Auto Expo in New Delhi, ನಲ್ಲಿ ತಮ್ಮ ಕನಸಿನ ಕೂಸಾದ ಚಿಕ್ಕ ಕಾರನ್ನು, ಪ್ರಪ್ರಥಮವಾಗಿ ಭಾರತದ ಹಾಗೂ ವಿಶ್ವದ ಮೋಟಾರ್ ಪ್ರದರ್ಶವನ್ನು ವೀಕ್ಷಿಸಲು ಬಂದ ಗಣ್ಯರಿಗೆ ತೋರಿಸಿ ವಿವರಿಸಿದರು.

ಜನಸಾಮಾನ್ಯರ ಕಾರಿನ ವಿವರ :

‘ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ, ಡಾ.ಪ್ರಮೋದ್ ಕರಣ್ ಸೇಥಿ, ವಿಧಿವಶರಾದರು !

ವಿಕಲಚೇತನರಿಗೆ ಬದುಕು ಕೊಟ್ಟ ಡಾ.ಸೇಥಿ ಇನ್ನಿಲ್ಲಸೋಮವಾರ, 7 ಜನವರಿ 2008, 13:4 Hrs (IST)

ಜೈಪುರ, ಜ.7: ಕಾಲು ಕಳೆದುಕೊಂಡವರೂ ನಡೆದಾಡುವಂತೆ ಮಾಡಿದ ‘ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ ಡಾ.ಪ್ರಮೋದ್ ಕರಣ್ ಸೇಥಿ (80) ಭಾನುವಾರ(ಜ.6) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ರೀ, ಸ್ವಾಮಿ, ಪರಿಸರ ಪ್ರಜ್ಞೆ ಬೇಡ್ವೇನ್ರಿ. ದೇವಾಲಯವೀ ಸುಂದರ ತೋಟ, ಅನ್ನೊದ್ನ ಮರ್ತ್ರ. ಏನಪ್ಪ ನೀವೂ ಹೀಗೆನಾ ?

ನಮ್ಮ ಮುಂಬೈನಲ್ಲಿ ಇದು ಮಾಮೂಲು. ಬೆಂಗ್ಳೂರ್ ನಲ್ಲು ಹೀಗೆನಾ ?

-ಸಂಜೆವಾಣಿ ಪತ್ರಿಕೆ.

ಲಂಡನ್ ಪರೇಡ್‌ನಲ್ಲಿ ಯಕ್ಷಗಾನ ಪ್ರದರ್ಶನ. ಯಕ್ಷಗಾನದ ಇತಿಹಾಸದಲ್ಲಿ ಅಚ್ಚಳಿಯದ ಒಂದು ಹೊಸ ಪುಟ !

ಲಂಡನ್, ಜ. 3 : ನಮ್ಮ ಕನ್ನಡ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ಯಕ್ಷಗಾನವನ್ನು ಪ್ರಪಂಚಕ್ಕೆಲ್ಲ ಹರಡುವ ಉದ್ದೇಶದಿಂದ ಇಂಗ್ಲೆಂಡಿನ www.yakshaland.com ಸದಸ್ಯರು ಜನವರಿ 1ರ ಐತಿಪಾಸಿಕ ಲಂಡನ್ ಪರೇಡ್‌ನಲ್ಲಿ ಯಕ್ಷಗಾನ ಪ್ರದರ್ಶಿಸಿದರು. ಸುಮಾರು 5 ಲಕ್ಷ ಲಂಡನ್ ಜನರು ಈ ಪ್ರದರ್ಶನವನ್ನು ವೀಕ್ಷಿಸಿ ಹರ್ಷೊದ್ಗಾರ ಮಾಡಿದರು. ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

" ಅಲ್ಲಿದ ನಂ ಮನಿ, ಇಲ್ಲಿರುವು ಸುಮ್ಮನ," ಅನ್ನೋ ದಾಸ್ರ್ ಪದ, ಈ ಮದ್ದು ಮುಂಡೇವಕ್ಕೆ ಹ್ಯಾಂಗ್ತಿಳ್ದಿರ್ಬೋದು ?

ಇವೆಲ್ಲಾ ಫ್ಲೆಮಿಂಗೋಗಳು, ಬರ್ತಾವೆ, ಮಕ್ಕಳು ಮರಿ ಹಡ್ದು, ಹೊರ್ಟಹೋಗ್ಬಿಡ್ತಾವೆ. ಅವೆಲ್ಲೋ ನಾವೆಲ್ಲೋ ! ಮುಂದಿನ ವರ್ಷ, ಮತ್ ಅವರ್ ಭೆಟ್ಟಿ ಆಗ್ತದ !

ಎಲ್ಲಾ ಆವನ್ ದಯ, ನಮ್ದೇನೈತ್ರಿ !

ದಟ್ಸ್ ಕನ್ನಡ ಇ-ಪತ್ರಿಕೆಯ ಸೌಜನ್ಯದಿಂದ.

ಪಾರ್ಕ್ ನಲ್ಲಿನ ಹತ್ತಿ ಗಿಡದಲ್ಲಿ ಕಾಯಿಗಳು !

ಪಾರ್ಕ್ ನಲ್ಲಿ ನ ಗಿಡದಲ್ಲಿ ಹತ್ತಿಕಾಯಿಗಳು , ಬಂದಿವೆ. ಜನ ಒಳ್ಳೆಯವರು. ಕಿತ್ತಿಲ್ಲ, ಸದ್ಯ.

ಶ್ರೀಮತಿ. ರಮಾವಿದ್ಯಾಭೂಷಣರಿಗೆ ಅಭಿನಂದನೆಗಳು !

ಈಗಾಗಲೇ ಇವರು, ಗೃಹಸ್ತಜೀವನದ ಉಪನ್ಯಾಸವನ್ನು ಸಮರ್ಥವಾಗಿ ಮುಗಿಸಿ, ತಮ್ಮ ಎರಡನೆಯ ಉಪನ್ಯಾಸದ ಕಡೆ ದಾಪುಗಾಲು ಹಾಕುತ್ತಿದ್ದಾರೆ. ಅದು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ. [ಪ್ರವೇಶ.] ಹೀಗೆಯೇ, ಅವರ ಅನೇಕ ಲೆಕ್ಚರ್ ಮತ್ತು ಡೆಮಾನ್ಸ್ಟ್ರೇಶನ್ ಗಳನ್ನು ನಾವು ಮುಂದಿನ ವರ್ಷದಲ್ಲಿ ನಿರೀಕ್ಷಿಸಬಹುದು.

ಪ್ರೊ. ಶ್ರೀನಿವಾಸ ರಾಜು, ತೀರ್ಥಹಳ್ಳಿಯಲ್ಲಿ, ಅಸ್ತಂಗತರಾದರು !

ಬೆಂಗಳೂರು, ಡಿ.28:ಪ್ರೀತಿಯ ಮೇಷ್ಟ್ರು, ಕನ್ನಡ ನುಡಿಸೇವಕ ಪ್ರೊ.ಚಿ.ಶ್ರೀನಿವಾಸರಾಜು ಇನ್ನಿಲ್ಲ. ಅವರು ಶುಕ್ರವಾರ (ಡಿ.28) ಬೆಳಗ್ಗೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 65ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ದೆಹಲಿಯ ’ ಅಕ್ಷರ್ ಧಾಮ್ ’ ಮಂದಿರ, " ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್," ನಲ್ಲಿ ಸೇರ್ಪಡೆ !

"ಸ್ವಾಮಿನಾರಾಯಣ ಮಂದಿರ " ಗಳು ಕಲ್ಲಿನ ವಾಸ್ತುಶಿಲ್ಪ, ಕೆತ್ತನೆಕೆಲಸ, ಹಾಗೂ ಅದ್ಭುತವಿನ್ಯಾಸಗಳಿಗೆ, ದೇಶ-ವಿದೇಶಗಳಲ್ಲಿ, ಹೆಸರುವಾಸಿ.

-ದಟ್ಸ್ ಕನ್ನಡ, ಇ-ಪತ್ರಿಕೆಯ ಸೌಜನ್ಯದಿಂದ.

ಸಂತಾಕ್ಲಾಸ್ , ಆಗಕ್ಕೆ ಎಲ್ಲ ಮಕ್ಕಳ್ಗೂ ಆಸೆ ! - ದಯಾನಂದನ್, ಅಂಥವರಲ್ಲೊಂದು ಮಗು !

" ಕ್ರಿಸ್ ಮಸ್ ಹಬ್ಬ ", ಬಂತು ಅಂದ್ರೆ ಮಕ್ಕಳಿಗೆ ತುಂಬಾ ಪ್ರೀತಿ. ಮೊದಲು ತಾವೂ ಸಾಂತಾಕ್ಲಾಸ್ ವೇಷಹಾಕ್ಕೊಂಡ್, ಸಂಭ್ರಮ ಪಡ್ತಾರೆ !

ಕ್ರಿಸ್ಮಸ್ ಗಿಡಗಳಲ್ಲೇ ಅತ್ಯಂತ ಎತ್ತರವಾದ ಗಿಡ , ಚೆನ್ನೈ ನಗರದಲ್ಲಿ ಪ್ರದರ್ಶನ !

ಚೆನ್ನೈ, ಡಿ. 23 : ಗುಡ್‌ವಿಲ್ ಕಮ್ಯುನಿಕೇಷನ್ಸ್ ಭಾನುವಾರ (ಡಿ.23) ಆಯೋಜಿಸಿದ್ದ "Season of Love" ಎಂಬ ಉತ್ಸವದಲ್ಲಿ ಪ್ರದರ್ಶನಗೊಂಡ 65 ಅಡಿ ಎತ್ತರದ ಕ್ರಿಸ್ಮಸ್ ಗಿಡ. ಚೆನ್ನೈ ನಗರದಲ್ಲಿ ಪ್ರದರ್ಶನಗೊಂಡ ಕ್ರಿಸ್ಮಸ್ ಗಿಡಗಳಲ್ಲೇ ಅತ್ಯಂತ ಎತ್ತರವಾದ ಗಿಡ ಎಂಬ ಪ್ರಶಂಸೆಗೆ ಪಾತ್ರವಾಯಿತು.
(ಯು.ಎನ್‌.ಐ)

-ದಟ್ಸ್ ಕನ್ನಡ ಪತ್ರಿಕೆ ಸೌಜನ್ಯದಿಂದ.

ಬಿ. ಎಲ್. ವೇಣುರವರಿಗೆ ಅಭಿನಂದನೆಗಳು !

ಕರ್ನಾಟಕ ಸಾಹಿತ್ಯ ಆಕ್ಯಾಡಮಿ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು !

-ಪ್ರಜಾವಾಣಿ ಫೋಟೊ ಗ್ಯಾಲರಿ.

ವಿಶ್ವದ ಅತ್ಯಂತ ದೊಡ್ಡ ಟವೆಲ್ ನೋಡಿದೀರಾ, ದೇವ್ರು ? ಇಲ್ಲಿದೆ ನೋಡಿ !

ವೆಲ್ ಸ್ಪನ್ ಎಂಬುದು ಒಂದು ಬಟ್ಟೆ ತಯಾರಿಸುವ ಬೃಹತ್ ಸಂಸ್ಥೆ. ಇದು ಹಲವು ಹೊಸಮಾದರಿಯ ಟವೆಲ್ ಗಳಿಗೆ ಮೊದಲಿನಿಂದ ಪ್ರಸಿದ್ಧಿ. ಅವರ ಮೇನ್ ಪ್ರಾಡಕ್ಟ್ ಟವೆಲ್ ! ಬೆಂಗಳೂರಿನ ಈ ಸಂಸ್ಥೆ, ಮತ್ತೆ ಸುದ್ದಿಯಲ್ಲಿದೆ.

-ಸಂಜೆವಾಣಿ ಪತ್ರಿಕೆಯ ಕೊಡುಗೆ.

ಇಸ್ಕಾನ್ ದೇವಾಲಯದ್ ಸೊಬಗ್ ನೋಡಿ. ಇದೇ ಹೀಗಿದ್ ಮ್ಯಾಲೆ, ಒಳ್ಗಿನ್ ದೇವ್ರು ಹೇಗಿರ್ಬ್ಯಾಡ !

ಗುರುವಾರ ವೈಕುಂಠ ಏಕಾದಶಿ, ಅಲ್ವ. ಆದಿನ ಈ ದೇವಾಲಯ ಹೀಗೆ ಕಂಗೊಳ್ಸ್ತಿರುತ್ತೆ.

-ಪ್ರಜಾವಾಣಿ ಫೋಟೊ ಗ್ಯಾಲರಿಯಿಂದ.

ದೊಡ್ಡ ಸಾಂತಾಕೃಝ್ ಪ್ರತಿಮೆ-ಮಕ್ಕಳಿಗೆಲ್ಲಾ ಗಿಫ್ಟ್ ತಂದಿದಾನೆ !

ಕ್ರಿಸ್ -ಮಸ್ ಹಬ್ಬ, ಬರ್ತಾಇದೆ ; ಇನ್ನೇನು ೧೦ ದಿನ ಅಷ್ಟೆ ! ಬೆಂಗಳೂರಿನಲ್ಲಿ, ಭಾರಿ ಸಾಂತಾಕ್ರೂಝ್ ಚಿತ್ರದ ಪ್ರದರ್ಶನ ಮಾಡಿದಾರೆ. ಈತ ಸಾಂತಾಕೃಝೋ, ಅಥವ ಸಾಂತಾಕ್ಲಾಸೋ, ನನಗೆ ಸರಿಯಾಗಿ ತಿಳಿಹೀಳಿ ಮಾರಾಯ್ರೆ. ಅದನ್ನು ಸ್ವಲ್ಪ ತಿಳಿಸ್ತೀರಾ ಸ್ವಾಮಿ.
ಯಾರಾದ್ರು ಸರಿನೆ.

-ಸಂಜೆವಾಣಿ ಪತ್ರಿಕೆಯವರ ಸೌಜನ್ಯ.

೭೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಸ್ವಾಗತ- ಪ್ರೊ. ಎಲ್. ಎಸ್. ಎಸ್. ರವರಿಗೆ ಅಭಿನಂದನೆಗಳು !

ಉಡುಪಿಯಲ್ಲಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಉದ್ಘಾಟಿಸಲ್ಪಟ್ಟ ಕಾರ್ಯಕ್ರಮದ ಇನ್ನೊಂದು ಪ್ರಮುಖ ಆಕರ್ಷಣೆ -ಭರ್ಜರಿ ಮೆರವಣಿಗೆ . ಡಾ. ಎಲ್.ಎಸ್.ಎಸ್, ಮತ್ತು ಹೆಗ್ಗಡೆಯವರನ್ನು ರಥದಲ್ಲಿ ಕೂಡಿಸಿಕೊಂಡು, ರಸ್ತೆಯಲ್ಲಿ ಮೆರವಣಿಗೆ ಮಾಡಿದರು.

ಚಿತ್ರ : ಪ್ರಜಾವಾಣಿ.

ಗಂಧದ ನಾಡಿದು, ಚಿನ್ನದ ನಾಡಿದು, ಹೋಗಿ ಸರ್ಕಾರವೂ ಇಲ್ಲದ ನಾಡಾಗಿದೆ - ನಮ್ಮ ಕರ್ ನಾಟಕ ; ಆಸ್ಟ್ರೇಲಿಯ ಈಗ ಶ್ರೀಗಂಧದ ತವರೂರು !

ಅಡ್ಡೂರು ಕೃಷ್ಣರಾವ್, ತಮ್ಮ ಲೇಖನದಲ್ಲಿ, ಆಸ್ಟ್ರೆಲಿಯದ ಶ್ರೀಗಂಧದ ಸಾಗುವಳಿಯ ಬಗ್ಗೆ, ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಅದು ನ್ಯಾಯತಾನೇ ?

-ಉದಯವಾಣಿ ಪತ್ರಿಕೆ.

ಕಬ್ಬನ್ ಪಾರ್ಕ್ ನಲ್ಲಿ ಪಿಂಕ್ ಲೆಪಾಕೊ ಮರವೊಂದು, ಅರಳಿ ಸಿಂಗಾರವಾಗಿ ನಿಂತು ಮುದಕೊಡುತ್ತಿದೆ. ಒಮ್ಮೆ ನೋಡಿ !

ಅಮೆರಿಕದ pink lapacho ಮರ.

ಏನು ಸೊಬಗಿದು !

-ಥಟ್ಸ್ ಕನ್ನಡ, - ಪತ್ರಿಕೆಯ ಕೊಡುಗೆ.

ಚುಮು ಚುಮು ಚಳಿಯಲ್ಲಿ ಚಿಲ್ ಆದ ಬೆಂಗಳೂರು ಆಹಾ....

ರೋಹಿತ್ ಎಂ.ಏಸ್. ಅವರು ನಮ್ಮ ಕಚೇರಿಯ ನಾಲ್ಕನೇ ಅಂತಸ್ತಿನಿಂದ ಬೆಂಗಳೂರಿನ ಟಿವಿ ಟವರ್ ಮತ್ತು ಅರಮನೆಯತ್ತ ಕ್ಯಾಮೆರಾ ಕ್ಲಿಕ್ಕಿಸಿದ್ದು ಹೀಗೆ.

ಓ ಇಶ್ವರ, ನನ್ನ ಲೆಕ್ಕಾಚಾರ ಎಲ್ಲ ಬುಡ್ಮೇಲಾಗ್ತಿದೆಯಲ್ಲ. ಕಾಪಾಡು, ದೇವ, ಈ ದ್ಯಾವೇಗೌಡನ್ನ !

ಮಾಜಿ ಪ್ರಧಾನಿ, ಈಗಿನ ಜೆ.ಡಿ.ಎಸ್ ನ ಮಹಾ ಕಮ್ಯಾಂಡರ್ , ಶ್ರೀ. ದೇವೇಗೌಡರು, ತಮ್ಮ ಧರ್ಮಪತ್ನಿ ಸಮೇತ, ಶ್ರೀ. ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ, ದೇವ್ರಿಗೆ, ತಪ್ಪೊಪ್ಪಿಗೆ ಮಾಡ್ತಿರಬಹುದಾ, ಕೊನ್ಗೆ ಇದೆ ಅಲ್ವ ನಾವೆಲ್ಲ ಮಾಡದು ?

-ಸಂಜೆಸುದ್ದಿ ಪತ್ರಿಕೆ.

ಕುಂಬ್ಳೆಯವರ ನೇತೃತ್ವದ ಪ್ರಪ್ರಥಮ ಟೆಸ್ಟ್ ಆಟ, ಅದೂ ಪಾಕೀಸ್ತಾನದ ಜೊತೆ, ಗೆಲುವಿನ ಸಂತಸದೊಂದಿಗೆ !

ದೆಹಲಿಯ ಫಿರೋಜ್ ಶ ಕೊಟ್ಲ ಮೈದಾನದಲ್ಲಿ ಸೋಮವಾರ ಆಡಿದ ಪ್ರಥಮ ಟೆಸ್ಟ್ ಆಟದಲ್ಲಿ ಪಾಕ್ ವಿರುದ್ಧ, ಭಾರತ ೬ ವಿಕೆಟ್ ಗಳ ಭರ್ಜರಿ ವಿಜಯದೊಂದಿಗೆ ಮೆರೆದ ಸಂಭ್ರಮವನ್ನು, ಅನಿಲ್ ರ ಗೆಳೆಯರು ಹಂಚಿಕೊಳ್ಳುತ್ತಿದ್ದಾರೆ. ಭಾರತ, ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಆಟದಲ್ಲಿ ಗೆಲ್ಲುವ ಅಭ್ಯಾಸವನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಅನಿಲ್, ಇನ್ನೂ, ...ಮತ್ತೂ....

ನಮ್ಮ ಬೆಂಗಳೂರು ಬಸ್ನಿಲ್ದಾಣದಲ್ಲಿ ಬಿಗಿ ಭದ್ರತೆ. ಪ್ರಯಾಣಿಕರಿಗೆ ತಲೆನೋವು !

ಯುಪಿಯಲ್ಲಾದ ಉಗ್ರರದಾಳಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ.

-ಸಮಾಚಾರ ಪತ್ರಿಕೆಗಳಿಂದ.

ಇಗ್ತಾನೆ ಒಗ್ಲಿಲ್ಲ್ವಾ, ಬಂದೇ ಬಿಟ್ಟವ್ರೆ ?! ಮೈತ್ರಿ ಸರ್ಕಾರ್ದಾಗೆ, ಇಂಗೆನೆಯ. ತಲೆಕೆಡ್ಸಕಳಂಗಿಲ್ಲ. ಕೊನೆ ಸಿನ್ !

ಮೈತ್ರಿ ಅಂದ್ರೆ, ಸ್ನೆಅ ಅಲ್ಲ. ಜವಾಬ್ದಾರಿ ಸರ್ಕಾರ ಅಂತ ಏಳೋದು ಬಾಯ್ನಾಗೆ. ಮಾಡೋದೆಲ್ಲ ಬೇಜವಾಬ್ದಾರಿ ಕೆಲ್ಸನೆ. ಮತ್ತೆ ದಿಲ್ಲಿಗೋಗಿ ವಾಪಸ್ ಬಂದು, ಏನೇನೊ ಸಂಬಂದಿಲ್ದ ಏಳ್ಕೆ ಕೊಟ್ಟು. ನಮ್ಮನ್ನು ನಗೆಯಾಡ್ಸದು. ಇವೆ ಮತೆ, ರಾಜ್ಕೀಯ ಅಂದ್ರೆ. ಸುಮ್ಕೆ ಆದಿತ. ಅವೆಲ್ಲ ನಮ್ಗೆಲ್ ತಿಳೀತದೆ. ಇಂತ ರಾಜ್ಕೀಯ ನಾವೆಲ್ ನೋಡೀವಿ. ಎಲ್ಲ ಸಿವನಿಚ್ಚೆ !

ಒಂದು ದಿನದ ಸುಲ್ತಾನರಿಗೆ, ಗೌಡ್ರು ಕೊಟ್ಟ "ಖೊಕ್ ," ಎಲ್ರಿಗೂ ಗೊತ್ತಿದ್ದಿದ್ದೆ !

ದ್ಯಾವೇ ಗೌಡ್ರ್ನ್ನ ಬಲ್ಲವ್ರ್ಗೇ, ಗೊತ್ತು ಅವ್ರ ಇಚಾರ. ಎಷ್ಟ್ ಜನಕ್ಕೆ ಖೊಕ್ ಕೊಟ್ಟವ್ರೊ ನಮ್ ಸಿದ್ರಾಮಣ್ಣಾವ್ರಿಗೆ ಕೇಳಿದ್ರೆ ತಿಳೀತದೆ. ಒಟ್ನಲ್ಲಿ ಅವ್ರ್ ಪರಿವಾರನ ಚೆನ್ನಾಗ್ ನೋಡ್ಕಂತಾರೆ. ಪಾಪ, ಬೋ ವಳ್ಳೆ ಜನ. ಯಡ್ಯೂರಪ್ಪಾರ್ ಮಾಡ್ಸಿದ್ ಕೋಟಿದೀಪಾರ್ಚನೆ, ಗೊ-ಅಸು ಪೂಜೆ , ಎಲ್ಲ ಎಂದಾದ್ರು ಕೆಲ್ಸಕ್ ಬಂದೀತ ಎಂಗೆ ?ದ್ಯಾವ್ರೆ ಬಲ್ಲ. ಅಲ್ಲ. ..

ಕೃಷಿಮೇಳ-ಬೆಂಗಳೂರಿನ ಹೆಬ್ಬಾಳ್ ನಲ್ಲಿ !

ಪ್ರದರ್ಶನದ ಮಳಿಗೆಯಲ್ಲಿ ನೋಡಲು ಇಟ್ಟ, ಸಂಮೃದ್ಧಿಯಾಗಿ ಬೆಳೆದ ಮೆಕ್ಕೆಜೋಳವನ್ನು ನೋಡಿ ಆನಂದಿಸುತ್ತಿರುವ ವೀಕ್ಷಕ-ಪ್ರೇಕ್ಷಕ-ಯುವತಿಯರು.

-ಸಂಜೆವಾಣಿ ಪತ್ರಿಕೆ.

ಮಕ್ಳಾ, ನಿಮ್ಜೀವನ್ ದಲ್ಲಿ ರಂಗ್ ಭರ್ದೂ ಕ್ಯಾ ? ..ಅಮಿತಾಬ್ ಬಚ್ಚನ್ !

ಬಾಲಿವುಡ್ ನ ಬಿಗ್ ಬಿ- ಶ್ರೀ ಅಮಿತಾಬ್ ಬಚ್ಚನ್ ರವರು, " ಮಕ್ಕಳ ದಿನಾಚರಣೆ, " ಯ ದಿನದಂದು, ಗೂಗ್ಲಿ ಹಾಗೂ ಚಂಕಿ ಮಪೆಟ್ಸ್ ಜೊತೆ, ಸಂತೋಷದಿಂದ ತಾವೂ ಮಕ್ಕಳ ಜೊತೆ, ಮಕ್ಕಳಾಗಿ, ಆನಂದಿಸುತ್ತಿದ್ದಾರೆ !

-ಕೃಪೆ : ಟೈಮ್ಸ್ ಆಫ್ ಇಂಡಿಯ, ಮುಂಬೈ.

ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.

ಸೋಮವಾರ, ನವೆಂಬರ್ ೧೨, ೨೦೦೭, ಕರ್ನಾಟಕದ ಚರಿತ್ರೆಯಲ್ಲಿ, ಹಾಗೂ ದಕ್ಷಿಣಭಾರತದಲ್ಲಿ ಮೊಟ್ಟಮೊದಲ ಬಿ. ಜೆ.ಪಿ, ಹಾಗೂ ಜೆ.ಡಿ.ಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿರುವುದು, ಒಂದು ಹೊಸವ್ಯವಸ್ಥೆಗೆ ನಾಂದಿಯಾಗಿದೆ. ಜೆ. ಡಿ.ಎಸ್, ಜೊತೆ ಮೈತ್ರಿಯುತ ಸರ್ಕಾರದ ಎರಡನೆಯ ಹಂತ ಪ್ರಾರಂಭವಾಗಿದೆ.

ಭವಿಷ್ಯದ ಹೊಂಗಿರಣಗಳ ಹುಡುಕಾಟ !

ಈ ಹುಡುಕಾಟ, ಪ್ರಾಯಶಃ ಕರ್ನಾಟಕದ ಭವಿಷ್ಯದ ಕನಸಿರಬಹುದೇ ?????

-ಪ್ರಜಾವಾಣಿಯ ಅನಂತ ಸುಬ್ರಹ್ಮಣ್ಯ.

ಕೊಡಗಿನಲ್ಲಿ ಸೂರ್ಯಾಸ್ತ !

ಕೊಡಗಿನ, ರಾಜಸ್ ನಲ್ಲಿ ಸೂರ್ಯಮುಳುಗಿದಾಗ ಕಂಡ, ಆಗಸದ ವರ್ಣರಂಜಿತ ಚಿತ್ತಾರದ ಅದ್ಭುತ ದೃಷ್ಯ !
-ಈ ಮನಮೋಹಕ ಚಿತ್ರಗಳನ್ನು ಸೆರೆಹಿಡಿದಿರುವವರು, ಗೆಳೆಯ, ಚಿ. ಕಿರಣ್ ಮತ್ತು ಪರಿವಾರದವರು.

ತಕ್ಕಳಪ್ಪ, ಇದೊಂದ್ ಬಾಕಿ ಇತ್ತು. ಇರಿಗೌಡ್ರು ಅಲ್ಲ್ನಿಂತ್ಕಂಡ್, ಏನ್ಮಾಡ್ತಾವ್ರೆ ! ?

ದೊಗ್ಗನಾಳ್ ಮುನ್ಯಪ್ಪಾರ ಕಾಲಂ :

ಅಯ್ಯೊ, ಕರ್ ನಾಟ್ಕ ನೇ ...ಎಂಗಿದ್ ರಾಜ್ಯ ಎಂಗಾಗೊತು, ಸಿವ್ಸಿವಾ .... !

ಇರಿ ಗೌಡ್ರು ಅಲ್ಲ್ನಿಂತಂಡ್ ಏನ್ಮಾಡ್ತಾಅವ್ರೆ !

-ಚಿನ್ಕುರ್ಳಿ ಮಮ್ಮದುಗೆ, ಒಳ್ಳೇ ಗ್ರಾಸ ಸಿಕ್ಕೈತೆ. ನೀವ್ ಇಂಗೇ ಆಡ್ತಿರ್ರಿ. ಜನ ನೋಡಿ ಒಟ್ಟೆ ಬಡ್ಕಂಡ್ ನಗ್ಲಿ.

ನಿಮ್ಗೆನ್ ಅದೆಲ್ಲಾ ಮಾಮೂಲಿ ಆಗೊಗದೆ !

ಇದ್ ಎಲ್ಡ್ನೇ ಅಂತದ್ ಉಚ್ಚಾಟ. ನಡೀಲಿ. ನಡೀಲಿ.

ಇಂತಾ ಬವನ್ದಾಗೆ, ಕುಂತ್ಕಂಡು ಕಾಲರ್ಣ ಮಾಡ್ದಂಗೆ, ಒಸಿ ಏನಾದ್ರು ಒಳ್ಳೆಕೆಲ್ಸ-ಗಿಲ್ಸ ಮಾಡ್ರಪೋ, ನಿಮ್ದಮ್ಮಯ್ಯ !

ಇಲ್ಲಿಗೆ ಬರಲು ಹರಸಾಹಸ ಮಾಡಿರುವ ಬಿ.ಜೆ.ಪಿ.

ಈಗಾಗಲೇ ಅಧಿಕಾರದ ಸವಿಕಂಡ ಜೆ.ಡಿ [ಸೆ]

ಎವೆರಡೂ ಸೇರಿ ಏನಾದರೂ ಒಳ್ಳೆಯ ಕೆಲಸ ಮಾಡಬಲ್ಲರೇ ?

ಮತ್ತೆ ಅದೊಂದು ಮಿಲಿಯನ್ ಡಾಲರ್ ಪ್ರಶ್ನೆ ... !

ದೀಪಾವಳಿಯ ಸುಂದರ ಕ್ಷಣಗಳನ್ನು ನಿಮ್ಮ ಜೀವನದ ಸ್ಮೃತಿರಂಗದಲ್ಲಿ ಸೆರೆಹಿಡಿಯಿರಿ !

-ಕಡಲ ಬಳಿಯ ಬೀಚ್ ನ ಮರಳಿನಲ್ಲಿ ಹೊರಹೊಮ್ಮಿದ ತಿಳುವಳಿಕೆಯ ಸಂದೇಶ !
ಒರಿಸ್ಸದ ಸುದರ್ಶನ ಪಟ್ನಾಯಿಕ್ ರವರ ಸಂದೇಶ.

ಮುನಿಯಪ್ಪ ದೊಗ್ನಾಳು , ರವರ ದಿಪಾವ್ಳಿ ಸಂದೇಶ.

ನಾನು ಯಾರು ಅಂತ ತಿಳ್ಕಳಕ್ಕೆ ಓಗ್ಬ್ಯಾಡಿ. ಒಟ್ಟ್ನಲ್ಲಿ ನಿಮ್ಗೆ ಓಟ್ ಆಕಿದ್ದ ನಾನೊಬ್ಬ ಸತ್ಪ್ರಜೆ, ಅಂತ ಒಪ್ಗಳಿ ಸಾಕು.

ನಮ್ಮ ಸಂಪದೀಯರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ನಮ್ಮ ಸಂಪದೀಯರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಯುಗಪುರುಷನ ಅಮರಗೀತೆಗೆ, ನಮ್ಮೆಲ್ಲರ ನಮನ :

ದೀಪಾವಳಿ ಬಂದಿದೆ ; ತಂದಿದೆ, ನವೋಲ್ಲಾಸ ಸಂಭ್ರಮ,
ಹೊಸ ಆಶಯ, ಹೊಸ ಶಕ್ತಿಯ, ಹೊಸ ಯುಕ್ತಿಯ,
ನಮ್ಮಪ್ಪ, ನಿಮ್ಮಮ್ಮ ಹೇಳಿದ್ದು, ಮಾಡಿದ್ದು, ತೋರಿಸಿದ್ದು ; ಎಲ್ಲಾ ಅವೆ.
ಇಂದು ಅವೆಲ್ಲದರ ಬಣ್ಣ ದಲ್ಲಿ ಅದೇನೋ ಹೊಸತನ, ಶುಭ್ರತೆ, ಆನಂದ ಕಾಣುತಿದೆಯಲ್ಲಾ !

ದೀಪಾವಳಿ ಹಬ್ಬಕ್ಕೆ, ದೀಪಗಳ ತಯಾರಿಕೆಯಲ್ಲಿ, ಆಸಕ್ತೆ !

ಎಲ್ಲ ಹಬ್ಬಗಳೂ ಸಾರುವ ಸಂದೇಶ ಒಂದೆ ; ಸುಖ, ಶಾಂತಿ, ಸೌಹಾರ್ದತೆಯೆಲ್ಲೆಲ್ಲೂ ಮೇಳೈಸಲಿ ಎನ್ನುವ ಕಳ-ಕಳಿಯ ಆಸೆಯನ್ನು ಹೊತ್ತ ಆಶಯ, ಅಥವಾ, ಹಾರೈಕೆ.

ದೀಪಾವಳಿ, ನಮ್ಮ ಜಡತೆ, ಅಜ್ಞಾನದ ಅಂಧಕಾರವನ್ನು ಹೊಡೆದೊಡಿಸುವ, ಲೇಸರ್ ಕಿರಣಗಳಾಗಲಿ. ಎಲ್ಲ ವರ್ಗಗಳು, ಎಲ್ಲ ವಯೋಮಾನದವರೂ ಸುಖ, ಸಂತೃಪ್ತಿಯಿಂದ ಬಾಳಲಿ.

ವೆಂ.

ಎಂಗೊ, ಇಬ್ರು ಸಮ್ವಾಗ್ ಅಂಚ್ಲಂಡ್ ಸುಕ್ವಾಗ್ ಬಾಳ್ರಿ ಮಕ್ಳ ! ಒಗಿ, ಒಗಿ, ಇನ್ನಾದ್ರು ಕಚ್ಚಾಡ್ಬ್ಯಾಡ್ರಿ .

ಭುವ್ನೆಶ್ವರಮ್ಮಾರು : ಎಂಗೊ, ಇಬ್ರು ಸಮ್ವಾಗ್ ಅಂಚ್ಲಂಡ್ ಸುಕ್ವಾಗ್ ಬಾಳ್ರಿ ಮಕ್ಳ ! ಒಗಿ, ಒಗಿ, ಇನ್ನಾದ್ರು ಕಚ್ಚಾಡ್ಬ್ಯಾಡ್ರಿ . ಈ ಚಿತ್ರ ನಂಗ್ಬ್ಯಾಡ. ನಾನೊಲ್ಲೆ. ನಿಂತಾವೆ, ಮಡಗ್ಕಳ್ರಿ. ಒಗಿ....... ಒಂಟೋಗಿ.........

ಯೆ ಮತ್ತು ಕು. ಅಪ್ಪಾರು : ಅಗ್ಲಿ ಅಂಗೆ ಮಾಡ್ತಿವಿ ನನ್ ತಾಯಿ.

ದ್ಯಾವೇ ಗೌಡ್ರ್ ಜತೆ, ಸಂದರ್ಸ್ನ !

ಸಂದರ್ಸ್ನ :

ಪತ್ರಿಕ ಕರ್ತ : ನಮಸ್ಕಾರ ಮಾಸೊಮಿಯೊರು. ಅಡ್ಬಿದ್ದೆ ಮಪ್ರಬು. ನಿಮ್ಕಾಲ್ದಗೆ, ಏನೇನು ಆಗೋತು ಸಿವ್ನೆ. ಇದಕ್ ನಿಮ್ ರಿಕ್ಸನ್ ಏನು ?

ದ್ಯಾವೇಗೌಡ್ರು , ಸರ್ಕಸ್ ಚನಾಗ್ ಮಾಡ್ತಾರ್ ಕಣ್ಮಗ, ಇನ್ನೇನ್ ಯಡ್ಯೋರಪ್ಪ್ನೋರೆ ಸಿ. ಎಮ್. ಅಂತೀಯ ?

ಓಂಕಾರಣ್ಣ : ಅಂಗಂದಿಯ ಮಾರಾಯ ; ನನ್ಗಿನ್ನೂ ಅನ್ಮಾನ, ಕಣಣ್ಣ.

ಅಲ್ಲಣ, ಏನ್ಗೊತ್ತಾಗ್ ವಲ್ದೆ, ಇಚಾರ್ಗ್ಳು, ತೀರ ಗಅನವಗ್, ಓಗವೆ. ಪ್ರಕಾಸ್ ಅಂದಿದ್ದೇನ್ ಕೇಳ್ಸಕಂಡಾ ?
"ನನ್ನ ಕತ್ತಲ್ನಾಗೆ ಮಡಿಗಿದ್ರು." ಅಂತಾವ. ಅಲ್ಲ, ಇಷ್ಟ್ ದಿನ ಗೌಡ್ರುಗಳ್ ಜತೆ ವ್ಯಾಅರ ಮಾಡ್ದೋರ್ಗೆ ಅಸ್ಠು ತಿಳ್ಯಾಕಿಲ್ವ ? ಒಳ್ಳೆ ಆಸ್ಯಾಸ್ಪದವಾಗೋಯ್ತು, ನಮ್ಮ್ ಕರ್ನಾಟ್ಕದ್ ರಾಜ್ಕೀಯ !

" ಗು ಗು ", ಗೆ ಕೆಟ್ಟ- ಕ್ವಾಪಾ ಬಂತೂಂತಂದ್ರೆ ...!

ಬೀಜಿಂಗ್ ಸುದ್ದಿಸಮಾಚಾರದಲ್ಲಿ :

" ಗುಗು”- ಪಾಂಡ "ಬೀಜಿಂಗ್ ಪ್ರಾಣಿಸಂಗ್ರಹಲಾಯದ ಅತ್ಯಂತ ಪ್ರಮುಖ-ಆಕರ್ಶಣೆಯ ಕೇಂದ್ರ !

ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು ಎಳ್ಯೋದೇನಾ, ರಾಜ್ಕೀಯ- ಅಂದ್ರೆ ?

ಮಗ : ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು, ಎಳ್ಯೋದೇನಾ , ರಾಜ್ಕೀಯ, ಅಂದ್ರೆ ?

ಎಂಕ್ಟಪ್ಪ : ಅದಕ್ಕೇನ್ ಏಳ್ಲಿ ಮಗ ? ನಮ್ಮ ಕರ್ನಾಟ್ಕದಲ್ಲೇನು ಕಮ್ಮಿ ಐತಾ ಈ ಉಚ್ಚು. ಬಿಡ್ಲಾ ಇಂಗೆಲ್ಲಿತ್ತು. ಆ ಪರಂಗಿಯೋರೆ ಸರಿಕಣ್ಲಾ. ಏನು ಸಿಸ್ತು, ಅವರ್ದು. ಅದೇ...ಈ ನಮ್ಮೊರು, ಏಳೋದೇನು ಮಾಡೋದೇನು ?

ಮುಂಬೈ ನಗರದ ಕನ್ನಡನಾಟಕರಂಗದ ಕಲಾವಂತ ದಂಪತಿಗಳಿಗೆ, " ಅಭಿನಂದನಾಸಮಾರಂಭ." !

ಮುಂಬೈಮಹಾನಗರದ, ಕನ್ನಡನಾಟಕರಂಗ ಕ್ಷೇತ್ರದಲ್ಲಿ, ಸುಮಾರು ೧೦೦ ನಾಟಕಗಳಲ್ಲಿ ಅಭಿನಯಿಸಿ, ತಾವೇ ಸುಮಾರು ೨೦ ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಇಲ್ಲವೇ ನಟಿಸಿ, ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ, " ಶ್ರೀ. ಬಾಲಕೃಷ್ಣ ನಿಡ್ವಣ್ಣಾಯ,"ರವರು, ತಮ್ಮ ಸರಳ- ವ್ಯಕ್ತಿತ್ವ, ಹಾಗೂ ಪ್ರತಿಭೆಯಿಂದ ಎಲ್ಲರ ಕಣ್ಮಣಿಯಾಗಿದ್ದಾರೆ.

ಸೀತಾ- ಸ್ವಯಂವರ- ಬೊಂಬೆಗಳ ಪ್ರದರ್ಶನದಲ್ಲಿ, ಅದೂ ಎಲ್ಲಿ ? ಅಮೆರಿಕದಲ್ಲಿ !

For festivities 2007, ಶ್ರೀಮತಿ. ಸವಿತಾ ರವಿಶಂಕರ್ , has set the dolls to theme : "Ramayana".

ಮೈಸೂರಿನಲ್ಲಿ , ಜಂಬೂಸವಾರಿಗೆ ತಯಾರಿ !

ಮೈಸೂರಿನ ದಸರಾದ "ಜಂಬೂಸವಾರಿ," ವಿಶ್ವವಿಖ್ಯಾತ. ಅದು ವರ್ಷ-ವರ್ಷವೂ ಅದರ ಮಿಂಚನ್ನು ಕಳೆದುಕೊಳ್ಳುತ್ತಿರುವುದನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ. ಆನೆಯನ್ನು ಜಂಬೂಸವಾರಿಗೆ ತಯಾರುಮಾಡುತ್ತಿರುವುದನ್ನು ಚಿತ್ರದಲ್ಲಿ ನಾವು ಕಾಣಬಹುದು.

-ಸಂಜೆವಾಣಿ ಕೃಪೆ.

ನವರಾತ್ರಿ, ದುರ್ಗಾಪೂಜೆ, ಬೆಂಗಳೂರಿನಲ್ಲಿ !

ನವರಾತ್ರಿ, ನಮ್ಮದೇಶದ ಹಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ನೆರವೇರಿಸಲ್ಪಡುತ್ತದೆ. ಗುಜರಾತ್, ಕರ್ನಾಟಕ, ಪ. ಬಂಗಾಲ, ಇತ್ಯಾದಿ. ಪೂಜೆಯವಿಧಾನದಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರು, ಪೂಜಿಸುವುದು ದುರ್ಗಾಮಾತೆಯನ್ನೇ. ನಾವು, ’ ಚಾಮುಂಡೇಶ್ವರಿ,’ ಎನ್ನಬಹುದು. ಗುಜರಾತಿಗಳು”ಅಂಬಾಮಾತಾ,’ ಎನ್ನುತ್ತಾರೆ. ಬೆಂಗಾಳಿಗಳಿಗಂತೂ ಇದು ಅತ್ಯಂತ ಸಡಗರದ ಹಬ್ಬ.

ನಮ್ಮ "ಪಾಚಿ," ಯವರಿಗೆ ನೋಬೆಲ್ ಶಾಂತಿ ಪುರಸ್ಕಾರ !

ಹೌದು. ಡಾ. ರಾಜೇಂದ್ರಕುಮಾರ್ ಪಚೌರಿ, ಯವರನ್ನು ಅವರ ಆಪ್ತ ಗೆಳೆಯರು, ಸಂಬೋಧಿಸುವುದೇ ಹಾಗೆ !

ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !

ಈ ಮಗು ನಮಗೆ , ತೊರಿಕೆಗೆ ಅತಿ ಸಾಮಾನ್ಯ ಮಗುವಿನಂತೆ ಕಂಡರೂ, ಅಸಮಾನ್ಯ ವ್ಯಕ್ತಿತ್ವವನ್ನು ತನ್ನಲ್ಲಿ ಅಳವಡಿಸಿಕೊಂಡು, ಮುಗಿಲೆತ್ತರಕ್ಕೆ ಬೆಳೆದು, ಭಾರತೀಯರನ್ನಲ್ಲಾ ಸಂಘಟಿಸಿ, ತನ್ನ ಜೀವಾವಧಿಯಲ್ಲೇ ಭಾರತದ ಜನರಿಗೆ ಕೊಟ್ಟ ಕೊಡುಗೆ, ಅಮೋಘ !

"ಶಾಂತಿಮಂದಿರ್ " - ಅಮೆರಿಕೆಯ ಮಿಸ್ಸೌರಿ ರಾಜ್ಯದ ಕೊಲಂಬಿಯದಲ್ಲಿ !

"ಕೊಲಂಬಿಯ," ಪುಟ್ಟ ಹಳ್ಳಿ. ಅಲ್ಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ "ಸ್ಟ್ಯಾಫ್, "ಬಿಟ್ಟರೆ ಹೊರಗಡೆಯವರು ಬರುವುದು ಅತಿ ಕಡಿಮೆ. ಕೆಲವೊಮ್ಮೆ ಶಾಂತಿಮಂದಿರದ ಪದಾಧಿಕಾರಿಗಳು ವಾರ್ಷಿಕ/ಮಾಸಿಕ ಕಾರ್ಯಕ್ರಮಗಳನ್ನು, ಹಮ್ಮಿಕೊಂಡಾಗ ಮಾತ್ರ , ದಿಡೀರನೆ ಭಾರತೀಯರ ಗುಂಪು ಗುಂಪೇ ಅಲ್ಲಿ ನೆರೆದಿರುತ್ತದೆ.

ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !

ವಿಶೇಷ : ಟೀ-೨೦ ಯಲ್ಲಿ ಪಾಕೀಸ್ತಾನವನ್ನು ಮಣಿಸಿ ಜಯಭೇರಿಗಳಿಸಿ, ವಪಸ್ಸಾಗುತ್ತಿರುವ ಬಾರತ ಕ್ರಿಕೆಟ್
ಪಡೆಯನ್ನು ಸ್ವಾಗತಿಸುವ,ಮತ್ತು ಅವರನ್ನು ಸುರಕ್ಷಿತವಾಗಿ ವಾಂಖಡೆ ಸ್ಟೇಡಿಯಂಗೆ ಕರೆದೊಯ್ಯಲು
ಸಿದ್ಧತೆ.

ದಿನ : ೨೬-೦೯-೨೦೦೭ :

ಸ್ಥಳ : ಛತ್ರಪತಿ ಅಂತರರಾಷ್ಟ್ರೀಯ ವಿಮಾನ ತಾಣ.

ಗಣಪತಿ ಬಪ್ಪನಿಗೆ ಭಾವಪೂರ್ಣ ವಿದಾಯ !

ಅನಂತ ಚತುರ್ದಶಿಯ ಶುಭದಿನದಂದು, ೧೦ ದಿನಗಳ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಮಿಲಿಯಗಟ್ಟಲೆ ಭಕ್ತರನ್ನು ಹರಸಿ, ಮತ್ತೆ ಅವರಿಂದ ಬೀಳ್ಕೊಡಿಗೆ ಪಡೆಯುತ್ತಿದ್ದಾನೆ- ಈ ಮಂಗಳಮುರ್ತಿ. ಸಕಲ ಕಾರ್ಯಗಳಿಗೂ ಪ್ರಥಮವಂದ್ಯನಾದ ಈ ಮಹಾಪ್ರಭುವು, ಸರ್ವರಿಗೂ ಒಳ್ಳೆಯ ಬುದ್ಧಿಯನ್ನು ಕರುಣಿಸಲಿ.

ಜೈ, ಗಣಪತಿ ಬಪ್ಪಾ ಮೋರ್ಯಾ, ಪುಡ್ಚಾ ವರ್ಷೀ ಲೌಕರ್ ಯಾ !

ಮುಂಬೈ ನ ಮೈಸೂರ್ ಅಸೋಸಿಯೇಷನ್ ನವರ, ಮಹಾಗಣಪತಿಯ ವಿಸರ್ಜನೆ !

ಅಸೋಸಿಯೇಷನ್ ಮುಖದ್ವಾರದಿಂದ ಹೊರಟ ಮೆರವಣಿಗೆ ಭಾವುದಾಜೀ ರಸ್ತೆಯಲ್ಲಿ ಸಾಗುತ್ತಿರುವ ದೃಷ್ಯ !

-ಫೋಟೊ, ಮೊಬೈಲ್ ಕ್ಯಾಮರದಿಂದ.

ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ, ರವಿವಾರದಂದು, ವಿಜೃಂಭಣೆಯಿಂದ, ನೆರೆವೇರಿತು !

ಶ್ರೀ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾಮಹೋತ್ಸವ. ಸರ್ವಜಿನ್ನಾಮ ಸಂವತ್ಸರದ ಶಾಲಿವಾಹನಶಕೆ ೧೯೨೯, ಭಾದ್ರಪದ ಮಾಸ ಶುಕ್ಲ ಚತುರ್ಥೀ, ಶುಕ್ರವಾರದ ದಿನ,( ೧೪-೦೯-೨೦೦೭) ವಿಜೃಂಭಣೆಯಿಂದ ಗೌರಿ ಮತ್ತು ಗಣೇಶನ ಉತ್ಸವವನ್ನು, ಮುಂಬೈನ, ಮೈಸೂರು ಅಸೋಸಿಯೇಶನ್ನಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ, ನಡೆಸಲಾಯಿತು.

ಕಾರ್ಯಕ್ರಮಗಳ ಸ್ಥೂಲ ಪರಿಚಯ :

ಬಾಲಗೋಪಾಲಗಣಪತಿಯ ಕೈಯಲ್ಲಿ ಕೊಳಲು !

ಸರ್ವ ಕಾರ್ಯಗಳಿಗೂ ಲೋಪಬರದಂತೆ ನೋಡಿಕೊಳ್ಳುವ, ಗಜವದನ, ಮಂಗಳಮೂರ್ತಿ, ಗಣಪತಿಯ ಪ್ರೀತ್ಯಾದರಗಳಿಗೆ ಕೊನೆಯುಂಟೇ ? ಅವನನ್ನು ಹಲವಾರು ರೀತಿಕಂಡು, ಭಜಿಸಿ, ಹಾಡಿ, ನರ್ತಿಸಿ ಆನಂದ ಪಡುವ ಭಕ್ತಾದಿಗಳಿಗೆಕೊನೆ-ಮೊದಲಿಲ್ಲ !

-ಉದಯವಾಣಿ, ದಿನಪತ್ರಿಕೆ.

ನೆನೆಮನ, ನೆನೆ, ಆ ಸುದಿನವ !

ಗಾಂಧಿ ನೆನಪು-೪

ಸ್ವಾತಂತ್ರ್ಯ ಭಾರತದ ಹೊಸಾಧ್ಯಾಯದ, ಶುಭಾರಂಭ !

೧೯೪೭, ನೆ ಇಸವಿ, ಆಗಸ್ಟ್, ೧೫ ರ, ಮಧ್ಯರಾತ್ರಿ, ನಮ್ಮ ಮೊಟ್ಟ ಮೊದಲ ಪ್ರಧಾನಿ, ಜವಹರ್ಲಾಲರು ಮಾಡಿದ ಚಾರಿತ್ರ್ಯಿಕ ಭಾಷಣದ ಕೆಲವು ಸಾಲುಗಳು :

ಹಿಮಾಲಯ ಹೌಸಿಂಗ್ ಸೊಸೈಟಿ ಘಾಟ್ಕೋಪರ್, ಮುಂಬೈ ನ ಜಾಗರ್ಸ್ ಪಾರ್ಕ್ !

ಈ ಮುಂಬೈ ನಲ್ಲಿ ಓಡಾಡಕ್ಕ್ ರೋಡೇ ಇಲ್ಲ. ಫುಟ್ಪಾತ್ ಅಂದ್ರೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಇನ್ನು ಪಾರ್ಕ್ ಅಂದ್ರೆ ಇಡಿ ಊರ್ನಲ್ಲೇ ೧೦ -೧೨ ಇದ್ದ್ರೆ ಹೆಚ್ಚೇನೊ ಗೊತ್ತಿಲ್ಲ. ಕಾರ್ಣ ಜಾಗ ಚಿಕ್ಕ್ದು. ಎಲ್ಲಿ ನೋಡೊದ್ರಲ್ಲಿ ಬಿಲ್ಡಿನ್ಗ್ ಗಳು. ಹೇಳೋರಿಲ್ಲ ಕೇಳೋರಿಲ್ಲ. ನೀನು ಕಟ್ಕ, ನಾನೂ ಕಟ್ತೀನಿ ಅನ್ನೊ ತರ್ಹ ಆಗೊಗಿದೆ, ನೋಡಿ.

ಗಾಂಧಿ ನೆನಪು -೧

ಗಾಂಧಿ ನೆನಪು : ೧

ಬೊಂಬಾಯಿನಲ್ಲಿ ಗಾಂಧೀಜಿಯವರನ್ನು, ಬಂಧಿಸಿ, ಕಾರಾಗೃಹದಲ್ಲಿ ಹಾಕಲಾಯಿತು. ಇದನ್ನು ವಿರೋಧಿಸಿ, ಪ್ರತಿಭಟಿಸಿದ ಜನಸ್ತೋಮ.

ಪ್ರೊ. ಎಲ್. ಎಸ್. ಶೇಷಗಿರಿರಾಯರಿಗೆ ಸನ್ಮಾನ !

ನಮ್ಮೆಲ್ಲ ಸಂಪದೀಯರ ಪರವಾಗಿ ನಮ್ಮ ಪ್ರೀತಿಯ ಎಲ್. ಎಸ್. ಎಸ್ ರವರಿಗೆ ಪ್ರೀತ್ಯಾದರಗಳ ನಮಸ್ಕಾರಗಳು.

-ಸಂಜೆ ವಾಣಿ ಪತ್ರಿಕೆಯ ಕೊಡುಗೆ.

ರೋಡ್ನಾಗೆ ಮಕ್ಕಳಾದ್ರಲ್ಲಿ ಏಟೊಂದ್ ಮಜ ಐತೆ ಅಲ್ಲವ್ರಾ !

ಪಟ್ಣಗಳಲ್ಲಿ ಇದು ಮಾಮೂಲಿ ಸೀನ್ ಅಲ್ವ, ನೀವೆ ಹೇಳಿ !

-ಸಂಜೆವಾಣಿ ಪತ್ರಿಕೆ.

ಅಬ್ಬಾ, ಇಂತಹ ಪ್ರದರ್ಶನ ನಮ್ಮ ಕಾಲದಲ್ಲಿ ನೋಡಿರಲಿಲ್ಲ !

ಮಕ್ಕಳು ಈ ತರ್ಹ, ಅದೂ ಮುದ್ದಾಗ್ ಬೋರ್ಡ್ಗಳ್ನ ಪ್ರಿಂಟ್ ಮಾಡ್ಕೊಂಡು, ಸಪ್ಪೇ ಮೋರೆ ಹಾಕ್ಕೊಂಡ್ .

ನನಗ್ ಚೆನ್ನಾಗ್ ಕಾಣ್ಸ್ತಿದೆ.

ಬೆಂಗಳೂರ್ ನಿಜವಾಗ್ಲೂ ಮುಂದುವರೀತಿದೆ. [ರೆದಿದೆ] !

-ಸಂಜೆವಾಣಿ ಪತ್ರಿಕೆ.

ಮುಂಬೈ ಮಹಾನಗರದ, ಬಿ. ಎಮ್. ಸಿ ( B. M. See ) !

೧೧೪ ವರ್ಷದ ಹಳೆಯ ಕಟ್ಟಡ- " ಬೃಹನ್ ಮುಂಬೈ ನಗರಪಾಲಿಕೆ " ಯ ಭವ್ಯಗೋಪುರದ ಕಟ್ಟಡದ ಮೈ-ಮುಖಕ್ಕೆ ಅಲಂಕಾರ. ಇದರ ಖರ್ಚು ಎಷ್ಟು ಗೊತ್ತೆ ? ಕೇವಲ ೫೮ ಕೋಟಿ ರೂಪಾಯಿಗಳು.

-ಟೈಮ್ಸ್ ಆಫ್ ಇಂಡಿಯ.

ಅಜಿತ್ ನಿನಾನರ ಕಣ್ಣಿಗೆ, ಕಲಾಂರವರು ಹೀಗೆ ಕಾಣಿಸುತ್ತಿದ್ದಾರೆ !

ನಮ್ಮ ಕಣ್ಣುಗಳು ನಮಗೆ ವೈಚಾರಿಕ ಪ್ರಜ್ಞೆ ಕೊಡುವ ಎರಡು ಮಹಾಸಾಧನಗಳು !

-ಟೈಮ್ಸ್ ಆಫ್ ಇಂಡಿಯ.

ಇಂದು ರವಿವಾರ, ಜುಲೈ, ೨೯, ೨೦೦೭, ಗುರುಪೂರ್ಣಿಮೆ !

* ಇಂದು ರವಿವಾರ, ಜುಲೈ, ೨೯, ೨೦೦೭, ಗುರುಪೂರ್ಣಿಮೆ !

| ಸದ್ಗುರು ಅನುಗ್ರಹದಿಂದ ಆತ್ಮಜ್ಞಾನಪ್ರಾಪ್ತಿ |

| ವಿಶುದ್ಧಾಂತಃಕರಣಾಯ ಶಂಕರಾಯ ನಮಃ |
ಸದ್ಗುರೂಣಾಂಕೃಪಾದೇವ ಜ್ಞಾನಂ ಭವತಿ ನಾನ್ಯಥಾ |
ಆಷಾಢೇ ಶಂಕರಂ ವಂದೇ ಮಾಸೇ ಜ್ಞಾನಪ್ರಸಿದ್ಧಯೇ |
ಯೇ ಸಮ್ಯಗ್ದರ್ಶಿನಃ ತೈರುಪದಿಷ್ಟಂ ಜ್ಞಾನಂ ಕಾರ್ಯಕ್ಷಮಂ ಭವತಿ |

ಈಗ ಡಾ. ಕಲಾಂ ಒಬ್ಬ ವಿಜ್ಞಾನಿ, ಪ್ರಾಧ್ಯಾಪಕ- ಅಷ್ಟೆ ; ರಾಷ್ಟ್ರಪತಿಯಲ್ಲ !

ಮಾಜಿ ರಾಷ್ಟ್ರಪತಿ ಶ್ರೀ. ಅಬ್ದುಲ್ ಕಲಾಂರವರಿಗೆ, ತಮ್ಮ ಜೀವನದ ದಿಶೆಯನ್ನು ಗುರುತಿಸಿಕೊಳ್ಳುವ ಕಲೆ ಕರಗತವಾಗಿದೆ. ಕುರ್ಚಿಗೆ ಅಂಟಿಕೊಳ್ಳುವ ಗೀಳಿಲ್ಲ. ಹಾಗೆಯೇ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅಗ್ರೇಸರರು.

ಭಾರತದ ಪ್ರಥಮ ಮಹಿಳಾರಾಷ್ಟ್ರಾಧ್ಯಕ್ಷೆ- ಶ್ರೀಮತಿ ಪ್ರತಿಭಾಪಾಟೀಲ್ !

ಶ್ರೀಮತಿ. ಪ್ರತಿಭಾಪಾಟೀಲ್ , ತಮ್ಮ ರಾಷ್ಟ್ರಪತಿ ಹುದ್ದೆಯ ಸ್ವೀಕಾರ ಭಾಷಣದಲ್ಲಿ , ತಮ್ಮ ನಿಲವುಗಳನ್ನು ಸ್ಪಸ್ಟವಾಗಿ ತಿಳಿಸಿದರು. ಮಹಿಳೆಯಾಗಿ ಅವರು ಪ್ರಪ್ರಥಮವಾಗಿ ಸ್ತ್ರೀಯರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ.

ಜೆ.ಎ೦.ಎಸ್.ಮಣಿರ ದೃಶ್ಯಕಲೆ: ಬಾದಾಮಿಯ ಭಾವಚಿತ್ರಕನ ಓರಿಯ೦ಟಲಿಸ೦ನ ಒಳ‍ಅಣಕ

ಜೆ.ಎ೦.ಎಸ್.ಮಣಿರ ದೃಶ್ಯಕಲೆ:
ಬಾದಾಮಿಯ ಭಾವಚಿತ್ರಕನ ಓರಿಯ೦ಟಲಿಸ೦ನ ಒಳ‍ಅಣಕ

ಬೌದ್ಧರ ವಿಪಶ್ಯನ ಧ್ಯಾನವಿಧಾನದಲ್ಲಿ ಸುಲಭಕ್ಕೆ ನ೦ಬಲು ಕಷ್ಟವಾಗುವ೦ತಹ ಒ೦ದು ಸಹಜ ಕ್ರಿಯೆಯೊ೦ದಿದೆ. ಆ ಧ್ಯಾನದಲ್ಲಿ ಭೌತಿಕ ವಸ್ತುಗಳನ್ನು ಗ್ರಹಿಸುವಾಗ ಮಾತ್ರ 'ಮನಸ್ಸೆ೦ಬುದರ' ಅಸ್ಥಿತ್ವ 'ನಮ್ಮ' ಗ್ರಹಿಕೆಗೆ ಬರುತ್ತದೆ. ಮನಸ್ಸನ್ನು ಗ್ರಹಿಸುವಾಗ 'ಮಾತ್ರ' ಈ ಜಗತ್ತನ್ನು ನಮ್ಮ ಸುತ್ತಲೂ ಇದ್ದ೦ತೆ ಭಾಸವಾಗುತ್ತದೆ. ಅ೦ದರೆ ಮನಸ್ಸು-ವಸ್ತುಗಳ ವ್ಯಾಪಾರ ನಿರ೦ತರವಾದುದಲ್ಲ. ಆದರೆ ಮನಸ್ಸೆ೦ಬುದನ್ನು ನಾವು ಗಮನಿಸುವಾಗ, "ಮನಸ್ಸಿನಿ೦ದ ಹೊರತಾದ ನಾವು", "ನಮ್ಮಿ೦ದ ಹೊರತಾದ ಮನಸ್ಸು" ಎ೦ದು ಒಪ್ಪಿಕೊ೦ಡ೦ತಾಗುತ್ತದೆ. ಮನಸ್ಸು ಮತ್ತು ನಾವು ಎ೦ಬ ಕಲ್ಪನೆಗಳನ್ನು ನಾವು ಮನಸಾರೆ, ಇಲ್ಲಿ೦ದಲೇ ಚಿ೦ತಿಸಲು ಪ್ರಾರ೦ಭಿಸಬೇಕಾಗುತ್ತದೆ.

ಜೆ.ಮುನಿಸ್ವಾಮಿ ಸುಬ್ರಹ್ಮಣಿಯವರ ಕಲಾಕೃತಿಗಳಿಗೂ ಕಲಾಇತಿಹಾಸಕ್ಕೂ ಇರುವ ಸ೦ಬ೦ಧ ಇ೦ತಹದ್ದೇ ಇರಬೇಕು. ಅವರ ಕೃತಿಯೇ ಅವರ ಹೇಳಿಕೆ. ಅವರ ಚಿತ್ರಣ ಕ್ರಿಯೆಯೇ ಅವರ ಶಿಕ್ಷಣ ರೀತಿ ಕೂಡ. ಕಲೆಯ ಬಗ್ಗೆ ವಾಚಾಳಿತನಕ್ಕೆ ಹೆಸರಾಗಿದ್ದ ಆರ್.ಎ೦.ಹದಪದ್‍ರಿಗೆ ಅಷ್ಟು ಹತ್ತಿರವಾಗಿದ್ದುಕೊ೦ಡು, ಅವರ ಶಿಷ್ಯರೂ ಆಗಿದ್ದ ಇವರು ಅವರಿಗೆ ಹೊರತಾದುದನ್ನು ತಮ್ಮದಾಗಿಸಿಕೊ೦ಡದ್ದು ಹೀಗೆ. ಎಲ್ಲದಕ್ಕೂ ಕಲಾವಿದ ಹಾಗೂ ಕಲಾಶಿಕ್ಷಕ ಮಣಿಯವರಲ್ಲಿದ್ದದ್ದು, ಇರುವುದು ಒ೦ದೇ ಉತ್ತರ: ಬ್ರಷ್ ಹಾಗೂ ಕ್ಯಾನ್ವಾಸ್ ನಡುವೆ ಮಾತಿಗೆ ಪ್ರವೇಶ ನಿಷಿದ್ಧ!

ಹಂಪಿ ಚಿತ್ರಗಳ್ನ ನೋಡ್ರಿ !

ಚಿತ್ರಕಲಾವಿದ, ಶ್ರೀನಾಥ್ ವಿ. ಕಾಳೆಯವರ ಕುಂಚದಲ್ಲಿ ಬರೆದು ಸಮರ್ಪಿಸಿದ, " ಹಂಪಿ ವೈಭವನಾ," ಚಿತ್ರದಾಗೆ ನೋಡ್ರಿ. ಚಿತ್ರಕಲಾ ವಸ್ತುಪ್ರದರ್ಶನಕ್ಖೋಗ್ರಿ.

ಹ್ಯಾಂಗನ್ನಸ್ತು ? ತಿಳಿಸ್ರಲ.

-ಸಂಜೆವಾಣಿ ಪತ್ರಿಕೆಯ ವತಿಯಿಂದ.

ಕಟ್ಟಡ ಕುಸಿದು ೨೭ ಜನರ ಸಾವು, ೧೨ ಮಂದಿಗೆ ಗಾಯ.

ಮುಂಬೈನ ಬೋರಿವಲಿ (ಪ) ದ ೨೭ ವರ್ಷದ ಲಕ್ಷ್ಮಿ ಛಾಯ ಕಟ್ಟಡ ದ ೧೨ ಅಪಾರ್ಟ್ಮೆಂಟ್ಸ್ ಕುಸಿದು ಈಗಿನ ವರದಿಯ ಪ್ರಕಾರ, ೨೭ ಜನ ಅಸುನೀಗಿರುವುದಾಗಿ ಸುದ್ದಿ. ೭ ಅಂತಸ್ತಿನ ಈ ಕಟ್ಟಡ ಇಷ್ಟು ಬೇಗ ಕುಸಿಯಲು ಕಾರಣ ಹುಡುಕಬೇಕಾಗಿಲ್ಲ. ಕಳಪೆ ದರ್ಜೆ ವಸ್ತುಗಳ ಉಪಯೋಗ, ಮತ್ತು ಹಣಗಳಿಸುವುದೇ ತಮ್ಮ ಜೀವನದ ಧ್ಯೇಯವೆಂದು ನಂಬಿರುವ Builders ಇರುವವರೆಗೂ ಈ ಅನ್ಯಾಯ ತಪ್ಪಿದ್ದಲ್ಲ.

ನಾವ್ಯಾಕೆ , ಈ ತರಹದ ವಿನ್ಯಾಸ ಮಾಡಬಾರದು ?

ಸಂಜೆವಾಣಿಯವರು, ಅಚ್ಚುಕಟ್ಟಾಗಿ ಸಂಪಾದಿಸಿ, ಸುಭಾಷಿತವನ್ನು ಪ್ರಕಟಿಸಿರುವಂತೆ ನಮ್ಮವರೂ ಏನಾದರೂ ಹೊಸವಿನ್ಯಾಸ ಕೊಡಬಹುದಲ್ಲವೇ ?

ಇಂದು ನಮ್ಮ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ !

ಇಂದು, ಅತಿ ಪ್ರಮುಖ ಘಟನೆಗಳಲ್ಲೊಂದು, ಜರುಗಲಿದೆ. ನಮ್ಮ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಬ್ಬಮಹಿಳಾ ಅಭ್ಯರ್ಥಿ, ಅತ್ಯುನ್ನತ ಹುದ್ದೆಗೆ, (ರಾಷ್ಟ್ರಪತಿ) ಸ್ಪರ್ಥಿಸುತ್ತಿದ್ದಾರೆ. ಶ್ರೀ ಹೊನ್ನುಂಗ್ ರವರ ಹೇಳಿಕೆಯಂತೆ, ಹಿಂದೆ, ಶ್ರೀಮತಿ ಕ್ಯಾಪ್ಟನ್ ಲಕ್ಷ್ಮಿಯವರು ಸ್ಪರ್ಧಿಸಿದ್ದರಂತೆ. ಈ ಸ್ಪಂದನಕ್ಕೆ ಧನ್ಯವಾದಗಳು.

ಶ್ರೀಮತಿ ಪ್ರತಿಭಾಪಾಟೀಲರು, ಸಬರ್ಮತಿ ಆಶ್ರಮದಲ್ಲಿ ಚರಕದಿಂದ ದಾರ ತೆಗೆಯುತ್ತಿರುವ ದೃಷ್ಯ !

ರಾಷ್ಟ್ರಾಧ್ಯಕ್ಷೆಯ ಅಭ್ಯರ್ಥಿ, ಶ್ರೀಮತಿ ಪ್ರತಿಭಾಪಾಟೀಲ್, ಮೊನ್ನೆ ಭಾನುವಾರ, ಅಹ್ಮದಾಬಾದಿನ ಸಬರ್ಮತಿ ಆಶ್ರಮಕ್ಕೆ ಹೋಗಿದ್ದರು. ಅಲ್ಲಿನ ಚರಕದಲ್ಲಿ ದಾರ ನೂಲುವುದನ್ನು ಕಲಿತಿದ್ದಾರೆ. ಮಹಾತ್ಮ ಗಾಂಧಿಯವರ ಬಗ್ಗೆ ಆಕೆಗೆ ಎಲ್ಲಿಲ್ಲದ ಗೌರವ, ಮತ್ತು ಪ್ರೀತಿ.

ಕುಮಾರಿ. ವರ್ಷಗೋಪಿನಾಥ್, ಮತ್ತು ರೇನ ಸಾಲ್ವಿ, ಮನಿಲದ ವಿಮಾನಪೈಲೆಟ್ ಪ್ರಶಿಕ್ಷಣದಲ್ಲಿ ಅಸುನೀಗಿದರು !

ಕುಮಾರಿ. ವರ್ಷಗೋಪಿನಾಥ್, ಮತ್ತು ರೇನ ಸಾಲ್ವಿ, ಮನಿಲದ ವಿಮಾನಪೈಲೆಟ್ ಪ್ರಶಿಕ್ಷಣದಲ್ಲಿ ಅಸುನೀಗಿದರು.

ಮುಂಬೈನ ಪ್ರತಿಮಳೆಗಾಲದ ಬವಣೆ !

ಮಾನ್ಸೂನ್ ಮತ್ತು ಮುಂಬೈ, ಇವೆರಡಕ್ಕೂ ಬಹಳ ಹತ್ತಿರದ ಸಂಬಂಧ !

ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಲ್ಲದಿದ್ದರೆ, ಮುಂಬೈ ಬೇರೆ ಎಲ್ಲ ನಗರಗಳಂತೆ ಸುರಕ್ಷಿತ !

" ಅಟ್ಲಾಂಟಿಸ್ ಸ್ಪೇಸ್ ಶಟಲ್," ಶನಿವಾರ, ಸುಖವಾಗಿ ಕ್ಯಾಲಿಫೋರ್ನಿಯದಲ್ಲಿ ಬಂದಿಳಿಯಿತು !

ಅಟ್ಲಾಂಟಿಸ್ ಸ್ಪೆಸ್ ಶಟಲ್ , ಭಾರತೀಯ-ಅಮೆರಿಕನ್ ಆಸ್ಟ್ರೊನಾಟ್ ಸುನಿತಾ ವಿಲಿಯಮ್ಸ್ ಮತ್ತು ಅವರ ೬ ಜನ ಜೊತೆಗಾರರ ಸಮೇತ, ಎಡ್ವರ್ಡ್ಸ್ ಏರ್ಫೋರ್ಸ್ ಬೇಸ್, ಕ್ಯಾಲಿಫೋರ್ನಿಯ ದಲ್ಲಿ ಶನಿವಾರ, ಪ್ರಾತಃಕಾಲ (ಭಾರತೀಯ ಕಾಲಮಾನದ ಪ್ರಕಾರ) ಸುಖವಾಗಿ ಬಂದು ಸೇರಿದರು.

"ನಮ್ಮ ಸುನಿ," ಗುರುವಾರ, (ಭಾರತೀಯ ಕಾಲಮಾನದ ರೀತಿ ) ಭೂಮಿಗೆ ಮರಳುತ್ತಿದ್ದಾಳೆ !

ಶುಭಾಗಮನ, ಸುನಿ !

ನಮ್ಮ "ಸುನಿ" ಗುರುವಾರ, ತನ್ನ ೭ ಜನ ಸಹಪಾಠಿಗಳೊಂದಿಗೆ ( ಅವಳೂ ಸೇರಿದಂತೆ ) ಭೂಮಿಗೆ ಮರಳುತ್ತಿದ್ದಾರೆ ! ಅವಳಿಗೆ, ಮತ್ತು ವೃಂದದವರಿಗೆ ನಮ್ಮೆಲ್ಲರ ಪರವಾಗಿ ಶುಭಹಾರೈಕೆಗಳು ಮತ್ತು ಪೃಥ್ವಿಗೆ ಕಾಲಿಡುವುದಕ್ಕೆ, ಹಾರ್ದಿಕ ಸ್ವಾಗತಗಳು !

ಬೆಳ್ಳಿ ಪಲ್ಲಕ್ಕಿ ಉತ್ಸವ- ಬೆಂಗಳೂರಿನಲ್ಲಿ !

ಕೋಟೆ ವೆಂಕಟೇಶ್ವರ ದೇವಸ್ಥಾನದಲ್ಲಿ, "ಬೆಳ್ಳಿ ಪಲ್ಲಕ್ಕಿ ಉತ್ಸವ," ಬೆಂಗಳೂರಿನಲ್ಲಿ ಹೋದವಾರ ಅದ್ಧೂರಿಯಿಂದ ನೆರವೇರಿತು. ಬ್ರಹ್ಮರಥೋತ್ಸವದ ಅಂಗವಾಗಿ ನಡೆದ ಶ್ರೀ ವೆಂಕಟೇಶ್ವರ ಸ್ವಾಮಿಯ "ಬೆಳ್ಳಿ ಪಲ್ಲಕ್ಕಿ ಉತ್ಸವ," ಸಮಾರಂಭದಲ್ಲಿ ಭಕ್ತಾದಿಗಳು ಅಸಂಖ್ಯ ಸಂಖ್ಯೆಯಲ್ಲಿ ನೆರೆದು, ಅದನ್ನು ಕಾರ್ಯಗತ ಮಾಡುವಲ್ಲಿ ಸಹಕರಿಸಿದರು.

ಚಿಕಾಗೋ ದಲ್ಲಿ "ವಸಂತ ಸಾಹಿತ್ಯೋತ್ಸವ" - ಹಾಸ್ಯಹೊನಲಿನ ಕಾರ್ಯಕ್ರಮ.

ಚಿಕಾಗೋ ದಲ್ಲಿ ಮೊನ್ನೆ ನಡೆದ "ವಸಂತ ಸಾಹಿತ್ಯೋತ್ಸವ" ವನ್ನು ನಮ್ಮ ಸಂಪದಿಗರೇ ಆದ, ಶ್ರೀವತ್ಸ ಜೋಷಿಯವರು " ದಟ್ಸ್ ಕನ್ನಡಕ್ಕೆ", ಸಮರ್ಥವಾಗಿ ವರದಿಮಾಡಿದ್ದರ ಮರು-ವರದಿ.

ಬ್ರಿಟನ್ನಿನ ಖ್ಯಾತ ಆಸ್ಟ್ರೋ ಫಿಸಿಸ್ಟ್, ಸ್ಟೀಫನ್ ವಿಲಿಯಮ್ ಹಾಕಿಂಗ್, ’ಶೂನ್ಯ ’ ಗ್ರಾವಿಟಿಯಲ್ಲಿ ಹಾರಿ, ತೇಲಿ, ನಲಿದರು !

ಏಪ್ರಿಲ್, ಗುರುವಾರ, ೨೬ ೨೦೦೭, ೨೩.೪೪ GMT, ಒಂದು ಅವಿಸ್ಮರಣೀಯ ದಿನ !

ಬ್ರಿಟನ್ ನ ಖ್ಯಾತ ಆಸ್ಟ್ರೋ ಫಿಸಿಸ್ಟ್, ಸ್ಟೀಫೆನ್ ವಿಲಿಯಮ್ ಹಾಕಿಂಗ್ , ಸ್ಪೇಸ್ ನಲ್ಲಿ '೦' ಗ್ರಾವಿಟಿ ಕಾರ್ಪೊರೇಷನ್ ನ "Vomit Comet’ ನಲ್ಲಿ ತೇಲಾಡಿ-ಹಾರಾಡಿ, ಆನಂದಿಸಿದರು !

’ರೇಷ್ಮೆ ಸೀರೆ,’ ’ ಅಹಿಂಸಾ ರೇಷ್ಮೆ ಸೀರೆ”-ಏನಿದೆಲ್ಲಾ ? ರೇಷ್ಮೆ ಹೌದೋ ಅಲ್ವೋ, ಸೀರೆಗಳ ಸೌಂದರ್ಯ ನೋಡಿ - ಮೆಚ್ಚಿ !

ರೇಷ್ಮೆ ಸೀರೆಗಳು ನಮ್ಮ ಹಬ್ಬ ಹರಿದಿನ, ಮದುವೆ, ಮುಂಜಿ, ನಿಶ್ಚಿತಾರ್ಥ, ಸೀಮಂತ, ನಾಮಕರಣ, ಅನ್ನಪ್ರಾಶನ, ಇತ್ಯಾದಿಗಳ ಪ್ರಮುಖ ಆಕರ್ಷಣೆ ಮತ್ತು ಅವಶ್ಯಕತೆಗಳಲ್ಲಿ ಒಂದು. ಒಂದು ಗಾದೆ ಇದೆಯಲ್ಲ " ಹತ್ತು ಇಟ್ಟೋಳಿಗಿಂತ ಒಂದು ಉಟ್ಟೋಳ್ ಲೇಸು " ಅಂತ. ಹತ್ತಿ ಫೈಬರ್ ರಾಜ ಆದರೆ, ರೇಷ್ಮೆಗೆ ರಾಣಿ, ಸ್ಥಾನ ಅಲ್ಲವೇ !

ಹಿರಿಯ ಗೌರವಾನ್ವಿತ ನಟ, ದಿಲೀಪ್ ಕುಮಾರ್ ರವರಿಗೆ ೨೦೦೭ ರ, " ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ".

೮೦ ರ ಗಡಿಯನ್ನು ದಾಟಿಯೂ ತಮ್ಮ ಮೃದುವಾದ ಮಾತುಗಳು ಮತ್ತು ಅಚ್ಚುಕಟ್ಟಾದ ವ್ಯಕ್ತಿತ್ವ, ಯಾವಾಗಲೂ ಮಂದಹಾಸ ಇನ್ನೂ ಉಳಿಸಿಕೊಂಡಿರುವ ಯೂಸುಫ್ ಖಾನ್ [ದಿಲೀಪ್ ಕುಮಾರ್] ರ ಗುಟ್ಟು ಇನ್ನೂ ಯಾರಿಗೂ ಗೊತ್ತಿಲ್ಲ. ಯಾವುದಕ್ಕೂ ಅವರು ಸುಮ್ಮನೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಶಸ್ತಿಗಳು ಸಿಗಲಿ ಬಿಡಲಿ !

ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

*
ಸೂಳೆಕೆರೆ, ಭಾರತದ ಅತಿದೊಡ್ಡಕೆರೆ. ಅಷ್ಟೇಕೆ ಏಶಿಯಾದ ಅತ್ಯಂತ ದೊಡ್ಡಕೆರೆಗಳಲ್ಲಿ ಎರಡನೆಯದು, ಸೂಳೆಕೆರೆ ಅಥವಾ ಶಾಂತ ಸಾಗರ. ೬೦ ಚದರ ಕಿ. ಮೀ. ವಿಸ್ತೀರ್ಣದ ಈ ಮಹಾಕೆರೆ, ಚಿತ್ರದುರ್ಗ, ಜಗಳೂರಿನ ಜಮೀನುಗಳಿಗೆ ನೀರಾವರಿಯ ಸೌಕರ್ಯ ಕಲ್ಪಿಸುವ ಒಂದು ಪ್ರಮುಖ ಸಾಧನವಾಗಿದೆ. ಇದು ಮಲೆನಾಡು ಮುಗಿದು ಬಯಲುನಾಡಿಗೆ ಪಾದಾರ್ಪಣೆ ಮಾಡುವ ಸ್ಥಳದಲ್ಲಿ ಇದೆ.

ತುಂತುರು ಮಳೆಯಲ್ಲೂ ಆಟದ ಸೊಗಸಿಗೆ ಕಡಿಮೆಯೇನೂ ಇರಲಿಲ್ಲ ; ಆಸ್ಟ್ರೇಲಿಯ, ಶ್ರೀ ಲಂಕಾ ವನ್ನು ೫೩ ರನ್ನುಗಳಿಂದ ಮಣಿಸಿ ವಿಶ್ವಕ್ರಿಕೆಟ್ ಗೆದ್ದಿದೆ.

ಆಸ್ಟ್ರೇಲಿಯ ತನ್ನ ಕ್ರಿಕೆಟ್ ಆಟದ ಶ್ರೇಷ್ಟತೆಯನ್ನು ವಿಶ್ವಕ್ಕೆ ಪ್ರದರ್ಶಿಸಿ, ತನ್ನಮಟ್ಟದ ಮತ್ತೊಂದು ಟೀಮಾದ ಶ್ರೀಲಂಕಾವನ್ನು ಮಣಿಸಿ ೫೩ ರನ್ನುಗಳಿಂದ ವಿಜಯವನ್ನು ಹೊಂದಿದೆ. ನಾವು ಶ್ರೀಲಂಕಾವನ್ನು ಮತ್ತು ಆಷ್ಟ್ರೇಲಿಯದ ಟೀಮುಗಳನ್ನು ಅಭಿನಂದಿಸುತ್ತೇವೆ ;

ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..

"ಭರತ ಭೂಮಿಯ ವೈಭವ ವರ್ಣಿಸಲಸದಳ.." ಭಾರತ ದರ್ಶನದ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾನಂದ ಶೆಣೈ

ಬೆಂಗಳೂರಿನ 'ಉದಯಭಾನು ಕಲಾಸಂಘ' (ನೋಂ ) ಪ್ರೊ. ಶ್ರೀ ರಾಮಕೃಷ್ಣರಾಯರನ್ನು ಸನ್ಮಾನಿಸಿತು !

'ಬೆಂಗಳೂರು ದರ್ಶನ'ದ ಎರಡು ಸಂಪುಟಗಳ ಪ್ರತಿಗಳನ್ನು ನೋಡಿದವರು ಇದರ ಪ್ರಕಾಶಕರು ಯಾರು ? ಎಂದು ಹುಬ್ಬೇರಿಸಿ ಕೇಳದಿದ್ದರೆ, ಅವರು ನಿಜವಾದ ಗುಣಗ್ರಾಹಿ ಓದುಗರಲ್ಲವೆನ್ನುವುದು ನಿಮಿಷಾರ್ಧದಲ್ಲಿ ತಿಳಿದುಹೋಗುತ್ತದೆ ! ಇದನ್ನು ಓದಿದವರಿಗೆ 'ವಿಶ್ವಕೋಶ'ವನ್ನು ಓದಿದ ಅನುಭವವಾಗುತ್ತದೆ. ಬೆಂಗಳೂರು ನಗರ ಬೆಳೆದ ಬಗೆಯನ್ನು, ಅದರ ಬಹುಮುಖ ಸಾಧನೆಗಳನ್ನು ಮತ್ತು ವಿವರಗಳನ್ನು ಅತ್ಯಂತ ಸಮರ್ಥವಾಗಿ ಖಚಿತವಾಗಿ ಅದ್ಭುತವಾಗಿ ದಾಖಲಿಸಿರುವುದೇ ಇದರ ವಿಶಿಷ್ಟತೆಗಳಲ್ಲೊಂದು !

ಅನಂತಮೂರ್ತಿ ಕುಟುಂಬದೊಂದಿಗೆ ರಾಜಾರಾವ್ ಮತ್ತು ಅವರ ಪತ್ನಿ ಸೂಸನ್

ಚಿತ್ರದಲ್ಲಿರುವವರು ಎಡದಿಂದ ಬಲಕ್ಕೆ: ಸೂಸನ್, ಅನಂತಮೂರ್ತಿ, ಅನುರಾಧಾ, ಎಸ್ತರ್, ರಾಜಾರಾ

Subscribe to ಪ್ರಚಲಿತ ಲೇಖನ ವರ್ಗದ ಚಿತ್ರಗಳು