ಪ್ರವಾಸ ಕಥನ ಚಿತ್ರಗಳು

ಬಾಲ್ಕನಿಯ ಉದ್ಯಾನ !

ಅಮೆರಿಕದ ಕೊಲಂಬಿಯ ನಗರದ ನಿವಾಸಿಗಳೊಬ್ಬರ ಮನೆಯ ಬಾಲ್ಕನಿಯಲ್ಲಿನ ತೋಟದ ವೈಖರಿ ನೋಡಿ. ಹಿಂಭಾಗದಲ್ಲಿ ದಟ್ಟವಾದ ಎತ್ತರವಾದ ಮರಗಳು ಬೆಳೆದಿವೆ. ಕಾಡಿನಲ್ಲಿ ಮನೆಮಾಡಿದಂತೆ ಭಾಸವಾಯಿತು, ಅದನ್ನು ನೋಡಿದಾಗ !

 

ಚಿತ್ರ. ರವೀಂದ್ರ

ಬೈಜನಾಥ್ - ಬಿನ್ವಾ ನದಿ

ಬಿನ್ವಾ ನದಿ, ಬೈಜನಾಥ್. ಇದು ಬಿಯಾಸ್ ನದಿಯ ಉಪನದಿ.
ನಿಮಗೆ ತಿಳಿದಿರಬಹುದು, ಬಿಯಾಸ್ ನದಿ, ಸಿಂಧು ನದಿಯ ಉಪನದಿ.

ಓಹ್ ..’ಸಿಯಾಟಲ್ ನಗರ ’ ವೆಂದರೆ. ಮೈಜುಂ ಎನ್ನುತ್ತದೆ ; ರೋಮಾಂಚನವಾಗುತ್ತದೆ !

’ಸಿಯಾಟಲ್ ನಗರ, ಅಮೆರಿಕದೇಶದ ಪಶ್ಚಿಮೋತ್ತರ ದಿಕ್ಕಿನಲ್ಲಿರುವ ಅಧ್ಬುತನಗರಗಳಲ್ಲೊಂದು ! ಅಲ್ಲಿನ ’ಪ್ರಾಕೃತಿಕ ಬಂದರು,” ’ಎವರೆಟ್ ವಿಮಾನ ತಯಾರಿಕೆಯ ಭಾರಿ ಘಟಕ’, ಮಾರುಕಟ್ಟೆ, ಬಿಲ್ ಗೇಟ್ಸ್ ರವರ ’ ಮೈಕ್ರೊಸಾಫ್ಟ್  ಕಾರ್ಯಾಲಯ’, ನಗರದ ಪ್ರಮುಖಸ್ಥಾನದಲ್ಲಿ ಸೆಟೆದು ಎದೆಎತ್ತಿ ನಿಂತಿರುವ ದೈತ್ಯಾಕೃತಿಯ, ಹಾಗೂ ಮುದನೀಡುವ, ’ಸ್ಪೇಸ್ ಶಟಲ್.”

’ಹಂಟಿಂಗ್ಟನ್ ಬೀಚ್,’ ಕ್ಯಾಲಿಫೋರ್ನಿಯದ ಉತ್ತಮ ಕಡಲತೀರಗಳಲ್ಲೊಂದು !

ಅಮ್ಮ, ಮಗ, ಬೀಚಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ.

-ಚಿತ್ರ. ವೆಂಕಟೇಶ್.

ಕ್ಯಾಲಿಫೋರ್ನಿಯದ, "ಡಿಸ್ನಿ ಲ್ಯಾಂಡ್ " ಒಳಗೆ ಹೋದಾಗ !

”ಡಿಸ್ನಿ ಲ್ಯಾಂಡ್,’ ಒಂದು ಅಧ್ಬುತವಾದ ಮಾನವ ನಿರ್ಮಿತ ಮನೋರಂಜನೆಯ ತಾಣ. ’ವಾಲ್ಟ್ ಡಿಸ್ನಿ ’ ಯವರು ಇದನ್ನು ನಿರ್ಮಿಸಿ, ಒಂದು ಹೊಸ ಇತಿಹಾಸಕ್ಕೆ ಮಾರ್ಗವನ್ನು ತೋರಿಸಿದ್ದಾರೆ !

-ಚಿತ್ರ-ವೆಂ.

ಉದ್ರಿ

ನಾನು ನಿನ್ನೆಯ ದಿನ ಸೊರಬ ತಾಲೂಕಿನ ಉದ್ರಿ ಗ್ರಾಮಕ್ಕೆ ಜನಸ್ಪಂದನ ಕಾರ್ಯಕ್ರಮದ ಪ್ರಯುಕ್ತ ಹೋಗಿದ್ದೆ.ಅಲ್ಲಿಯ ಪುರಾತನ ದೇವಾಲಯಗಳ ಚಿತ್ರಗಳನ್ನು ನನ್ನ ಹೊಸ ಕ್ಯಾಮರದಿಂದ ಕ್ಲಿಕ್ಕಿಸಿ ಪಿಕಾಸದಲ್ಲಿ ಅಪ್ಲೋಡ್ ಮಾಡಿದ್ದೇನೆ.

ಸೊಗಸಾದ ಸರೋವರದ ಮಧ್ಯೆ, ನೀರಿನ ಚಿಲುಮೆ ; ಅಲ್ಲೇ ಬಾತುಕೋಳಿಗಳು !

ನಾವು ಅಮೆರಿಕದ, ಇಲಿನಾಯ್ ರಾಜ್ಯದ , ಬ್ಲೂಮಿಂಗ್ಟನ್ ನಗರದಲ್ಲಿ ಕಂಡ ಚೆಲುವಿನ ಸರೋವರದ ಬಳಿ, ಕುಳಿತು ತೆಗೆದ, ಚಿತ್ರ ! ಹೆಚ್ಚು ಜನಗಳೇ ಇಲ್ಲದ ಪ್ರದೇಶ. ಪ್ರಕೃತಿ ಸೌಂದರ್ಯಕ್ಕೆ ಅತಿ ಪ್ರಾಮುಖ್ಯತೆ.

ಮ೦ಟಪದ ಮೇಲೊಂದು ಮರ

ಮಾವಿನಕೆರೆ ಒಂದು ಪುಣ್ಯಕ್ಷೇತ್ರ. ಹಾಸನಕ್ಕೆ ೨೫ ಕಿ.ಮೀ. ದೂರದಲ್ಲಿರುವ ಮಾವಿನಕೆರೆ ಬೆಟ್ಟಕ್ಕೆ ಈಗ ವಾಹನ ಹೋಗುವಂತೆ ಟಾರ್ ರಸ್ತೆ ಯಾಗಿದೆ.ಬೆಟ್ಟದ ಮೇಲೆ ರಂಗನಾಥನ ಗುಡಿಯಮುಂದೆ ಒಂದು ಯಾಗಶಾಲೆ[ಕಲ್ಲಿನ ಮಂಟಪ]ಇದೆ. ದೇವಾಲಯದ ಜೀರ್ಣೋದ್ಧಾರವಾಗುತ್ತಿರುವುದರಿಂದ ಮಂಟಪದಲ್ಲಿಯೇ ಕಳಾಕರ್ಷಣೆ ಮಾಡಿರುವ ಕುಂಭಗಳನ್ನು ಇಟ್ಟು ಅಲ್ಲೇ ಪೂಜೆ ನಡೆಯುತ್ತಿದೆ.

ಸರೋವರಗಳ ನಾಡು-ಅಮೆರಿಕ !

’ಮಿನ್ನಸೋಟ” ರಾಜ್ಯ ೧೦, ೦೦೦ ಸರೋವರಗಳ ರಾಜ್ಯವಂತೆ ! ಕ್ಯಾಲಿಫೋರ್ನಿಯವೇನು ಕಡಿಮೆಯೇ ? ಅಲ್ಲಿ ಅನೇಕ ಸರೋವರಗಳನ್ನು ನಾವು ನೋಡಿದೆವು.

-ವೆಂ.

ನನಗೆ ಮುದನೀಡಿದ, ಮತ್ತೊಂದು ದೃಷ್ಯ !

ನಮ್ಮ ಮನೆಯ ಬಾಲ್ಕನಿಯಿಂದ, ನೋಡಿದರೆ, ನಮ್ಮ ಕಾರ್, ನಮ್ಮಕಾಲೋನಿಯ ಕಾಂಪೌಂಡ್ ನ ಗೇಟ್ ನಿಂದ ಹೊರಗೆ ಹೋಗುವುದು, ಕಾಣಿಸುತ್ತಿತ್ತು.

ಆದರೆ, ಈ ಮರಗಳ ಕೊಂಬೆಗಳ ಸುಂದರ ವಿನ್ಯಾಸವನ್ನು ಗಮನಿಸಿ. ಇದು ನನಗೆ ಬಹುವಾಗಿ ಹಿಡಿಸಿತು. ಈ ನೋಟ, ಅಮೆರಿಕದ ’ಆರೇಂಜ್ ಕೌಂಟಿ ’, ಯದು, ಎಂದು ಹೇಳಲು ಅಡ್ಡಿಯಿಲ್ಲ !

-ವೆಂ.

ಮೇಲಿದೆ ನಂ ಮನೆ ; ಇಲ್ಲಿ ನಿಂತಿರುವುದು, ಸುಮ್ಮನೆ.....

೩,೪೦೦ ಅವೆ ಆಫ್ ಆರ್ಟ್ಸ್ ನ ನಮ್ಮ ಕಾಲೋನಿಮನೆ, ೩ ನೆಯ ಮಹಡಿಯಲ್ಲಿ ! ನಾನು ಕೆಳಗೆ ಬಂದಾಗ, ಭಾರಿ ವಾಡೇವುಗಳಲ್ಲಿನ ಗಿಡಗಳನ್ನು ಇಷ್ಟಪಟ್ಟೆ ! ಪಕ್ಕದಲ್ಲೇ ನೀರಿನ ಕಾರಂಜಿ !

-ಚಿತ್ರ..ಸ.

ಸೈಕಲ್ ಸವಾರಿಣಿ, ದಣಿವು ನೀರಡಿಕೆಯನ್ನು ನೀಗಿಸಿಕೊಂಡ ನಂತರ, ಮತ್ತೆ ಸೇತುವೆಯಮೇಲೆ ತನ್ನ ಸೈಕಲ್ ನ್ನು ನುಗ್ಗಿಸಿ ಓಡಿಸುತ್ತಾಳೆ !!

ಸೈಕಲ್ ನಿಲ್ಲಿಸಿ ವಿಶ್ರಮಿಸಿಕೊಳ್ಳುತ್ತಿರುವ, ಸೈಕಲ್ ವಾಹಿನಿಯನ್ನು ...ಅಂಬೆ ..ಎನ್ನೋಣವೇ ಅಥವಾ, ಶರ್ಲಿಯೋ, ಕೇಟಿಯೋ, ಕ್ಯಾಥರಿನ್ನೊ ನಮಗೇನು ?

ಜೆಫ್ ಡನ್ಹಮ್, ಒಬ್ಬ ವಿಶ್ವವಿಖ್ಯಾತ ಪಪೆಟ್ ಶೋಮನ್ !

ಇತ್ತೀಚೆಗೆ, ಜೆಫ್ ಡನ್ಹಮ್, ಅಮೆರಿಕದಲ್ಲಿ, ’ಕ್ರಿಸ್ಮಸ್ ಸ್ಪೆಷಲ್ ಪಪೆಟ್ ಶೋ,” ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದರಲ್ಲಿ ’ಟೆರೊರಿಸ್ಟ್ ಅಖ್ಮೆದ್”, ಹಾಡುತ್ತಾರೆ. ಇದನ್ನು ’ಯುಟ್ಯೂಬ್,’ ನಲ್ಲಿ ಆಲಿಸಿ.

-ಚಿತ್ರ-ನನ್ನ ಆಲ್ಬಮ್ ನಿಂದ.

ದೋಣಿಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ..ಬೀಸುಗಾಳಿಗೆ, .......

ಈ ದೋಣಿ ಹೋಗುತ್ತಿರುವುದು, ಅಂತ-ಇಂತಾ ಸಾಗರದಲ್ಲಲ್ಲ ; ಪ್ರಶಾಂತ ಮಹಾಸಾಗರದಲ್ಲಿ. ಈ ಪೆಸಿಫಿಕ್ ಮಹಾಸಾಗರ, (ಇದರ ಮತ್ತೊಂದು ಹೆಸರು) ವಿಶ್ವದ ಅತ್ಯಂತ ವಿಶಾಲ, ಅತಿ ಆಳವಾದ ಸಾಗರ ! ದೋಣಿ ಇಂತಹ ಭಾರಿ ದೊಡ್ಡ ಕಡಲಿನ ನೀರಿನಮೇಲೆ ಹೋಗುತ್ತಿದೆ. ಆಕಡೆ ದಡವನ್ನು ಮುಟ್ಟುವುದೋ ಇಲ್ಲವೋ, ಹೇಳುವವರ್ಯಾರು ...?

-ಚಿತ್ರ, ಮನೆಯ ಆಲ್ಬಮ್ ನಿಂದ.

’ಅಕ್ಕ ವಿಶ್ವಕನ್ನಡ ಸಮ್ಮೇಳನ ’ ದ, ’ಯೂತ್ ಫೋರಮ್, ಕಾರ್ಯಕ್ರಮಗಳು” ’ಐಶ್ವರ್ಯ ರೈ ಭವನ,’ ದಲ್ಲಿ ನೆರವೇರಿತ್ತು !

ನಮ್ಮಕನ್ನಡಿತಿ, ’ಐಶ್ವರ್ಯ ರೈ ’ ರವರಹೆಸರನ್ನು ಕನ್ನಡ ಸಾಹಿತ್ಯವನ್ನು ನಡೆಸಿದ, ಭವ್ಯ ಹಾಲ್ ಗೆ ಇಟ್ಟಿದ್ದರು !

-ಚಿತ್ರ, ವೆಂ

ಮರಗಳು ಹೀಗಿ ಕಾಣಿಸುವುದು ಯಾವಾಗ ? ಇವುಗಳ ಫೋಟೊವನ್ನು ಮಲಗಿ ತೆಗೆದಾಗ ಅಲ್ಲವೇ ?

ದಟ್ಟವಾದ ಹಸಿರು ಹುಲ್ಲಿನ ಮೇಲೆ ಮಲಗಿದಾಗ, ಅಲ್ಲಿನ ಮರಗಳ ವಿನೂತನ ಸೌಂದರ್ಯವನ್ನು ಕಂಡೆವು. ಅದನ್ನು ಸೆರೆಹಿಡಿದಿದ್ದೇನೆ. ನಿಮಗೂ ಇಷ್ಟವಾಗಬಹುದಲ್ಲವೇ ?

ಬೆಟ್ಟಗಳ ಮಧ್ಯದಲ್ಲಿ ಕಾಣುವ ಲಕ್ಯಾ ಅಣೆಕಟ್ಟು

ಕುದುರೆಮುಖದಲ್ಲಿ ಅದಿರು ಶೇಖರಣೆಗಾಗಿ ಲಕ್ಯಾ ಅಣೆಕಟ್ಟನ್ನು ಕಟ್ಟಲಾಗಿದೆ.

ರೋಪ್ ವೇ ಮೂಲಕ ಅದಿರನ್ನು ಮಂಗಳೂರಿಗೆ ಸಾಗಿಸಲಾಗುತ್ತಿತ್ತು.

ಈಗ ಅದಿರು ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

ಇದು ವಿಮಾನದ ಕಿಟಕಿ- ಆಗಸದಲ್ಲಾಗುವ ಬಣ್ಣಗಳ ವಿಪರೀತಗಳನ್ನು ತೋರಿಸುವ ಬೆಳಕಿಂಡಿ !

ಮುಂಬೈ ನಿಂದ ನ್ಯೂವರ್ಕ ವರೆಗಿನ ಪ್ರಯಾಣದಲ್ಲಿನ ಸಾಥಿ !

ಬೆಳ್ಳಿಮೋಡಗಳ ಮಧ್ಯೆ !

ಯೂರೋಪ್ ದೇಶದ ಮೇಲೆ ವಿಮಾನದಲ್ಲಿ ಹೋಗುವಾಗ, ಬೆಳ್ಳಿಮೋಡಗಳ ಮಧ್ಯೆ ಚಲಿಸುವಾಗ ಕಾಣುವ ದೃಷ್ಯ ಅದ್ಭುತ ! ಸುಮಾರು ೪೦, ೦೦೦ ಅಡಿಯೆತ್ತರದಲ್ಲಿ ಮೊದಲಬಾರಿ ಹಾರುವಾಗ ಆಗುವ ಅನುಭವ, ಅನನ್ಯ !

ಚಿತ್ರ. ವೆಂ.

ಭಾರತಕ್ಕೆ ವಾಪಸ್ ಬರುವಾಗ, ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಿಂದ, ಮುಂಬೈನಗರಕ್ಕೆ ಆಗಮಿಸಿದೆವು !

ನಾವು ಭಾರತವನ್ನು ಜುಲೈ, ೪ ರಂದು ಬಿಟ್ಟು, ಮುಂಬೈನ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಂಟಿನೆಂಟಲ್ ಏರ್ಲೈನ್ಸ್ ನಲ್ಲಿ ಯಾನಮಾಡಿ ೧೬/೧/೨ ಗಂಟೆಯನಂತರ ನ್ಯೂವಾರ್ಕ್ ತಲುಪಿದೆವು. ಜುಲೈ ೪ ಅಮೆರಿಕದ ಸ್ವಾತಂತ್ರ್ಯದಿನೋತ್ಸವದ ದಿನ ! ಮತ್ತೆ ಅಲ್ಲಿಂದ ೯ ಗಂಟೆಯ ವಿಮಾನಯಾನದ ಬಳಿಕ, ’ಲಾಸ್ ಎಂಜಲೀಸ್’ ಏರ್ಪೋರ್ಟ್ ತಲುಪಿದೆವು. ಅಲ್ಲಿಂದದ ನಮ್ಮ ಮಗನ ಜೊತೆ, ೧ ಗಂಟೆಯ ಡ್ರವ್ ನಂತರ, ಕ್ಯಾಲಿಫೋರ್ನಿಯದ ’ಆರೇಂಜ್ ಕೌಂಟಿ’ ಯ, ಅವನ ಮನೆಯನ್ನು ಸೇರಿದೆವು. ಅಲ್ಲಿ ಇದ್ದದ್ದು ಎರಡೂವರೆ ತಿಂಗಳು. ಅದರಲ್ಲಿ, ಕ್ಯಾಲಿಫೋರ್ನಿಯದಲ್ಲಿ ಸುಮಾರು ೨೮ ದಿನ, ಕೊಲಂಬಿಯದಲ್ಲಿ ೧೮ ದಿನ, ಚಿಕಾಗೋನಲ್ಲಿ ೫ ದಿನ, ಉಳಿದ ದಿನಗಳನ್ನು ಇಲಿನಾಯ್, ಸ್ಯಾನ್ ಫ್ರಾನ್ಸಿಸ್ಕೊ, ಸಿಯಾಟಲ್, ಕಾಸ್ತಮೆಸ, ಸಾಂಟಕ್ಲಾರ ಗಳಲ್ಲಿ ಕಳೆದೆವು.

ಮಹಾಬಲಿಪುರ ದರ್ಶನ-೨

ತಮಿಳುನಾಡಿನ ಮಹಾಬಲಿಪುರದಲ್ಲಿರುವ ಐದು ರಥಗಳಲ್ಲಿ ಒಂದು ರಥ.ಒಂದೇ ಬಂಡೆಯಲ್ಲಿ ಕಡೆದಿರುವ ಈ ರಥವನ್ನು ಒಮ್ಮೆ ನೋಡಲೇ ಬೇಕು.

ಸಬ್ಮೆರೀನ್ ಯಾತ್ರೆಯ ಮೊದಲು, ನಮಗೆ ಕಾಣಿಸುವ ಹಳದಿ ಫಲಕ !

ಈ ಫಲಕ ನಮ್ಮ ಕಣ್ಣಿಗೆ ಬಿತ್ತು. ಕ್ಯಾಮರಾಸಿದ್ಧನಾಗಿದ್ದ ನನಗೆ, ಎಲ್ಲ ಪರಿಸರಗಳೂ ಪ್ರಮುಖವೆ ! ಫೋಟೊ ತೆಗೆದದ್ದೂ ತೆಗೆದದ್ದೆ. ಒಂದು ವೇಳೆ, ಈ ಫೋಟೊಗಳು ನನ್ನಬಳಿಯಿಲ್ಲದಿದ್ದಿದ್ದರೆ, ಈ ಲೇಖನಗಳನ್ನು ಬರೆಯಲು ಸಾಧ್ಯವಾಗುತ್ತಿತ್ತೋ ಇಲ್ಲವೋ ನಾನರಿಯೆ !

ಪಾತರಗಿತ್ತಿ ಪಕ್ಕ...!

 

'ನನ್ನಿ ಸುನಿಲ' ನನ್ನ ಚಿಟ್ಟೆ ಕವನದ ಬಗ್ಗೆ ಕಾಮೆಂಟಿಸಿದಾಗ, ನಾನು ತೆಗೆದ ಒಂದು ಚಿಟ್ಟೆ ಚಿತ್ರ ಹಾಕಬೇಕೆನಿಸಿತು...

ಏನನಿಸಿತು ಅಂತ ಹೇಳಿ...

ನನ್ನ ಹಳೇ....ಆಟೋ ಫೋಕಸ್ ಕ್ಯಾಮರಾ (canon s330)ದಲ್ಲಿ ತೆಗೆದದ್ದು.

--ಶ್ರೀ

ರಾಜಾಸ್ಥಾನ, ರಾಜದರ್ಬಾರ್, ಹಾಗೂ ಅವರ ವಿಲಾಸ ಜೀವನದ ಕಾಲ್ಪನಿಕ ಲೋಕದಲ್ಲಿ ಚಿಣ್ಣರು, ಮೈಮರೆಯುತ್ತಾರೆ !

ಇವು, ’ಡಿಸ್ನಿ ಲ್ಯಾಂಡ್,’ ನ ರಂಗಮಂದಿರದಲ್ಲಿ ಲಭ್ಯ !

ನಾಟಕವನ್ನು ಪ್ರದರ್ಶಿಸುವ, ರಂಗಭೂಮಿಯಲ್ಲಿ ರಾಜ-ರಾಣಿಯರ, ಸಭಾಸ್ಥಳ, ಅವರ ಪ್ರಪಂಚವನ್ನು ನಾವು ವೀಕ್ಷಿಸಬಹುದು. ಮಕ್ಕಳು, ರಾಜಕುಮಾರಿಯ ಬಳಿಯೋ, ಅಥವಾ, ರಾಜಕುಮಾರನ ಬಳಿ, ನಿಂತು ಫೋಟೋ ತೆಗೆಸಿಕೊಳ್ಳಬಹುದು. ಆಟೋಗ್ರಾಫ್ ಹಾಕಿಸಿಕೊಳ್ಳಲೂ ಬಹುದು.

-ಚಿತ್ರ. ನನ್ನ ಸಂಗ್ರಹ.

ಪಿಕ್ನಿಕ್ ನಲ್ಲಿ ನಮ್ಮಜೊತೆಯಲ್ಲಿದ್ದ, ಅಂದ-ಚೆಂದದ, ಯುವಕ-ಯುವತಿಯರು !

ಗೋಲ್ಡನ್ ಬ್ರಿಡ್ಜ್. ಸ್ಯಾನ್ ಫ್ರಾನ್ಸಿಸ್ಕೊ, ಒಂದು ಅವಿಸ್ಮರಣೀಯವಾದ ಸ್ಥಳ. ಅಲ್ಲಿಗೆ ಬರುವ ಪರ್ಯಟಕರು, ವಿಶ್ವದ ಎಲ್ಲಾಭಾಗಗಳಿಂದ ಬರುವವರು. ನಮ್ಮ ಜೊತೆಯಲ್ಲಿದ್ದ ಯೂರೋಪ್ ನಿಂದಬಂದ, ಅಂದ-ಚೆಂದದ ಯುವಕ-ಯುವತಿಯರ, ಸಂಭ್ರಮವನ್ನು ನೋಡಿ, ನಮಗೆ ಅತೀವ ಸಂತೋಷವಾಯಿತು. ಅವರ ಜೀವನೋತ್ಸಾಹಕ್ಕೆ ಎಲ್ಲೆಯಿರಲಿಲ್ಲ.

-ಚಿತ್ರ. ಪ್ರಕಾಶ್.

ಕ್ಯೂನಲ್ಲಿ, ಸುಮಾರು ಒಂದುಗಂಟೆ ಕಾದಬಳಿಕ, ನಮ್ಮ ಸರದಿ !

ಡಿಸ್ನಿ ಲ್ಯಾಂಡ್ ನಲ್ಲಿ ಪ್ರತಿ ಐಟಂ ವೀಕ್ಷಿಸಲೂ ಕ್ಯೂ ನಲ್ಲಿ ಕಾಯಬೇಕು. ಅತ್ಯಂತ ಸುವ್ಯವಸ್ಥಿತ ಕ್ಯೂ ಯೆಂದು ಹೇಳಬೇಕು. ಯಾರೂ ಅಪ್ಪಿತಪ್ಪಿ, ಕ್ಯುನಿಯಮವನ್ನು ಮುರಿಯುವುದಿಲ್ಲ. ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಕೂಡುವ ಆಸನಗಳಿವೆ. ಅಂಗವಿಕಲರಿಗೆ ವಿಶೇಷ ವ್ಹೀಲ್ ಚೇರ್ ವ್ಯವಸ್ಥೆಯಿದೆ. ಅವರು ಕಾಯುವ ಅಗತ್ಯವಿಲ್ಲ.

ಸಬ್ಮೆರೀನ್, ಹೊರಗೆ ಕಾಣಿಸುವ ರೀತಿ.

ಹೊರಮೈ ಮೇಲೆ ಗಾಢವಾದ, ಹಳದಿಬಣ್ಣದ ರಂಗ್ ಬಳಿದಿದ್ದಾರೆ. ಇದು ಮೇಲ್ಭಾಗದ ಡೆಕ್. ನಾವುಕುಳಿತು ವೀಕ್ಷಿಸುವ ಜಾಗ ಕೆಳಭಾಗದ ಡೆಕ್ ನಲ್ಲಿ.

-ಚಿತ್ರ. ಪ್ರಕಾಶ್.

ಎಸ್. ಎಫ್. ನ ಗೋಲ್ಡನ್ ಬ್ರಿಡ್ಜ್ ಸೇತುವೆಯ ಕೆಳಗೆ, ಹುಡುಗಿಯರು, ಬೋಟ್ ಯಾನಕ್ಕೆ ಹವಣಿಸುತ್ತಿದ್ದಾರೆ !

ಸ್ಯಾನ್ ಪ್ರಾನ್ಸಿಸ್ಕೊ ನಗರದ ಗೋಲ್ಡನ್ ಬ್ರಿಡ್ಜ್ ನೋಡಿದಮೇಲೆ, ನಮಗೆ ಕಾಣಿಸಿದ್ದು, ಅಲ್ಲಿನ ಹುಡುಗಿಯರು, ದೋಣಿಗಳಲ್ಲಿ ಪ್ರಶಾಂತಸಾಗರದಲ್ಲಿ ಯಾನ ಮಾಡುತ್ತಿರುವ ದೃಷ್ಯ ! ಗೋಲ್ಡನ್ ಸೇತುವೆಯಮೇಲೆ ಸೈಕಲ್ ಸವಾರರು ಅದೆಷ್ಟೋ ! ಗೋಲ್ಡನ್ ಬ್ರಿಡ್ಜ್ ವಿಶ್ವದ ವಿಸ್ಮಯಗಳಲ್ಲೊಂದು. ಈ ಪ್ರದೇಶದಲ್ಲಿ ಭೂಕಂಪಗಳು ಸರ್ವೇಸಾಮಾನ್ಯ.

ನಮ್ಮ ಸಂಪದಿಗ, ಶ್ರೀವತ್ಸ ಜೋಷಿಯವರು, ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಮಾತಾಡುತ್ತಿರುವುದು !

ಜೋಷಿಯವರನ್ನು ಮುಖ್ತಾ ನೋಡಿರಲಿಲ್ಲ. ಅಲ್ಲಿ ಅವರ ಭೇಟಿಯಾಯಿತು. ಪರಸ್ಪರ ಸಂಗತಿಗಳ ವಿನಿಮಯವಾಯಿತು. ಕನ್ನಡಾಸಕ್ತರ ಸಂಖ್ಯೆಯನ್ನು ಗಮನಿಸಿ. ಕನ್ನಡ ಸಾಹಿತ್ಯಾಭಿಲಾಷಿಗಳು ಯಾವಾಗಲೂ ಹೀಗೆಯೇ, ಬೆರಳೆಣಿಕೆಯಷ್ಟು ! ವೇದಿಕೆಯ ಮೇಲೆ, ಜಯಂತ್ ಕಾಯ್ಕಿಣಿ ಇದ್ದಾರೆ. ಶ್ರೀಮತಿ. ತ್ರಿವೇಣಿಯವರು, ಕಾರ್ಯಕ್ರಮದ ಸಂಚಾಲಕಿ.

’ಪಿಂಕಿ ಮೆಹ್ತಾ,’ ನನಗೆ ಬೇಗ ಬಳಕೆಯಾದಳು, ಹಾಗೂ ಸ್ನೇಹಿತೆಯಾದಳು ! !

ನಾನು ಮೊದಲೇ ತಿಳಿಸಿದಂತೆ, ಪೀಯೂಷ್ ಮೆಹ್ತಾ ದಂಪತಿಗಳು, ನಮ್ಮಜೊತೆಯಲ್ಲೇ, ’ಕಾಂಟಿನೆಂಟಲ್ ಏರ್ಲೈನ್ಸ್,’ ನಲ್ಲಿ ಪ್ರಯಾಣಿಸುತ್ತಿದ್ದರು. ೧೬ ವರೆಗಂಟೆ ಒಂದೇ ಸಮನೆ ಯಾನಮಾಡಿದಮೇಲೆ, ಸಹಜವಾಗಿ ಅವರ ಮಗು, ಪಿಂಕಿ, ತನ್ನ ವರ್ಚಸ್ಸನ್ನು ನಮ್ಮಮೇಲೆ ಬೀರಿದ್ದಳು. ನ್ಯೂವಾರ್ಕ್ ಏರ್ಪೋರ್ಟ್ ನಲ್ಲಿ ಪಿಂಕಿಯನ್ನು ಎತ್ತಿಕೊಂಡು ಮುದ್ದಿಸದೆ ಸಮಾಧಾನವಾಗಲಿಲ್ಲ !

ತೆಪ್ಪದಲ್ಲಿ... (ಹೊಗೆನೆಕಲ್)

ನಾವು ಬಿಳಿಗಿರಿ ರಂಗನಬೆಟ್ಟ, ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಕೈಗೊಂಡಿದ್ದಾಗ, ಮಲೆ ಮಹದೇಶ್ವರ ಬೆಟ್ಟದಿಂದ ಗೋಪಿನಾಥಂ (ವೀರಪ್ಪನ್ ಹುಟ್ಟೂರು) ಮೂಲಕ ಹೊಗೆನೆಕಲ್ ತಲುಪಿ ನದಿಯ ಮಾರ್ಗವಾಗಿ ಬೆಂಗಳೂರು ಚೆನ್ನೈ ರಾಹೆ ಮೂಲಕ ಬೆಂಗಳೂರಿಗೆ ತಲುಪಿದೆವು.

ಹೊಗೆನೆಕಲ್ ನಲ್ಲಿ ತೆಪ್ಪದ ಮೂಲಕ ಹೋಗುತ್ತಿದ್ದಾಗ ತೆಗೆದ ಚಿತ್ರ.

ಸ್ಯಾನ್ ಫ್ರಾನ್ಸಿಸ್ಕೋನಗರದ ಕೇಬಲ್- ಕಾರ್, ಸೇವೆ !

ಕ್ಯಾಲಿಫೋರ್ನಿಯರಾಜ್ಯದ, ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಅತ್ಯಂತ ಪರಿಶ್ರಮದಿಂದ ಈ ಸಾರಿಗೆ ವ್ಯವಸ್ಥೆಯನ್ನು ಜೀವಂತವಾಗಿ ಇಟ್ಟಿದ್ದಾರ. ಈ ನಗರದಲ್ಲಿ ಪರ್ಯಟಕರ ಸಂಖ್ಯೆ ಅಪಾರ. ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಉದ್ಯೋಗ. ಇಂಟರ್ನೆಟ್ ತಂತ್ರಜ್ಞಾನ ಬಂದಮೇಲೆ, ಅದಕ್ಕೆಸಂಬಂಧಿಸಿದ ತಂತ್ರಜ್ಞಾನ ಹಾಗೂ ಉದ್ಯಮಗಳು ಚಾಲನೆಯಲ್ಲಿವೆ.

-ವೆಂ.

ಇಂಗ್ಯಾಕ್ ಬಗ್ಗೋದು ಅಂತೀನಿ ? ತೆಲೆ-ಗಿಲೆ ನೆಟ್ಗೈತಾ ಎಂಗೆ, ಗೌರಮ್ಮಾರು ಪೋಟೋ ತೆಗಿತವ್ರಾ ? ಅಂಗೇಳಿ ಮತ್ತೆ !

ಪುಟ್ಟ ಗೌರಮ್ಮ, ’ ನಾನೂ ಫೋಟೋ ತೆಗಿತೀನಿ,’ ಅಂತ ಹಟಮಾಡಿದಾಗ, ನಾವು ಸರಿ ಅಂದ್ವಿ ; ಮತ್ತೆ ಬಗ್ಗಕ್ ಶುರುಮಾಡಿದ್ವಿ !

-ಅವ್ರೆ, ಅಲ್ ನಿಂತವ್ರಲ್ಲಾ ; ಅವ್ರೆ ಈ ಪೋಟೋ ತೆಗ್ದಿದ್ದು.

’ಚಾಕ್ ಮಕ್ಕಳ ಮನೆ,’ ಯ ಹೊರನೋಟ !

ಈ ಮಮತೆಯ ಮಕ್ಕಳಮನೆ, ನಮ್ಮಮನೆಯಿಂದ, ೧೫ ನಿಮಿಷಗಳ ಕಾರ್ ಡ್ರೈವ್ ನ ದೂರದಷ್ಟಿತ್ತು. ಮಕ್ಕಳಿಗೆ ಊಟಮಾಡಿಸಿ, ಹಾಸಿಗೆ ಹಾಸಿಕೊಟ್ಟು, ಕತೆಹೇಳುತ್ತಾ ಮಲಗಲು ಅನುವುಮಾಡಿಕೊಟ್ಟರೆ, ಯಾವಮಗು ತಾನೇ ತನ್ನ ಮನೆಗೆ ಹೋಗಲು ಆಶಿಸುತ್ತದೆ ?

-ವೆಂ.

ವಾಷಿಂಗ್ಟನ್ ವಿಶ್ವವಿದ್ಯಾಲಯ, ಪುರಾತನವಾಸ್ತುಶಿಲ್ಪದ ಆಧುನಿಕ ನಿರ್ಮಾಣದ, ಭವ್ಯಪರಂಪರೆಯ ಒಂದು ಪ್ರತೀಕ !

ಕಟ್ಟಡ ವಿನ್ಯಾಸ ಗಾಥಿಕ್ ಶೈಲಿಯದು !

ಚಿತ್ರ-ವೆಂ.

ಭಾವ ಸಂಗಮ

ಹಾಸನದಲ್ಲಿ ೨.೦೭.೨೦೦೬ ರಂದು ನಡೆದ ಮನೆ ಮನೆ ಕವಿಗೋಷ್ಟಿಯಲ್ಲಿ ಕು|| ಇಂಚರನಾಗೇಶ್ ಹಾಗೂ ಶ್ರೀಮತಿ ಲಲಿತಾ ರಮೇಶ್ ಅವರು ಹರಿಹರಪುರಶ್ರೀಧರ್ ರವರು ರಚಿಸಿದ ಕವನಗಳನ್ನು ಹಾಡಿದರು. ಮನೆಮನೆ ಕವಿಗೋಷ್ತಿಯ ಇತಿಹಾಸದಲ್ಲಿ  ಅದೊಂದು ಅಪರೂಪದ ಕಾರ್ಯಕ್ರಮವಾಗಿತ್ತು.

ಪುರುಂದರದಾಸರ ಹಿಂದೆ- ಮೆರವಣಿಗೆಯಲ್ಲಿ, ಅಕ್ಕ ವಿಶ್ವಕನ್ನಡಸಮ್ಮೇಳನದ ಎರಡನೆಯದಿನದ ಪ್ರಾತಃಕಾಲದಂದು !

ಸಮಸ್ತ ೩,೦೦೦ ಜನ ಕನ್ನಡಿಗರೆಲ್ಲಾ ಸೇರಿ ಮೆರವಣಿಗೆಯಲ್ಲಿ ದೂರದ ಅಮೆರಿಕೆಯಲ್ಲಿ ಭಾಗವಹಿಸಿದಾಗ, ಮೈಚಳಿಬಿಟ್ಟು ಕನ್ನಡಿಗರೆಲ್ಲಾ ಭಜನೆಮಾಡಿದ್ದೂ ಮಾಡಿದ್ದೇ . ದೇವರನಾಮಗಳ ಹಾಡುಗಳನ್ನು ಹೇಳಿದ್ದೂ ಹೇಳಿದ್ದೆ. ಅದೊಂದು ಅವಿಸ್ಮರಣೀಯ ಘಟನೆಯಾಗಿತ್ತು !

ಅಮೆರಿಕದ ವಾಸಿಗಳಿಗೆ, ಅದರಲ್ಲೂ ಎಳೆಯರಿಗೆ, ಇದೊಂದು ಅದ್ಭುತ ಅನುಭವ !

ನಮ್ಮ ಊರಿನ ’ ಊರಿಮಾರಮ್ಮ.’ ಉತ್ಸವ ನಮಗೆ ಚಿರಪರಿಚಿತ. ಆದರೆ, ಈತ ಸ್ವಲ್ಪ ಭಿನ್ನರೀತಿಯಲ್ಲಿ ಚಾಟಿ ಹೊಡೆದುಕೊಂಡು ’ಎಂಬೆಸಿ,’ ಹೋಟೆಲ್ ನ ಸುತ್ತ-ಮುತ್ತ ಓಡಾಡುತ್ತಿದ್ದ ವೈಖರಿ, ಎಲ್ಲರಿಗೂ ವಿಸ್ಮಯ ಹಾಗೂ ಮುದಕೊಟ್ಟ ಒಂದು ಏಕಪಾತ್ರಾಭಿನಯ !

ವೆಂ.

ಡಾ. ಚಂದ್ರಶೇಖರ ಕಂಬಾರರು, ಡಾ. ಚಂದ್ರಶೇಖರ್ ರವರ ’ ಕರ್ಣಾಟಕ ಭಾಗವತ’, ಬೃಹತ್ ಗ್ರಂಥದ ಬಿಡುಗಡೆಮಾಡಿದ ಸಂದರ್ಭದಲ್ಲಿ !

ಚಿಕಾಗೋ ನಗರದಲ್ಲಿ ನಡೆದ, "ಅಕ್ಕ ವಿಶ್ವಕನ್ನಡ ಸಮ್ಮೇಳನ, " ದ ಕೊನೆಯದಿನ, ಡಾ. ಕಂಬಾರರು, ಕರ್ಣಾಟಕ ಭಾಗವತ ಉದ್ಗ್ರಂಥವನ್ನು ಆಹ್ವಾನಿತ ಸಭಿಕರ ಮುಂದೆ, ನೆರವೇರಿಸಿಕೊಟ್ಟ, ’ ವಿಮೊಚನಾ ಕಾರ್ಯಕ್ರಮ,’ ದ ಒಂದು ಸವಿನೆನೆಪು !

-ಚಿತ್ರ, ವೆಂಕಟೇಶ್.

ಜಯಂತ್ ಕಾಯ್ಕಿಣಿಯವರು, ಡಾ. ಚಂದ್ರಶೇಖರ್ ರವರಿಗೆ ಅಭಿನಂದನಾಪತ್ರವನ್ನು ಸಮರ್ಪಿಸಿದ ದೃ‍ಷ್ಯ ! (’ಅಕ್ಕಾ ವಿಶ್ವಕನ್ನಡ ಸಮ್ಮೇಳನ,’ ದಲ್ಲಿ )

ಈ ಕಾರ್ಯಕ್ರಮ ಮಧ್ಯಾನ್ಹ, ಊಟದ ತರುವಾಯ ನಡೆಯಿತು. ಮುಂಬೈನ ಪ್ರೊ. ಕುಲಕರ್ಣಿಯವರು, ಲಕ್ಷ್ಮೀವೆಂಕಟೇಶ್ ದಂಪತಿಗಳು, ವಾಷಿಂಗ್ಟನ್ ನಿಂದ ಬಂದ, * ಶ್ರೀವತ್ಸ ಜೋಷಿ, ಹಾಗೂ ಹೂಸ್ಟನ್ ನಗರವಾಸಿ, ಸುಬ್ಬಿಸುಬ್ರಹ್ಮಣ್ಯ ದಂಪತಿಗಳು, ಮುಂತಾದ ಸಾಹಿತ್ಯಾಸಕ್ತರು ಸಭಾಗೃಹದಲ್ಲಿ ಹಾಜರಿದ್ದರು. ಶ್ರೀ. ಜಯಂತ್ ಕಾಯ್ಕಿಣಿಯವರ ಪಕ್ಕದಲ್ಲಿ ಕಾರ್ಯಕ್ರಮದ ಸಂಚಾಲಕಿ, ಶ್ರೀಮತಿ.

ವಾಹ್ ! ಇಲಿನಾಯ್ ನ, ಒಂದು ಸೊಗಸಿನ ಸುಂದರ-ಸಂಜೆ !

ಇಲಿನಾಯ್ ರಾಜ್ಯದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಚ್ಚಹಸುರಿನ ಮೆಕ್ಕೆಜೋಳದ ಹೊಲಗಳು, ವಿಂಡ್ ಮಿಲ್ ಗಳು, ನಮಗೆ ಒಂದು ಅಲೌಕಿಕ ಮಧುರ ಸ್ಮೃತಿಯನ್ನು ಒದಗಿಸಿದವು ! ಇವುಗಳ ಸೌಂದರ್ಯವನ್ನು ನಮಗೆ ತೊರಿಸಲು ಅಜಿತ ಕಳ್ಳಂಬೆಳ್ಳಾ ದಂಪತಿಗಳು ತೋರಿಸಿದ, ಪರಿಶ್ರಮ, ಆಸ್ತೆ, ನಮಗೆ ಒಂದು ಹೊಸ ಅನುಭವವನ್ನು ತಂದವು.

’ ಟ್ವಿನ್ ಗ್ರೂವ್,’ ವಿದ್ಯುತ್ ತಯಾರಿಸುವ ಗಾಳಿಯಂತ್ರಗಳು !

ಇಲಿನಾಯ್ ನ ನಾರ್ಮಲ್, ಬ್ಲೂಮಿಂಗ್ಟನ್ ಕೃಷಿ-ವಲಯದಲ್ಲಿ ಎತ್ತರಕ್ಕೆ ನಿಂತು, ವಿದ್ಯುತ್ ಪೂರೈಕೆಯ ದಿಶೆಯಲ್ಲಿ ತಮ್ಮ ಅನುಪಮ ಯೋಗದಾನಮಾಡುತ್ತಿರುವ ವಿಂಡ್ ಮಿಲ್ ಗಳು ; ಇದೇ ಮಾದರಿಯನ್ನು ಅನುಸರಿಸಿ, ಅಮೆರಿಕದ ಹಲವಾರು ರಾಜ್ಯಗಳಲ್ಲಿ ವಿಂಡ್ ಮಿಲ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ !

ಕೊಲಂಬಿಯದ, ಡಾ. ಮೀರಾ ಚಂದ್ರಶೇಖರ್ ರವರ ಮನೆಯಲ್ಲಿ, ಅತಿಥಿಗಳಾಗಿ !

ಮಿಸ್ಸೂರಿ ರಾಜ್ಯದ, ಕೊಲಂಬಿಯ ನಗರದಲ್ಲಿ ಚಂದ್ರಾ ಪರಿವಾರದವರ ಜೊತೆಯಲ್ಲಿ ಕಳೆದ ಕೆಲವು ಸಂತಸದ ಕ್ಷಣಗಳು !

’ಅಕ್ಕ ವಿಶ್ವಕನ್ನಡ ಸಮ್ಮೇಳನ,’ ದ ಕೊನೆಯಲ್ಲಿ !

’ಎಂಬೆಸಿ ಹೋಟೆಲ್,’ ನಲ್ಲಿ ಬೆಳಗಿನ-ಉಪಹಾರದ ಸಮಯದಲ್ಲಿ, ಡಾ. ಚಂದ್ರಶೇಖರ್ ರವರ ಭೇಟಿಯಾಯಿತು. ಅವರೊಡನೆ ಕಳೆದ ಕೆಲವು ಮರೆಯಲಾರದ ಸುಂದರ ಗಳಿಗೆಗಳು !

-ಚಿತ್ರ, ನನ್ನ ಸಂಗ್ರಹದಿಂದ.

’ಆಟೋಪಿಯ’ -ಚಿಣ್ಣರ ಡಿಸ್ನಿ ಲ್ಯಾಂಡ್ ನ ರೇಸ್ ಕಾರು !

’ ಟುಮಾರೊ ಲ್ಯಾಂಡ್ ’, ಎಂಬ ಶೀರ್ಷಿಕೆಯಲ್ಲಿ ನಿರ್ಮಿಸಿರುವ ಮಕ್ಕಳ ಬಣ್ಣ-ಬಣ್ಣದ ರೇಸ್ ಕಾರ್ಗಳ ಓಟ, ಮರೆಯಲಾರದ ಅನುಭವಗಳಲ್ಲೊಂದು !

-ವೆಂ.

ಡಾ. ಮತ್ತೂರು ಕೃಷ್ಣಮೂರ್ತಿಯವರು, ಡಾ. ಚಂದ್ರಶೇಖರ್ ರವರನ್ನು ಅಭಿನಂದಿಸುತ್ತಿರುವುದು !

’ಅಕ್ಕ ಕನ್ನಡ ಸಮ್ಮೇಳನ,’ ದಲ್ಲಿ ಭೇಟಿಮಾಡಿದ್ದು. ಜೊತೆಯಲ್ಲಿ ನಿಂತಿರುವವರು, ಶ್ರೀಮತಿ. ಸುಬ್ಬೀಸುಬ್ರಮಣ್ಯ.

ಕುವೆಂಪು ರವರ ಅಮರ ಗೀತೆಯ, ಸಮೂಹ- ಗಾಯನ- " ಜಯ ಭಾರತ ಮಾತೆಯ ತನುಜಾತೆ........ಅಮೆರಿಕನ್ನಡಿಗರಿಂದ !

" ಅಕ್ಕ ವಿಶ್ವ-ಕನ್ನಡ ಸಮ್ಮೇಳನ, " ದ ಮೇನ್ ಹಾಲ್ ನಲ್ಲಿ ಹಾಡಿದ ವೃಂದಗಾನ.

ಪ್ರಶಾಂತ ವಾತಾವರಣ !

ನಾವು ವಾಸವಾಗಿದ್ದ, ೩,೪೦೦ ಅವೆನ್ಯೂ ಆಫ್ ಆರ್ಟ್ಸ್, ಕಾಲೋನಿಯ ಒಳಗೆ ಎಷ್ಟು ವಿಶಾಲವಾದ ಜಾಗವಿದೆ. ಸ್ವಿಮಿಂಗ್ ಪೂಲ್, ಕ್ಲಬ್ ರೂಂ, ಥಿಯೇಟರ್, ಮತ್ತೆ ವಿಶಾಲವಾದ ೪ ಕಾರ್ ಪಾರ್ಕಿಂಗ್ ತಾಣಗಳು, ಲಾನ್ ಗಳು, ನೀರಿನ ಸರೋವರಗಳು, ಅದೊಂದು ಅತ್ಯುತ್ತಮ ರೆಸಾರ್ಟ್ ಆಗಿತ್ತು !

-ಚಿತ್ರ. ಸರೋಜ.

ನಮ್ ಶ್ಯಾಮ್ ಸಿಕ್ಬಿಟೃ !

ಕನ್ನಡದ ಧಾರಾವಾಹಿ, ' ಮಾಯಾಮೃಗ ' ನಮ್ಮೆಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು. ಕರ್ನಾಟಕದ ಪ್ರತಿಮನೆಯಲ್ಲೂ ಅದನ್ನು ನೋಡದೆ, ರಾತ್ರಿ ಎಷ್ಟೇ ಹೊತ್ತಾದ್ರೂ ಊಟಮಾಡಿ ಮಲಗಲು ಯಾರೂ ಇಷ್ಟಪಡುತ್ತಿರಲಿಲ್ಲ. ಒಮ್ಮೆ ಬೆಂಗಳೂರಿಗೆ ಹೋದಾಗ, ಆ ಅಡಿಕ್ಷನ್ ಗೆ ನಾನೂ ನನ್ನ ಹೆಂಡತಿ ಬಲಿಯಾದೆವು.

ಅರಣ್ಯದೊಳಗೆ ಹತ್ತಿ ಮೇಲೇರಲು, ಮರದ ದಿಮ್ಮಿಗಳ ಅಟ್ಟಳಿಕೆ !

ಕಾಡು ಮಣ್ಣಿನ ಬದಿಯಲ್ಲಿ, ಯಾವ ಗೆದ್ದಲುಹುಳುಗಳಿಗೂ ಸೊಪ್ಪುಹಾಕದೆ, ಕಲ್ಲಿನ ತರಹ, ಅಥವಾ ಕಬ್ಬಿಣದ ತರಹ, ಬೀಗುತ್ತಿರುವ ಮರದ ದಿಮ್ಮಿಗಳಿಂದ ಮಾಡಿ ಕಟ್ಟಿದ ಮೆಟ್ಟಿಲುಗಳು, ಹಿಡಿದುಕೊಳ್ಳಲು ಭದ್ರವಾಗಿರುವ ಮರದ ಫ್ರೇಮ್ ಗಳು, ಮುದನೀಡುತ್ತವೆ. ಇವು ಅಲ್ಲಿನ ವನಸಿರಿಯನ್ನು ತೋರಿಸುವ ಅಂಗಗಳಾಗಿವೆ !

ಮನೆಯ ಹಿತ್ತಿಲೇ ಕಾಡಾಗಿತ್ತು !

ಅಥವಾ ಕಾಡಿನಲ್ಲಿ ಮನೆಮಾಡಿದಾಗ ಇಂತಹ ಅನುಭವ ಬರಲಿಕ್ಕೂ ಸಾಕು. ಕೊಲಂಬಿಯದಲ್ಲಿ ನಾವಿದ್ದಮನೆಯ ಹಿತ್ತಿಲಿನ ಬಾಲ್ಕನಿಯಲ್ಲಿ ನೋಡಿದಾಗ, ಯಾವುದೋ ಪಶ್ಚಿಮಘಟ್ಟದ ಅರಣ್ಯದಲ್ಲಿ ಇರುವಂತೆ ಭಾಸವಾಗುತ್ತಿತ್ತು. ಇವು ಮೇಪಲ್, ಮುಂತಾದ ಪಶ್ಚಿಮಾರ್ಧಗೋಳದ ಕಾಡುಮರಗಳು !

ವೆಂ.

ಅಬ್ರಹಮ್ ಲಿಂಕನ್ ರ ಲೈಬ್ರರಿ, ಮ್ಯೂಸಿಯೆಮ್, ಹಾಗೂ ಪಾರ್ಕ್, ಸ್ಪ್ರಿಂಗ್ ಫೀಲ್ಡ್ ಬಳಿ-೨

ಮಾಜಿ ಅಮೆರಿಕದ ಅಧ್ಯಕ್ಷ, ಶ್ರೀ. ಅಬ್ರಹಂ ಲಿಂಕನ್ ನಿಂತಿರುವ ಭಂಗಿ.

ಅಬ್ರಹಮ್ ಲಿಂಕನ್ ರ ಲೈಬ್ರರಿ, ಮ್ಯೂಸಿಯೆಮ್, ಹಾಗೂ ಪಾರ್ಕ್, ಸ್ಪ್ರಿಂಗ್ ಫೀಲ್ಡ್ ಬಳಿ !

ಲಿಂಕನ್ ರ ಬಗ್ಗೆ ಅಮೆರಿಕನ್ ಜನಕ್ಕೆ ಅಪಾರ ಗೌರವ. ಅವರ ಜೀವನದ ಅತಿ ಸಣ್ಣ ಘಟನೆಗಳ ವಿವರಗಳೂ ಈ ವಸ್ತುಸಂಗ್ರಹಾಲಯದಲ್ಲಿ ಲಭ್ಯವಿದೆ.

’ಸಿಯರ್ಸ್ ಟವರ್,’ ನಿಂದ ಚಿಕಾಗೋ ನಗರದ ದೃಷ್ಯಗಳ್ನ್ ನೋಡೋದೇ ಚೆನ್ನ !

ಸಾಮಾನ್ಯವಾಗಿ ಅಮೆರಿಕದಲ್ಲಿ ರೆಸ್ತೆಗಳು ಬೆಕೋ ಅನ್ನತ್ವೆ. ಇದು ಸರ್ವೇಸಾಮಾನ್ಯ. ಜನ ಇಲ್ವೇ ಇಲ್ಲ. ಇದ್ದೋರ್ ಕಾರ್ ನಲ್ಲಿ ಹೋಗ್ತಾರೆ. ನಮ್ಮಂಥೋರು ವಾರದ ಬಿಡೀ ದಿನ್ದಲ್ಲಿ ಹಾಗೇ ರಸ್ತೆ ನಲ್ಲಿ ಅಡ್ಡಾಡ್ಕೊಂಡ್ತಾ ಹೋಗ್ತಿರ್ತೀವಿ. ರಸ್ತೆ ಕ್ರಾಸ್ ಮಾಡ್ಬೇಕಾದ್ರೆ, ’ಸದ್ಯ, ನೀವ್ ಹೋಗೀಪ್ಪ,’ ಅಂತ ಕೈನಲ್ಲಿ ಸನ್ನೆ ಮಾಡ್ತಾರೆ.

ಚಿಕಾಗೋ ನಗರದ, ಅದ್ಭುತ, ’ಸಿಯರ್ಸ್ ಟವರ್,’ !

”ಸಿಯರ್ಸ್ ಟವರ್ ’ಮೇಲೆಹೋಗಿ, ’ಸ್ಕೈಡೆಕ್” ಮೇಲೆ ನಿಂತ್ಕೊಂಡಾಗ, ಅದೇನೊ ಒಂದ್ತರ್ಹ ಶಾಂತಿ, ಸಮಾಧಾನ, ಹೆದರಿಕೆ, ಥ್ರಿಲ್, ಎಕ್ಸೈಟ್ಮೆಂಟ್, ಎಲ್ಲಾ ಒಮ್ಮೆಲೇ ಬಂದಂಗಾಗಿತ್ತು, ನೋಡಿ. ಅದನ್ನು ವಿವರಿಸಲು ಸಾಧ್ಯವಿಲ್ಲ ! ೧೯೭೦ ರಲ್ಲಿ ಶುರುವಾದ ’ಸಿಯರ್ಸ್,’ ಕಟ್ಟಡದ ಕೆಲಸ, ಮೂರುವರ್ಷಗಳ ನಂತರ, ೧೯೭೩ ರಲ್ಲಿ ಮುಗಿಯಿತು. ಸಿಯರ್ಸ್ ವಿಶ್ವದ ಅತಿಎತ್ತರದ ಕಟ್ಟಡವೆಂದು ಆಗ ಸುದ್ದಿಮಾಡಿತ್ತು. ಈಗಲೂ ಅದರ ವರ್ಚಸ್ಸು ಕಡಿಮೆಯಾಗಿಲ್ಲ. ವಿಶ್ವದ ಅತಿ ಎತ್ತರದ ಆಧುನಿಕ ಕಟ್ಟಡಗಳ ಸಾಲಿನಲ್ಲಿ ಇಂದಿಗೂ ಪ್ರಾಜ್ವಲ್ಯಮಾನವಾಗಿ ಶೋಭಿಸುತ್ತಿದೆ. ಚಿಕಾಗೋ ನಗರದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಸಿಯರ್ಸ್ ನ, ಕೆಲವು ಅಂಕಿ ಅಂಶಗಳು ಈ ರೀತಿಯಿವೆ :

ಸಿಯರ್ಸ್ ಮಾಲ್-೧

ಸುಸಜ್ಜಿತ ಎಸ್ಕಲೇಟರ್ ಗಳು. ವಿಶಾಲವಾದ ಮಳಿಗೆಯಲ್ಲಿ ಕಣ್ಣಿಗೆಬೇಕಾದ, ಬಟ್ಟೆಬರೆಗಳು, ಎಲ್ಲಾವಿಧದ ದಿನಬಳಕೆಯ ವಸ್ತುಗಳ ವ್ಯವಸ್ಥಿತ ಭಂಡಾರ.

ವೆಂ.

ಪರ್ಯಟಕ ಮಿತ್ರರ ಜೊತೆಯಲ್ಲಿ !

’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್, ನಲ್ಲಿ ಭೇಟಿಯಾದ ಅಮೆರಿಕನ್ ಮಿತ್ರರ ಜೊತೆ ಕಳೆದ ಮಧುರ ಕ್ಷಣಗಳು. ಅವರೆಲ್ಲಾ ಅದೆಷ್ಟು ಸ್ನೇಹಪ್ರಿಯರು. ಜೀವನವನ್ನು ಅತಿಯಾಗಿ ಪ್ರೀತಿಸುವ ಜನ ಅವರು.

ಚಿತ್ರ : ಅಮೆರಿಕನ್ ಮಿತ್ರ ತೆಗೆದದ್ದು.

'Chicago Board of Trade,' ಕಟ್ಟಡ.

’ಚಿಕಾಗೋ ಬೋರ್ಡ್ ಆಫ್ ಟ್ರೇಡ್’ ಕಟ್ಟಡ, ’ಸಿಯರ್ಸ್ ಕಟ್ಟಡ ’ ದ ಮುಂದೆಯೇ ಇದೆ. ಚಿಕಾಗೋ ನಗರದಲ್ಲಿ, ಸಿಯರ್ಸ್, ಇನ್ನೂ ಅತಿ-ಎತ್ತರದ ಕಟ್ಟಡವೆಂದೇ ಪ್ರಖ್ಯಾತಿಯಾಗಿದೆ.

-ಚಿತ್ರ-ವೆಂ.

(ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !

ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ಹೋಗುವದಾರಿಯಲ್ಲಿ, ’ಹಯಟ್ ಹೋಟೆಲ್,’ ನಲ್ಲಿ ಒಂದುದಿನ ತಂಗಿದ್ದೆವು. ಅದರ ದ್ವಾರದಲ್ಲಿ ಕಂಡ, ನಯನಮನೋಹರ ದೃಷ್ಯ !

-ಚಿತ್ರ-ವೆಂ

ಕೊಲಂಬಿಯದ ಒಂದು ಭವ್ಯ ಬಂಗಲೆ !

ನಮ್ಮ ಮನೆಯ ಪಕ್ಕದಲ್ಲೇ ಇದ್ದ ಈ ಬಂಗಲೆಯನ್ನು ನೋಡಲು ಪ್ರತಿದಿನ ಬರುತ್ತಿದ್ದ ಜನರೆಷ್ಟೋ. ಕಾಂಪೌಂಡ್ ಗೋಡೆಯನ್ನೂ ಕಟ್ಟಿರದ ವಿಶಾಲ ಬಂಗಲೆಯ ಸುತ್ತಮುತ್ತ ೨ ಎಕರೆ ಕಾಡುಪ್ರದೇಶವೇ ಇತ್ತು. ಮಧ್ಯಾನ್ಹ ಜಿಂಕೆಗಳ ಸಮೂಹವೇ ಮನೆಯ ಅಕ್ಕ-ಪಕ್ಕಗಳಲ್ಲಿ ಇರುತ್ತಿತ್ತು.

-ಚಿತ್ರ-ವೆಂ.

ನಮ್ ಪಕ್ಕದ್ ಮನ್ಯೋರು !

ನಮ್ಮ ಪಡೋಸಿನವರು, ಸ್ಮಿತ್, ಮತ್ತೆ ಅವರ್ ಮಗ್ಳು, ಲಿಂಡಾ, ಹೊರ್ಗೆ ಸ್ವಲ್ಪ ಬಿಸ್ಲಿದೄ ಸಾಕು, ಹುಲ್ ಟ್ರಿಮ್ ಮಾಡೊ ಗಾಡಿನ ಓಡ್ಸ್ಕೊಂಡು, ಅವ್ಳ್ಗೆ ಡ್ರವಿಂಗ್ ಕಲಿಸ್ತಾರೆ. ನಮ್ಗೂ ಅದನ್ ನೋಡ್ಲಿಕ್ಕೆ ಮೋಜು. ಸದ್ಯಕ್ಕೆ ನಮ್ಮನೇಲಿ ಚಿಕ್ಮಕ್ಳಿರ್ಲಿಲ್ಲ. ಇದ್ದಿದ್ರೆ, ಅದ್ರ್ ಮಜಾನೇ ಬೇರೆ ! ಅಲ್ವಾ, ಏನಂತೀರಿ ?

-ಚಿತ್ರ-ವೆಂ.

ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ

ಸ್ವಾಮಿ ವಿವೇಕಾನಂದರ ಈ ವಿಗ್ರಹ ಇರುವುದು "ಹಿಂದು ಟೆಂಪಲ್ ಆಫ್ ಗ್ರೇಟರ್ ಶಿಕಾಗೋ".

’ಡಿಸ್ನಿ ಲ್ಯಾಂಡ್ ’ ನ ಬೈಗಿನ ಪೆರೇಡ್ !

ಅಲ್ಲಿಗೆ ಹೋದ ಪರ್ಯಟಕರೆಲ್ಲಾ ಬೈಗಿನಲ್ಲಿ ಪ್ರದರ್ಶಿಸುವ ಡಸ್ನಿ ಪ್ರತಿಭೆಗಳಿಗಾಗಿ ಕಾದಿರುತ್ತಾರೆ. ಮಕ್ಕಳಂತೂ ಆ ಕ್ಷಣಕ್ಕಾಗಿ ರೆಪ್ಪೆಮಿಟುಕಿಸದೆ ಕಾದು, ಮಿಕಿ ಮೌಸ್, ಹಾಗೂ ಡೋನಾಲ್ಡ್ ಡಕ್ ಜೊತೆ ಫೋಟೊ ತೆಗೆಸಿಕೊಳ್ಳದೆ ಮನೆಗೆಹೋಗುವುದಿಲ್ಲ.

-ಚಿತ್ರ-ವೆಂ.

ಜಿನಾ ಲಿಂಡ್ಸೆ ಅರೈವಲ್ ದ್ವಾರ-ಸಿಯಾಟಲ್ ವಿಮಾನನಿಲ್ದಾಣ !

ಜಿನಾ ಲಿಂಡ್ಸೆ ರವರ ಸೇವೆಯನ್ನು ಗಮನಿಸಿ, ಅವರಗೌರಾರ್ಥವಾಗಿ ಹೆಸರಿಟ್ಟಿದ್ದಾರೆ..

-ಚಿತ್ರ ನನ್ನದು

’ಸಿಟಕ್ ವಿಮಾನನಿಲ್ದಾಣ”, ಸಿಯಾಟಲ್

ಸಿಯಾಟಲ್, ಟ್ಯಾಕೋಮ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದ ಹೆಸರು, ಚಿಕ್ಕದಾಗಿ, ’ಸಿಟಕ್ ,’ ಎಂದಾಗಿದೆ.

-ಚಿತ್ರ ನಾನುತೆಗೆದದ್ದು.

ನಾಗರಹೊಳೆಯಲ್ಲಿ ಒಂಟಿ ಸಲಗ...

೨೭.೦೯.೦೮ ರಂದು ನಾವು ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಪ್ರಯಾಣ ಬೆಳೆಸುತ್ತಿದ್ದಾಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ಒಂಟಿ ಸಲಗ...

ಸ್ಯಾನ್ ಫ್ರಾನ್ಸಿಸ್ಕೋ ನಗರದ ’ಚೈನಾಟೌನ್’ !

ಅಮೆರಿಕಾದಲ್ಲಿ ಚೈನೀಯರು ಹೆಚ್ಚುಮಂದಿ ಇದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಂತೂ ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ’ಚೈನಾಟೌನ್,’ ಊಟೋಪಚಾರಗಳಿಗೆ ಹೆಸರುವಾಸಿ !

’ಮೈಕ್ರೋಸಾಫ್ಟ್’ ಕಚೇರಿಗಳ ಸಮೂಹತಾಣದಲ್ಲಿ ಕಂಡ ಸುಂದರ ವಾತಾವರಣ !

’ಮೈಕ್ರೊಸಾಫ್ಟ್’ ಕಟ್ಟಡದಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವುದರಲ್ಲಿ ಸಿಕ್ಕ ಆನಂದ ಅಪಾರ ! ಬಿಲ್ ಗೇಟ್ ರವರ ವ್ಯಕ್ತಿತ್ವ, ಅವರ ಉದಾತ್ತಧ್ಯೇಯಗಳು, ಮಾನವಸೇವೆಗೆ ಕೈಗೊಳ್ಳುತ್ತಿರುವ ಅವರ ನೀತಿಗಳು ಎಂತಹವರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ನಮಗೇನೋ ಧನ್ಯತೆಕಾಣಿಸಿದ್ದು ಆಜಾಗದಲ್ಲೇ !

-ಚಿತ್ರ, ನಮ್ಮ ಆಲ್ಬಮ್ ನಿಂದ.

ಸಾಯಂಕಾಲದ ಪೆರೇಡ್ ಗೆ ಮಧ್ಯಾನ್ಹದಿಂದಲೇ ಜಾಗ ಕಾದಿರಿಸುವ ಜನ !

ಅಮೆರಿಕದ ಜನ, ಆದೇಶದ ಜಾತ್ರೆ, ಮುಂತಾದ ಸಂಭ್ರಮದಲ್ಲಿ ಮನಸ್ಸಾರೆ ಆಗಮಿಸಿ, ಸಂತೋಷಪಡುತ್ತಾರೆ. ೮೦ ವರ್ಷದ ಒಂದು ಗಂಡ-ಹೆಂಡಿರ ಜೋಡಿ, ಸುಮಾರು ದೂರದಿಂದ ಕಾರಿನಲ್ಲಿ ಇಬ್ಬರೇ ಬಂದಿದ್ದರು. ಅವರೂ ನಮ್ಮ ಬದಿಯಲ್ಲಿ ಈಸಿ ಛೇರ್ ಹಾಕಿಕೊಂಡು ಕೊನೆಯವರೆಗೂ ಇದ್ದು ಆನಂದಿಸಿದರು !

-ಚಿತ್ರ ನಾನುತೆಗೆದದ್ದು.

ಮಿಚಿಗನ್ ಕೆರೆಯ ವ್ಯಾಪ್ತಿ, ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿರುವ ನಾರ್ತ್ ವೆಸ್ಟರ್ನ್ ಕಾಲೇಜ್ ನ ಕ್ಯಾಂಪಸ್ ನ ಒಳಗೆ ಸಹಿತ !

ಈ ಕೆರೆಯನ್ನು ಸದಾ ಶುದ್ಧವಾಗಿಟ್ಟಿದ್ದಾರೆ. ನೀರಿನಕಾರಂಜಿಯನ್ನು ನೋಡಲು ಬಲುಸೊಗಸು.

ಅಮೆರಿಕದ, ’ಫ್ಲಾಟ್ ಬ್ರಾಂಚ್ ಪಾರ್ಕ್,” ಕೊಲಂಬಿಯದಲ್ಲಿ ನಾವು ನೋಡಿದ ಆಕೃತಿ !

ಅಮೆರಿಕದಲ್ಲಿ ಪಾರ್ಕ್ ಗಳು, ಸರೋವರಗಳು, ಕೃತಕ ಕಾಡುಗಳು, ಟ್ರೇಲ್ಸ್ ಗಳು ಇತ್ಯಾದಿಗಳನ್ನು ಅತ್ಯಂತ ಶ್ರದ್ಧೆಯಿಂದ ರಚಿಸುತ್ತಾರೆ. ಜನರ ಸಹಕಾರಕೂಡ ಅಷ್ಟೇ ಜವಾಬ್ದಾರಿಯುತವಾಗಿದ್ದು ನಮಗೆ ಗೋಚರವಾಯಿತು. ಅವುಗಳ ವಿಶೇಷತೆಗಳನ್ನು ಪ್ರಸ್ತುತಪಡಿಸುವ ರೀತಿಗಳು ಅನನ್ಯ ! ಕೊಲಂಬಿಯದಲ್ಲಿ ನಾವು ಕಂಡ ಅಂತಹ ಪಾರ್ಕ್ ಕೂಡ ಅಂತಹ ಅಪರೂಪದ್ದು.

ಮೆಣಸಿನಕಾಯಿ ಇಟ್ಟಂಗೆ

ಈ ಫೋಟೋ ನಾನು ತೆಗೆದಿದ್ದು ಮುಂಬೈನಲ್ಲಿ. ಕಂಪೆನಿ ಕೆಲ್ಸದ ಮೇಲೆ ಒಂದು ವಾರದಿಂದ ಸುತ್ತಾಡ್ತಾ ಇದೀನಿ.
ಮುಂಬೈನಿಂದ ನಾಸಿಕ್ ಕಡೆ ಹೊರಟಿದ್ದಾಗ, ಪೊವೈ (ಐಐಟಿ ಬಾಂಬೆ) ಬಳಿ ಸಿಗ್ನಲ್ಲಲ್ಲಿ ನಿಂತಾಗ ಕಂಡದ್ದು.
ನನ್ನ ಪುಣ್ಯಕ್ಕೆ ನಾನು ಗಾಡಿಯಲ್ಲಿ ಡ್ರೈವರ್ ಪಕ್ಕ ಕೂತಿದ್ದು. ತಕ್ಷಣ ಸುಂಯ್ ಟಪಕ್ ಅಂತಾ ಫೋಟೋ ತೆಗೆದೆ.

ಬೆ೦ಕಿಯ ನಗರದ ಹಾದಿಯಲ್ಲಿ ಹೀಗೊ೦ದು ತಿರುವು.

ಶ್ರೀಲ೦ಕಾ, ಒ೦ದು ಪ್ರಾಚೀನ ನಗರ. ಪುರಾಣ ಪ್ರಸಿದ್ಧ ರಾವಣನ ರಾಜ್ಯ. ಆಶ್ಚರ್ಯವೆ೦ದರೆ ಅಲ್ಲೊ೦ದು ಇಲ್ಲೊ೦ದು ಕಥೆಗಳನ್ನು ಬಿಟ್ಟರೆ ರಾವಣನ ಕುರಿತಾದ ಯಾವುದೇ ಮಾಹಿತಿ ಇಲ್ಲಿಲ್ಲದಿರುವುದು.

'ಗೀತೋಪದೇಶ,' ನೃತ್ಯರೂಪಕ ಪ್ರದರ್ಶನ-’ಅಕ್ಕ ವಿಶ್ವಕನ್ನಡ ಸಮ್ಮೇಳನ, ’ ದಲ್ಲಿ !

ಚಿಕಾಗೋ ನಗರದಲ್ಲಿ ನಡೆದ ’ಗೀತೋಪದೇಶ ನೃತ್ಯರೂಪಕ ಪ್ರದರ್ಶ”- ಕಾರ್ಯಕ್ರಮ ಬಹಳಚೆನ್ನಾಗಿತ್ತು. ಆದರೆ ಅದೇ ಸಮಯದಲ್ಲಿ ನಡೆಸಿಕೊಟ್ಟ ಕೆಲವು ’ಪ್ಯಾರೆಲಲ್ ಸೆಶನ್ಸ,’ ನಿಂದಾಗಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಿತ್ತು. ಶ್ರೀಕೃಷ್ಣನ ಪಾತ್ರಧಾರಿ, ಶಾಮ್, ರವರು. ಅವರು ’ಕನ್ನಡ ಧಾರಾವಾಹಿ, ’ಮಾಯಾಮೃಗ,’ ದಲ್ಲಿ ’ಶಾಮ್,’ ನ ರೋಲ್ ಮಾಡ್ತಿದ್ರಲ್ವಾ ! ಅವೃ !

ನಾನು ಕಂಡ ಮತ್ತೊಂದು ಚಿತ್ತಾಕರ್ಷಕ ಚಿತ್ರವಿನ್ಯಾಸ !

ಇದು ತೈಲಚಿತ್ರವೇ, ವಾಟರ್ ಪೇಂಟಿಂಗೇ, ಅಥವಾ ಬೇರೆಯಾವ ಪ್ರಕಾರದ ಕಲಾ ನೈಪುಣ್ಯತೆಯೇ ತಿಳಿವಲ್ದಲ್ಲಾ ? ನೀವೇನಾದರೂ ಬಲ್ಲಿರಾ ?

ಕೆಳಗ್ ಕಾಣ್ಸೋದೇ ಒಂದು ; ವಿಮಾನ್ದಿಂದ ಕಾಣ್ಸೋದೇ ಒಂದ್ತರ್ಹ ಇದೆಯಲ್ಲಪ್ಪ - ಈ ಗ್ರಾಂಡ್ ಕೆನ್ಯನ್ !

ಇದು ’ಗ್ರಾಂಡ್ ಕೆನ್ಯನ್’ ಚಿತ್ರ. ನಾನು ಚಿಕಾಗೋ ನಿಂದ ’ಕ್ಯಾಲಿಫೋರ್ನಿಯ” ದಕಡೆ ಪ್ರಯಾಣಮಾಡಿದ ದಿನದಂದು ಸೆರೆಹಿಡಿದ ಚಿತ್ರ.

’ಸೇಂಟ್ ಲೂಯಿಸ್ ಆರ್ಚ್’ ನಿಂದ ( ಕಮಾನು), ಕೆಳಗೆ ಕಾಣಿಸುವ ಸುಂದರ ನೋಟ !

ಕೆಳಗೆ ಕಾಣಿಸುತ್ತಿರುವುದು ’ಓಲ್ಡ್ ಕೋರ್ಟ್ ಹೌಸ್.’ ಇಲ್ಲೇ ಅಮೆರಿಕದ ಕರಿಯನಾಗರಿಕರು, ನ್ಯಾಯಾಲಯದಲ್ಲಿ, ದಾವಹಾಕಿದಾಗ ಒಂದೆರಡು ತೀರ್ಪುಗಳನ್ನು ಕೊಡಲಾಯಿತು. ಅಮೆರಿಕದ ಕಪ್ಪು ವರ್ಣೀಯ-ನಾಗರಿಕರು ಪ್ರತಿಭಟಿಸಿ ದಂಗೆಯೆದ್ದ ಜಾಗವಿರುವುದು ಈ ಭಾಗದಲ್ಲೇ !

-ಚಿತ್ರ ನಾನೇ ತೆಗೆದದ್ದು.

ಮಿಸ್ಸೂರಿ ರಾಜ್ಯದ, ಕೊಲಂಬಿಯ ನಗರದ ಬಳಿಯ, ಮಿಸ್ಸೂರಿನದಿಯ ವಿಹಂಗಮನೋಟ !

ಈ ನದಿ ಸೇಂಟ್ ಲೂಯಿಸ್ ನಲ್ಲಿ ಮಿಸಿಸಿಪ್ಪಿನದಿಯ ಜೊತೆ ಸೇರಿಕೊಂಡು ಒಟ್ಟಾಗಿ ಹರಿದು, ’ಗಲ್ಫ್ ಆಫ್ ಮೆಕ್ಸಿಕೋ,’ ವನ್ನು ತಲುಪುತ್ತವೆ. ನೈಲ್ ನದಿ, ವಿಶ್ವದಲ್ಲಿ ಅತಿ ಉದ್ದವಾದ ನದಿಯೆಂದು ಹೆಸರಾದರೆ, ಮಿಸಿಸಿಪ್ಪಿ-ಮಿಸ್ಸೂರಿನದಿಗಳು ಒಟ್ಟಿಗೆ ಬೆರೆತು ವಿಶ್ವದಲ್ಲೇ ಅತ್ಯಂತ ಉದ್ದವಾದ ೪ ನೇ ನದಿಯೆಂದು ಹೆಸರಾಗಿವೆ ! 1. Nile 4,135 miles North/East Africa 2. Amazon 3,980 miles South America 3. Chang Jiang (Yangtze) 3,917 miles China 4. Mississippi-Missouri 3,870 miles USA

ಸಂಜೆಯಲಿ ರಥವೇರಿ ಹೊರಟ ಸೂರ್ಯ

ಸಾಂಕೇತಿಕವಾಗಿ ಕಂಡ ಸೂರ್ಯನ ಬೆನ್ನಲ್ಲಿ ಸಂಜೆಯ ಸಮಯದಲ್ಲಿ ಬಾನಂಚಿನಲ್ಲಿ ಜಾರುತ್ತಿರುವ ರವಿತೇಜ. ಕುದುರೆಗಳನ್ನು ರಥಕ್ಕೆ ಕಟ್ಟಿಕೊಂಡು ಸಾಗುವಂತೆ ಅನಿಸುತಿದೆ. ಮುರುಡೆಶ್ವರದಲ್ಲಿ ಪ್ರತಿ ದಿನ ಕಾಣುವ ಈ ಸುಂದರ ದ್ರಶ್ಯ ಕಣ್ಮನಗಳನ್ನು ಸೂರೆಗೊಳ್ಳುತ್ತದೆ.

ವಿಮಾನದಿಂದ ಕೆಳಗೆ ಕಾಣುವ ದೃಷ್ಯ !

ಚಿಕಾಗೋ ನಗರದಿಂದ ವಿಮಾನದಲ್ಲಿ ’ಸೇಂಟ್ ಲುಯಿಸ್,’ ಕಡೆ ಹೊರಟಾಗ ನಮಗೆ ಕಾಣಿಸಿದ ಸುಂದರ ಭೂಭಾಗದ ದೃಷ್ಯ. ಕೆಳಗೆಕಾಣಿಸುವ ಮನೆಗಳ ಸಾಲು, ಒಂದು ’ಭವ್ಯಕ್ಯಾನ್ವಾಸ್,’ ನ್ನು ಸೃಷ್ಟಿಸಿವೆ. ಈ ದೃಷ್ಯ ನನಗೆ ಅತ್ಯಂತ ಮುದನೀಡಿದ, ಪ್ರೀತಿಪಾತ್ರವಾದ ನೋಟಗಳಲ್ಲೊಂದು.

-ನನ್ನ ಚಿತ್ರ-ಸಂಗ್ರಹದಿಂದ

'೫ ನೆಯ ಅಕ್ಕ ಸಮ್ಮೇಳನದಲ್ಲಿ ಶನಿವಾರದಂದು ಮಧ್ಯಾನ್ಹ, ’ಫ್ಯಾಷನ್ ಶೋ’ ಇತ್ತು !

ಅಮೆರಿಕದೇಶದ ಚಿಕಾಗೋನಗರದಲ್ಲಿ ನಡೆಯುತ್ತಿರುವ ೫ ನೆಯ ಅಕ್ಕ ಸಮ್ಮೇಳನದಲ್ಲಿ ಶನಿವಾರದಂದು ಮಧ್ಯಾನ್ಹ, ’ಫ್ಯಾಷನ್ ಶೋ’ ಇತ್ತು. ಮಹಿಳೆಯರಲ್ಲದೆ, ಪುರುಷರು, ಮಕ್ಕಳು, ಅಕ್ಕ ’ಫ್ಯಾಷನ್ ಶೋ’ನಲ್ಲಿ ಭಾಗವಹಿಸಿ, ಸಭಿಕರೆಲ್ಲರನ್ನು ರಂಜಿಸಿದರು.

-ಚಿತ್ರ ನಾನೇತೆಗೆದದ್ದು.

'ಬಾಬ್ ಮ್ಯಾಗ್ರ ಕಮ್ಯುನಿಟಿ ಪಾರ್ಕ್,'

ಇಲಿನಾಯ್ ರಾಜ್ಯದ, ಮಿಕ್ಲೇನ್ ಕೌಂಟಿಯಲ್ಲಿರುವ, ಬ್ಲೂಮಿಂಗ್ಟನ್ ಊರಿನಲ್ಲಿ, ’ಬಾಬ್ ಮ್ಯಾಗ್ರ ಕಮ್ಯುನಿಟಿ ಪಾರ್ಕ್,’ ಮಕ್ಕಳಿಗೆ ಒಂದು ಸ್ವರ್ಗದಂತೆ ! ಅಲ್ಲಿ ನೀರಿನಕಾರಂಜಿಗಳು, ಜಾರುವಬಂಡೆಗಳು, ಜೋಕಾಲೆಗಳು, ಹಸುರುಹುಲ್ಲು, ಗಿಡ, ಮರ, ಇತ್ಯಾದಿಗಳು ಮಕ್ಕಳನ್ನಲ್ಲದೆ ಅವರ ಪಾಲಕರಿಗೂ ಮನರಂಜನೆಯನ್ನು ಒದಗಿಸುತ್ತವೆ.

-ಚಿತ್ರ ನಾನೇ ತೆಗೆದದ್ದು

ಅಮೆರಿಕದೇಶದ ಪ್ರಗತಿಪರ ಬೆಳವಣಿಗೆಯನ್ನು ತೋರಿಸುವ ಒಂದು ತೈಲಚಿತ್ರ !

ಸೇಂಟ್ ಚಾರ್ಲ್ಸ್ ( ಮಿಸ್ಸೂರಿ) ನಲ್ಲಿ, ಕ್ರಿ. ಶ. ೧೮೨೧ ನೇ ಇಸವಿಯಲ್ಲಿ ಜರುಗಿದ ಪ್ರಥಮ ಲೆಜಿಸ್ಲೇಟೀವ್ ಅಸೆಂಬ್ಲಿಯ ಕುರುಹಾದ, ಒಂದು ಮನೋಹರ ತೈಲಚಿತ್ರ !

-ನಾನೇ ತೆಗೆದದ್ದು.

’ಶ್ರೀಕೃಷ್ಣ ಜನ್ಮಾಷ್ಟಮಿ,” ಅಮೆರಿಕದ ಕೊಲಂಬಿಯನಗರದಲ್ಲಿ !

ಭಾರತೀಯರೆಲ್ಲಾ ಒಟ್ಟುಗೂಡಿ, ’ ಶಾಂತಿಮಂದಿರ್,’ ನಲ್ಲಿ ವಿಜೃಂಭಣೆಯಿಂದ ’ಶ್ರೀಕೃಷ್ಣ ಜನ್ಮಾಷ್ಟಮಿ,” ಯನ್ನು ಆಚರಿಸಿದರು. ಮಿಸ್ಸೂರಿರಾಜ್ಯದ ಕೊಲಂಬಿಯ ನಗರದಲ್ಲಿರುವ ಈ ದೇವಾಲಯದಲ್ಲಿ, ಸರ್ವಮತೀಯರೆಲ್ಲಾ ಭಾಗವಹಿಸಿ, ಭಾರತೀಯತೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

-ಚಿತ್ರ ನನ್ನ ಖಾಸಗಿ ಆಲ್ಬಮ್ ನಿಂದ.

’ಲ್ಯೂಸಿಯಾನ ಪರ್ಚೇಸ್’ -ಒಂದು ಮಹತ್ತರ ಚಾರಿತ್ರ್ಯಿಕ ಸನ್ನಿವೇಷ !

ಚಿತ್ರದಲ್ಲಿ ತೋರಿಸಿರುವ ಶಿಲ್ಪವನ್ನು ೧೯೦೪ ರಲ್ಲಿ ನಡೆದ ’ಸೇಂಟ್ ಲ್ಯೂಯಿಸ್ ವರ್ಲ್ಡ್ ಫೇರ್,’ ನ ಸಮಯದಲ್ಲಿ ನಿರ್ಮಿಸಲಾಯಿತು. ’ಲ್ಯೂಸಿಯಾನ ಪರ್ಚೇಸ್’ ಎಂದು ಚರಿತ್ರೆಯಲ್ಲಿ ದಾಖಲಾಗಿರುವ ಒಪ್ಪಂದದ ಸನ್ನಿವೇಷವನ್ನು ಕಂಚಿನಶಿಲ್ಪದಲ್ಲಿ ಕೆತ್ತಿಮೂಡಿಸಿದವರು, ಕಾರ್ಲ್ ಬಿಟ್ಟರ್. ನಿಂತಿರುವವರು, ರಾಬರ್ಟ್ ಲಿವಿಂಗ್ಸ್ಟನ್.

ಕನ್ನಡದ ಮೊದಲನೆ ಶಾಸನ -ಹಲ್ಮಿಡಿ ಶಾಸನ

ಹಲ್ಮಿಡಿ - ಕನ್ನಡದ ಮೊದಲನೇ ಶಾಸನ ಈ ಹಲ್ಮಿಡಿ ಶಾಸನ. ಈ ಹಲ್ಮಿಡಿ ಶಾಸನ ಸಿಕ್ಕ ಸ್ಥಳ ಕೆ ಹಲ್ಮಿಡಿ ಗ್ರಾಮ ಅಂತಾನೆ ಕರಿತಾರೆ. ಈ ಗ್ರಾಮ ಬೇಲೂರು ಇಂದ ಚಿಕ್ಕಮಗಳೂರು ಮಾರ್ಘದಲ್ಲಿ ಸಿಗುತ್ತದೆ . ಬೇಲೂರು ಇಂದ ಸುಮಾರ 15km ಚಿಕ್ಕಮಗಳೂರು ಮಾರ್ಘದಲ್ಲಿ ಹೋಗಿ ನಮ್ಮ ಎಡಕ್ಕೆ ತಿರವ ಪಡೆದು ಸುಮಾರ 8km ಹೋದ್ರೆ ಸಿಗುವದು ಈ ಪುಟ್ಟ ಗ್ರಾಮ.

' ಸ್ಯಾಂಟಾಕ್ಲಾರಾ’ ಊರಿನ ಸೆಂಟ್ರೆಲ್ ಪಾರ್ಕ್ ನ, ಫುಟ್ಬಾಲ್ ಗ್ರೌಂಡ್ ನಲ್ಲಿ ಕಳೆದ ಸಂತಸದ ಕ್ಷಣಗಳು !

ಇಲ್ಲಿ ಬಂದುಕೂತು ಕಳೆದ ಕ್ಷಣಗಳು ಮರೆಯಲಾರದ ಅನುಭವವನ್ನು ಮತ್ತೆ ನಮ್ಮ ಮನದಾಳದಿಂದ ಹೊರತೆಗೆದವು ! ನಮ್ಮ ಮಗನಿಗೆ ಮುಂಬೈನ , ದಾದರ್ ನ ಆಂಟೋನಿಯೊ ಡ’ಸಿಲ್ವ ಪ್ರಾಥಮಿಕಶಾಲೆಯಲ್ಲಿ ಓದಿದ ದಿನಗಳ ನೆನಪಿನಸುರುಳಿಗಳು ಬಂದು ಗೋಳುಹೊಯ್ಕೊಂಡಿದ್ದು ಇಲ್ಲೇ !

ಸೆಂಟ್ರೆಲ್ ಪಾರ್ಕ್ ನ, ಸರೋವರದ ನೋಟ !

ಎಸ್. ಎಫ್ ನಿಂದ ೫೦ ಮೈಲಿ ದೂರದಲ್ಲಿ ಸ್ಯಾನ್ ಹೋಸೆ ಏರ್ಪೋರ್ಟ್ ಇದೆ. ಇದಕ್ಕೆ ಹತ್ತಿರದಲ್ಲೇ (ಸುಮಾರು ೨೦ ನಿಮಿಷದ ಡ್ರೈವ್ ನಂತರ) ನೀವು ಪ್ರಕೃತಿದೇವಿಯ ಶೃಂಗಾರವನ್ನು ನೋಡಿಸವಿಯುವ ಭಾಗ್ಯವಂತರೋ ಎನ್ನುವಂತೆ, ಸಾಂಟಾಕ್ಲಾರಾ ಎನ್ನುವ ಊರನ್ನು ತಲುಪುತ್ತೀರಿ. ಅಲ್ಲಿದೆ ನೋಡಿ, ಸೆಂಟ್ರಲ್ ಪಾರ್ಕ್.

ಗೋಲ್ಡನ್ ಗೇಟ್ ಬ್ರಿಡ್ಜ್, ನಮ್ಮತಲೆಯಮೇಲೆ ಹಾದುಹೋದಾಗ !

ನಮ್ಮ ಸುಮಾರು ಒಂದು ಮುಕ್ಕಾಲು ಗಂಟೆ ಫೆರ್ರಿಯಾನದ ಕೊನೆಯ ಹಂತದಲ್ಲಿ, ಗೋಚರಿಸುವ ಗೋಲ್ಡನ್ ಗೇಟ್ ಬ್ರಿಡ್ಜ್, ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ ! ಮೇಲೆ ಬಿಸಿಲು, ಸಮುದ್ರದ ಭೋರ್ಗರೆತದ ನಡುವೆ, ಕಾವಳ ; ಮಸಕು-ಮಸಕಿನ ಮಧ್ಯೆ ದೈತ್ಯಾಕಾರದ, ಮನುಷ್ಯನಿರ್ಮಿತ ಭವ್ಯ ಇಂಜಿನಿಯರಿಂಗ್ ನ ಅದ್ಭುತವಿನ್ಯಾಸವನ್ನು ನೋಡಿದಾಗ ಆಗುವ ಅಪರಿಮಿತ ಆನಂದ, ವರ್ಣಿಸಲಸದಳ !

’ಪರ್ಫಾರ್ಮಿಂಗ್ ಆರ್ಟ್ಸ್,’ ಶಾಖೆಯ ಮತ್ತೊಂದು ಭವ್ಯ ಕಟ್ಟಡ.

”ಅವೆನ್ಯೂ ಆಫ್ ಆರ್ಟ್ಸ್, ’ ವಲಯದಲ್ಲಿ ನಮಗೆ ಕಾಣಬರುವ ಕೆಲವು ಕಟ್ಟಡಗಳಲ್ಲಿನ ಒಂದು ಕಟ್ಟಡ.

-ನನ್ನ ಸಂಗ್ರಹ.

ರೆನಿ ಮತ್ತು ಹೆನ್ರಿ ಸೆಗರ್ಸ್ಟ್ರಾಮ್ ಕಾನ್ಸರ್ಟ್ ಹಾಲ್ ನ ಬಳಿ, ನಿರ್ಮಿಸಿರುವ ಕಲಾವಿಲಾಸ !

ಅಮೆರಿಕದ ಪ್ರತಿರಾಜ್ಯಗಳಲ್ಲಿರುವಂತೆ ಕ್ಯಾಲಿಫೋರ್ನಿಯದಲ್ಲಿ "ಪರ್ಫಾರ್ಮಿಂಗ್ ಆರ್ಟ್ಸ್" ಬಗ್ಗೆ ತೀವ್ರವಾದ ಆಸಕ್ತಿಯಿರುವವರು ಅತಿ-ಹೆಚ್ಚು. ವಾರದ ಅಂತ್ಯದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದೇ ಇರುತ್ತವೆ. ಇದಕ್ಕಾಗಿ ೪-೫ ಸುಸಜ್ಜಿತ, ಹವಾನಿಯಂತ್ರಿತವಾದ ಭಾರಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ.

-ಚಿತ್ರ, ನಾನೇ ತೆಗೆದದ್ದು.

ಓಹ್ ಡಾಲಿ, ಅಲ್ಲೇನ್ ಮಾಡ್ತಿದಿ ?

ಕ್ಯಾಲಿಫೋರ್ನಿಯದ, ಆರೇಂಜ್ ಕೌಂಟಿ, ಯ ಮನೆಯ ೪ ನೇ ಫ್ಲೋರ್ ನಲ್ಲಿನ ಬಾಲ್ಕನಿಯಲ್ಲಿ ಇಣಿ-ಕಿಣಿಕಿ ಣೋಡುವ ನಮ್ಮ ಮೆಚ್ಚಿನ ಡಾಲಿ, ನಮಗೆ ಆಗಾಗ ಕಾಣಿಸಿಕೊಳ್ಳುತ್ತಾಳೆ. ನಾವಿದ್ದಿದ್ದು, ೩ ನೆಯ ಅಂತಸ್ತಿನಲ್ಲಿ.

-ನಾನೇ ನೋಡಿದ್ದು.

ಮಂಡ್ಯದ ಹುಲಿ.. ಮುಟ್ಟಿದ್ರೆ ಬಲಿ

ಜಯನಗರದಿಂದ ಮನೆಗೆ ಬರೋ ದಾರೀಲಿ, ಟೌನ್ ಹಾಲ್ ಬಳಿ ಕಂಡ ಆಟೋ ಇದು. ನಾನು ಕಾರ್ ಓಡುಸ್ತಾ ಇದ್ದೆ.. ಇದು ನಂಗೆ ಕಂಡಿದ್ದು ಕೆನರಾ ಬ್ಯಾಂಕಿನ ಮುಂದೆ. ದೇವರ ದಯೆಯೋ, ಪೂರ್ವ ಜನ್ಮದ ಸುಕೃತವೋ ತಿಳಿಯದು...ಸಿಗ್ನಲ್ ಬಿತ್ತು, ತಕ್ಷಣ ಫೋನ್ ಕ್ಯಾಮೆರಾ ಆನ್ ಮಾಡಿ, ನನ್ನ ಹಾಫ್ ಶರ್ಟಿಗೆ (ಅರ್ಧಾಂಗಿ) ಕೊಟ್ಟು ಫೋಟೋ ತೆಗೆಸಿದ್ದು. ಹೆಂಗೇ ???

ಜಲಧಾರೆ ನುಗ್ಗುತ್ತಿದೆಯೆಲ್ಲಿಗೆ; ಕಾಡು, ಮರ, ಬಳ್ಳಿ, ಮುಳ್ಳುಗಿಡ-ಗಂಟೆಗಳನ್ನು, ಕಲ್ಲು-ಬಂಡೆಗಳನ್ನು,ಎಡವಿ, ಮುಗ್ಗರಿಸಿ, ತೆವಳಿ, ಹಾರಿ,ಮುಂದೆಲ್ಲಿಗೆ ?

ಪ್ರವಾಸಿಗಳು ಬರುತ್ತಾರೆ. ಬಂದು ನೋಡಿ-ನೋಡಿ ತಣಿದು, ತಮ್ಮ ಕಣ್ಣುಗಳಲ್ಲಿ ಈ ಅಸಮಾನ್ಯ ದೃಷ್ಯಗಳನ್ನು ತುಂಬಿಕೊಂಡು, ಹೊರಟುಹೋಗಿಬಿಡುತ್ತಾರೆ. ಮತ್ತೆ ಬರುವುದು ಎಂದಿಗೋ !

ನಾನು ಸೇರಿಸಿದ ಚಿತ್ರ್ಗಗಳು.

ಕುಶಾಲನಗರದಬಳಿಯ ಚಿಕ್ಲಿಹೊಳೆಯ ಚಿಕ್ಕ ಜಲಾಶಯ !

ಕರ್ನಾಟಕಕ್ಕೆ ನದಿ, ತೊರೆ, ಹಳ್ಳ, ಕಣಿವೆಗಳಿಗೇನೂ ಕೊರತೆಯುಂಟೇ ? ಚಿಕ್ಲಿಹೊಳೆಯ ಚಿಕ್ಕಜಲಾಶಯದಹಾಗೆಯೇ ವಿಶ್ವ ಪ್ರಸಿದ್ಧ’ ನಯಾಗರ’ ಕಂಡರೆ, ಆಚ್ಚರಿಯಲ್ಲ !

-ಕೃಪೆ : ಪ್ರಜಾವಾಣಿ ಫೋಟೋಗ್ಯಾಲರಿ.

" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್, ನಲ್ಲಿ ವಾಷಿಂಗ್ಟನ್ ನಗರದ ’ಸಿಖ್ ಸಮುದಾಯ’ !

ಸಿಖ್ ಜನ, ಅಮೆರಿಕದ ಜನಜೀವನದ ಪ್ರಬಲಭಾಗವಾಗಿ, ರಾಜಕೀಯ, ಹಾಗೂ ಕೃಷಿ, ಮತ್ತು ವಾಣಿಜ್ಯರಂಗಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ.

ನಾನು ಕಂಡಿದ್ದು, ಕೇಳಿದ್ದು.

" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್ ಅದ್ಭುತವಾಗಿತ್ತು !

" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್ !

ಹಿಮಾಲಯದ ಶಿವಲಿಂಗ ಪರ್ವತ...!!!

ಹಿಮಾಲಯದ ಶಿವಲಿಂಗ ಪರ್ವತ...!!!

ಈ ಪರ್ವತಕ್ಕೆ ಮೂರು ಶಿಖರಗಳಿದ್ದು - ಅಪ್ಪ, ಅಮ್ಮ ಮತ್ತು ಹಸುಗೂಸು ಶಿವ ಲಿಂಗ ಶಿಖರಗಳೆಂದು ಹೆಸರಿಸಿದ್ದಾರೆ!
(father shivaling, mother shivaling, baby shivaling)

ಈ ಚಿತ್ರದಲ್ಲಿ ಕಾಣುವುದು, ಅಮ್ಮ ಶಿವಲಿಂಗ ಶಿಖರ...ಬಲಗಡೆ ಕಾಣುವ ಕಪ್ಪು ಶಿಖರವೇ ಹಸುಗೂಸು ಶಿವ ಶಿಖರ ...
ಫೋಟೋ ತೆಗೆದದ್ದು ತಪೋವನದಿಂದ...

ಮೂಡಿದನು ರವಿ ಮೂಡಿದನು...

ಧಾರವಾಡದಿಂದ ಸವದತ್ತಿಗೆ ಹೋಗುವ ಮಾರ್ಗದಲ್ಲಿ ರವಿಯು ಮುಂಜಾನೆ ಸುಮಾರು ೬.೩೦ ಕ್ಕೆ ಹೀಗೆ ಕಾಣಿಸಿಕೊಂಡನು...

ಧ್ವಜ ಸ್ತಂಭ

ಕುತುಬ್- ಮೀನಾರಿನ ಆವರಣದಲ್ಲಿರುವ ದೇವಾಲಯಗಳಲ್ಲಿರುವಂಥ ಧ್ವಜ ಸ್ತಂಭ. ಇದು ನಾನು ದೆಹಲಿಗೆ ಹೋಗಿದ್ದಾಗ ತೆಗೆದ ಚಿತ್ರ.

”ಮಿಕಿಮೌಸ್,’ ವಾಲ್ಟ್ ಡಿಸ್ನಿಯ ಜೊತೆಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಸ್ನಿಲ್ಯಾಂಡ್ ನ ಸಂಜೆಯ ವೈಭವದ ತೇರಿನಲ್ಲಿ !

ವಾಲ್ಟ್ ಡಿಸ್ನಿಯವರ ಬಲಗೈನಂತಿರುವ ಮೂಷಕ, ಮಕ್ಕಳಮನಸ್ಸಿನಮೇಲೆ ಮಾಡಿರುವ ಸಂಭ್ರಮದ ದಾಳಿಯನ್ನು ನೋಡಿ ತನ್ಮಯರಾಗಬೇಕು !

-ನನ್ನ ಚಿತ್ರ ಸಂಗ್ರಹದಿಂದ

’ಸ್ಟಾರ್ ವಾರ್ ’ ಚಿತ್ರದ ಆಧಾರದಮೇಲೆರಚಿಸಿದ ’ಜೆಡಿ ಶೊ, ’ ಮಕ್ಕಳ ಅಪಾರ ಪ್ರೀತಿ ಹಾಗೂ ಮಮತೆಯ ಸ್ಥಳ !

-ಡಿಸ್ನೆಲ್ಯಾಂಡ್ ಭೇಟಿಕೊಟ್ಟಾಗ ತೆಗೆದ ಚಿತ್ರಗಳು.

ಡಿಸ್ನಿಲ್ಯಾಂಡ್-ಒಂದು ವಿಸ್ಮಯಲೋಕ, ಚಿಣ್ಣರ, ಪ್ರೀತಿಯ ಆಗರ, ಅಬಾಲವೃದ್ದರಿಗೆ ಸಂತಸನೀಡುವ ಮನೋರಂಜನೆಯ ತಾಣ !

ಇಲ್ಲಿ ಸಾಯಂಕಾಲ ಡಿಸ್ನಿಯವರು ಹುಟ್ಟುಹಾಕಿ-ಬೆಳಸಿ, ವೈಭವೀಕರಿಸಿದ ಪಾತ್ರಧಾರಿಗಳು ನಡೆಸುವ ಭವ್ಯ ಪೆರೇಡ್ !

-ನನ್ನ ಚಿತ್ರಸಂಗ್ರಹದಿಂದ.

ಸುಮ್ಮನೆ ನಗುವವಳು..

ನಮ್ಮ ಅಜ್ಜಿ ಮನೆಯ ಗಾರ್ಡನ್ ಅಲ್ಲಿ ಸುಮ್ನೆ ಬೆಳೆದು ದೊಡ್ಡವಳಾಗಿ, ನಮ್ಮಂತ ಹುಡುಗರಿಗೆ ಸ್ಮೈಲ್ ಕೊಡ್ತಾ ಇದ್ದಳು..ಹಾಗೆ ನನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದುಬಿಟ್ಟೆ..

ಮನಿ ಮುಂದ್ ಒಂದ್ ಕಾರಂಜಿ , ಬ್ಯಾಡೇನ್ ಮತ್ತ !

ಅಲ್ಲ ಮಗ್ನ. ಕಳ್ಸೂ....ಗಂಗ್ ಓಂ ಅಕ್ಷರದ್ಹಾಂಗ್ ಮಾಡಿದ್ರೆ ಏನ್ ಗಂಟ್ ಹೋಗ್ತಿತ್ತು ! ಅಂವ ಅಮ್ರಿಕಾದಂವ. ಅವ್ನಿಗ್ ಹ್ಯಾಗ್ ತಿಳೀಬ್ಯಾಕ್ ಅದು. ನೀರಿನ ಧಾರೆಯನ್ನು ಗಮನಿಸಿ.

http://travel2west.blogspot.com/

-ಚಿತ್ರ ನಾನೆ ತೊಗಂಡೀನಿ.

ಮಲೆನಾಡಿನ ಜಾನುವಾರುಗಳ ಬಿದಿರಿನ ಘಂಟೆ

ಇತ್ತೀಚೆಗೆ ನಾನು ಮಲೆನಾಡಿನಲ್ಲಿ ಪ್ರವಾಸ ಕೈಗೊಂಡಿದ್ದೆ. ‘ಉತ್ತರ ಕನ್ನಡ ಜಿಲ್ಲೆಯ ಮನೆಮದ್ದು ಹಾಗು ನಾಟಿ ವೈದ್ಯ ಪರಂಪರೆ’ (ಹಳಿಯಾಳ, ದಾಂಡೇಲಿ ಹಾಗು ಅಂಬಿಕಾನಗರ) ಕೃಷಿ ಮಾಧ್ಯಮ ಕೇಂದ್ರದ ಫೆಲೋಶಿಪ್ ಅಧ್ಯಯನಕ್ಕಾಗಿ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ನಮ್ಮ ನಗರ ಬದುಕಿನ ಎಳ್ಳಷ್ಟು ಸೌಕರ್ಯಗಳಿಲ್ಲದ ಹತ್ತಾರು ಹಳ್ಳಿಗಳಿಗೆ ಭೇಟಿ ನೀಡುವ ಸುಯೋಗ ಒದಗಿಬಂತು.

ಆರ್ಗ್ಯಾನಿಕ್ ಪದಾರ್ಥಗಳಿಗೆ ಹೆಚ್ಚಿನ ಅದ್ಯತೆ !

ಅಮೆರಿಕನ್ ಮಾರುಕಟ್ಟೆಗಳಲ್ಲಿ ದೊರೆಯುವ ಸಾವಯವಕೃಷಿಯ ಪದ್ಧತಿಯಿಂದ ಬೆಳೆಸಿದ ಆಹಾರ-ಪದಾರ್ಥಗಳು, ತರಕಾರಿಗಳು, ಕಾಯಿ-ಪಲ್ಯಗಳು ಅತಿ-ಬೇಡಿಕೆಯಲ್ಲಿವೆ.

-ನಾನೇ ತೆಗೆದ ಚಿತ್ರಗಳು.

’ಆರ್ಟೇಸಿಯ,’ ನಮ್ಮ ಭಾರತೀಯಸಮುದಾಯದ ವಸ್ತುಗಳನ್ನು ಶಾಪಿಂಗ್ ಮಾಡಲು, ಹೇಳಿಮಾಡಿಸಿದ ಜಾಗ !

ಕ್ಯಾಲಿಫೋರ್ನಿಯ ರಾಜ್ಯದ, ಲಾಸ್ ಎಂಜಲೀಸ್ ನಗರಕ್ಕೆ ೩೭ ಮೈಲಿದೂರದಲ್ಲಿ, ’ಕೊಸ್ಟ ಮೆಸ’, ಪಟ್ಟಣವಿದೆ. ಇಲ್ಲಿಂದ, ನ್ಯೂಪೋರ್ಟ್ ಬೀಚ್, ತೀರಹತ್ತಿ’ರ. ಆರ್ಟೇಸಿಯ,’, ಶಾಪಿಂಗ್ ಕಾಂಪ್ಲೆಕ್ಸ್, ನಲ್ಲಿ ಭಾರತೀಯ ವಸ್ತುಗಳ, ದಿನ-ಬಳಕೆಯ ಸಾಮಗ್ರಿಗಳನ್ನು ಖರೀದಿಸಬಹುದು.

'ನ್ಯೂಪೋರ್ಟ್' ಕಡಲತೀರಪ್ರದೇಶ, ಕ್ಯಾಲಿಫೋರ್ನಿಯರಾಜ್ಯದ, ಕಾಸ್ಟಾ-ಮೆಸಾದಿಂದ, ಕೇವಲ ೧೦ ಮೈಲಿದೂರದಲ್ಲಿದೆ.

ನ್ಯೂಪೋರ್ಟ್ ಬೀಚ್, ಕ್ಯಾಲಿಫೋರ್ನಿಯ !

ಕ್ಯಾಲಿಫೋರ್ನಿಯದ ಬಳಿಯ, ’ನ್ಯೂಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

ನೀವು ಹೇಳಿದ್ದು ಸರಿಯಾಗಿದೆ. ಅದು ನ್ಯೂಪೋರ್ಟ್ ಬೀಚು.
-ನನ್ನ ಫೋಟೋ ಆಲ್ಬಮ್ ನಿಂದ.

ಕ್ಯಾಲಿಫೋರ್ನಿಯದಬಳಿ ಪ್ರಯಾಣಬೆಳೆಸಿದಾಗ, ಕಿಟಕಿಯ ಹೊರಗೆ ದಾಳಿಇಟ್ಟ ವೈವಿಧ್ಯಮಯ ಮೋಡಗಳ ಸಡಗರದ ಚಲನೆ !

-ನಾನು ಸೆರೆಹಿಡಿದ ಚಲಿಸುವಮೋಡಗಳು !

ಹಿಡ್ಲೆಮನೆ ಜಲಪಾತ ೧

ಹಿಡ್ಲೆಮನೆ ಜಲಪಾತ ಒ೦ದು ಅದ್ಭುತ ಅನುಭವ... ಇದು ಇರುವುದು ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಲ್ಲಿ...
ಈ ಜಲಪಾತಕ್ಕೆ ಹೋಗುವ ಮಾರ್ಗ ಅಷ್ಟು ಸುಗಮವಾಗಿಲ್ಲದಿದ್ದರೂ ಈ ಜಲಪಾತವನ್ನು ನೋಡಿದ ಮೇಲೆ ಆದ ರೋಮಾ೦ಚನ ವಿವರಿಸಲಸಾದ್ಯ...

ಶಿವಮೊಗ್ಗದ ಹತ್ತಿರದಲ್ಲಿನ ಸೇತುವೆಯ ಮೇಲಿನಿಂದ ತುಂಗಾನದಿಯ ನೋಟ !

ಶಿವಮೊಗ್ಗ- ಅದೊಂದು ಪ್ರಕೃತಿದತ್ತವಾದ ನಿಸರ್ಗರಮಣೀಯ ಸ್ಥಾನ, ಹಾಗೂ ಅಲ್ಲಿಗೆ ಹೋದರೆ, ಸುಂದರ ಸಸ್ಯಮಾಮ್ರಾಜ್ಯಕ್ಕೆ ಲಗ್ಗೆಹಾಕಿದ ಅನುಭವಉಂಟಾಗುತ್ತದೆ. ಎಲ್ಲಿ ನೋಡಿದರಲ್ಲಿ, ಹಸುರು, ಮರ, ಗಿಡ, ಬಳ್ಳಿ, ಪಕ್ಷಿಗಳು, ಹಾಗೂ ಅವುಗಳ ಚಿಲಿಪಿಲಿ ಕಲರವ. ಮಳೆಗಾಲದಲ್ಲಂತೂ ಅದೊಂದು ಸ್ವರ್ಗವೇ ಸರಿ !

-ನನ್ನ ಫೋಟೋ ಆಲ್ಬಮ್ ನಿಂದ.

ಗುಡವಿ ಪಕ್ಷಿಧಾಮ(ಸೊರಬ)

ಕರ್ನಾಟಕದ ಎಲೆಮರೆಯ ಕಾಯಿ ಪಕ್ಷಿಧಾಮ "Gudavi", ಸೊರಬದಿಂದ ೮ ಕಿಮೀ ದೂರದಲ್ಲಿದೆ ಹೆಚ್ಚಾಗಿ ಜನರಿಗೆ ಅಪರಿಚಿತ ಪ್ರವಾಸಿ ತಾಣ ಮುಖ್ಯವಾಗಿ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟ ಪಕ್ಷಿಧಾಮ.

ಓಹ್ ಸ್ಯಾನ್ ಫ್ರಾನ್ಸಿಸ್ ಕೊ ನಗರವೆ, ನಿನ್ನ ಮಡಿಲಿನಲ್ಲಿನ, ಮನುಷ್ಯನಿರ್ಮಿತ ಸೇತುವೆಯ ಸೊಬಗಿಗೆ ಕೊನೆಯುಂಟೆ ?

ಪ್ರಕೃತಿದೇವಿಗೆ, ಅಳಿಲು ಕೊಡುಗೆ -ಸ್ಯಾನ್ ಫ್ರಾನ್ಸಿಸ್ ಕೊ ತೂಗು ಸೇತುವೆ ! ಇದೊಂದು ಇಂಜಿನಿಯರಿಂಗ್ ಶಾಖೆಯ ಅದ್ಭುತಗಳಲ್ಲೊಂದಾಗಿತ್ತು. ಈಗ ಚೈನಾದೇಶದಲ್ಲಿ ೩೩ ಕಿ. ಮೀಟರ್ ಉದ್ದದ ವಿಶ್ವದ ಅತಿದೊಡ್ಡ ಮಾನವನಿರ್ಮಿತ ಸೇತುವೆ ಬಂದಿದೆ. ಮನುಷ್ಯನ ಕಲ್ಪನಾ ಶಕ್ತಿಗೆ ಆಗಸವೇ ಒಂದು ಗಡಿ !
ಆದರೆ ಸ್ಯಾನ್ ಫ್ರಾನ್ಸಿಸ್ ಕೊ ದ ಅಂದ-ಚೆಂದ ಇನ್ನೂ ಮಾಸಿಲ್ಲ !

Eco-system services - ಒಂದು ಉದಾಹರಣೆ

ಶಿವಮೊಗ್ಗ ಜಿಲ್ಲೆ - ಹೊಸನಗರ ತಾಲ್ಲೂಕು, ನಗರ ಊರಿನ ಹತ್ತಿರ ಕಂಡ ಚಿತ್ರ (ನಗರ-ಮಾಸ್ತಿಕಟ್ಟೆ ಮಧ್ಯೆ). ೨-೩ ತರಹದ landscapeಗಳನ್ನು ಇಲ್ಲಿ ಕಾಣಬಹುದು: ನಿತ್ಯಹರಿದ್ವರ್ಣ ಕಾಡು, ಕುರುಚಲು ಕಾಡು (degraded forest ಆಗಿರಬಹುದು), ಗದ್ದೆ (wetland), ಬ್ಯಾಣ (private pasture land)

ತಾಯ್ತನದ ಹಿರಿಮೆ !

ನಾವು ಪರಿವಾರ ಸಮೇತ ೧೭ ದಿನಗಳ ಮೈಸೂರು ಯಾತ್ರೆಗೆ ಹೋಗಿದ್ದೆವು. ಆಗ ನಮ್ಮ ಮನೆಯ ಬಾಲ್ಕನಿಯಲ್ಲಿ ಒಮ್ಮಿದೊಂಮ್ಮೆ, ಒಂದು ಪಾರಿವಳ ಮೊಟ್ಟೆಹಾಕಿ, ಕುಳಿತು ಕಾವುಕೊಡುತ್ತಿರುವ ದೃಶ್ಯವನ್ನು ನಮ್ಮ ಮನೆಯ ಕೆಲಸದ ಬಾಯಿ ಕಂಡಳು. ಸಹಜವಾಗಿ ಅವಳೂ ಒಬ್ಬ ಸ್ತ್ರೀ ಹಾಗೂ ಮಕ್ಕಳೊಂದಿಗಳು. ಕರುಣೆಯಿಂದ ಮೊಟ್ಟೆಗಳಿಗೆ ಅಪಾಯಬರದಂತೆ ನಡೆದುಕೊಂಡಳು.

ಯಜಮಾನ

ಈತ ತನ್ನ ಹಳ್ಳಿಗೆ ಬೇಕಿದ್ದ ಒ೦ದು ಚೆಕ್ ಡ್ಯಾಮ್ ಹತ್ತು ಲಕ್ಷ ಕೈಯಿ೦ದ ಹಾಕಿ ಸ್ವ೦ತ ಖರ್ಚಿನಲ್ಲಿ ಮಾಡಿಸಿದ್ದಾನೆ.
ನಾನು ಈವನನ್ನು ಭೇಟಿಯಾದಾಗ ಕುರಿ ಕಾಯಿಸುತ್ತಿದ್ದ. ಮಹಾನ್ ಪ್ರೇಮ ಜೀವಿಯ ನಗೆಯಲ್ಲಿ ಭಯ೦ಕರ ಆಕರ್ಷಣೆಯಿದೆ.
ಗಟ್ಟಿ ಜೀವಿ ತನ್ನ ಊರು ಕುಟು೦ಬ ಮತ್ತು ನೆಲದ ಬಗ್ಗೆ ಅವನಿಗಿರುವ ಕಾಳಜಿ ನೋಡಿ ಬೆಚ್ಚಿ ಬಿದ್ದೆ. ಓದಿದ್ದು ಏನೂ ಇಲ್ಲವಾದರೂ

ಕರ್ನಾಟಕದ ಮನೆಮನೆಗಳಲ್ಲಿ ರಂಜಿಸುತ್ತಿರುವ ರಂಗೋಲಿ ಕಲೆ !

ಮೈಸೂರಿನ, ಶಶಿ ಮೂರ್ತಿಯವರು, ರಂಗೋಲಿಕಲೆಯಲ್ಲಿ ಸಿದ್ಧಹಸ್ತರು. ಪ್ರತಿದಿನವೂ ಪ್ರಾತಃಕಾಲ, ಅವರು ತಮ್ಮ ಮನೆಯಮುಂದೆ ರಂಗೋಲಿಯನ್ನು ಹಾಕುತ್ತಾರೆ. ಯಾವ ಪ್ರಚಾರಮಾಧ್ಯಮಗಳಿಗೂ ಸೊಪ್ಪುಹಾಕದ ಇಂತಹ ಕಲಾವಿದರುಗಳಿಗೇನೂ ಕಡಿಮೆಯೇನಿಲ್ಲ. ಮೈಸೂರು, ಬೆಂಗಳೂರಿನಲ್ಲಿ ಇಂತಹ ಅಪರೂಪದ ಕಲೆ, ಇನ್ನೂ ಬಳಕೆಯಲ್ಲಿದೆ.

-ನನ್ನ ಕ್ಯಾಮರದಿಂದ.

ನಿಸರ್ಗ ನಿರ್ಮಿತ ಶಿವಲಿಂಗ

ಒರಿಸ್ಸಾದ ಗುಡ್ಡಗಾಡಿನ ಮಧ್ಯೆ ಕಂಡುಬರುವ ಈ stalagmite (ಕಣಶಿಲೆ) ಶಿವಲಿಂಗದ ಆಕಾರದಲ್ಲಿರುವುದರಿಂದ ಆಸ್ತಿಕರಿಗೆ ಪೂಜನೀಯವಾಗಿದೆ. ಗಿರಿಜನರ ಪ್ರದೇಶದಲ್ಲಿರುವ ಈ ತಾಣಕ್ಕೆ ಶಿವರಾತ್ರಿಯಂದು ಮಾತ್ರ ನಾಗರಿಕರಿಗೆ ಪ್ರವೇಶ ಸಾಧ್ಯ.

ಬೀಚಲ್ಲಿ ನೋಡಿದ ಸೂರ್ಯಾಸ್ತ

ನಾನು ನನ್ನ ಸ್ನೇಹಿತರೊಡನೆ ಒಂದು ಸಾರಿ ಕೇರಳ ಪ್ರವಾಸಕ್ಕೆ ಹೋಗಿದ್ದೆ, ಕೊನೆಯ ದಿನ ನಾವು ಬೀಚಲ್ಲಿ ಸ್ಪೆಂಡ್ ಮಾಡೋದು ಅಂತ ತಿರ್ಮಾನಿಸಿದ್ದೆವು ಅದರಂತೆ ಕೊಚಿನ ಗೆ ಸಮೀಪ ಇರುವ 'ಚರಾಯ' ಎಂಬ ಒಂದು ಸುಂದರವಾದ ಬೀಚ ಗೆ ಹೋದ್ವಿ ಅಲ್ಲಿ ಪೂರ್ತಿ ದಿನ ಕಳೆಯೋ ಮನಸಾಯಿತು, ಭಾರಿ ಮಸ್ತ ಅದ ಆ ಬೀಚ, ಸೊ ನಾವೆಲ್ಲ ಸುಮಾರು ೧೧ ಘಂಟೆಗೆ ನೀರಲ್ಲಿ ಇಳಿದೆವು.

ಬನ್ನಿ ನಂಜತೆ, ಮುಂಬೈ ನೋಡ್ರಿ -೨ !

ಇದೇ ಮುಂಬೈ ನ ಸುಪ್ರಸಿದ್ಧ ರಾಜಾಬಾಯಿ ಗಡಿಯಾರದ ಗೋಪುರ. ಎಷ್ಟು ಎತ್ತರ ಇದೆ ನೋಡಿ. ನನಗೆ ಇದರ ಚಿತ್ರತೆಗೆಯಲು ಲಾನ್ ಮೇಲೆ ಬಿದ್ದುಕೊಂಡು ತೆಗೆಯಬೇಕಾಯಿತು. ದಕ್ಷಿಣ ಮುಂಬೈ ಕೋಟೆ ಪ್ರದೇಶದಲ್ಲಿರುವ ಇದನ್ನು, ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತಗುಲಿದಂತೆ ಕಟ್ಟಲಾಗಿದೆ. ಟವರ್ ಎತ್ತರ, ೮೫ ಮೀಟರ್ (೨೮೦ ಅಡಿ).

ಮೈಸೂರಿನ ಮಹಿಷ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಂತಿರುವ ಓ ಮಹಿಷ
ಬಲಗೈಲಿ ಕತ್ತಿ, ಎಡಗೈಲಿ ಸರ್ಪವ ಹಿಡಿದು ಹುರಿಮೀಸೆಯ ನಿನ್ನನ್ನು ಕಂಡರೆ ಮಕ್ಕಳಿಗೆ ನಡುಕ,
ಆದರೆ ನನಗಂತೂ ಬಲು ಚಮಕ
ಒಳಿತನ್ನು ಹಿಡಿ, ಕೆಡುಕನ್ನು ಬಿಡಿ ಎಂದು ಹೇಳುವಂತಿರುವ ಮಹಿಷ
ಬೆಟ್ಟಕ್ಕೆ ಬಂದವರಿಗೆಲ್ಲಾ ಬದುಕುವ ದಾರಿಯ ತೋರಿಸಪ್ಪ

ಅಯ್ಯೊ ಇದೇನಾ ಪೋಸ್ಟ್ ಆಫೀಸು ? !

ಬೊಂಬಾಯ್.. ಅಲ್ಲ ಅಲ್ಲ ಮುಂಬೈ ನಂಥ ಭಾರಿ ನಗರದ್ ಪೋಸ್ಟ್ ಆಫೀಸ್ (ಟೆಲಿಗ್ರಾಫ್ ಆಫೀಸ್ ) ಹೀಗಿರತ್ತಾ ? ಆಶ್ಚರ್ಯ ! ಹೌದು. ಮುಂಬೈ ನ ಘಾಟ್ಕೊಪರ್ [ಪ] ದಲ್ಲಿರುವ ಪೋಸ್ಟ್ ಆಫೀಸ್ ಇರೋದೇ ಹೀಗೆ. ಇದು ಇವತ್ತಿಂದಲ್ಲ. ಹಲವಾರು ದಶಕಗಳಿಂದ ಇದು ಇರೋದೇ ಹೀಗೆ. ಜನಕೂಡ ಇದನ್ನ ಗಮನಕ್ಕೆ ತೊಗೊಳಲ್ಲ. ಎಲ್ಲರ ಕೈಲೂ ಮೊಬೈಲ್ ಇತ್ತು. ಅಷ್ಟಕ್ಕೂ ಟೆಲೆಗ್ರಾಂ ಮಾಡೊರ್ಯಾರೀಗ ! ಇನ್ನೂ ಇಲ್ಲಿರುವ ರೈಲ್ವೆ  ಸ್ಟೇಶನ್ ಗಳ್ನ ನೋಡ್ಬೇಕ್ ನೀವು. ಒಂದಸ್ತಿನ ಕಟ್ಟಡ. ಸುಣ್ಣ ಬಣ್ಣ ಪ್ರತಿವರ್ಷವು ಮಾಡಿದರು, ಮಾಡಿದ ಒಂದು ತಿಂಗಳಿನಲ್ಲೇ ಮಾಯವಾಗುವಸ್ಟು ಕಳಪೆ ಪದಾರ್ಥಗಳನ್ನು ಬಳಸಿದರೆ ಹೇಗಿರತ್ತೆ ಬಣ್ಣ  ? 

" ಶ್ರೀಕೃಷ್ಣ ಬಟಾಟಾವಡ ಅಂಗಡಿ ", ಮುಂಬೈ, ದಾದರ್ ಪಶ್ಚಿಮ !

ಹೊಸವರ್ಷ ಶುರುವಾಯಿತು. ಬಟಾಟಾವಡ ತಿನ್ನುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೋದ ವರ್ಷ, ೭ ರೂಪಾಯಿ ಇದ್ದ ಈ ಆಲೂಗಡ್ಡೆ ವಡೆ, ಈಗ ೮ ರೂಪಾಯಿ ಆಗಿದೆ. ಒಂದು ಚಿಕ್ಕ ಆಲೂಗಡ್ಡೆ ವಡೆ, ಒಂದೆರಡು ಬೇಯಿಸಿದ ಹಸಿಮೆಣಸಿನಕಾಯಿಯನ್ನು ಕಾಗದ ತಟ್ಟೆಯಲ್ಲಿ ಅಂಗೈನಲ್ಲಿ ಇಟ್ಟುಕೊಂಡು , ಮುಂಗೈನಲ್ಲಿ ಮುಚ್ಚಿಕೊಂಡು ಸವಿಯುವರನ್ನು ನೋಡಿ, ನಮಗೆ ಆಶ್ಚರ್ಯವಾಗುತ್ತೆ.

" ಶ್ರೀಕೃಷ್ಣ ಬಟಾಟವಡ ಅಂಗಡಿ ", ಮುಂಬೈ ನ ದಾದರ್ (ಪ) ನಲ್ಲಿ !

ಮುಂಬೈನ ದಾದರ್ ಪಶ್ಚಿಮಕ್ಕೆ ಬಂದರೆ ಸಾಕು, ರೈಲ್ವೆ ನಿಲ್ದಾಣದ ಬಳಿಯೇ ನಿಂತ್ಕೊಂಡು , ಬಟಾಟಾ ವಡೆಯನ್ನು ಗಬ-ಗಬನೆ ಮೆಲ್ಲುತ್ತಿರುವ ದೃಷ್ಯ, ನಿಮ್ಮ ಕಣ್ಣಿಗೆ ಬೀಳಲೇ ಬೇಕು. ಅದೆಷ್ಟು ರುಚಿ, ಈ ಬಟಾಟಾ ವಡ ! ಆದ್ರೆ, ಆರಿದ್ಮೇಲೆ ಇದ್ರ ರುಚಿನೇ ಬೇರೆ. ಯಾರ್ಗು ಹಿಡ್ಸಲ್ಲ. ಮೊದಲು ಅಂದ್ರೆ, ಸುಮಾರು, ೧೦-೧೨-೧೫ ವರ್ಷಗಳಹಿಂದೆ, ಇದ್ದಿದ್ದ್ರ ತರ್ಹನೇ ಈಗ್ಲು ಆದ್ರ್ರುಚಿ ಇದೆ. ತಿಂದ್ನೋಡಿ. ನನಗೆ ನೆನೆಪಿರೊಹಾಗೆ, ಅದರ್ ಬೆಲೆ ೭೫ ಪೈಸೆ ಇತ್ತು- ನಾನ್ ತಿನ್ನಕ್ಕೆ ಶುರುಮಾಡ್ದಾಗ ! ಈಗ ಒಂದ್ ವಡಕ್ಕೆ ೭ ರೂ. ೫೦ ಪೈಸೆ.

ಸುರಂಗದೊಳಗೆ ರೈಲು ನಿಂತಾಗ....

ಕೊಂಕಣ ರೈಲು ಸುರಂಗದೊಳಗೆ ನಿಂತಾಗ! ಪದೆ ಪದೆ ಇನ್ನೊಂದು ಕಡೆಯಿಂದ ಬರುವ ರೈಲುಗಳಿಗೆ ದಾರಿ ಬಿಟ್ಟುಕೊಡಲು ಈ ರೀತಿಯ ದೃಶ್ಯಗಳು ಕೊಂಕಣ ರೈಲು ಮಾರ್ಗದ ಪ್ರಯಾಣದಲ್ಲಿ ಸಾಮಾನ್ಯ. ಅದೊಂದುದಿನ "ಕ್ರಾಸಿಂಗ್" ಗಾಗಿ ಸುರಂಗದಲ್ಲಿ ನಿಂತಾಗ ಸೆರೆಹಿಡಿದ ದೃಶ್ಯ.

ಅಪ್ಸರಕೊಂಡದ ಜಲಧಾರೆ!!

ಈ ಜಲಧಾರೆ ಅಪ್ಸರಕೊಂಡದಲ್ಲಿದೆ. ಮಳೆಗಾಲದಲ್ಲಿ ಮೈತುಂಬಿ ಮುದನೀಡುವ ಇದು ಸದಾಕಾಲ ಕಾಣಸಿಗುತ್ತದೆ. ಹೊನ್ನಾವರದಿಂದ ೯-೧೦ ಕಿ.ಮಿ. ದೂರದಲ್ಲಿದೆ. ಹಾಗೆ ಅಲ್ಲಿನ ಗುಡ್ಡದ ಮೇಲೆ ನಿಂತು ನೋಡಿದರೆ ಅರಬ್ಬಿ ಸಮುದ್ರದ ವಿಶಾಲತೆ ಹಾಗು ಗುಡ್ಡ, ಬೆಟ್ಟ ಮತ್ತು ನದಿಗಳ ರಮಣೀಯ ಪಕ್ಷಿನೋಟ ಸಿಗುತ್ತದೆ.

ಶರಾವತಿ ಕೊಳ್ಳದ ಸುಂದರ ನೋಟ

ಇದು ಹೊನ್ನಾವರ ಬೆಂಗಳೂರು ರಸ್ತೆಯಲ್ಲಿ ಮಲೆಮನೆ ಘಟ್ಟದದಲ್ಲಿ ಕಂಡುಬರುವ ದೃಶ್ಯ. ಮುಂಜಾವಿನ ಮಂಜುಕವಿದಾಗಂತೂ ಕಣ್ಣುಗಳಿಗೆ ರಸದೌತಣ ನೀಡುತ್ತದೆ.

ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ.

"ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ,"ವನ್ನು”ಶಿವಾಜಿಮಹಾರಾಜ ವಸ್ತು ಸಂಗ್ರಹಾಲಯ,’ವೆಂದು ಕರೆಯುತ್ತಿರುವುದು ಎಷ್ಟು ಸಮಂಜಸ ಎನ್ನುವುದು ಚರ್ಚಾಸ್ಪದವಾದ ವಿಷಯ. ಏಕೆಂದರೆ, ಶಿವಾಜಿಯವರು ಉಪಯೋಗಿಸುತ್ತಿದ್ದ ಕತ್ತಿ ಗುರಾಣಿ, ಕವಚಗಳನ್ನು ಬಿಟ್ಟರೆ ಶಿವಾಜಿಯವರನ್ನು ಹೆಸರಿಸುವ ಯಾವ ಸನ್ನಿವೇಷಗಳೂ ಅಲ್ಲಿಲ್ಲ. ಈ ಭವ್ಯ ಕಟ್ಟಡದ ಶಿಲ್ಪಿ, ವಿಟೆಟ್ ರವರು.

ಪುಟಾಣಿಗಳು - ಮುಂಬೈನ, ಶಿವಾಜಿಪಾರ್ಕಿನಲ್ಲಿ !

ಮುಂಬೈನ ಶಿವಾಜಿಪಾರ್ಕಿನಲ್ಲಿ ಕಂಡ ಪುಟ್ಟಮಕ್ಕಳನ್ನು ಕಂಡು, ನನ್ನ ’ಬಾಕ್ಸ್ ಕ್ಯಾಮರ,’ದಲ್ಲಿ ಕ್ಲಿಕ್ಕಿಸಿದ್ದೆ . ಬಹುಶಃ ೧೯೮೩ ಯಲ್ಲಿರಬಹುದೇನೋ !

-ಆಲ್ಬಮ್.

ಶೃಂಗೇರಿಯ ಬಳಿ ತುಂಗಾನದಿಯಮೇಲೆ ಕಟ್ಟಿರುವ, " ಶ್ರೀ. ವಿದ್ಯಾತೀರ್ಥಸೇತು," ವಿನ ಪ್ರಮುಖ ದ್ವಾರ !

ಈ ಸೇತುವೆ, ಮಠ ಮತ್ತು ನರಸಿಂಹವನಕ್ಕೆ ಸಂಪರ್ಕಕೊಡುವ ಕಾಲುದಾರಿ. ಇಲ್ಲವಾದರೆ ದೋಣಿಯಲ್ಲಿ ಹೋಗಬೇಕಾಗುತ್ತಿತ್ತು.

-ಆಲ್ಬಮ್.

ಬಾದಾಮಿಯ ಕೋಟೆ - ಮೇಲಿನ ಮತ್ತು ಕೆಳಗಣ ಶಿವಾಲಯಗಳನ್ನು ತೋರಿಸುವ ನೋಟ

 

ಚಿತ್ರ ಕೃಪೆ: ಲಕ್ಷ್ಮೀ ಶ್ರೀನಾಥ್

ತುತ್ತತುದಿಯಲ್ಲಿ ಕಾಣುವುದು ಮೇಲಿನ ಶಿವಾಲಯ. ಚಿತ್ರದ ಎಡಭಾಗದಲ್ಲಿ, ಸುಮಾರು ನಡುವಿನಲ್ಲಿ ಇರುವುದಕ್ಕೆ ಕೆಳಗಿನ ಶಿವಾಲಯ ಎನ್ನುತ್ತಾರೆ. ಒಳಗೆ ವಿಗ್ರಹವಿಲ್ಲ.

ಅಲ್ಲಿ ಇರುವ ಗಣಗಳ ಚಿತ್ರಗಳಿಂದ, ಈ ಗುಡಿಯೇ ವಾತಾಪಿಗಣಪತಿಯು ಮೊದಲು ಇದ್ದ ಸ್ಥಳ ಎಂದು ಊಹಿಸಲಾಗಿದೆ

ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ಶೃಂಗೇರಿ ಪ್ರಮುಖದ್ವಾರ.

ಇಲ್ಲಿಂದ ಶುರುವಾಗುವ ಶೃಂಗೇರಿಯ ತೀರ್ಥಯಾತ್ರೆ, ಅತ್ಯಂತ ಅಮೋಘ ಮತ್ತು ಸುಂದರ.

-ಆಲ್ಬಮ್.

ಬಾದಾಮಿ ಕೋಟೆ - ನಡುವೆ, ತುದಿಯಲ್ಲಿರುವುದನ್ನು ಮೇಲಿನ ಶಿವಾಲಯ ಎನ್ನುತ್ತಾರೆ.

ಚಿತ್ರ ಕೃಪೆ: ಲಕ್ಷ್ಮೀ ಶ್ರೀನಾಥ್

 ಶಿವಾಲಯ ಎಂದು ಕರೆಯುವುದಾದರೂ, ಒಳಗೆ ವಿಗ್ರಹವಿಲ್ಲ.

ಶೃಂಗೇರಿಯ, ತುಂಗಾ ನದಿಯ ಸ್ನಾನಘಟ್ಟದ ಹೊರಗೆ !

ಪವಿತ್ರ ಶೃಂಗೇರಿ ಕ್ಷೇತ್ರದಲ್ಲಿ , ತುಂಗಾನದಿ ಸ್ನಾನಮಾಡುವುದೇ ಒಂದು ಸೊಗಸು. ಕಡಿದಾದ ಮೆಟ್ಟಲುಗಳನ್ನು ವಯಸ್ಸಾದವರಿಗೆ ಹತ್ತಿ-ಇಳಿಯಲು ಕಷ್ಟ. ಆದರೆ ತುಂಗೆಯ ಪವಿತ್ರ -ಸ್ನಾನ, ಎಲ್ಲ ನೋವು ಸಂಕಟಗಳನ್ನೂ ಮರೆಸುವಂತಹದು.

-ಆಲ್ಬಮ್

ಶೃಂಗೇರಿ ಶ್ರೀ ಶಾರದಮ್ಮನವರ ದೇವಸ್ಥಾನ.

ಈ ದೇವಸ್ಥಾನ ಪುರಾತನವಾದದ್ದು. ೧೯೦೭ ರವರೆಗೆ ಅದು ಹೆಂಚಿನಛಾವಣಿಯನ್ನು ಹೊಂದಿತ್ತು. ಅದನ್ನು ಶ್ರೀಮಠದ ೩೩ ನೆಯತಿವರ್ಯರಾದ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ವಿಶಾಲವೂ ಭವ್ಯವೂ ಆದ ದೇವಾಲಯವನ್ನು ನಿರ್ಮಿಸಲು ಆಶಿಸಿದರು.

ತುಂಗೆಯ ಮಡಿಲಿನಲ್ಲಿ ಮೀನುಗಳು !

ಶೃಂಗೇರಿಯ ತುಂಗಾನದಿಯಲ್ಲಿ ಮೆಟ್ಟಿಲುಗಳನ್ನು ಹಾರುತ್ತಾ ನದಿಯ ನೀರಿನಲ್ಲಿ ಕಾಲಿಟ್ಟರೆ ಸಾಕು. ನೀಲಿಬಣ್ಣದ ಅಸಂಖ್ಯ ಮೀನುಗಳ ತಂಡ ಬಂದು ನಿಮ್ಮಕಾಲುಗಳನ್ನು ಸ್ವಚ್ಛಮಾಡಿಬಿಡುತವೆ.

-ಆಲ್ಬಮ್.

ಶ್ಯಾಂತಿ ದೇವತೆ -ಮಾನವನ ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆ, ಪ್ರೀತಿಯ ಅನ್ವರ್ಥನಾಮದ ಪ್ರತಿರೂಪ !

ಇದನ್ನು ನ್ಯೂಯಾರ್ಕಿನ ಮನ್ಹಟನ್ ಸ್ಕ್ವೇರ್ ನಲ್ಲಿ ನೋಡಿ, ಆನಂದಿಸಿ ಕ್ಲಿಕ್ಕಿಸಿದ ಪ್ರಕಾಶರ ಕ್ಯಾಮರಾದ ಕಣ್ಣಿನಲ್ಲಿ ಕಂಡರೀತಿ.

-ನಮ್ಮ ಮನೆ ಫೋಟೋ ಆಲ್ಬಮ್.

ಅಬ್ಬ, ಎಂಥಾ ರಮ್ಯ ದೃಷ್ಯ !

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಗುಡಿಯ ಮುಂದೆ ನಿಂತರೆ ಸಾಕು. ಕಣ್ಣಿಗೆ ಹಬ್ಬ. ಅದೇನು ವನಸಿರಿ ! ಕಣ್ಣಿಗೆ ಹಬ್ಬ. ದೂರದಲ್ಲೆಲ್ಲ ಮನತಣಿಯುವಷ್ಟು ಸಸ್ಯ-ಜಲರಾಶಿ.

-ನಮ್ಮ ಮನೆಯ ಫೋಟೊ ಆಲ್ಬಮ್ ನಿಂದ.

'ಗೋಪಾಲಸಾಮಿ' ಬೆಟ್ಟದ ಚೆಲುವಿನ ನೋಟ

'ಗೋಪಾಲಸಾಮಿ' ಬೆಟ್ಟ ಮೈಸೂರು-ಊಟಿ ಹೆದ್ದಾರಿಯಲ್ಲಿ ಬರುವ 'ಅಂಗಳ' ಎಂಬ ಊರಿನಿಂದ ಬಲಕ್ಕೆ ಹೋದರೆ ಸಿಗುವುದು. ಬೆಟ್ಟದ ಮೇಲೆ ಹೋಗಿ ಚೆಲುವಿನ ನೀಲಿಬೆಟ್ಟಗುಡ್ಡಗಳ ನಡುವೆ ಇರುವ ಹಸುರು ನೋಡಲು ಬಲು ಚೆಂದ.

ಸತ್ತೇಗಾಲದ ಸೇತುವೆ

 ಸತ್ತೇಗಾಲ ಎಂಬ ಊರು ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ ದಾರಿಯಲ್ಲಿ ಕೊಳ್ಳೇಗಾಲಕ್ಕೆ ಹೋಗುವಾಗ ಸಿಗುತ್ತದೆ. ಕಾವೇರಿಯನ್ನ ದಾಟಿದರೆ ಸತ್ತೇಗಾಲ ಮತ್ತು ಶಿವಸಮುದ್ರ
ಹಳ್ಳಿ(ಹಿಂದಿನ ಹೆಸರು ಹೆಗ್ಗೂರು) ಸಿಗುತ್ತದೆ. ಬಾನ್ಚುಕ್ಕಿ ಮತ್ತು ಬರಚುಕ್ಕಿ ಇಲ್ಲಿರುವ ಹೆಸರಾಗಿರುವ ನೀರಿನ ಗುಂಡಿ/ಜಲಪಾತಗಳು.

ಮದುವಣಿಗಿತ್ತಿಯ ಸೆರಗು!

ನಯಾಗರಾದ ಮೂರು ಜಲಪಾತಗಳಲ್ಲಿ ಅತಿ ಚಿಕ್ಕದಾದ, Bridal Veil ಜಲಪಾತ. ಕೆಳಗೆ ಕಾಣುತ್ತಿರುವುದು ಬಿರುಗಾಳಿ ಕಟ್ಟೆ :-) (Hurricane Deck)

ಮಳೆಬಿಲ್ಲು ಸೇತುವೆ!

ನಯಾಗರ ನದಿಯ ಮೇಲೆ, ಕೆನಡ-ಯುಎಸ್‍ಎ ಗಳನ್ನು ಜೋಡಿಸುವ ಮಳೆಬಿಲ್ಲು ಸೇತುವೆ (Rainbow bridge) - ಬದಿಯಲ್ಲಿ ಕಾಣುವುದು ಅಮೆರಿಕನ್ ಫಾಲ್ಸ್ ನ ಬದಿ-ನೋಟ

ಹೋದವರ್ಷದ, ಮುಂಬೈ ನ ರೈಲ್ವೆ ಡಬ್ಬಿಯಲ್ಲಿ ಇಟ್ಟ ಬಾಂಬಿನ ಸ್ಪೋಟದ, ಒಂದು ಕೆಟ್ಟ ದೃ‍ಷ್ಯ ! [೧೧/೭]

ಹೇಳಕ್ಕೆ, ಕೇಳಕ್ಕೆ ಏನಾದರು ಇದೆಯೇ ?

-ಕೃಪೆ : Rediffmail.com

ಹಾರುವ ಸಿದ್ಧತೆಯಲ್ಲಿ !

ಈ ಚಿತ್ರ, ಸ್ಯಾನ್ ಫ್ರಾನ್ಸಿಸ್ಕೊ ನಗರದ ಬಳಿಯ ಬೀಚ್ ನ ಹತ್ತಿರ ತೆಗೆದದ್ದು.

-ಖಾಸಗಿ ಆಲ್ಬಮ್ ನಿಂದ.

ಮೈಸೂರು ಅರಮನೆ ನನ್ನ ಮೂರನೆ ಕಣ್ಣಲ್ಲಿ...

ಮೈಸೂರಿನ ಅರಮನೆಯ ಸೊಬಗು, ಭವ್ಯತೆ ಎಲ್ಲರ ಮನ ಸೆಳೆಯುತ್ತದೆ ಎಂಬುವುದರಲ್ಲಿ ಸಂಶಯವೇ ಇಲ್ಲ...

ಹಾಂಕಾಂಗಿನ ಮತ್ತೊಂದು ಹೂದೋಟ.

ಹಾಂಕಾಂಗ್ ದ್ವೀಪದಲ್ಲಿ ಅನೇಕ ಹೂದೋಟಗಳಿವೆ. ಅವನ್ನು ಎಷ್ಟು ಅಸ್ತೆಯಿಂದ ಆಸಕ್ತಿಯಿಂದ ನಿರ್ಮಿಸಿದ್ದಾರೆ ಎನ್ನುವುದು ಮುಖ್ಯ.

-ಆಲ್ಬಮ್

ಹಾಂಕಾಂಗ್ ದ್ವೀಪದಲ್ಲಿ ವಿಮಾನದಿಂದ ಕೆಳಗೆ ಕಾಣಿಸುವ ದೃಷ್ಯ

ಹಾಂಕಾಂಗ್ ನ ಕಡಲಿನ ಮೇಲೆ ವಿಮಾನದಲ್ಲಿ ಹಾರಿದಾಗ, ಕೆಳಗೆ ಕಾಣಿಸುವ ನೋಟ.

-ನಮ್ಮ ಮನೆಯ ಆಲ್ಬಮ್ ನಿಂದ

ಸಮುದ್ರದ ದಂಡೆ ; ತೆಂಗಿನಮರಗಳು !

ಸಮುದ್ರದ ದಂಡೆಯಲ್ಲಿ ತೆಂಗಿನಮರಗಳು ಇರುವುದು, ಸ್ವಾಭಾವಿಕ. ಅದರಲ್ಲೇನು ವಿಶೇಷ ?

ಸರಿ. ನೀವು ಕೇಳೋ ಪ್ರಶ್ನೆ.

ಆದರೆ ಈ ಮರಗಳು ಇರೋದು ಹವಾಯ್ ದ್ವೀಪದಲ್ಲಿ !

-ಆಲ್ಬಮ್

ಹವಾಯಿದ್ವೀಪದ ಇನ್ನೊಂದು ಬಗೆಯ ಪುಷ್ಪದಾನಿ !

ಹವಾಯಿ- ನಿಸರ್ಗದ ರಮಣೀಯ ದೃಷ್ಯಗಳ ತವರೂರು. ಬಹುಶಃ ’ಪ್ರಕೃತಿದೇವಿ” ತನ್ನ ಹಲವು ರೂಪಗಳ ಅಭಿವ್ಯಕ್ತಿ ಮಾಡುತ್ತಿದ್ದಾಳೆಯೋ ಎನ್ನಿಸುವ, ಅಪರೂಪದ "ದೃಷ್ಯಕಾವ್ಯ "ಗಳನ್ನು ನೋಡಿ ತಣಿಯಬಹುದು.

-ಆಲ್ಬಮ್

ಹಾಲಿವುಡ್ಡಿನ ಯೂನಿವರ್ಸಲ್ ಸ್ಟುಡಿಯೋಸ್ !

ಹಾಲಿವುಡ್ಡಿಗೆ ಹೋದರೆ ನಿಮಗೆ ಗೋಚರಿಸುವುದು, [ಕೇಳಿದ್ದು, ಚಿತ್ರದಲ್ಲಿ ನೋಡಿದ್ದ ] ಅನೇಕ ಚಲನಚಿತ್ರ ತಯಾರಿಸುವ ಅನುಪಮ ಸ್ಟುಡಿಯೋಗಳು !

ಎಮ್. ಜಿ. ಎಮ್,
೨೦ ಯತ್ ಸೆಂಚ್ಯುರಿ ಫಾಕ್ಸ್,
ಪ್ಯಾರಾಮೌಂಟ್,
ಕೊಲಂಬಿಯ,
ವಾರ್ನರ್ ಬ್ರದರ್ಸ್,
ಯೂನಿವರ್ಸಲ್
ಯುನೈಟೆಡ್ ಆರ್ಟಿಸ್ಟ್ಸ್ ಇತ್ಯಾದಿ.

ಇಲ್ಲಿ ತೋರಿಸಿರುವ ಚಿತ್ರ, ಯೂನಿವರ್ಸಲ್ ಸ್ಟುಡಿಯೋದ, ಮುಂಭಾಗದ ಚಿತ್ರ.

ಓಹ್ ...ಹವ ಹವಾಯ್...... ಹವ ಹವಾಯ್...... ಹಾಡಿದೆಯಲ್ಲ [೩] !

ನೀರಿದೆ ; ನೆಲವಿಲ್ಲ. ನೀಲಿಯ ಆಗಸವಿದೆ. ಭೂಮಿಯಿಲ್ಲ. ಮರ, ಗಿಡ, ಎಲ್ಲಾ ಇವೆ.

-ಪ್ರಕೃತಿದೇವಿಯ ಮಡಿಲಲ್ಲಿ !

ಹವಾಯ್ ದ್ವೀಪದ ಪ್ರಖ್ಯಾತ Landscape ಚಿತ್ರ.

ಇದನ್ನು ರಚಿಸಿದವರು : ಆ ನಮ್ಮ ಮಾತೆ ; ಪ್ರಕೃತಿದೇವಿ.

-ಮನೆ ಆಲ್ಬಮ್ ನಿಂದ

ಹೋರ್ಸ್ಲಿಯ ಒಂದು ಈಜುಕೊಳ.

ಹೋರ್ಸ್ಲಿಯಲ್ಲಿ ಈಜುಕೊಳದ ವ್ಯವಸ್ಥೆ ಇದೆ.

ಇದರ ಅವಕಾಶಪಡೆದು ನಿಮ್ಮ ಅಲ್ಲಿನ ಇರುವಿಕೆಯನ್ನು ಸಂತೋಷದಾಯಕವಾಗಿ ಮಾಡಿಕೊಳ್ಳಿ.

ಆಲ್ಬಮ್

ಮುಲ್ಶಿ ಡ್ಯಾಮ್ ಬಳಿ.

"ಮುಲ್ಶಿ ಡ್ಯಾಮ್, " ಪುಣೆಯ ಬಳಿ ಇದೆ. ಇದೊಂದು ಪ್ರವಾಸಿ ತಾಣ. ವಾರಾಂತ್ಯಗಳಲ್ಲಿ ಹವ-ಬದಲಾವಣೆಗೆ ಇದು ಉತ್ತಮ ಸ್ಥಳ.

-ಆಲ್ಬಂ

ಸಮಯ ಸಂಜೆ 8:45 - ಮಿಷೆಲ್ ಸ್ಟಟ್ ಎಂಬ ಚಿಕ್ಕ ಊರಿನ ಮನಮೋಹಕ ನೋಟ..

ಇಲ್ಲಿ ಕಾಣುತ್ತಿರುವುದು ಜರ್ಮನಿಯ ಮಿಷೆಲ್ ಸ್ಟಟ್ ಎಂಬ ನಾನಿರುವ ಚಿಕ್ಕ ಊರಿನ ಮನಮೋಹಕ ನೋಟ..
ಇದನ್ನು ನನ್ನ ಎತ್ತರದ ಮನೆಯ ಕಿಟಕಿಯಿಂದ ತೆಗೆದದ್ದು. ಇದನ್ನು ತೆಗೆದಾಗ ಸಾಯಂಕಾಲ 8:45.
ಬೇಸಿಗೆಯಲ್ಲಿ ಇಲ್ಲಿ ಸಂಜೆ 9:00 ಆದರು ನೇಸರ ತನ್ನ ಬೆಳಕನ್ನು ಚೆಲ್ಲುತ್ತಿರುತ್ತಾನೆ.
ದೂರದಲಿ ಕಾಣುತ್ತಿರುವುದು ಓಡೆನ್ವಾಲ್ಡ ಎನ್ನುವ ಚಿಕ್ಕ ಬೆಟ್ಟ.

ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಹೂವುಗಳೊಡನೆ ಮುದ್ದು ಮಕ್ಕಳು!!

ನೆದರ್ ಲ್ಯಾಂಡನ ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಹೂವುಗಳೊಡನೆ ಈ ಮಕ್ಕಳ ನಗುಮೊಗ ನನ್ನನ್ನು ಮಂತ್ರ ಮುಗ್ಧಗೊಳಿಸಿತು!!

ಹಾಂಕಾಂಗಿನ ಹೋಟೆಲೊಂದರ ಒಳಭಾಗದ ದೃ‍ಷ್ಯ !

ಹಾಂಕಾಂಗ್ ನಿಜಕ್ಕೂ ಪೌರಾತ್ಯ ದೇಶಗಳ ಒಂದು ಅತ್ಯಂತ ಸುಸಜ್ಜಿತ ಮತ್ತು ಎದೆ ಎತ್ತಿ ಮುಂದುವರೆಯಲು ತವಕಿಸುತ್ತಿರುವ ಯುವದೇಶ. ಹಳೆಯ ಸಂಸ್ಕೃತಿ ಮತ್ತು ಹೊಸ ತಂತ್ರಜ್ಞಾನಗಳ ಭವ್ಯ ಸಂಗಮವನ್ನು ನಾವು ಇಲ್ಲಿನ ಹಲವು ತಾಣಗಳಲ್ಲಿ ಕಾಣಬಹುದು.

-ನಮ್ಮ ಫ್ಯಾಮಿಲಿ ಫೋಟೋ ಆಲ್ಬಮ್ ನಿಂದ ಕೊಡಲಾಗಿದೆ. [ ಮೇಲಿನಿಂದ ಕೆಳಗೆ ಕಾಣುವ ದೃಷ್ಯ]

ಈ ತರಹ ಹೋಟೆಲ್‍ನಲ್ಲಿ ತಿಂಡಿ ತಿನ್ನುವುದು ರೋಮಾಂಚಕ

ಬೆಂಗಳೂರು-ಮೈಸೂರು ದಾರಿಯಲ್ಲಿ ನಮ್ಮ ದೊಡ್ಡ ಗುಂಪಿಗೆ ಹೋಟೆಲಿನವರು ಈ ಪಡಸಾಲೆಯಲ್ಲಿ ಜಾಗ ಕೊಟ್ಟರು. ಅದೂ ಒಂದು ಅದೃಷ್ಟ!

ಸೀಲ್ ಗಳೋ ಸೀಲ್ ಗಳು !

ಸಾನ್ ಫ್ರಾನ್ಸಿಸ್ಕೊ ನಗರದ ಬಂದರಿನ, ಕಡಲಿನ ತೀರದಲ್ಲಿ ಸೀಲ್ ಗಳೋ ಸೀಲ್ ಗಳು ! ಅಲ್ಲಿನ ನಗರ ಪರ್ಯಟಕರಿಗೆ ಇದು ಮೊಜಿನ ನೋಟ.

-ನಮ್ಮ ಮನೆಯ ’ಫೋಟೋ ಆಲ್ಬಮ್” ನಿಂದ

ಈ ಗೇಟಿನ ಒಳಗೆ ಹೋಗಿ. ರಾಯರಮಠ ಸಿಗುತ್ತೆ !

ರಾಯರ ಮಠ - ಮಂತ್ರಾಲಯದಲ್ಲಿ. ಒಮ್ಮೆ ಆ ಪ್ರಶಾಂತ ವಾತಾವರಣದೆಡೆಗೆ ಹೊದರೆ ಸಾಕು, ಒಂದು ಹೊಸ ಲೋಕಕ್ಕೇ ಹೋದ ಅನುಭವವಾಗುತ್ತದೆ. ದಿನವಿಡೀ ಜರುಗುವ ಮಂತ್ರಘೋಷಗಳು, ಪೂಜೆಗಳು , ರಥೋತ್ಸವ, ಸತ್ಸಂಗ, ಭಕ್ತರ ಉರುಳುಸೇವೆ, ಕ್ಯೂನಲ್ಲಿ ರಾಯರ ವೃಂದಾವನದ ದರ್ಶನ, ಕೊನೆಗೆ ಊಟದ ವ್ಯವಸ್ಥೆ. ಅದರ ರುಚಿಯೇ ಬೇರೆ !

ಕೇದಾರದ ದೇವಾಲಯದ ಪ್ರವೇಶ ದ್ವಾರ ಹಿಮಪಾತವಾದಾಗ

ಹಿಮಪಾತವಾದಾಗ ಕೇದಾರೇಶ್ವರ ದೇವಾಲಯದ ಪ್ರವೇಶದ್ವಾರವನ್ನು ಸೆರೆ ಹಿಡಿದಿದ್ದು

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗ. ಸಿಂಹಗಳ ಕೆತ್ತನೆ ಸೊಗಸಾಗಿದೆ .

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಮಂದಿರದ ಮುಂಭಾಗದಲ್ಲಿ ಕೆತ್ತಿ ನಿಲ್ಲಿಸಿರುವ ಎರಡು ಸಿಂಹಗಳು. ಈ ಚಿತ್ರ ನಮ್ಮ ಗೆಳೆಯ ಸುನಿಲರ ಚಿತ್ರಕ್ಕೆ ಸ್ವಲ್ಪ ಅನುಮೋದಕವಾಗಿದೆ. ಸಿಂಹಗಳ ಕೆತ್ತನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇಲ್ಲಿ ನಾವು ಕಾಣಬಹುದು. ಮೇಲಾಗಿ ಇವುಗಳು ಇತ್ತೀಚೆಗೆ ಕಟ್ಟಲಾದ ದೇವಸ್ಥಾನಗಳು.

ನೀರಿನಲ್ಲಿ ಬಂಗಾರೇಶ್ವರ

ಶಿರಸಿ - ಬನವಾಸಿ ದಾರಿಯಲ್ಲಿರುವ ಪುಟ್ಟ ಊರು ಗುಡ್ನಾಪುರ. ಇಲ್ಲಿನ ವಿಶಾಲ ಕೆರೆಯ ತಟದಲ್ಲಿದೆ ಶ್ರೀ ಬಂಗಾರೇಶ್ವರ (ಭಗವಾನ್ ಶಿವ) ದೇವಸ್ಥಾನ. ನಾನು ೨೦೦೫ ಅಗಸ್ಟ್ ನಲ್ಲಿ ಭೇಟಿ ನೀಡಿದಾಗ ಶಿವಲಿಂಗ ಮತ್ತು ನಂದಿ ಎರಡೂ ಗುಡ್ನಾಪುರ ಕೆರೆಯ ನೀರಿನಲ್ಲಿ ಮುಳುಗಿದ್ದವು.

ಶೃಂಗೇರಿ ಬಳಿಯ ನದಿ, ತುಂಗೆಯ ಮೇಲಿನ ಪುಟಾಣಿ ಸೇತುವೆ.

ಶೃಂಗೇರಿಯ ಬಳಿ , ಒಂದು ಪುಟ್ಟ ಸೇತುವೆಯ ಸುಂದರ ದೃಷ್ಯ.

-ನಮ್ಮ ಮನೆಯ "ಖಾಸಗಿ ಫೋಟೋ ಆಲ್ಬಮ್ " ನಿಂದ

ನಮ್ಮ ದೊಡ್ಡಪ್ಪನ ಮನೆ

ಮಲೆನಾಡಿನ ಮಧ್ಯದಲ್ಲಿರುವ ನಾಗರಕೊಡಿಗೆಯಲ್ಲಿರುವ ನಮ್ಮ ದೊಡ್ಡಪ್ಪನ ಮನೆ, ಪಕ್ಕದ ಗುಡ್ಡದ ಮೇಲಿಂದ ತೆಗೆದ ಚಿತ್ರ.

ನನ್ನ ಮಲೆನಾಡು

ಇದು ನಮ್ಮೂರಿನ (ಹೊಸನಗರದ ರಾಮಚಂದ್ರಾಪುರದ ಮಠದಿಂದ ಮುಂದೆ ಸಾಗಿದರೆ ಸಿಗುವ ಊರು - ನಾಗರಕೊಡಿಗೆ) ಗುಡ್ಡದ ಮೇಲೀರಿದರೆ, ಆಚೆ ಬದಿಯ ನೋಟ.

ತಾಳೆ ಮರಗಳ ಹಿಂದೆ ನಿಶೆಯ ಕಪ್ಪು ಛಾಯೆಗಳ ನಡುವೆ - ಚಂದ್ರ (!)- ಅಮೆರಿಕೆಯ ಲಾಸ್ ಎಂಜಲೀಸ್ ಬಳಿಯ ಒಂದು ದೃಷ್ಯ.

*ತಾಳೆಯ ಮರ- ಅದರ ಹಿಂದೆ ನಿಶಾವೃತ ಆಗಸ. ಮತ್ತೆ ಬೆಳಕು-ಕತ್ತಲ ಆ ವಿಸ್ಮಯ ಜಗತ್ತು !

*ನಮ್ಮಮನೆಯ ಖಾಸಗಿ ಫೋಟೊ ಆಲ್ಬಮ್ ನಿಂದ.

’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ.

ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಇರುವ ಬಯಲು ಹಾಗೂ ದಟ್ಟ ಕಾಡಿನ ಅನುಭವ ಪ್ರವಾಸಿಗರಿಗೆ, " ಹೋರ್ಸ್ಲಿ" ಎಂಬ ಹಿಲ್ ರೆಸಾರ್ಟ್ಸ್ ಜಾಗದಲ್ಲಿ ಸಿಗುತ್ತದೆ. ಇದನ್ನು ಮುಟ್ಟಲು ನನ್ನ ಮಗ ಮತ್ತು ಅವನ ಗೆಳೆಯ ಬೈಕ್ ತೆಗೆದುಕೊಂಡು ಹೋಗಿದ್ದರಂತೆ. ಸುಮಾರು ೧೫೦ ಕಿ.ಮೀ ಇರಬಹುದೆಂದು ಅವನ ಅಂದಾಜು.

ಮುಂಬೈಬಳಿಯ ಅರಬ್ಬೀ ಕಡಲಿನ ಮೇಲೆ ಒಂದು ಸುತ್ತು !

ಮುಂಬೈನ ಅರಬ್ಬೀ ಸಮುದ್ರದ ಮೇಲೆ "ಎಲಿಫೆಂಟಾ "ಕ್ಕೆ ಹೋಗುವ ದಾರಿಯಲ್ಲಿ ಕಡಲಿನ ಮೇಲೆ ದೋಣಿಯಲ್ಲಿ ಕುಳಿತು ಕ್ಯಾಮರ ಕ್ಲಿಕ್ಕಿಸಿದಾಗ, ಕಾಣುವ ನೋಟ "ಹಾಂಕಾಂಗ್ " ಗೆ ಹೋಲಿಕೆಯಾಗುವಂತಹದು.

ಎತ್ತಿನಭುಜ

ಮುಡಿಗೆರೆ ಸಮೀಪದ ಎತ್ತಿನಭುಜ ಶಿಖರ. ಮುಡಿಗೆರೆಯಿಂದ ಭೈರಾಪುರಕ್ಕೆ ತೆರಳಿದರೆ ಶೃಂಗಕ್ಕೆ ೬೦ ನಿಮಿಷದ ದಾರಿ. ದಕ್ಷಿಣ ಕನ್ನಡದ ಶಿಶಿಲದಿಂದ ಚಾರಣಗೈದರೆ ೨೫೦ ನಿಮಿಷಗಳ ಹಾದಿ. ನಾವು ೨೦೦೫ ಮೇ ತಿಂಗಳಲ್ಲಿ ಶಿಶಿಲದಿಂದ ಚಾರಣಗೈದಿದ್ದೆವು.

ಮುಂಬೈ ನ ಜುಹುಬೀಚಿನಲ್ಲಿ ಒಂದು ಸಾಯಂಕಾಲ.

ಮುಂಬೈ ನಲ್ಲಿ ಜುಹುಬೀಚ್ ಉತ್ತಮ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಇದನ್ನು ಬಿಟ್ಟರೆ ಗೊರೈ ಬೀಚ್ ಸ್ವಲ್ಪ ಉತ್ತಮ. ದಾದರ್ ಬೀಚ್, ಚೌಪಾತಿ ಬೀಚ್ ಗಳು ಪ್ರವಾಸಿಗಳಿಗೆ ಮುದನೀಡುವಲ್ಲಿ ಅಸಮರ್ಥವಾಗಿವೆ.

ಜೋಗದ ಸಿರಿಯ ಕೆಳಗೆ ಹೋದಾಗ...

ಜೋಗದ ನೀರಿನ ಹರಿವು ಕಡಿಮೆ ಇದ್ದಾಗ ಅದರ ತಳಕ್ಕೆ ಹೋಗುವುದು ಅಪಾಯಕರವಲ್ಲ ಅನ್ಕೊಂಡು ಕೆಳಗೆ ಹೋದಾಗ ಕ್ಲಿಕ್ಕಿಸಿದ್ದು. ಕೆಳಗೆ ಹೋಗುತ್ತಿದ್ದಂತೆ ಜೋಗದ ದೈತ್ಯ ಎತ್ತರದ ಮುಂದೆ ನಮ್ಮ(ನನ್ನ) ಸಣ್ಣತನದ ಅರಿವಾಗ್ತಾ ಹೋಗುವುದು ಸಹಜ.

ಶಿವಸಮುದ್ರಮ್ ಬಳಿಯ ಪ್ರಪಾತದಲ್ಲಿ ಭೋರ್ಗರೆಯುತ್ತಾ ಧುಮುಕುವ, ಕಾವೇರಿ ನದಿಯ ವಿಹಂಗಮ ನೋಟ !

*
ಶಿವಸಮುದ್ರದ ಬಳಿ ಅತಿಎತ್ತರದ ಘಟ್ಟದಿಂದ, ಅತ್ಯಂತ ಆಳವಾದ ಕಂದರದ ಕೆಳಗೆ ಭೋರ್ಗರೆಯುತ್ತಾ, ಧುಮ್ಮಿಕ್ಕುವ ಕಾವೇರಿ ನದಿಯ ವಿಹಂಗಮ ನೋಟ, ಎಲ್ಲರಿಗೂ ಮುದನೀಡುತ್ತದೆ. ಅದರಲ್ಲಿ ನೀರಿನ ನೊರೆ, ಬಿಳುಪಾಗಿದ್ದು ಸ್ಪಟಿಕದಂತೆ, ಹಾಲಿನ ನೊರೆಯಂತೆ, ಮಲ್ಲಿಗೆಯ ಹೂವಿನಂತೆ ಕಾಣುತ್ತದೆ. ನೋಡಲು ಸೊಗಸಾದ ದೃಷ್ಯ !

ಹೊಗ್ಗೇನಕಲ್ ಬಳಿಯ ನಿಸರ್ಗದ ರಮಣೀಯ ದೃಶ್ಯ. ಕಾಡಿನ ಕೆರೆಯಲ್ಲಿ ಕುತ್ತಿಗೆ ಮಟ್ಟದ ಸ್ನಾನ !

*
ಬೆಂಗಳೂರಿನ ಬಳಿಯ ಹೊಗ್ಗೇನಹಳ್ಳಿಯ ಬಳಿ, ನಿಸರ್ಗದ ರಮ್ಯ ವಾತಾವರಣದಲ್ಲಿ ಅಲ್ಲಿನ ಕಾಡಿನ ಕೆರೆಯಲ್ಲಿ ಕುತ್ತಿಗೆ ಮಟ್ಟದ ಸ್ನಾನ- ಅದೇನು ಹಿತ ಕೊಡುತ್ತದೆ ?

ಅನುಭವಿಸಿದವರಿಗೆ ಮಾತ್ರ ಗೊತ್ತು.

ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಭೇಟಿಕೊಟ್ಟಾಗ ಆಗುವ ಆನಂದ ಅವರ್ಣನೀಯ ; ಅದರಲ್ಲೂ ಸಮಾನ ವಯಸ್ಸಿನ, ಸಮಾನ ಮನೋಧರ್ಮದ ಓರಿಗೆಯವರಿದ್ದರಂತೂ ಸರಿಹೋಯಿತು.

ಮುಂಬೈ ಬಳಿಯ ಮ್ಯಾಥೆರಾನ್ ತಂಪು -ಗಿರಿಧಾಮದ ಮಿನಿ ಟ್ರೈನ್, ಮತ್ತೆ ಓಡಲು ಪ್ರಾರಂಭಿಸಿದೆ !

ಮ್ಯಾಥೆರಾನ್ ಗಿರಿಧಾಮವನ್ನು ೧೮೫೦ ರಲ್ಲಿ ಕಂಡುಹಿಡಿದವನು, ಒಬ್ಬ ಬ್ರಿಟಿಶ್ ಅಧಿಕಾರಿ. ಥಾನೆಯ ಕಲೆಕ್ಟರ್, ಎಚ್. ಪಿ. ಮ್ಯಲೆಟ್. ಮುಂದೆ ೧೮೫೫ ರಲ್ಲಿ ಬಾಂಬೆ ಗವರ್ನರ್ ಲಾರ್ಡ್ ಎಲ್ಫಿನ್ ಸ್ಟನ್, ಬೆಟ್ಟಿಮಾಡಿದಾಗ ಅದರ ನೈಸರ್ಗಿಕ ಸೌಂದರ್ಯಕ್ಕೆ ಮನಸೋತರು. ಅವರಿಗೆ ಅಲ್ಲಿ ಒಂದು ತಂಪು ಗಿರಿ ಧಾಮವನ್ನು ಏರ್ಪಡಿಸುವ ಆಸೆಯಾಯಿತು.

ಹೃಷಿಕೇಶದಲ್ಲಿ ..... (ರಾಮಜುಲಾ)

ಹೃಷಿಕೇಶದ ರಾಮಜುಲಾದಲ್ಲಿ ಈ ನೋಟ.. ಕ್ಯಾಮರಾಕ್ಕೆ ಸಕತ್ತಾಗಿ ಪೋಸ್ ಕೊಡುವ ರಾಮಸೇವಕರು!! ಅಲ್ಲಿನ ಸೇತುವೆಯ ಮೇಲೆ ಹೋಗಿ ಬರುವ ಜನರೊಂದಿಗೂ ಭಾವಚಿತ್ರಕ್ಕೆ ಸಿದ್ಧವಾಗಿರುತ್ತವೆ.

ಧುಮ್ಮಿಕ್ಕುವ ಮಾಗೋಡು

ಮಾಗೋಡು ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ದಿ೦ದ ~25 km ದೂರದಲ್ಲಿದೆ. ಎರಡು ಹ೦ತದಲ್ಲಿ ಧುಮುಕುವ ಬೇಡ್ತಿ ನದಿ ಇಲ್ಲಿ ಮನಮೋಹಕ ಜಲಪಾತವನ್ನು ಸೃಸ್ಟಿಸಿದೆ.

ದುರ್ಗದ ಸೂರ್ಯಾಸ್ತಮಾನ

ಸಹಜವಾಗಿ ಎಲ್ಲರಿಗೂ ಸಮುದ್ರದಲ್ಲಿ ಮುಳುಗುವ ಸೂರ್ಯನ ನೋಡುವ ಕುತೂಹಲ ಮತ್ತು ಆಸಕ್ತಿ, ಆದರೆ ಚಿತ್ರದುರ್ಗದ ಕಲ್ಲು-ಕೋಟೆಯ ಹಿಂದೆ ಜಾರಿಹೋಗುವ ಸೂರ್ಯ ಆಕಸ್ಮಿಕವಾಗಿ ನನ್ನ (ಕ್ಯಾಮೆರಾ) ಕಣ್ಣಿಗೆ ಕಂಡದ್ದು ಹೀಗೆ. ಆನಂದಿಸಿSmile......