ವಾಟರ್ ಕಲರ್ ನ ಕ್ವಿಲ್ಟ್ಸ್ ಗಳು, ನೋಡಲು ಬಲು-ಸೊಗಸು !

ಇದರ ವಿನ್ಯಾಸಕರು, ಶ್ರೀಮತಿ. ಡಾ. ಮೀರಾರವರು. ಇವರು ವೈವಿಧ್ಯಮಯ ಆಸಕ್ತಿಗಳನ್ನು ಬೆಳೆಸಿಕೊಂಡವರು. ಅವರ ಹೆಣ್ಣುಮಕ್ಕಳಿಗೆ, ಭರತನಾಟ್ಯದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ, ತರಪೇತು ಮಾಡಿದ್ದಾರೆ. ಅನೇಕರು ತಮ್ಮ ಮಕ್ಕಳ "ಅರಂಗೆಟ್ರಂ", ನ ಆರಂಭದಲ್ಲಿ ಬಂದು, ಮೀರಾರವರ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಮೀರಾ ಏನುಮಾಡಿದರೂ, ಅಚ್ಚುಕಟ್ಟಾಗಿರಬೇಕು. ಹಳೆಯ ಸೀರೆ, ದುಪ್ಪಟ್ಟ, ಮುಂತಾಡ ಉಡುಗೆ-ತೊಡುಗೆಗಳನ್ನು ಉಪಯೋಗಿಸಿಕೊಂಡೇ ಸೊಗಸಾದ ಕ್ವಿಲ್ಟ್ಸ್ ಗಳನ್ನು ಮನೆಯಲ್ಲಿ, ಹೊಲಿದು ತಯಾರಿಸಿದ್ದಾರೆ. ಇದನ್ನು ಚಳಿಗಾಲದಲ್ಲಿ " ರಝಾಕ್ " ತರಹ ಹೊದ್ದು ಮಲಗಬಹುದು ; ಇಲ್ಲವೆ ಗೋಡೆಗೆ ಅಲಂಕಾರವಾಗಿ ನೇತುಹಾಕಲೂ ಬಹುದು. ’ಕಸದಿಂದ ರಸಮಾಡುವುದು ”, ನನ್ನ ಆಸೆ, ಎನ್ನುತ್ತಾರೆ ಅವರು. ವೃತ್ತಿಯಲ್ಲಿ ಅವರು ಬಯೋಫಿಸಿಕ್ಸ್ ನಲ್ಲಿ ಡಾಕ್ಟರೇಟ್ ಮಾಡಿ, "ಮಿಸ್ಸೌರಿ ವಿಶ್ವವಿದ್ಯಾಲಯ", ದಲ್ಲಿ ಪ್ರೊಫೆಸರ್ ಆಗಿ ಕೆಲಸಮಾಡುತ್ತಿರುವ ಮೀರಾ, ’ಸಮಯವನ್ನು ಗಳಿಸಿದರೆ ಮಾತ್ರ ಇವೆಲ್ಲಾ ಮಾಡಲು ಸಾಧ್ಯ,’ ಎನ್ನುತ್ತಾರೆ. ’ ಅತ್ಯುತ್ತಮ ಒಳ್ಳೆಯ ಪ್ರಾಧ್ಯಾಪಕಿ,’ ಎನ್ನುವ ಪ್ರಶಸ್ತಿ ಅವರಿಗೆ ಸುಮಾರು ಬಾರಿ, ಬಂದಿದೆ. ಪತಿ, ಡಾ. ಚಂದ್ರಶೇಖರ್ ಜೊತೆ, ಮನೆಯಲ್ಲೂ ವಿಜ್ಞಾನದ ಬಗ್ಗೆ ಮಾತುಕತೆಗಳನ್ನು ಆಡುವುದಲ್ಲದೆ ಅವರ ವೈಜ್ಞಾನಿಕ ಕೆಲಸಗಳನ್ನೂ ಹಂಚಿಕೊಂಡು, ದಿನನಿತ್ಯದ ಕೆಲಸಗಳನ್ನೂ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿಗೆ ಮಾಡುವ ಕೆಲಸದಲ್ಲಿ ಸಿಗುವ ಸಮಾಧಾನ, ಸಂತಸವನ್ನು ಅಳತೆಮಾಡಲು, ಸಾಧ್ಯವಿಲ್ಲ- ಇದು ಮೀರಾರವರ ’ಜೀವನೋತ್ಸಾಹ "ದ ಗುಟ್ಟು !