" ಶ್ರೀಕೃಷ್ಣ ಬಟಾಟವಡ ಅಂಗಡಿ ", ಮುಂಬೈ ನ ದಾದರ್ (ಪ) ನಲ್ಲಿ !

ಮುಂಬೈನ ದಾದರ್ ಪಶ್ಚಿಮಕ್ಕೆ ಬಂದರೆ ಸಾಕು, ರೈಲ್ವೆ ನಿಲ್ದಾಣದ ಬಳಿಯೇ ನಿಂತ್ಕೊಂಡು , ಬಟಾಟಾ ವಡೆಯನ್ನು ಗಬ-ಗಬನೆ ಮೆಲ್ಲುತ್ತಿರುವ ದೃಷ್ಯ, ನಿಮ್ಮ ಕಣ್ಣಿಗೆ ಬೀಳಲೇ ಬೇಕು. ಅದೆಷ್ಟು ರುಚಿ, ಈ ಬಟಾಟಾ ವಡ ! ಆದ್ರೆ, ಆರಿದ್ಮೇಲೆ ಇದ್ರ ರುಚಿನೇ ಬೇರೆ. ಯಾರ್ಗು ಹಿಡ್ಸಲ್ಲ. ಮೊದಲು ಅಂದ್ರೆ, ಸುಮಾರು, ೧೦-೧೨-೧೫ ವರ್ಷಗಳಹಿಂದೆ, ಇದ್ದಿದ್ದ್ರ ತರ್ಹನೇ ಈಗ್ಲು ಆದ್ರ್ರುಚಿ ಇದೆ. ತಿಂದ್ನೋಡಿ. ನನಗೆ ನೆನೆಪಿರೊಹಾಗೆ, ಅದರ್ ಬೆಲೆ ೭೫ ಪೈಸೆ ಇತ್ತು- ನಾನ್ ತಿನ್ನಕ್ಕೆ ಶುರುಮಾಡ್ದಾಗ ! ಈಗ ಒಂದ್ ವಡಕ್ಕೆ ೭ ರೂ. ೫೦ ಪೈಸೆ.

ಜನಗೊಣ್ಗಾಡ್ಕೊಂಡೆ ಅದನ್ಮೆಲ್ತಾರೆ ನೋಡಿ, ರುಚಿ ಹಾಗಿದೆ, ಏನ್ಮಾಡಕ್ಕಾಗುತ್ತೆ ಹೇಳಿ ? ನೀವು ತಿಂದು ನಮ್ಗೂ ಎರ್ಡೊಡೆ ತನ್ನಿ. ಅಯ್ಯೊ ಅಷ್ಟು ಸುಲ್ಬ ಅಲ್ಲ. ಅಲ್ಲೂ ನುಗ್ಗಾಟ. ಎರ್ಡು, ಮೂರ್ನೆ ಬಾರಿ ಕೂಘೇಳ್ದ ಮೇಲೆ ಅದು ನಿಮಗೆ ಲಭ್ಯ ! ಹೊರ್ಡಿ ಬೇಗ, ಸ್ವಲ್ಪ ಥಂಡಿ ಕಾಲ. ಈಗ ರುಚಿ ಬೊಂಬಾಟಾಗಿರುತ್ತೆ. ಥಂಡಿ ಅಂದ್ರೆ, ಬೊಂಬಾಯ್ನಲ್ಲಿ ಫ್ಯಾನ್ ಇಲ್ದೆ ಸ್ವಲ್ಪಹೊತ್ತು ಇರ್ಬೋದು ಅಂತ ಅರ್ಥ, ಇದು ನಾವ್ಹೇಳೋದು. ನಿಮ್ಘೇಗೊ ಗೊತ್ತಿಲ್ಲಪ್ಪ. ಈಗ ಅಂದರೆ, ಡಿಸೆಂಬರ್ ತಿಂಗಳಿನಲ್ಲಿ ಬಟಾಟವಡದ ಬೆಲೆ, ೮ ರೂಪಾಯಿಗಳಾಗಿದೆ !

ಸನ್ ೨೦೧೨ ರ ಜನವರಿ ೨೪ ರಂದು ನಾನೂ ಅಲ್ಲಿಗೆ ಹೋದಾಗ 'ಬಟಾಟಾವಡದ ಬೆಲೆ', ೧೦ ರುಪಾಯಿಗಳು !