ಚಿತ್ರಾವತಿನದಿಗೆ ಅಡ್ಡಲಾಗಿ ಕಟ್ಟಲಾದ, ಪರಗೋಡು ಜಲಾಶಯ- ಈಗಿನ ಪ್ರಮುಖ ಆಕರ್ಶಣೆಗಳಲ್ಲೊಂದು !

ನಂದಿಬೆಟ್ಟದಲ್ಲಿ ಹುಟ್ಟಿ, ಚಿಕ್ಕಬಳ್ಳಾಪುರದ ಮುಖಾಂತರ ಆಂಧ್ರದಕಡೆಗೆ ಹರಿಯುವ "ಚಿತ್ರಾವತಿನದಿ", ಮಳೆಗಾಲಬಿಟ್ಟರೆ ಬೆರೆಕಾಲಗಳಲ್ಲಿ ಮರಳುತುಂಬಿದ ಪ್ರದೇಶ. ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಎಂಬಲ್ಲಿ ತಲೆಯೆತ್ತಿರುವ ಈ ಜಲಾಶಯ, ೧೬೫ ಎಕರೆ ಭೂಮಿಗೆ ನೀರನ್ನು ಒದಗಿಸುತ್ತಿದೆ. ಕುಡಿಯುವ ನೀರಿನ ಸಹಿತ. ಬೆಂಗಳೂರಿನಿಂದ ೧೦೦ ಕಿ.ಮಿ. ದೂರದಲ್ಲಿ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಣೆಕಟ್ಟನ್ನು ನೋಡಿ ಆನಂದಿಸಿ. ಅಣೆಕಟ್ಟಿನ ಅಕ್ಕ-ಪಕ್ಕಗಳಲ್ಲಿ ಮೈನವಿರೇಳುವ ಹಸಿರುತೋಟಗಳಿವೆ.

ಆದರೆ, ಒಂದು ನಾಮ ಫಲಕವೂ ಇಲ್ಲದ ಇದು, ಇನ್ನೂ ಅಜ್ಞಾತವಾಗಿ ಉಳಿಯಬೇಕೆ ?

ಕರ್ನಾಟಕ ಸರ್ಕಾರ ಸ್ವಲ್ಪ ಎಚ್ಚಿತ್ತುಕೊಂಡರೆ ಪ್ರವಾಸೋದ್ಯಮದಿಂದ ನಮಗೇ ಲಾಭ.

ಏನಂತೀರಿ ?