ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.

ಸೋಮವಾರ, ನವೆಂಬರ್ ೧೨, ೨೦೦೭, ಕರ್ನಾಟಕದ ಚರಿತ್ರೆಯಲ್ಲಿ, ಹಾಗೂ ದಕ್ಷಿಣಭಾರತದಲ್ಲಿ ಮೊಟ್ಟಮೊದಲ ಬಿ. ಜೆ.ಪಿ, ಹಾಗೂ ಜೆ.ಡಿ.ಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿರುವುದು, ಒಂದು ಹೊಸವ್ಯವಸ್ಥೆಗೆ ನಾಂದಿಯಾಗಿದೆ. ಜೆ. ಡಿ.ಎಸ್, ಜೊತೆ ಮೈತ್ರಿಯುತ ಸರ್ಕಾರದ ಎರಡನೆಯ ಹಂತ ಪ್ರಾರಂಭವಾಗಿದೆ. ಸನ್ಮಾನ್ಯ ಶ್ರೀ, ಯಡಿಯೂರಪ್ಪನವರು, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಶ್ರೀ. ರಾಮೆಶ್ವರ್ ಠಾಕೂರ್ ರವರ ಸಮ್ಮುಖದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿ, ಓದಿ ಹೇಳಿದರು.

ಇದುವರೆಗೂ ಇದ್ದ ಮನುಷ್ಯ ನಿರ್ಮಿತ ಗೊಂದಲದ ರಾಜಕೀಯ ಚಟುವಟಿಕೆಗಳಿಗೆ ತಾತ್ಕಾಲಿಕ ತೆರೆ ಬಿದ್ದಿದೆ. ಇದನ್ನು ಇನ್ನೂ ಚೆನ್ನಾಗಿ, ಯಾವ ವಿವಾದಕ್ಕೂ ಎಡೆಯಿಲ್ಲದೆ ಬಗೆಹರಿಸಬಹುದಾಗಿತ್ತು. ಆದರೆ, ಅಧಿಕಾರ ಲಾಲಸೆ, ಕೇವಲ ತಮ್ಮ ಮಕ್ಕಳ ಹಿತದೃಷ್ಟಿಯನ್ನೇ ಮಾನದಂಡವಾಗಿ ಯೋಚಿಸಿ, ಮಾಡಿದ ಅನಗತ್ಯ ರಾಜಕೀಯವನ್ನು ದೇಶದ ಜನತೆ ಗಮನಿಸಿದೆ. ಒಬ್ಬ ಆದರ್ಶ ಮುಖ್ಯಮಂತ್ರಿ, ರಾಜ್ಯದ ಎಲ್ಲಾ ಜನರ (ಮಕ್ಕಳ) ಯೋಗಕ್ಷೇಮವನ್ನು ಗಮದಲ್ಲಿಟ್ಟುಕೊಂಡು ಕೆಲಸ ಮಾಡುವುದು ಅತಿ ಮುಖ್ಯ. ಇಂದಿನ ಓಟುಗಾರರಿಗೆ ಹಿತವಚನದ ಬೋಧನೆಗಳ ಅಗತ್ಯವಿಲ್ಲ. ಸಾಕಷ್ಟು ತಿಳುವಳಿಕೆಯನ್ನು ಈಗಾಗಲೇ ಅವರು ಸಂಪಾದಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯಕ್ಕೆ ಒಂದು ಸಧೃಢ ಸರ್ಕಾರ ಬೇಕಾಗಿದೆ.

ಮಾಜೀಪ್ರಧಾನಿ, ದೇವೇಗೌಡರ, ಕೇವಲ ಶಾಸಕರ ಓಟಿನ ಬೆಂಬಲ ಹೆಚ್ಚುದಿನ ಕೆಲಸಮಾಡಲಾರದು. ಈಗಿನ ಜನತೆ ನಿಜವಾದ ರಾಜ್ಯದ ಹಿತಾಸಕ್ತಿಗಳನ್ನು ಗಮನಿಸಿ ಕೆಲಸಮಾಡುವ ಧುರೀಣರನ್ನು ಗುರುತಿಸುವುದರಲ್ಲಿ ಪುನಃ ತಪ್ಪುಮಾಡುವುದಿಲ್ಲ. ಮತ್ತೊಮ್ಮೆ ಅಗ್ನಿಪರೀಕ್ಷೆ. ನಡೆಯಲಿದೆ. ರಾಜ್ಯದ ಜನರ, ಹಿತಾಸಕ್ತಿಗಳು, ಕೇವಲ ಮಾತಿನಲ್ಲಿಯೇ ಪರಿಸಮಾಪ್ತಿಯಾಗುವುವೆ ? ಅಥವಾ ಮುಖಂಡರ ಮಾತಿನಲ್ಲಿ ಏನಾದರು ಹುರುಳಿದೆಯೋ ? ಕಾಲವೇ ತಿಳಿಸಬಲ್ಲದು !

ಒಂದು ವಿಷಯ :

ಮಾನ್ಯ ಮುಖ್ಯಮಂತ್ರಿ, ಶ್ರೀ. ಯಡಿಯೂರಪ್ಪನವರು, ತಮ್ಮ ಹೆಸರನ್ನು ಸರಿಯಾಗಿ ಹೇಗೆ ಬರೆಯಬೇಕು ಎನ್ನುವಬಗ್ಗೆ ಪತ್ರಿಕಾಕರ್ತರು ಕೇಳಿದಾಗ, ಕೊಟ್ಟ ಸ್ಪಷ್ಟತೆ, ಹೀಗಿದೆ. ಕನ್ನಡದಲ್ಲಿ " ಯಡಿಯೂರಪ್ಪ," ಸರಿಯಾಗಿದೆ. ಆದರೆ, ಇಂಗ್ಲೀಷ್ ನಲ್ಲಿ, ಅದು," Yeddiyurappa " ಎಂದಿದೆ. ಒಂದು ’ಡಿ” ಅಕ್ಷರ, ಹೊಸದಾಗಿ ಸೇರಿಸಿದ್ದಾರೆ. ಇದು, ಕೆಲವರಿಗೆ ಅದೃಷ್ಟ ಕೊಡುವುದಂತೆ. ಈಗ ಯಡಿಯೂರಪ್ಪನವರು, ಆದೃಷ್ಟವನ್ನು ನಂಬುತ್ತಿದ್ದಾರೆ !

-ಇದು, ದಟ್ಸ್ ಕನ್ನಡ, ಇ-ಪತ್ರಿಕೆಯ ಸುದ್ದಿ. ನೋಡಿ.
ವೆಂ.
-ಕೃಪೆ : ಸಂಜೆವಾಣಿ ಪತ್ರಿಕೆ.