ಮುನಿಯಪ್ಪ ದೊಗ್ನಾಳು , ರವರ ದಿಪಾವ್ಳಿ ಸಂದೇಶ.

ನಾನು ಯಾರು ಅಂತ ತಿಳ್ಕಳಕ್ಕೆ ಓಗ್ಬ್ಯಾಡಿ. ಒಟ್ಟ್ನಲ್ಲಿ ನಿಮ್ಗೆ ಓಟ್ ಆಕಿದ್ದ ನಾನೊಬ್ಬ ಸತ್ಪ್ರಜೆ, ಅಂತ ಒಪ್ಗಳಿ ಸಾಕು.

ನನ್ಗೆ, ನಿಮ್ಮ್ಗೊಳ ಯಡವಟ್ಟು ವ್ಯವಾರ ಇನ್ನೂ ತಿಳ್ಯಕ್ಕಿಲ್ವೆ ! ಎಲ್ಡ್ ವರ್ಸ ಆದ್ರು ನುವೆ, ನಾವ್ ಕುಂತ್ಗಳದೆಲ್ಲಿ, ಇವನ್ದೊಂದು ಸರ್ತು, ಇನ್ನೊಬ್ನೊಂದು ಸರತ್ತು, ಅಂತವಾ ಎಳ್ಕಂಡೋದ್ರೆ ರಾಜ್ಯ ಮಾಡಾದೆಂದು ? ನಮ್ಮ್ ಜನಗ್ಳಿಗೆ ನ್ಯಾಯ ತೋರ್ಸೊದೆಂದು ?

ಇಚಾರಮಾಡಿ. ಮಾತೆತಿದ್ರೆ, ದಿಲ್ಲಿಗೊಯ್ತಿನಿ, ಅಂದ್ರೆ, ಅದ್ರ ಕರ್ಚು, ವೆಚ್ಚ ಎಂಗ್ಮಾಡ್ತಿರ, ಒಸಿ ಏಳಿಮತ್ತೆ ?

ನಂದ್ ಇಷ್ಟೆ, ಏಳೊದೈತೆ, ಕೆಳ್ಕಳಿ, ಇದ್ಕೆ, ಉತ್ತ್ರ ಕೊಡ್ರಿ ಸಾಕು. ಮುಂದ್ ನಿಮ್ಗೆ ಓಟ್ ಕೊಟ್ಟೇನು ಅಂತಾವ ಎಂಗೇಳ್ಲಿ ? ನೀವೆ ಎಳಿಮತ್ತೆ ?
ಕರ್ನಾಟ್ಕ ಅಂದ್ರೆ ಆ ಅಯ್ಯಾ ಅವ್ರ ನಾಡು, (ಇಸ್ವೇಸ್ವರಯ್ಯಾವೃ) ನ್ಯಾಯ, ನೇಮ, ಪರಂಪ್ರೆಗೆ ಎಸ್ರು ವಾಸಿ ಆಗಿದ್ ಒಡ್ಯರ್ ನಾಡು, ಅಂತ ಇನ್ನು ಏನೇನೊ ಏಳ್ಕಂಡು ಕುಣೀತಿದ್ವಿ, ನಾವ್, ಚಿಕ್ಕೋರಾಗಿದ್ದಾಗ. ಈಗ್ ಏನಾಗೈತೆ ? ಯಾರ್ಯಾರ್ನೊ ಕರ್ಕಂಡ್ ಬಂದು ಪ್ರಸಸ್ತಿ, ಅದು ಇದು, ಅಂತಾವ ಅಣ ಪೋಲ್ ಮಾಡ್ತೀರಲ್ಲ ಮಕ್ಳಾ. ಅದ್ರಿಂದ ಆಗೊ ಉಪ್ಯೊಗನಾದ್ರು ಏನು, ? ಒಸಿ ತಿಳಿ ಏಳ್ರಿ, ಈ ಮುದಿ ಮುನ್ಯಪ್ಪಂಗೆ.

೧. ಒಂದೇನಾದ್ರ ನಿರಾವರಿ ಯೊಜ್ನೆ ಮಾಡಿದ್ರಾ ?

೨. ರೈತ್ರ ಆತ್ಮ್ ಅತ್ಯೆ ಇಚಾರದ್ಲೇನು ನಿರ್ದಾರ ಮಾಡಿದ್ರಿ ?

೩. ಆ ಚಿತ್ರದುರ್ಗದ್ ನಿವಾಸಿಗ್ಳು ಕುಡ್ಯಕ್ ನೀರಿಲ್ದೆ ಲಬ-ಲಬ ಒಡ್ಕಂಡ್ತಾ ಅವ್ರೆ. ಏನುಪಾಯ ಸಲ್ಹೆ ಕೊಟ್ರಿ, ಅ ಜನಕ್ಕೆ ?

೪. ಒಂದು ಇಲ್ಲ. ಕಿತ್ತಾಡದು, ಸರತ್ತಿನ ಮ್ಯಾಲ್ ಸರತ್ತು.

ದಿಪಾವ್ಳಿ ಬಂತು ಒಗ್ತದೆ, ಯಾವ್ದು ನಿಲ್ತೆದೆ ಎಳಿ ?

ಇನ್ನಾದ್ರು ಆ ಸಿವ ನಿಮ್ಗೆ ಬುದ್ದಿ ಕೊಡ್ಲಿ.

ಎಂದಾದ್ರು, ನಮ್ ರೈತನ್ ಜೀವನ್ದಾಗೆ ಬೆಳ್ಕ್ ಮೂಡೀತಾ... ? ? ?