ಎಂಗೊ, ಇಬ್ರು ಸಮ್ವಾಗ್ ಅಂಚ್ಲಂಡ್ ಸುಕ್ವಾಗ್ ಬಾಳ್ರಿ ಮಕ್ಳ ! ಒಗಿ, ಒಗಿ, ಇನ್ನಾದ್ರು ಕಚ್ಚಾಡ್ಬ್ಯಾಡ್ರಿ .

ಭುವ್ನೆಶ್ವರಮ್ಮಾರು : ಎಂಗೊ, ಇಬ್ರು ಸಮ್ವಾಗ್ ಅಂಚ್ಲಂಡ್ ಸುಕ್ವಾಗ್ ಬಾಳ್ರಿ ಮಕ್ಳ ! ಒಗಿ, ಒಗಿ, ಇನ್ನಾದ್ರು ಕಚ್ಚಾಡ್ಬ್ಯಾಡ್ರಿ . ಈ ಚಿತ್ರ ನಂಗ್ಬ್ಯಾಡ. ನಾನೊಲ್ಲೆ. ನಿಂತಾವೆ, ಮಡಗ್ಕಳ್ರಿ. ಒಗಿ....... ಒಂಟೋಗಿ.........

ಯೆ ಮತ್ತು ಕು. ಅಪ್ಪಾರು : ಅಗ್ಲಿ ಅಂಗೆ ಮಾಡ್ತಿವಿ ನನ್ ತಾಯಿ.

ಭುವ್ನೆಶ್ವರಮ್ಮಾರು : ಯಾರ್ ಯಾರ್ ಮಾತೊ ಕೇಳ್ಕಂಡು ಎಲ್ರು ನಗಂಗ್ ಮಾಡ್ಕಂಡ್ರಲ್ ನನ್ ಕಂದ್ಗೊಳ್ರ. ಇದೆ ಕೆಲ್ಸ ಮೊದ್ಲೆ ಅಲ್ವ ಮಾಡ್ಬಿಕಿತ್ತು. ಅದೇನೊ ಅಂತಾರಲ್ಲ. " ಅಟ್ಮ್ಯಾಕೆ ಒಲೆ ಉರೀತು, ಕೆಟ್ಟ್ಮ್ಯಾಕೆ ಬುದ್ದಿ ಬಂತು ಅಂತವ. " ಕಾಲಕ್ತಕ್ಕಂಗೆ ಬದ್ಲಾವಣೆ ಮಾಡ್ಕಬೇಕಪ. ಎಲ್ಲಾ ನನ್ಗೆ ಬೇಕು ಅಂದ್ರೆ ಆದಿತಾ ?

ಭುವ್ನೆಶ್ವರಮ್ಮಾರು : ಕಾಂಗ್ರೆಸ್ ನೊರ್ನ ಇನ್ ಸ್ವಲ್ಪ ನೊಡ್ಕಳ್ರಿ.

ಯೆ ಮತ್ತು ಕು. ಅಪ್ಪಾರು : ಆಗ್ಲಿ ಮಾತಾಯಿ. ನಿನ್ಮ್ಯಾಲೆ ಆಣೆ, ಇನ್ನೆಂದು ಈ ತರ ಉ...........ಕೆಲ್ಸ ಮಾಡಕಿಲ್ಲ.
ಜೈ ಬುನೇಶ್ವರಿ ಅಮ್ಮಾರ್ ಗೆ ಜಯ್ವಾಗ್ಲಿ. ನಮ್ ಒಸ್ ಸ್ನೇಅಕ್ಕೆ, ಜಯವಾಗ್ಲಿ.