ಈ ದಂಪತಿಗಳು-ಮುಂಬೈಕನ್ನಡರಂಗಭೂಮಿಯ ಅಪೂರ್ವ ಕಲಾರತ್ನಗಳು !

ಮಾಹಿಮ್ ನ  ಡಾ. ವಿಶ್ವೇಶ್ವರಯ್ಯ ಹವಾ-ನಿಯಂತ್ರಿತ ಭವ್ಯ-ಸಭಾಗೃಹದಲ್ಲಿ, "ಶ್ರೀಕಲಾನಿಲಯ," ದವರು ನಡೆಸಿಕೊಡುವ ಬಿಡುವಿಲ್ಲದ ಕಾರ್ಯಕ್ರಮಗಳು ೨೦-೧೦-೨೦೦೭ ರಂದು : ೨೦ ರ, ಅಕ್ಟೋಬರ್ ೨೦೦೭ ರಂದು, ಕರ್ನಾಟಕಸಂಘ, ಮಾಹಿಮ್ ನಲ್ಲಿ, ಬಾಲಕೃಷ್ಣ ನಿಡ್ವಣ್ಣಾಯ ರವರ ೭೦ ನೆಯ ಜಯಂತಿಯಂದು, ಕರ್ನಾಟಕಸಂಘದ ಹವಾನಿಯಂತ್ರಿತ, ಡಾ. ವಿಶ್ವೇಶ್ವರಯ್ಯ ಭವ್ಯಸಭಾಗೃಹದಲ್ಲಿ- ಒಂದು ಮರೆಯಲಾರದ "ಸಂಜೆ,"ಯನ್ನು ಏರ್ಪಡಿಸಲಾಗಿದೆ. ಮಧ್ಯಾನ್ಹ, ಈ ಕಾರ್ಯಕ್ರಮಗಳನ್ನು ನಡೆಸಲಾಗುವುದು. ೩ ಗಂಟೆಗೇ ಶುರುವಾಗುವ ಕಾರ್ಯಕ್ರಮಗಳು, ರಾತ್ರಿ ೯ ಗಂಟೆಯವರೆಗೂ ಹಮ್ಮಿಕೊಳ್ಳಲಾಗಿದೆ. ಬಾಲಕೃಷ್ಣರವರ ನಾಟಕರಂಗದ ಬದುಕಿನ ಜೋಳಿಗೆಗೆ, "೬೦ ನಾಟಕಗಳ ಪುಶ್ಪ-ಗುಚ್ಛವೇ " ತುಂಬಿದೆ. ಅವರ ಪತ್ನಿ, ಸತ್ಯಭಾಮಾರವರೂ ಸುಮಾರು ೩೦ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಅವರ ಪತಿಬರೆದು ನಿರ್ದೇಶಿಸಿರುವ ಹಲವಾರು ನಾಟಕಗಳೂ ಸೇರಿವೆ.ಅವರೂ ತಮ್ಮ ಅಭಿನಯದಿಂದ ಮುಂಬೈ ನ ನಾಟಕರಂಗದಲ್ಲಿ ಸಾಕಷ್ಟು ಹೆಸರುಮಾಡಿದ್ದಾರೆ. ಇವರಿಬ್ಬರೂ ಸಾಕಿ ಬೆಳೆಸಿದ, "ಶ್ರೀ ಕಲಾನಿಲಯ", ೨೦-೧೦-೨೦೦೭ ರಂದು ದಿನ-ವಿಡೀ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. * ಆ ದಿನ, ಬಾಲಕೃಷ್ಣ ನಿಡ್ವಣ್ಣಾಯ ನವರು ಬರೆದು ಪ್ರಸ್ತುತ ಪಡಿಸುತ್ತಿರುವ, ೨ ನಾಟಕಗಳನ್ನು ಪ್ರದರ್ಶಿಸಲಾಗುವುದು. * ಅವರ ೮ ನಾಟಕ ಕೃತಿಗಳನ್ನು ಓದುಗರಿಗೆ ಬಿಡುಗಡೆಮಾಡಲಾಗುವುದು. * ಹಾಗೆಯೇ, ಬಾಲಕೃಷ್ಣ ನಿಡ್ವಣ್ಣಾಯ- ಸತ್ಯಭಾಮಾ ದಂಪತಿಗಳ, ನಾಟಕ ಕಲಾಕೃಷಿಯ ಕಿರುಪರಿಚಯವನ್ನೂ ಮಾಡಲಾಗುವುದು. * ಈ ಸಮಾರಂಭದ ನೆನಪಿನಲ್ಲಿ, "ಸ್ಮರಣಸಂಚಿಕೆ, "ಯ ಬಿಡುಗಡೆ. * ಮತ್ತೆ, ರಕ್ಕೂ ಹೆಚ್ಚು,ಸನ್ಮಾನವೂ ಇದೆ. 

 

ಮುಂಬೈನ ಕನ್ನಡರಂಗಭೂಮಿಗೆ ತಮ್ಮ ಜೀವನವನ್ನೆಲ್ಲಾ ಮುಡಿಪಾಗಿಟ್ಟು, ಇಂದಿಗೂ ಅದೇ ಲವಲವಿಕೆ, ಹಾಗೂ ಕಳ-ಕಳಿಯಿಂದ ಅಹಿರ್ನಿಶಿ ದುಡಿಯುತ್ತಿರುವ, ಬಾಲಕೃಷ್ಣ ನಿಡ್ವಣ್ಣಾಯ- ದಂಪತಿಗಳಿಗೆ, ಶುಭಕೋರಲು, ಅಭಿನಂದಿಸಲು, ಆಶೀರ್ವದಿಸಲು, ತಮಗೆಲ್ಲಾ ಆದರದ ಸ್ವಾಗತ. ನಾಟಕ, ನಾಟಕ, ನಾಟಕ- ದಂಪತಿಗಳೀರ್ವರ ಜೀವನದ ಉಸಿರು : ೧. ಶ್ರೀ. ಬಾಲಕೃಷ್ಣ ನಿಡ್ವಣ್ಣಾಯರವರ ಸೂಕ್ಷ್ಮ ಪರಿಚಯ : ಬಾಲಕೃಷ್ಣರ ಜನನ, ಪುತ್ತೂರು ತಾಲ್ಲೂಕಿನ, ಪುಣ್ಚಪ್ಪಾಡಿ, ಗ್ರಾಮದ, "ನುಜಾಜೆ," ಎಂಬ ಹಳ್ಳಿಮನೆಯಲ್ಲಿ. ಅವರ ಪ್ರಾಥಮಿಕ ವಿದ್ಯಾಭ್ಯಾಸ, ಪುತ್ತುರ್ ನಲ್ಲಿ ನಡೆಯಿತು. ನಂತರ ಅವರು ಮಂಗಳೂರಿಗೆ ಹೋಗಿ, ಎಲೆಕ್ಟ್ರಿಕಲ್ ಎಂಜಿನೀರಿಂಗ್ ಡಿಪ್ಲೊಮ ಪಡೆದರು. ಅಲ್ಲಿಂದ ೪೫ ವರ್ಷಗಳ ವಾಸ್ತವ್ಯ, ಮುಂಬೈಶಹರಿನಲ್ಲಿ. ೧೦ ವರ್ಷಗಳ ಕಾಲ ನೌಕರಿಮಾಡಿ, ತಮ್ಮದೇ ಆದ ಸ್ವಂತ ಲಘುಉದ್ಯೋಗವನ್ನು ಕೈಗೆತ್ತಿಕೊಂಡರು. ೧೯೮೬ ರಲ್ಲಿ ತೀವ್ರ ಹೃದಯಾಘಾತದಿಂದ ಬಳಲಿ, ಸಹೃದಯರ ಅಶೀರ್ವಾದದಿಂದ ಚೇತರಿಸಿಕೊಂಡೆದ್ದರು. ೧೯೯೧ ರಲ್ಲಿ "ಬೈಪಾಸ್ ಶಸ್ತ್ರಚಿಕಿತ್ಸೆ", ಮಾಡಿಸಿಕೊಳ್ಳಬೇಕಾಯಿತು. ಇದಾದ ನಂತರ ತಮ್ಮ ವೃತ್ತಿಜೀವನಕ್ಕೆ ದಾಯಹೇಳಿ ನಿವೃತ್ತರಾದರು.

 

ಅವರ ಪ್ರವೃತ್ತಿ, ನಾಟಕ ನಿರ್ಮಾಣ, ಹಾಗೂ, ಅಭಿನಯ. ಇವುಗಳಲ್ಲಿಯೆ, ತಮ್ಮನ್ನು ತಾವು ಪೂರ್ತಿಯಾಗಿ, ತೊಡಗಿಸಿಕೊಂಡರು. ಕೇರಳದ ತ್ರಿಶುರ್ ನಲ್ಲಿ ಟೆಲಿಗ್ರಾಫಿಕ್ ಮತ್ತು ರೈಲ್ವೆ ಸ್ಟೇಷನ್ ಮಾಸ್ಟರ್- ಕೋರ್ಸು ಮಾಡುತ್ತಿದ್ದಾಗ, 'ನಿನಗಾಗಿ' ಎಂಬ ಕನ್ನಡನಾಟಕವನ್ನು ರಚಿಸಿದ್ದರು. ಅದನ್ನು ಮಲಯಾಳಿ ಭಾಷೆಗೆ ಭಾಷಾಂತರಿಸಿ, ಯಶಸ್ವಿಪ್ರಯೋಗವೊಂದನ್ನು ಆಗಲೇ ಮಾಡಿದ್ದರು.

ಮಂಗಳೂರಿನಲ್ಲಿ ಓದುತ್ತಿದ್ದಾಗ ಮಾಡಿದ ನಾಟಕರಚನೆಗಳು : ೧. ಗೃಹಪ್ರವೇಶ, ೨. ಶಾಂತಿ, ೩. ಹಿತ್ತಾಳೆಕಿವಿ, ೪. ಕಲಾಜ್ಯೊತಿ, ೫. ಯಾರು ಹಿತವರು, ೬. ವಸಂತ ಕುಸುಮ, ೭. ಮಿಕ್ಷರ್ ನಾಟಕಗಳು ರಂಗಮಂಚದಮೇಲೆ ಪ್ರದರ್ಶನಗೊಂಡವು. ಹಲವು ಭಾಷೆಗಳ ಪದಗಳನ್ನು ನಾಟಕದಲ್ಲಿ ಯಶಸ್ವಿಯಾಗಿ ಬಳಸಿ, ಪ್ರಯೋಗಮಾಡಿದ್ದಾರೆ. " ವಸಂತಕುಸುಮ" ನಾಟಕದ ಪ್ರಯೋಗವನ್ನು, ಮಡಕೇರಿ, ಮಂಗಳೂರು, ಮೈಸುರುಗಳಲ್ಲಿ, ಪ್ರಯೋಗಮಾಡಿದರು.

೧೯೬೫ ರಲ್ಲಿ ಮುಂಬೈ,ನಲ್ಲಿ ಪ್ರದರ್ಶನಮಾಡಿದರು. ಮುಂಬೈಗೆ ಪಾದಾರ್ಪಣೆ ಮಾಡಿದ್ದು, ೧೯೬೦ ರಲ್ಲಿ : ವೃತ್ತಿ, ಮದುವೆ, ಹಾಗೂ ನಾಟಕದಕನಸು, ನನಸಾದದ್ದು ಅಲ್ಲಿಯೇ : ಬಾಲಕೃಷ್ಣ ನಿಡ್ವಣ್ಣಾಯ, ರವರಿಗೆ ತಮ್ಮ ಎಳೇ ವಯಸ್ಸಿನಿಂದಲೂ ನಾಟಕದ ಗೀಳು. ತಮ್ಮ ಪ್ರಾಥಮಿಕಶಾಲೆಯಲ್ಲಿ ೯ ನೆ ಯಿಯತ್ತೆಯಲ್ಲಿ ಓದುತ್ತಿರುವಾಗಲೇ, ಅವರು, "ಕೃಷ್ಣಸಂಧಾನ," ವೆಂಬ ನಾಟಕದಲ್ಲಿ, ದುರ್ಯೋಧನನ ಪಾತ್ರವಹಿಸಿದ್ದರು. ಡಾ. ಶಿವರಾಮಕಾರಂತರು ಶಾಲೆಯ ವಾರ್ಷಿಕೋತ್ಸವಕ್ಕೆ ಒಂದು ನಾಟಕವನ್ನು ಆಡಿಸಿ, ಎಂದು ಸೂಚಿಸಿದ್ದರು. ಆದರೆ, ಕೆಲವುಕಾರಣಗಳಿಂದ ಅದನ್ನು ಕೈಬಿಡಲಾಗಿತ್ತು. ಬಾಲಕೃಷ್ಣರು ತಾವೇ ಮುತುವರ್ಜಿವಹಿಸಿ, ಒಂದು ನಾಟಕವನ್ನು ಬರೆದು ಆದಿನ ಪ್ರದರ್ಶಿಸಿದರು. ೧೯೬೩ ರಲ್ಲಿ, ಶ್ರೀರಂಗರು ಬರೆದ, "ಹುಟ್ಟಿದ್ದು ಹೊಲೆಯರು," ನಾಟಕದಲ್ಲೂ ಬಾಲಕೃಷ್ಣರು ಅಭಿನಯಿಸಿದ್ದರು. ಆ ನಾಟಕದ ನಿರ್ದೇಶನವನ್ನು ದಿ. ವೆಂಕಟ್ರಾಯ ತಳಗೇರಿಯವರು ಸಮರ್ಥವಾಗಿ ಮಾಡಿದ್ದರು. ಹೀಗೆ ನಾಟಕ ಬರೆಯುವುದು, ರಂಗದಲ್ಲಿ ಅದರ ಪ್ರಯೋಗ, ಪಾತ್ರಧಾರಣೆ, ಕಲಾವಿದರನ್ನು ಕಲೆಹಾಕಿ ಅವರನ್ನು ತರಪೇತುಮಾಡುವುದು ಇವೇ ಮೊದಲಾದ ಕೆಲಸಗಳನ್ನು ಅವರು ನಿರಾಳವಾಗಿ ಮಾಡುತ್ತಿದ್ದರು.

ಇದಕ್ಕೆ ಪ್ರೇರಕವೆಂಬಂತೆ ಅವರಿಗೆ ಸಿಕ್ಕ ಜೀವನಸಾಥಿಯವರು- ಸತ್ಯಭಾಮಾರವರು. ಅವರು ಮುಂಬೈನಲ್ಲಿ ಬೆಳೆದ ಕಲಾವಿದೆ. ಆಕೆಗೂ ನಾಟಕಗಳಲ್ಲಿ ಪಾತ್ರವಹಿಸುವುದು ಬಹಳ ಇಷ್ಟ. ಹೀಗೆ ಅವರಿಬ್ಬರೂ ನಾಟಕ ಕಲಾಪ್ರಾಕಾರಕ್ಕೆ ಹೇಳಿಮಾಡಿಸಿದ ಜೋಡಿಯಂತಾದರು. 'ಬಾಳಬಂಧನ,' ನಾಟಕ ಆಡಿದ ಎರಡೇ ವರ್ಷಗಳಲ್ಲೇ, ನಿಜಜೀವನದಲ್ಲೂ ಅವರು ಬಾಳಬಂಧನದಲ್ಲಿ ಬಂಧಿಗಳಾದರು ! ನಿಜವಾದ ಅರ್ಥದಲ್ಲಿ ಈ ಒಂದು ಹೊಸ ತಿರುವು ಈರ್ವರ, ಕನಸುಗಳನ್ನು ನನಸುಮಾಡುವ ಹಾದಿಯನ್ನು ಸುಗಮಗೊಳಿಸಿತು. ಸತ್ಯಭಾಮಾರವರು, ಒಳ್ಳೆಯ ಹಾಡುಗಾರರು, ಒಳ್ಳೆಯ ನಟಿ, ಯೋಗಾಭ್ಯಾಸದ ಶಿಕ್ಷಕಿ ಕೂಡ. ಹೀಗೆ ಅವರ ಕಲಾಕೃಷಿ ಸರಿಯಾದ ಮಾರ್ಗದ ಮೇಲೆ, ಸುಸ್ಥಿರವಾಗಿಯೂ, ಸುಗಮವಾಗಿಯೂ ಮುನ್ನಡೆಯುತ್ತಿದೆ.

ಬಾಲಕೃಷ್ಣರ ಪರಿವಾರ : ರಜೇಶ್, ಮಗ. ಕಂಪ್ಯೂಟರ್ ಗ್ರಾಫಿಕ್ಸ್ ಕಲಿತು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾನೆ. ಮಗಳು ರಷ್ಮಿ ನೃತ್ಯಕಲಾವಿದೆ. ಮದುವೆಯಾಗಿ ಪತಿಯೊಡನೆ ಡೆಹರಾಡುನ್ ನಲ್ಲಿದ್ದಾರೆ. ಮದುವೆಗೆ ಮುಂಚೆ, ಅಕೆ ಫ್ಯಾಷನ್ ಡಿಸೈನ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದವಳು. ಬಾಲಕೃಷ್ಣರವರದು ಚಿಕ್ಕ-ಚೊಕ್ಕ ಪರಿವಾರ. ಮಕ್ಕಳೆಲ್ಲಾ ತಮ್ಮ ತಮ್ಮಷ್ಟಕ್ಕೆ ಸುಖವಾಗಿದ್ದಾರೆ. ಅದರಿಂದಾಗಿ ಬಾಲಕೃಷ್ಣದಂಪತಿಗಳು ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯವಾಯಿತು. ಮಕ್ಕಳಿಬ್ಬರೂ ತಂದೆ-ತಾಯಿಗಳ "ಫ್ಯಾನ್," ಗಳು !

'ಶ್ರೀ ಕಲಾನಿಲಯ, ನಾಟಕ ಸಂಸ್ಥೆ', ಬಾಲಕೃಷ್ಣ ಮತ್ತು ಸತ್ಯಭಾಮಾರವರು ಕಟ್ಟಿಬೆಳೆಸಿದ ಸಂಸ್ಥೆ : ೧೯೯೪ ರಲ್ಲಿ, ಶ್ರೀ ಕಲಾನಿಲಯ' ನಾಟಕ ಸಂಸ್ಥೆ ಹುಟ್ಟುಹಾಕಿ ಬೆಳೆಸುತ್ತಿದ್ದಾರೆ. ಬಾಲಕೃಷ್ಣನಿಡ್ವಣ್ಣಯ್ಯನವರು, ೨೦ ಕ್ಕಿಂತ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ನಟಿಸಿಯೂ ಇದ್ದಾರೆ. ಹಲವು ನಾಟಕ ಸ್ಪರ್ಧೆಯಲ್ಲೂ ಭಾಗವಹಿಸಿ ನಟಿಸುಯೂ ಇದ್ದಾರೆ. ಯುವ ನಾಟಕ ನಿರ್ದೇಶಕ, ಭರತ್ ಕುಮಾರ್ ಪೊಲಿಪು, ಈ ದಂಪತಿಗಳಿಗೆ ಹೆಚ್ಚು ಸಂದರ್ಭಗಳನ್ನು ಒದಗಿಸಿಕೊಟ್ಟರು. ಅವರೇ ಹೇಳುವಂತೆ, ನಾಟಕಗಳಲ್ಲಿ ಗಂಡಹೆಂಡತಿ ಪಾತ್ರವಹಿಸಲು ನಿಜಜೀವದ ಪಾತ್ರಧಾರಿಗಳೇ ಸಿಕ್ಕರೆ ಇನ್ನೂ ಸುಲಭವೆಂದು, ಈ ಮಾತು ಉತ್ಪ್ರೇಕ್ಷೆಯೇನಲ್ಲ. ನಾಟಕಗಳನ್ನು ನೋಡಿದವರೆಲ್ಲಾ ಸಂತೋಷಪಟ್ಟರು.

ಬಾಲಕೃಷ್ಣ ನಿಡ್ವಣ್ಣಾಯರವರ ರಂಗಭೂಮಿ-ಜೀವನದ ಒಂದು ಮರೆಯಲಾರದ ಘಟನೆ : ಕೆಲವು ಮರೆಯಲಾರದ ಘಟನೆಗಳನ್ನು ನಮ್ಮೆಲ್ಲರೊಡನೆ ಹಂಚಿಕೊಂಡಿದ್ದಾರೆ. ಒಮ್ಮೆ,ಮಡಕೇರಿಯ ಟವ್ನ್ ಹಾಲಿನಲ್ಲಿ, ಎನ್. ಜಿ. ಒ ಗಳ ಸಹಾಯಾರ್ಥವಾಗಿ ಪ್ರದರ್ಶನಗೊಂಡ, 'ವಸಂತ ಕುಸುಮ ನಾಟಕ', ಮುಗಿದನಂತರ ಜನರಲ್ ಕಾರಿಯಪ್ಪನವರು ವೇದಿಕೆಗೆಬಂದು, ಬೆನ್ನುಚಪ್ಪರಿಸಿ, ಹಾರಹಾಕಿ ಅಭಿನಂದಿಸಿದ ಕ್ಷಣಗಳು, ’ನಿಜಕ್ಕೂ ರೋಮಂಚಕ, ’ ಎನ್ನುತ್ತಾರೆ. ಎನ್ನುತ್ತಾರೆ, ಅವರು. "ವಿಶಾಲ ಮೈಸೂರು ಸಂಗೀತ ನಾಟಕ ಅಕ್ಯಾಡಮಿ,"ಯವರು ೧೯೬೦ ರಲ್ಲಿ ನಡೆಸಿದ ಸ್ಪರ್ಧೆ. ಪರ್ವತವಾಣಿಯವರು ಬರೆದ "ಉಂಡಾಡಿಗುಂಡ" ನಾಟಾಕದಲ್ಲಿ ಅವರಿಗೆ ವೈಯಕ್ತಿಕ ಬಹುಮಾನ ಬಂದಿತು. ಸಹಾಯಾರ್ಥವಾಗಿ ನಡೆಸಿಕೊಟ್ಟ ನಾಟಕ ಕಾರ್ಯಕ್ರಮಗಳು : ತಮ್ಮ ಊರಿನ ಹಳ್ಳಿಯಲ್ಲಿ ಶಾಲೆ ತೆರೆಯಲು, ಕಟ್ಟಡದ ಧನಸಹಾಯಕ್ಕೆ ಆಡಿದ ನಾಟಕ-ಬಾಳವಸಂತ. ೧೯೬೫ ರಲ್ಲಿ ಮಂಗಲ ಬೋರ್ಡ್ ಎಲಿಮೆಂಟರಿ ಸ್ಕೂಲ್, ಕಟ್ಟಡ ಕಟ್ಟಲು ಇದರಲ್ಲಿ ಗಳಿಸಿದ ಹಣವನ್ನು ವಿನಿಯೋಗಿಸಲಾಯಿತು.

ಬಾಲಕೃಷ್ಣ ನಿಡ್ವಣ್ಣಾಯ ದಂಪತಿಗಳು ಭಾಗಹಿಸಿದ, ಕೆಲವು ಪ್ರಮುಖನಾಟಕಗಳು :

ಯಾರಿಗೆ ಯಾರುಂಟು-ಮಕ್ಕಳ ನಾಟಕ ತಿರುಗುಬಾಣ,

ವಸಂತಕುಸುಮ, ಬಾಳಬಂಧನ ಹೃದಯಾಘಾತ,* ಹುಚ್ಚರ್ಯಾರು* ಅಸಂಭವ* ಪಂಚಾಟಗಳು* ನಾವುಕಂಡ ನಮ್ಗಂಡ* ವೃದ್ಧಾಶ್ರಮ,* ಕನಸೋ ನೆನಸೋ* ರಂಗಮಂಚ ಚುನಾವಣೆ ಅರ್ಥತ್ ಬನಾವಣೆ, ನಾಟ್ಯ ಶಾರ್ದೂಲ, ಸಾಯಿದರ್ಶನ್, ಹಗ್ಗದ ಕೊನೆ, ಮದುವೆ ನಿಶ್ಚಯವಾಯಿತು. ಸಿರಿಸಂಪಿಗೆ ಊರೆಲ್ಲಾ ಹೆಳ್ಬೇಡಿ ಅತ್ತೆ ಬೇಕಿದ್ದಾರೆ ಆಡುಗೆಗೆ ಪಂಚಭೂತ,ನಿ- ಹುಡುಕಿಕೊಂಡುಹೋದಾಗನಿ- ಪೆದ್ದ ಶಿಖಾಮಣಿನಿ-

೨. ಶ್ರೀಮತಿ. ಸತ್ಯಭಾಮಾ ನಿಡ್ವಣ್ಣಾಯರವರ ಸೂಕ್ಷ್ಮ ಪರಿಚಯ :

ಮುಂಬೈನ ದಾದರ್ ನಲ್ಲಿ ವಾಸ. ಶ್ರೀಯುತ ದಿ. ಈಶ್ವರ ಹಾಗೂ ದಿ ಶರದಾ ಶಗ್ರಿತ್ತಾಯರ ತೃತೀಯ ಪುತ್ರಿ. ದಕ್ಷಿಣ ಕನ್ನಡ ಜಿಲ್ಲೆಯ ಅತ್ತೂರಿನ ತನ್ನ ಸೋದರ ಮಾವನ ಮನೆಯಲ್ಲಿ ಜನವರಿ ೧, ೧೯೪೧ ಜನನ. ಎನ್ ಕೆ, ಇ, ಎಸ್ ಶಾಲೆಯಲ್ಲಿ ಮೆಟ್ರಿಕ್. 'ರೋಶ್ ಪ್ರಾಡಕ್ಟ್ಸ್,' ಎಂಬ ಔಷಧಿ ತಯಾರಿಕೆ ಕಂಪೆನಿಯಲ್ಲಿ ಕೆಲಸ. ೧೯೬೯ ರ ಮೇ ಎರಡನೆಯ ತಾರೀಖಿನಲ್ಲಿ ಮದುವೆ. ಹಾಡುಗಾರಿಕೆ ಬಹಳ ಇಷ್ಟ. ಸಂಗೀತರಸಮಂಜರಿ ಕಾರ್ಯಕ್ರಮದಲ್ಲಿ ಜನಪ್ರಿಯತೆ. "ಕನ್ನಡ ಕಲಾಕೇಂದ್ರದ, ಸದಾನಂದಸುವರ್ಣರು ೧೯೬೬ ರಲ್ಲಿ ನಿರ್ದೇಶಿಸಿದ "ಧರ್ಮಚಕ್ರ, ನಾಟಕೋತ್ಸವ,"ದಲ್ಲಿ " ರಂಗಸ್ಥಳಕ್ಕೆ ಪಾದಾರ್ಪಣೆ. ೧೯೬೭ ರಲ್ಲಿ 'ಬಾಳಬಂಧನ', ದಲ್ಲಿಯೂ ಅವರು ಪ್ರದರ್ಶನನೀಡಿದರು. ಹಲವರು ನಾಟಕಗಳಲ್ಲಿ, ಹಲವಾರು ನಿರ್ದೇಶಕರಬಳಿ ಅಭಿನಯಕಾರ್ಯ :

೧. ಎಚ್. ಮೊಹನ್ ನಿರ್ದೆಶನ, ನಾಟ್ಯಶಾರ್ದೂಲ, ಚುನಾಣೆ ಅರ್ಥಾತ್ ಬನಾವಣೆ, ಹೌದಾದ್ರೆ ಹೌದೆನ್ನಿ, ೨. ಭರತ್ ಕುಮಾರ್ ಪೊಲಿಪು ನಿರ್ದೇಶನದಲ್ಲಿ- ದಿ ಪ್ರಸನ್ನನ ಗೃಹಾಶ್ರಮ, ಗಿಡಗಳ ಜೊತೆಗೆ ಮಾತಾಡುತ್ತಿದ್ದ ಹುಡುಗನ ಕಥೆ, ರಾವಿ ನದಿಯ ದಂಡೆಯಲ್ಲಿ, ಶಾಂಡಿಲ್ಯ ಪ್ರಹಸನ, ಸ್ಪರ್ಶ, ೩. ಕಲಾಜಗತ್ತಿನ- ಬರ್ಸ್, ಬದಿ, ಮಹಾಸಾಗರ, ಬೊತೊದ ಇಲ್ಸ್, ೪. ಅಭಿನಯಮಂಟಪದ-ಕೋರ್ದಬ್ಬು, ತನ್ನಿ ಮಾನಿಗ, ಕೆಂಚನ ಕೆರೆಯವರ, -ಜೋಕುಲು ಬಾಲೆಲು, ೬. ಸದಾನಂದಸುವರ್ಣರ -ಅಶೊಕ ಚಕ್ರ, ಇದು ಯುನಿವರ್ಸಿಟಿ, ಯಮನಸೊಲು, ೭. ರಮೇಶ್ ಶಿವಪುರ್ ರವರ-ಹಗ್ಗದ ಕೊನೆ, ೮. ಸುರೇಶ್ ಅನಗಳ್ಳಿಯವರ-ನಾಟಕ ಶಿಬಿರದಿಂದ ಪ್ರಸ್ತುತ ಪಡಿಸಿದ ನಾಟಕ-ಸಿರಿಸಂಪಿಗೆ, ೯. ಕಿಶೊರಿಬಲ್ಲಾಳ್-ನಿರ್ದೇಶನ. ವರಪರೀಕ್ಷೆ, ಅತ್ತೆಬೇಕಾಗಿದ್ದಾರೆ,ಬಾಡಿಗೆಗೆ, ೧೦. ಕೃಷ್ಣಮೂರ್ತಿ ಕವತ್ತರ್ ರವರ ರಂಗಶಿಬಿರದಿಂದ ಪ್ರಸ್ತುತಿ-ನಾಟಕಕ್ಕೆ ಹಿಮ್ಮೇಳದಲ್ಲಿ ಹಾಡು, ೧. ಹಿಂದಿ ನಾಟಕ : -ಹ್ಯಾಮ್ಲೆಟ್, ೨. ಹಿಂದಿ- ಸೀರಿಯಲ್ ಹಸ್ರತೆ ಕಿಸ್ಸ ಶಾಂತಿಕ, ಹಸ್ತರೇಖ, ಏಕ್ ಕಹಾನಿಯ, ನಾ-ಕಿನ್ನಿ-ನಾ ಮತ್ತು ದಿಲ್ ಬಡಾ ಯ ದೌಲತ್, ಪ್ರತಿಫಲ್, ಅಬ್ಬು ಕಾಲಿಯಾ, ಇತ್ಯಾದಿ ಸಿಮೆಮಾಗಳಲ್ಲೂ ಪಾತ್ರವಹಿಸಿದ್ದಾರೆ.. ಅ. ಯಕ್ಷಗಾನದಲ್ಲಿ ಅಭಿರುಚಿ : ಆ. ಗೀತಾಭಟ್ ನಿರ್ದೇಶನದ ಕೆಲವು ಯಕ್ಷಗಾನಗಳಲ್ಲೂ ಪಾತ್ರವಹಿಸಿದ್ದರು. ಇ. ಮಧ್ವೇಶ ಭಜನಮಂಡಲಿ, ಗೋರೆಗಾಂ. ಈ. ಕರ್ನಾಟಕ ಸಂಘ, ಭಜನಮಂಡಲಿ, ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಉ. ಯೋಗ ಶಿಕ್ಷಕಿಯಾಗಿ, 'ಅಂಬಿಕಾಯೋಗಾಕುಟೀರ್, ಚಾರ್ಕೊಪ್ ಕನ್ನಡ ಸಂಘದಲ್ಲಿ.

ಮುಂಬೈ ಕನ್ನಡ-ರಂಗಭೂಮಿಗೆ, ಹೊಸ-ಹೊಸ ಪ್ರತಿಭೆಗಳನ್ನು ತರುವ ಕಾರ್ಯ : ನಿಡ್ವಣ್ಣಾಯ ದಂಪತಿಗಳು , ಅನೇಕ ಉದಯೋನ್ಮುಖ ಕಲಾಕಾರರನ್ನು ಬೆಳಕಿಗೆ ತಂದಿದ್ದಾರೆ. ಕಲಾವಂತಿಕೆಯಲ್ಲಿ, ಇನ್ನೂ ಎತ್ತರಕ್ಕೆ ಬೆಳೆಯಬೇಕೆಂಬ ಹಂಬಲ, ಪ್ರಬಲವಾಗಿದೆ ; ಮತ್ತು ಹೊಸ-ಹೊಸ ಪ್ರಯೋಗಗಳನ್ನು ರಂಗಭೂಮಿಗೆ ತರುವ ಆಸೆಗಳನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವ ಈ "ಕಲಾರತ್ನ,"ರಿಗೆ, ನಮ್ಮೆಲ್ಲೆರ, ನಿಮ್ಮೆಲ್ಲರ, ಪರವಾಗಿ ಹಾರ್ದಿಕ ಅಭಿನಂದನೆಗಳು.

ಇದೇ ರೀತಿ, ಅವರು ಇನ್ನೂ ಹೆಚ್ಚು-ಹೆಚ್ಚು ಯುವ-ಕಲಾವಿದರಿಗೆ ಮಾರ್ಗದರ್ಶನಮಾಡಲೆಂದು ಹಾರೈಸೋಣ.

ಜೈ ಭುವನೇಶ್ವರಿ. ಶುಭಂ. ಶುಭಂ. ಮಂಗಳಂ. *

 

- ಈ ನಾಟಕಗಳಲ್ಲಿ ದಂಪತಿಗಳೀರ್ವರೂ ನಟಿಸಿದ್ದಾರೆ. ಕೃಪೆ : ** ಶ್ರೀನಿವಾಸ ಜೋಕಟ್ಟೆ, ಸ್ನೇಹಸಂಬಂಧ. ಅಕ್ಟೋಬರ್, ೨೭-೨೮, ೨೦೦೭, ಪು.೨೦.