'ಟೊರಾಂಟೋನಗರದ ಸ್ವಾಮಿನಾರಾಯಣ ಮಂದಿರ,ಕಲ್ಲಿನಲ್ಲಿ ಬರೆದ ಸುಂದರ ಕಾವ್ಯ '!

'ಶ್ರೀ. ಅಕ್ಷರ ಪುರುಷೋತ್ತಮ್  ಸ್ವಾಮಿನಾರಾಯಣ ಮಂದಿರ್' ನ ಆವರಣದಲ್ಲಿ ಒಳಗೆ ನಡೆದರೆ ಮೊದಲು ಕಾಣಿಸುವುದೇ ಕಪ್ಪು ಟೀಕ್ ಮರದಲ್ಲಿ ಕುಸುರಿಕೆಲಸಮಾಡಿ ಸುಂದರವಾಗಿ ನಿರ್ಮಿಸಿದ  'ಹವೇಲಿ,' ಅದರ ಬಲಭಾಗದಲ್ಲಿ ಇಟಲಿಯ ಅಮೃತ ಶಿಲೆಯಲ್ಲಿ ಕಡೆದ ಭವ್ಯ ಮಂದಿರವಿದೆ. ಕಮಲ, ಮಲ್ಲಿಗೆ, ಸೇವಂತಿಗೆ, ಮೊದಲಾದ ಮನಮೋಹಕ ಹೂಗಳು, ಮತ್ತು ರಾಜಾಸ್ಥಾನದ ನೃತ್ಯಾಂಗನೆಯರು, ವಂದಿ ಮಾಗಧರು, ಮತ್ತು  ಆನೆ ನವಿಲು, ಗೋ, ಮೊದಲಾದ ಅನೇಕ ಪ್ರಾಣಿಗಳು, ಸೂರಿನ  ಶಿಲ್ಪದಲ್ಲಿ  ಅದ್ಭುತವಾಗಿ ಕಾಣಿಸಿಕೊಂಡಿವೆ. ಭಾರತದ ಹೊರಗೆ ಕಟ್ಟಿದ ಅತಿ ದೊಡ್ಡ ದೇವಸ್ಥಾನಗಳಲ್ಲಿ ಮೊದಲನೆಯದು, ಅಮೆರಿಕದಲ್ಲಿರುವ 'ಅಕ್ಷರಧಾಮ ಮಂದಿರ್,' ಎರಡನೆಯ ದೊಡ್ಡ ದೇವಾಲಯ, ಟೊರಾಂಟೋನಗರದ ದೇವಾಲಯ.  'ಹವೇಲಿ'ಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಆ ಸುಂದರ ದೇವಾಲಯವನ್ನು ಕಟ್ಟಿದ ವಿವರಗಳನ್ನು 'ಭಾರಿ ಟೆಲಿವಿಶನ್ ತೆರೆ'ಯಮೇಲೆ ಕಾಣುತ್ತೇವೆ. ಕಂಭಗಳು, ಗೋಪುರ, ಮೊದಲಾದ ಮಾದರಿಗಳನ್ನು ಗುಜರಾತಿನಲ್ಲೇ ಕೆತ್ತಿ, ನಿರ್ಮಿಸಲಾಯಿತು. ಅವನ್ನೆಲ್ಲ ಹಡಗಿನಲ್ಲಿ ಜೋಪಾನವಾಗಿ ಕೆನಡಾದ ಟೊರಾಂಟೋ ನಗರಕ್ಕೆ ತರಲಾಯಿತು. ಅಲ್ಲಿ ಕುಶಲ ಕರ್ಮಿಗಳು ಅವನ್ನು ಅಚ್ಚುಕಟ್ಟಾಗಿ ಜೋಡಿಸಿ, ಸಜಾಯಿಸಿ ದೇವಾಲಯವನ್ನು ಕಟ್ಟಿದರು. ಟೊರಾಂಟೋ ನಗರದ ಜನರೆಲ್ಲಾ ಈ ಮಂದಿರದ ಬಗ್ಗೆ ಬಹಳ ಹೆಮ್ಮೆ ಪಡುತ್ತಾರೆ. ಪರ್ಯಟಕರು ಈ ದೇವಾಲಯವನ್ನು ವೀಕ್ಷಿಸದೆ ಹೋಗುವುದಿಲ್ಲ. 


ನಗರಕ್ಕೆ ಸ್ವಲ್ಪ ದೂರದಲ್ಲಿದ್ದರೂ ಬಸ್ ವ್ಯವಸ್ಥೆ ಚೆನ್ನಾಗಿದೆ. ಖಾಸಗಿ ವಾಹನದಲ್ಲಿ ಬರಲು ಒಳ್ಳೆಯ ರಸ್ತೆಗಳಿವೆ. ಸಾಯಂಕಾಲ ಆರತಿ, ಪ್ರಸಾದವಿನಿಯೋಗವಿದೆ.


-ಚಿತ್ರ ವಿವರಣೆ : ಹೊರಂಲವೆಂ


 

Taxonomy upgrade extras: