ಓ ಗಂಗಾಮಾತೆಯೇ, ಭಾಗಿರಥಿಯೇ, ನಯಾಗರಮ್ಮನೇ, ಜಗವಪೊರೆವುದು !

 

'ಕೆನಡಾ ಆದರೇನು  ಶಿವಾ, ಅಮೆರಿಕವಾದರೇನು ಶಿವಾ, ಪ್ರವಹಿಸುವ  ಜಲಧಾರೆ, ಗಂಗೆಯಲ್ತೆ;   ! ಓ ತಾಯೆ,  ಜಗದ ದಣಿವಾರಿಸಿ, ಬೆಂದಮನಗಳಿಗೆ ಸಾಂತ್ವನ ನೀಡಮ್ಮ'...
 

'ವಿಶ್ವದ  ನೀರಿಲ್ಲದ   ಬಸವಳಿದು, ಕಣ್ಣೀರಿನಲ್ಲಿ  ಕೈತೊಳೆವ, ಕಂಗೆಟ್ಟ ಅದೃಷ್ಟಹೀನ  ಜನತೆಗೆ ನಿನ್ನ ಕರುಣೆಯತೋರಿ ಪೊರೆಯಮ್ಮ. ಓ ಭಾಗಿರಥಿಯೇ, ಜಾನ್ಹವಿಯೇ,  ಗಂಗಮ್ಮ'.....

ನೀರಿಗಾಗಿ ಪರಿತಪಿಸಿ ನೊಂದಿದ್ದ ನಮಗೆ ಅದೇನೋ ಆನಂದ, ಉಲ್ಲಾಸ, ಹಾಗೂ  'ಅಯ್ಯೋ ಇಷ್ಟೊಂದು ನೀರು ಪೋಲಾಗ್ತಿದೆಯಲ್ಲಾ',  ಅನ್ನೋ ಆತಂಕ, ಮನಸ್ಸಿನಲ್ಲಿ ಆವರಿಸಿ, 'ಮೈಯೆಲ್ಲಾ ಒಂದ್ತರಹ 'ಜುಮ್' ಅನ್ನಲು ಶುರುವಾಗಿತ್ತು'. ಆಗ ನನ್ನ ಹೆಂಡತಿ, ಕಣ್ಣು ಮುಚ್ಚಿ 'ಗಂಗೆಯ ಧ್ಯಾನ' ಮಾಡಲು ಪ್ರಾರಂಭಿಸಿ ತನ್ನ ಎರಡು ಕೈಗಳನ್ನೂ ಕಟಾಂಜನದ ಹೊರಗೆ ಚಾಚಿದ್ದಾಗ ನಾನು ಈ ಚಿತ್ರ ತೆಗೆದದ್ದು ! ಇಲ್ಲಿ ನೀರು ಪೋಲಾಗ್ತಿಲ್ಲ. ಭರ್ಜರಿ ವಿದ್ಯುತ್ ಉತ್ಪಾದನೆ, ಅಮೇರಿಕ ಮತ್ತು ಕೆನಡಾಗಳ ಪೂರೈಕೆಗೆ, ಸಹಕಾರಿಯಾಗಿದೆ. ನಮ್ಮದೇಶದ ತರಹ ಮಾನ್ಸೂನ್ ಇಲ್ಲಿಲ್ಲ.  ಬೇಸಗೆಯಲ್ಲಿ ಮಾತ್ರ ಬೆಳೆಗಳು ಬೆಳೆಯುತ್ತವೆ. ಹೆಚ್ಚಿನ ತರಕಾರಿ, ಹಣ್ಣು-ಹಂಪಲುಗಳು, 'ಬ್ರಿಟಿಷ್ ಕೊಲಂಬಿಯಾ', 'ವ್ಯಾಮ್ಕುವ'ರ್, ಇಲ್ಲವೇ ಅಮೇರಿಕಾದ 'ಕ್ಯಾಲಿಫೋರ್ನಿಯ'ದಿಂದ ಆಮದಾಗುತ್ತವೆ. ಚಳಿಗಾಲದಲ್ಲಿ ಹಿಮ ಹೆಪ್ಪುಗಟ್ಟಿ ಇಡೀ ರಾಜ್ಯದ ಎಲ್ಲಾ ಇಲಾಖೆಗಳೂ ಹಿಮದಿಂದ ಆವ್ರುತವಾಗಿರುತ್ತವೆ. 

ಇದೊಂದು ವಿಶೇಷ ಚಿತ್ರವೆಂದು ನನಗನ್ನಿಸುತ್ತಿದೆ !!

Taxonomy upgrade extras: 

ಪ್ರತಿಕ್ರಿಯೆಗಳು

ಆ ಅನಂತ ಜಲಧಾರೆ ನಮ್ಮನ್ನು ಪುಳಕಿತಗೊಳಿಸಿತೇನೋ ನಿಜ. ಆದರೆ, ಸರ್ ಎಮ್.ವಿಶ್ವೇಶ್ವರಯ್ಯನವರ ಮಾತುಗಳು ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸಿದವು. ನಮ್ಮ ಹೊಳಲ್ಕೆರೆ, ದಾವಣಗೆರೆ, ಹರಿಹರ, ಬಿ.ದುರ್ಗಾ, ಗುಲ್ಬರ್ಗ, ರಾಯಚೂರು, ಮೊದಲಾದ ಕಡೆ ಜನ ನೀರಿಲ್ಲದೆ ಪಡುವ ಕಷ್ಟವನ್ನು ನೆನೆಸಿಕೊಂಡರೆ ಕಣ್ಣಿನಲ್ಲಿ ನೀರೆ ಬರುತ್ತದೆ. ಈಗ ಸೂಳೆಕೆರೆಯಿಂದ ನೀರು ಸರಬರಾಜು ಆಗುತ್ತಿದೆ.

'ಕರ್ನಾಟದಲ್ಲಿ ಎಲ್ಲಿನೋಡಿದರೂ ನದಿಗಳಿವೇ', ಎನ್ನುವ ಮಾತು ಬೊಂಬಾಯಿನಲ್ಲಿ, ಮತ್ತು ಹೊರಗಡೆಯ ಕೆಲವು ಜನ ತಿಳಿದಿದ್ದಾರೆ. ಮಂಡ್ಯ, ಮೈಸೂರು, ಹಾಸಗಳೇ ಕರ್ನಾಟಕವಲ್ಲ. ಹಳೆಮೈಸೂರ್ ಆಗಿದ್ದಾಗ ಅದು ಹರಿಹರದವರೆಗೆ ಮಾತ್ರ ಇತ್ತು. ಅದು ಸರಿಯೇ ? ವಿಶಾಲ ಕರ್ನಾಟಕವಾದಗಳಿಕ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳು ಕುಡಿಯುವ ನೀರಿಗೂ ಪಾಡುಪಡಬೇಕಾದ ಪರಿಸ್ಥಿತಿಗಳನ್ನು ಹೇಳಿಕೊಳ್ಳಲು ಬೇಸರವಾಗುತ್ತೆ. ಚಿತ್ರದುರ್ಗ, ಹೊಸದುರ್ಗ, ದಾವಣಗೆರೆ, ಗುಲ್ಬರ್ಬ, ಸೊಕ್ಕೆ, ಚಿಕ್ಕಜಾಜುರು, ಮೊದಲಾದ ಊರುಗಳಲ್ಲಿ ಬೆಳೆಬೆಳೆಯುವುದು ಬಿಡಿ,ಕುಡಿಯುವನೀರಿಗೂ ಬರ. ಸರ್ಕಾರ ಅದರ ಬಗ್ಗೆ ಎಂದೂ ಯೋಚಿಸಿಲ್ಲ. ಕೇವಲ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಎಲ್ಲರೂ ಮಾತಾಡಿದ್ದೂ ಆಡಿದ್ದೇ ಕಾವೇರಿ ನದಿಮತ್ತಿತರ ನದಿಗಳನ್ನು ಈ ಬರಪ್ರದೇಶಗಳ ಕಡೆ ತಿರುಗಿಸಿ ನೀರಿನ ಬವಣೆಯನ್ನು ಕದಿಮೆಮಾಡಲು ಸಾಧ್ಯವಿಲ್ಲವೇ ? ಯಡಿಯೂರಪ್ಪ ಮತ್ತೆ ಇತರ ರಾಜಕೀಯ ಪಟುಗಳಿಗೆ ಕುರ್ಚಿ ಖಾತ್ರಿಮಾಡ್ಕೊಳ್ಳೋದು ಮತ್ತೆ ತಮ್ಮ ಪದವಿ ಭದ್ರಮಾಡ್ಕೊಳ್ಳೋದು ತಮ್ಮ ತಮ್ಮ ಜನರನ್ನ ಒಳ್ಳೋಳ್ಳೆ ಜಾಗಗಳಲ್ಲಿ ಭದ್ರವಾಗಿ ಕೂಡ್ಸೊದನ್ ಬಿಟ್ಟರೆ ರಾಷ್ಟ್ರ ಕಟ್ಟೊ ಕೆಲಸ ಯಾವಾಗ್ ಮಾಡೊದು ? ಎಂಥಾ ಕೆಟ್ಟ ಜನಾರೀ ನಮ್ಮೋರು ! ಆ ಗುಜರಾತಿನ ಮುಖ್ಯಮಂತ್ರಿ ಶ್ರೀ ನರೇಂದ್ರಮೋಡಿಯವರನ್ನ ನೋಡಿ ಕಲಿಯೋದ್ ಬೇಡ್ವೇನ್ರಿ ?

ವೆಂಕಟೇಶ್ ಸರ್, ನೇಕಾರನ ಹೆಂಡತಿ ಬೆತ್ತಲೆ ಎನ್ನುವಂತಿದೆ ಉತ್ತರ ಕರ್ನಾಟಕದ ಪರಿಸ್ಥಿತಿ. ದಕ್ಷಿಣ ಕರ್ನಾಟಕಕ್ಕಿಂತ ಅಲ್ಲೇ ಹೆಚ್ಚು ನದಿಗಳಿವೆ ಆದರೆ ಸರಿಯಾದ ಯೋಜನೆಗಳಿಲ್ಲದೆ ಅವು ಸೊರಗುವಂತಾಗಿವೆ. ಮಹರಾಷ್ಟ್ರ ಸರ್ಕಾರದೊಂದಿಗೆ ಕೊಯ್ನಾ ಆಣೆಕಟ್ಟು ಕಟ್ಟುವಾಗ ನಮ್ಮವರು ತೋರಿಸಿದ ನಿರ್ಲಕ್ಷದಿಂದಾಗಿ ಅದು ಬಿಜಾಪುರ ಜಿಲ್ಲೆಯ ಲಕ್ಷ್ಯಾಂತರ ಎಕರೆ ಜಮೀನು ನೀರಿನಿಂದ ವಂಚಿತವಾಯಿತು. ಅದೇ ರೀತಿ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮಹಾದಾಯಿ ಯೋಜನೆ ನೆನೆಗುದಿಗೆ ಬಿದ್ದಿದೆ. ಇರಲಿ ನಿಮ್ಮ ಅವಗಾಹನೆಗಾಗಿ ಉತ್ತರ ಕರ್ನಾಟಕದ ನದಿಗಳ ಬಗ್ಗೆ ತಿಳಿಸುತ್ತಿದ್ದೇನೆ. ಕೃಷ್ಣ, ಮಲಪ್ರಭಾ, ಘಟಪ್ರಭಾ, ಭೀಮಾ, ದೋಣಿ, (ಬಿಜಾಪುರ, ಗುಲ್ಬರ್ಗಾ ಮತ್ತು ಬಾಗಲಕೋಟೆ ಜಿಲ್ಲೆಗಳು ಮತ್ತು ಬೆಳಗಾಂ ಹಾಗೂ ಧಾರವಾಡ ಜಿಲ್ಲೆಯ ಭಾಗಗಳು). ಮಾರ್ಕಂಡೇಯ ನದಿ (ಬೆಳಗಾವಿ ಜಿಲ್ಲೆ), ಶಾಲ್ಮಲಾ ನದಿ, (ಧಾರವಾಡ), ವರದಾ ನದಿ (ಹಾವೇರಿ ಜಿಲ್ಲೆ), ಕಾಳೀ ನದಿ (ಉತ್ತರ ಕನ್ನಡ ಜಿಲ್ಲೆ), ಬೆಣ್ಣೆ ಹಳ್ಳ (ನವಲಗುಂದ -ಗದಗ ಜಿಲ್ಲೆ), ತುಂಗ, ಭದ್ರಾ, ಹಗರಿ (ತುಂಗಭದ್ರೆಯ ಉಪನದಿ) ಹೀಗೆ ಹತ್ತು ಹಲವಾರು ಇವೆ. ಆದರೆ ನೀವೆಂದಂತೆ ನಮ್ಮ ರಾಜಕೀಯ ನಾಯಕರಲ್ಲಿ ಅಖಂಡ ಕರ್ನಾಟಕದ ಕಲ್ಪನೆಯಿಲ್ಲ ಮತ್ತು ಮೋದಿಯವರಿಗಿರುವ ರಾಜಕೀಯ ಇಚ್ಛಾ ಶಕ್ತಿಯಿಲ್ಲ.