ನಯಾಗರ ಫಾಲ್ಸ್, ನ ಸವಿ ನೆನಪುಗಳು !

'ದ ಮೇಡ್ ಆಫ್ ದ ಮಿಸ್ಟ್',  ವೀಕ್ಷಿಸಿದ ಬಳಿಕ ವಾಪಸ್ ಬಂದು ಹಚ್ಚ ಹಸುರಿನ ಹುಲ್ಲಿನ ಮೇಲೆ ಕುಳಿತೆವು. ಈಗ ಮನೆಯಿಂದ ತಂದ ತಾಜಾ ಊಟ ಮಾಡಬೇಕು. ಅಮ್ಮ-ಮಗ ಹುಲ್ಲಿನ ಮೇಲೆ ಕೂತು ಒಂದೇಸಮನೆ ಧುಮುಕುವ ನೀರಿನ ನೊರೆಯನ್ನು ದೂರದಿಂದಲೇ ನೋಡಿ ಆ ಅದ್ಭುತ ದೃಶ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಿದ್ದಾರೆ !