ಚಳಕಾಯಿ....ವೈವಿಧ್ಯ

04072010145.jpg,04072010146.jpg,04072010147.jpg,04072010163.jpg,04072010164.jpg,04072010165.jpg,04072010169.jpg,04072010171.jpg,04072010176.jpg,04072010177.jpg,04072010178.jpg,04072010179.jpg,04072010180.jpg.ಈ ಚತ್ರದಲ್ಲಿ ಕಾಣು ಕಾಯಿಗಳು ಅರೆಮಲೆನಾಡಿನಲ್ಲಿ 'ಚಳಕಾಯಿ' ಎಂದು ಕರೆಸಿ ಕೊಳ್ಳುತ್ತವೆ. ಈ ಗಿಡಗಳ ವೈಜ್ಞಾನಿಕ ಹೆಸರು ಹಳ್ಳಗರಿಗೆ ತಿಳಯದು. ಆದರೆ ಈದರ ಉಪಯೋಗ ಮಾತ್ರ ಚನ್ನಾಗಿ ಗೊತ್ತು. ಸಾಮಾನ್ಯವಾಗಿ ಇವು ಡಿಸೆಂಬರ್ ಜನವರಿಯಲ್ಲಿ ಹೂ ಬಟ್ಟು ಮಾಚ್ ತಿಂಗಲ್ಲಿ ಕಾಯಿಬಿಡುತ್ತವೆ.ಕಾಯಿ ಬಲಿಯುದಕ್ಕಿಂತ ಮೊದಲು ಇದನ್ನು ತಂದು ನಮ್ಮ ಕಡೆ ಉಪ್ಪಿನ ಕಾಯಿ ಹಾಕುತ್ತಾರೆ. ಇದು ತಕ್ಷಣಕ್ಕೆ ತಿನ್ನಲು ಬರುವುದಿಲ್ಲ. ಉಪ್ಪಿನ ಕಾಯಿ ಹಾಕಿದನಂತರ ಅದನ್ನು ಹದಿನೈದರಿಂದ ಇಪ್ಪತ್ತು ದಿನಗಳವರೆಗೆ ಬಿಸಿಲಲ್ಲಿ ಇಡಬೇಕು.ಆಗ ಅದರಲ್ಲಿರುವ ಅಂಟಿನಂಶ ಮಾಯವಾಗಿ ತಿನ್ನಲು ಬಲು ರುಚಿಯಾಗಿರುತ್ತದೆ. ಅಂದಹಾಗೆ ಇದರಲ್ಲಿ ಎರೆಡು ವಿಧಗಳಿವೆ. ಗಾತ್ರದಲ್ಲಿ ಚಿಕ್ಕದಾಗಿ ಕಾಣುವ ಕಾಯಿಗಳಿಂದ ಉಪ್ಪಿನ ಕಾಯಿ ಹಾಕಲು ಬರುವುದಿಲ್ಲ. ಇದನ್ನು ನಾಯಿ ಅಥವಾ ಕಾಡು ಚಳಕಾಯಿ ಎಂದು ಕರೆಯುತ್ತಾರೆ. ದಪ್ಪವಾಗಿ ಕಾಣುವ ಮತ್ತು ಸ್ವಲ್ಪ ದುಂಡಾಗಿರುವ ಕಾಯಿಗಳಿಂದ ಮಾತ್ರ ಉಪ್ಪಿನಕಾಯಿ ಹಾಕುತ್ತಾರೆ. ಮೊದಲ ಆರು ಚಿತ್ರಗಳು ಉಪಯೋಗಕ್ಕೆ ಬಾರದಿದ್ದರೂ ಅದರ ಹಣ್ಣಿನಿಂದ ಅಂಟನ್ನು ಮಕ್ಕಳು ಬಳಸುತ್ತಾರೆ. ಉಳಿದ ಏಳು ಚಿತ್ರಗಳಲ್ಲಿ ಕಾಣುವ ಕಾಯಿಗಳು ಬಳಕೆಗೆ ಬರುತ್ತವೆ. ಶಿವಮೊಗ್ಗ ಜಿಲ್ಲೆಯ ಸಾಗರ,ಸೊರಬ ತಾಲ್ಲೂಕುಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ಲ್, ಹಿರೇಕೇರೂರು, ಹಾವೇರಿ,ರಾಣೆಬೆನ್ನೂರು ಮತ್ತು ಧಾರವಾಡಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

ಪ್ರತಿಕ್ರಿಯೆಗಳು