ಸಂಪದ ಸಂಮಿಲನ ೨ 13.06.10 ಚಿತ್ರಗಳು ಸ್ಥಳ : ಕೃಪೆ CIS ಭವನ ದೊಮ್ಮಲೂರು

ಸಂಪದ ಸಂಮಿಲನ     ಆಯ್ದ   ಚಿತ್ರಗಳು

 

 

ತರುಣ ಕವಿ ತೇಜಸ್ವೀಯವರ "ಗುರಿ", ಮತ್ತಿತರ ಕವನ ವಾಚನ

 

 

 

ನಾಗರಾಜರವರಿಂದ  ಸಂಪದ ಪರಿಚಯ

 

ಬೆಳ್ಳಾಲ ಗೋಪೀನಾಥ ರಾವ್ ರವರಿಂದ ಕಾವ್ಯ ವಾಚನ

 

ಮಂಜುನಾಥ ಹೊಳೆನರಸೀಪುರ ಅವರಿಂದ ಕಥಾ ವಾಚನ

 

 

 

ಮೆಚ್ಚಿನ ಆತ್ಮೀಯ ಆಸುಮನ ಅವರಿಂದ " ಸಖಿ, ಬೆಳೆಯುವದೆಂತು,ಮತ್ತು ಸಂಗಾತಿ ಯಾವಾಗ ಬೇಕು" ಕಾವ್ಯ ವಾಚನ

 

 

ಆತ್ಮೀಯ ಚುಟುಕು ಕವಿ ಚೇತನ್ ಕೂಡುವಳ್ಳಿಯವರಿಂದ ಕಾವ್ಯವಾಚನ ಮತ್ತು ಚುಟುಕ

 

ಆತ್ಮೀಯ ಚೇತನ ಕವಿ ನಾಗರಾಜ ಅವರಿಂದ  ಸಂಪದದ ಬೆಳವಣಿಗೆ ಹೇಗೆ ? ಹಿತವಚನ

 

 

 

ಅಂಜನ ಕುಮಾರ ಅವರಿಂದ ಮಾತು ಕಥೆ

 

 

ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ, ಪ್ರೇಮಿ, ಹಾಗೂ ಪ್ರಶಂಶನೀಯ ಸೂತ್ರಧಾರ ಹರೀಶ್ ರಿಂದ  "ಉತ್ತರ ಕವನ" ವಾಚನ

 

 

ಆರಂಭ ಪ್ರಾರ್ಥನೆ ಮತ್ತು ಹಾಡುಗಾರಿಕೆ ಶ್ರೀಮತಿ ಶಾಂತಿ ಗೋಪೀನಾಥ್

 

 

 

 

ಪ್ರತಿಕ್ರಿಯೆಗಳು

ಗೋಪಿನಾಥ ಅವರೇ, ಸಂಪದ ಸಮ್ಮಿಲನದ ಚಿತ್ರಗಳನ್ನು ತೋರಿಸಿದ್ದಕ್ಕೆ (ಅದೂ, ಇಷ್ಟು ಬೇಗ!) ನಿಮಗೆ ಧನ್ಯವಾದಗಳು. ಈ ಬಗ್ಗೆ ನಿಮ್ಮದೊಂದು ಲೇಖನವೂ ಬರಲಿದೆ ಅಂದುಕೊಳ್ಳುತ್ತೀನಿ.

ಶಾಸ್ತ್ರಿಗಳೇ ನಿಮ್ಮಂತಹ ಸಂಪದ,ಸಾಹಿತ್ಯ ಪ್ರೇಮಿಗಳನೇಕರನ್ನು ನಾವು ಕಾರ್ಯಕ್ರಮದುದ್ದಕ್ಕೂನೆನಪಿಸಿಕೊಂಡೆವು ನಿಜವಾಗಿಯೂ ಈ ಕಾರ್ಯಕ್ರಮ ಇನ್ನೂ ಕಳೆ ಕಟ್ಟುತ್ತಿತ್ತು ನೀವೆಲ್ಲರೂ ಭಾಗವಹಿಸಿದ್ದರೆ!!!.

ಗೋಪಿನಾಥರೆ, ಚಿತ್ರಗಳು ತುಂಬಾ ಸು೦ದರವಾಗಿ ಮೂಡಿ ಬ೦ದಿವೆ. ನಿಮ್ಮ ಅತ್ಯುತ್ತಮ ಕಾರ್ಯಕ್ಕೆ ಧನ್ಯವಾದಗಳು.

ಮಂಜು ಅವರೇ ನಿಮ್ಮಂತಹ ಉತ್ತಮ ಸ್ನೇಹಿತರನ್ನು ದೊರಕಿಸಿಕೊಟ್ಟ ಸಂಪದಕ್ಕೆ ಋಣಿ ನಮ್ಮ ನಿಮ್ಮ ಭೇಟಿ ಮತ್ತು ಈ ಸಮ್ಮಿಲನ ಮರೆಯಲಾರದ ಅನುಭವ.

ಗೋಪಿನಾಥರೆ ಚಿತ್ರಗಳು ತುಂಬಾ ಚೆನ್ನಾಗಿದೆ. ಹಾಗೇ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಹಾಕಿ. ಬರಬೇಕೆಂದಿದ್ದೆ ಆದರೆ ಕೆಲಸಗಳ ಒತ್ತಡದಿಂದ ಬರಲಾಗಲಿಲ್ಲ. ಮುಂದಿನ ಬಾರಿ ನಿಮ್ಮೊಂದಿಗೆ ಖಂಡಿತಾ ಬೆರೆಯುತ್ತೇನೆ. ಚಿತ್ರಗಳನ್ನು ನೋಡಿದ ಮೇಲೆ ನಾನು ಬರಬೇಕಿತ್ತು ಅನ್ನಿಸುತ್ತಿದೆ. ಧನ್ಯವಾದಗಳು

ನಾಡಿಗರೇ ನಿಜವಾಗಿಯೂ ನಾವು ಪ್ರತಿ ಕ್ಷಣವೂ ನಿಮ್ಮೆಲ್ಲರನ್ನು ನೆನೆಸಿ ಕೊಂಡೆವು. ಆಡಿಯೋ ಕ್ಲಿಪ್ಪಿಂಗ್ ಮಾತ್ರ ಹಾಕಬಹುದೇನೋ ಯಾಕೆಂದರೆ ವಿಡಿಯೋ ಕ್ಲಿಪ್ಪಿಂಗ ಮಾಡಲು ಸಾಧ್ಯವಾಗಿರಲಿಲ್ಲ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು

ಸಂಪದ ಸಂ’ಮಿಲನದ ಬಗ್ಗೆ ವರದಿ, ಚಿತ್ರಗಳು ಸೊಗಸಾಗಿತ್ತು. ಮುಂದಿನ ಸಂ’ಮಿಲನದ ಹೊತ್ತಿಗೆ ಬೆಂಗಳೂರಿನಲ್ಲಿ ಇದ್ದಲ್ಲಿ ಎಲ್ಲರನ್ನೂ ಭೇಟಿಯಾಗುವ ಆಕಾಂಕ್ಷೆ ಹೊತ್ತಿರುವೆ.

ವರದಿ ಮತ್ತು ಚಿತ್ರಗಳು ತುಂಬಾ ಚೆನ್ನಾಗಿವೆ. ಇದು ತುಂಬಾ ಉತ್ತಮವಾದ ಬೆಳವಣಿಗೆ. ಹರೀಶ ಮತ್ತು ತಮ್ಮೆಲರಿಗೂ ಅಭಿನಂದನೆ. ಮುಂದಿನ ಬಾರಿ ಮತ್ತೊಂದು ಸಂ’ಮಿಲನದ ಆಯೋಜಿಸುವಂತಾಗಲಿ. ನಾನು ಭಾಗವಹಿಸಲು ಕಾತುರದಿಂದ ಕಾಯುತ್ತಿರುತ್ತೇನೆ.

ಹೋಗಲಾಗುವುದಿಲ್ಲ ಎಂದು ಸುಮ್ಮನಿದ್ದಿದ್ದರೆ ಚೆನ್ನಿರುತ್ತಿತ್ತೇನೋ ? ನನ್ನ ದುರಾದೃಷ್ಟ !! ತಡವಾಗಿ ಬಂದುದಕ್ಕೆ ಶಿಕ್ಷೆ ಎಂದೆನಿಸುತ್ತದೆ. ಸ್ಥಳ ಹುಡುಕುವಲ್ಲಿ ಸಫಲಳಾಗಲಿಲ್ಲ . ಅನುಭವಗಳನ್ನು ಓದಿ, ನೋಡಿ ಸಂತೋಷಿಸುತ್ತೇನೆ. ಮುಂದಿನ ಸಲ ಬೇಗ ಹೊರಡುತ್ತೇನೆ. ದಯಮಾಡಿ ಎಲ್ಲರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳಿರಿ. ಆಮೇಲೆ ಭಾವಚಿತ್ರಗಳನ್ನು ಸಂಪದದಲ್ಲಿ ಹಾಕಿರುವವರು ಯಾರಾದರೂ ಕಾಣಸಿಗಬಹುದೇನೋ ಎಂದು 'ಥಟ್ ಅಂತ ಹೇಳಿ 1500' ಕಾರ್ಯಕ್ರಮದಲ್ಲಿ ಕಣ್ಣಾಡಿಸಿದೆ. ತಿಳಿಯಲಿಲ್ಲ. ಕಡೆಗೆಕಾರ್ಯಕ್ರಮ ನೋಡಿ ಹಾಗೂ ಶ್ರೀ ನಾ ಸೊ ಅವರಿಂದ ಸಹಿ ಪಡೆದು ಸಂತೋಷಪಟ್ಟುಕೊಂಡೆ . ಎಲ್ಲರೂ ಸಂತೋಷ ಹಂಚಿಕೊಳ್ಳುತ್ತಿರುವಾಗ ನನ್ನದೊಂದು ಪ್ರತಿಕ್ರಿಯೆ ಬೇಸರವನ್ನು ಉಂಟುಮಾಡಿದರೆ ಕ್ಷಮೆ ಇರಲಿ. ವಂದನೆಗಳು. ಅಂಬಿಕಾ

ಅಂಬಿಕ, << ಸ್ಥಳ ಹುಡುಕುವಲ್ಲಿ ಸಫಲಳಾಗಲಿಲ್ಲ . >> ನಮ್ಮಲ್ಲಿ ಯಾರದಾದರೂ ದೂರವಾಣಿ ಸಂಖ್ಯೆ ಮೊದಲೇ ಪಡೆದುಕೊಂಡಿದ್ದರೆ ಈ ಕಷ್ಟ ಇದ್ದಿರುತ್ತಿರಲಿಲ್ಲ. ಮುಂದಿನ ಬಾರಿ ಇಂತಹ ಪ್ರತಿಕ್ರಿಯೆ ಮರುಕಳಿಸದಿರಲು : 9448804890 ಬರೆದಿಟ್ಟುಕೊಳ್ಳಿ. -ಆಸು ಹೆಗ್ಡೆ

ಬರೆದಿಟ್ಟು ಕೊಂಡಿರುತ್ತೇನೆ. ಧನ್ಯವಾದಗಳು . (ಇದೇ ಯೋಚನೆ ದೊಮ್ಮಲೂರಿನಲ್ಲಿ ಬಂದಿಳಿದಾಗ ಹೊಳೆದಿತ್ತು.)

ಪ್ರತಿಕ್ರಿಯೆ ಗಳಿಗಾಗಿ ಅಭಾರಿ ನಾವೇ ನಮ್ಮದು ಅಂತ ಸೇರಿದರೆ ಅದರ ಮಜಾವೇ ಬೇರೆ ಸರಿ ನೀವೆಲ್ಲರು ಪ್ರತಿಕ್ರಯಿಸಿದ ಹಾಗೇನೇ ಎಲ್ಲರೂ ಒಟ್ಟಾಗಿ ಸೇರೋಣ, ಆ ದಿನವನ್ನು " ನಭೂತೋ ನ ಭವಿಷ್ಯತಿ" ಎನ್ನುವ ಹಾಗೆ ಮಾಡೋಣ

ಅಂಬಿಕಾರವರೇ ನಾನೂ ನಿಮ್ಮ ಬಗ್ಗೆ ಹೆಗಡೆಯವರು ಮತ್ತು ಹರೀಶ್ ಹೇಳಿದ್ದು ಕೇಳಿ ನಿಮ್ಮನ್ನೂ ಕಾರ್ಯಕ್ರಮದಲ್ಲಿ ನಿರೀಕ್ಷಿಸಿದ್ದೆ ಪ್ರಾಯಶಃ, ನೀವು ಮತ್ತು ಎಸ್ ಎನ್ ರಾವ್ ಅವರೂ ಆದಿನ ಹೆಗಡೆಯವರು ಕೊಟ್ಟಿದ್ದ ವಿವರಣೆ ಓದಿಲ್ಲವೇನೋ ಅನ್ನಿಸಿತು. ಇನ್ನೊಮ್ಮೆ ಹೀಗಾಗದ ಹಾಗೆ ಎಚ್ಚರವಹಿಸೋಣ.ಮೊದಲೇ ಈ ಎಲ್ಲಾ ವಿವರಗಳನ್ನೂ ಸವಿವರವಾಗಿ ಹಂಚೋಣ ಕೆಲಸಗಳನ್ನು ಹಂಚಿಕೊಂಡು ಮಾಡಿದರಾಯ್ತು ಏನಂತೀರಾ?

ನಿನ್ನೆ ಮಂಜುನಾಥರು ರಿಲೀಸ್ ಮಾಡಿದ ವರದಿಗೆ ನಾನು ಈ ರೀತಿ ಪ್ರತಿಕ್ರಿಯಿಸಿದ್ದೆ: <ಬೆಳಗ್ಗೆ ’ಪುರಂದರದಾಸರ ಫುಟ್ಬಾಲ್ ಪದ’ ಗೀಚಿ, ’ಸಂಪದ’ಕ್ಕೆ ಸೇರಿಸಿ, ಪೂರ್ವಯೋಜಿತ ಕಾರ್ಯಕ್ರಮವೊಂದಕ್ಕೆ ಹೋಗಿ, ಇದೀಗ ವಾಪಸಾದವನೇ ಈ ಸಚಿತ್ರಲೇಖ ನೋಡಿದೆ. ಬಹಳ ಸಂತೋಷವಾಯಿತು. ನಾನೂ ’ಸಂಮಿಲನ’ದಲ್ಲಿ ಹಾಜರಿರಬೇಕಾಗಿತ್ತೆನ್ನಿಸಿತು. ಇರಲಿ. ಮುಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಭೆಟ್ಟಿಯಾಗೋಣ. ಸ್ವೀಟ್ ಮಾತುಗಳ ಜೊತೆಜೊತೆಗೇ, ’ಥೇಟ್ ಮೆಣಸಿನಕಾಯಿ’ ಆಗಿ ನಾಡಿನ ಇಂದಿನ ಜ್ವಲಂತ ವಿಷಯ/ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಕೂಡ.> ಇದಕ್ಕೆ ಮಂಜು ಈ ಕೆಳಗಿನಂತೆ ಉತ್ತರಿಸಿದ್ದಾರೆ: <ಶಾಸ್ತ್ರಿಗಳೆ, ನಿಮ್ಮ೦ಥ ಹಿರಿಯರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ನಾವೆಲ್ಲರೂ ನಿಮ್ಮ೦ಥವರನ್ನು ನಿರೀಕ್ಷಿಸಿದ್ದೆವು. ಸ೦ಪದ ಸ೦ಮಿಲನಕ್ಕೆ ನೀವು ಬ೦ದಿದ್ದರೆ ಬೇರೆಯದೇ ರೀತಿಯ ಕಳೆ ಕಟ್ಟುತ್ತಿತ್ತು. ಇರಲಿ, ಮು೦ದಿನ ಸಲ ನಿಮ್ಮನ್ನುನಿರೀಕ್ಷಿಸುತ್ತೇವೆ.> ಇದಕ್ಕೆ ನನ್ನ ಪ್ರತ್ಯುತ್ತರ ಹೀಗಿದೆ: "ಮುಂದಿನ ಸಲ ನಾನು ಬರುತ್ತೇನೆ. ’ಕಳೆ’ಯುತ್ತೇನೆ, ಕೂಡುತ್ತೇನೆ, ಗುಣಿಸುತ್ತೇನೆ, ಭಾಗಿಸುತ್ತೇನೆ." (ಏಕತಾನವನ್ನು ಕಳೆಯುತ್ತೇನೆ, ಸಹೃದಯರ ಮನಸ್ಸುಗಳನ್ನು ಕೂಡುತ್ತೇನೆ, ಸಂತಸವನ್ನು ಗುಣಿಸುತ್ತೇನೆ, ಹೊಣೆಗಾರಿಕೆಗಳನ್ನು ಭಾಗಿಸುತ್ತೇನೆ.)

ಸು೦ದರ ನೆನಪುಗಳನ್ನು ಬಿಚ್ಚಿಟ್ಟಿದ್ದೀರಿ. ನನಗಾದ ನಿರಾಸೆ ಹೇಳತೀರದು. ಭಾವಚಿತ್ರಗಳಲ್ಲಿಯೇ ಕಾರ್ಯಕ್ರಮವನ್ನು ಕಟ್ಟಿಕೊಟ್ಟಿದ್ದೀರಿ. ವ೦ದನೆಗಳು.

ಖಂಡಿತ ಸರ್, ಅಸುಹೆ ಅವರು ದೂರವಾಣಿ ಸಂಖ್ಯೆಯನ್ನು ಉಳಿಸಿಕೊಂಡಿರುತ್ತೇನೆ. ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ. ಧನ್ಯವಾದಗಳು. ಅಂಬಿಕಾ

ಕಾರ್ಯಕ್ರಮದ ಚಿತ್ರಗಳನ್ನು ನೋಡಿ ಖುಷಿ ಆಯ್ತು.. ಬಂದ ಸಂಪದಿಗರ ಗ್ರೂಪ್ ಫೋಟೋ ಎಲ್ಲಿಯೂ ಕಾಣವಲ್ತು.. ಅಲ್ಲಿ ವಾಚಿಸಿದ ಕವಿತೆ,ಕಥೆ ,ವಿಮರ್ಶೆ,ಅನುಭವ,ಹಿತವಚನಗಳನ್ನು ಅಕ್ಷರ ರೂಪಕ್ಕೆ ಇಳಿಸಿದರೆ ನಾವೂ ಓದಬಹುದು..

ಶ್ರೀಕಾಂತ್ ಅವರೇ ಗ್ರೂಪ್ ಫೋಟೋ ಹರೀಶ್ ಅವರಿಗೆ ರವಾನಿಸಿದ್ದೇನೆ ಅವರು ಅದರ ಪವರ್ ಪೊಯ್ಂಟ್ ಪ್ರಸೆಂಟೇಷನ್ ತಯಾರಿಸುತ್ತಿದ್ದಾರಂತೆ ಇನ್ನು ಸಂಮಿಲನದ ೨ ಘಂಟೆಯ ಧ್ವನಿ ಮುದ್ರಣವಿದೆ ನನ್ನಲ್ಲಿ ಅದನ್ನು ಎಲ್ಲಿ ಮತ್ತು ಹೇಗೆ ನಿಮ್ಮೆಲ್ಲರ ಮುಂದೆ ಇಡಬೇಂಬುದೇ ಗೊತ್ತಾಗುತ್ತಿಲ್ಲ.