ಏಷ್ಯಾಖಂಡದ ಅತ್ಯಂತ ಎತ್ತರದ ಏಕಶಿಲಾ ಬೆಟ್ಟ.

ಇತಿಹಾಸ ಪ್ರಸಿದ್ದ ಮಧುಗಿರಿಯ ಏಕಶಿಲಾಬೆಟ್ಟದ ಚಿತ್ರ ಇದು.ಮುಂದಿನಿಂದ ಮದಿಸಿದ ಆನೆ ಮಲಗಿದಂತೆ ಕಾಣುವ ಈ ಗಿರಿದುರ್ಗದ ಮೇಲೆ ಏಳು ಸುತ್ತಿನ ಕೋಟೆ ಇದೆ.ಅತ್ಯಂತ ಕಡಿದಾದ ಒಂದೇ ಕಲ್ಲು ಗಗನದೆತ್ತರಕ್ಕೆ ನಿಂತಂತೆ ಕಾಣುತ್ತದೆ.ಇಂತಹ ಕಡಿದಾದ ಎತ್ತರದ ಬೆಟ್ಟ ಬೇರೆ ದೇಶದಲ್ಲಿದ್ದಿದ್ದರೆ ಸಾಹಸಿಗಳ ಚಾರಣಕ್ಕೋ,ತರಬೇತಿಗಾಗಿಯೋ,ಅಥವಾ ಒಳ್ಳೆಯ ಪ್ರವಾಸಿ ಕೇಂದ್ರವಾಗಿ ಇರುತ್ತಿತ್ತು.ಆಸ್ಟ್ರೇಲಿಯಾದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಕಲ್ಲಿದೆ ಎಂದು ಓದಿದ ನೆನಪು.ಉತ್ತಮವಾದ ಕಲ್ಲಿನ ಭದ್ರವಾದ ಕೋಟೆ ಈಗಲೂ ಸುಸ್ತಿತಿಯಲ್ಲಿದೆ.ಬೆಟ್ಟದ ಮೇಲೆ ಅಂದಿನವರ ನೀರಿನಾಸರೆಗೆಂದು ಮಳೆನೀರಿನ ಕೊಯ್ಲು ಮಾಡಿ ತುಂಬಿಸುತ್ತಿದ್ದ ದೊಣೆಗಳೆಂಬ ನೀರಭಾವಿಗಳಿವೆ.ದುರಂತವೆಂದರೆ ಇದನ್ನು ಪ್ರವಾಸೀ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದೆ.ಚಿತ್ರವನ್ನು ಬೆಟ್ಟದ ಹಿಂಭಾಗದ ಹರಿಹರ ದೇವಸ್ಥಾನ ರಸ್ತೆಯಿಂದ ತೆಗೆದದ್ದು.

Taxonomy upgrade extras: