ತಾಳಗುಪ್ಪದ ಟ್ರೈನ್ ಕಾರ್

ಪ್ರತಿಕ್ರಿಯೆಗಳು

ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗ ನನಸಾದರೆ ದಾರಿ ಮಧ್ಯೆ ಜೋಗ ಜಲಪಾತದ ನೋಟವನ್ನೂ ಸವಿಯಬಹುದಂತೆ. ಬೆಳಗಾವಿಯಿಂದ-ಗೋವಾಕ್ಕೆ ಹೋಗುವಾಗ ದೂದ್-ಸಾಗರ್ ಜಲಪಾತ ನೋಡಿದ ಹಾಗೆ ಜೋಗ ಜಲಪಾತ ಕೂಡ ವೀಕ್ಷಿಸಬಹುದು. ಕೊಂಕಣ ರೈಲ್ವೆ ಇದರ ನಿರ್ವಹಣೆ ವಹಿಸುತ್ತಿರುವುದರಿಂದ ಈ ರೈಲ್ವೆ ಮಾರ್ಗವು ಬಹುಬೇಗ ಪೂರ್ಣಗೊಳ್ಳುವುದು ನಿಶ್ಚಿತ. ಆದರೆ ರೈಲ್ವೆ ಮಾರ್ಗಕ್ಕೆ ಮಾನ್ಯ ರೈಲ್ವೆ ಸಚಿವರು ಇನ್ನೂ ಅನುಮೋದನೆ ನೀಡಿಲ್ಲ :(.

ಈಗಾಗಲೇ ಶಿವಮೊಗ್ಗದಿಂದ ತಾಳಗುಪ್ಪದವರೆಗೆ ಗೇಜ್ ಪರಿವರ್ತನೆಯ ಕೆಲಸ ನಡೆಯುತ್ತಿರುವುದಱಿಂದ ಹಳಿಗಳನ್ನೆಲ್ಲ ಕಿತ್ತಿರುವುದಱಿಂದ ಶಿವಮೊಗ್ಗದಿಂದ ತಾಳಗುಪ್ಪದವರೆಗಿನ ರೈಲುಪ್ರಯಾಣ ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗದಿಂದ ತಾಳಗುಪ್ಪದ ನಡುವೆ ಬರುವ ಸಾಗರ ಪಟ್ಟಣ ನನ್ನೂರು. ಬಹಳ ವರ್ಷಗಳಿಂದ ಈ ಗೇಜ್ ಪರಿವರ್ತನೆಯನ್ನು ಚಾತಕಪಕ್ಷಿಯಂತೆ ಕಾಯುತ್ತಿದ್ದೇವೆ.