ನೂರಿಪ್ಪತ್ತು ವರ್ಷದ ಹಿಂದಿನ ಕನ್ನಡ ಬೋರ್ಡ್--ಭೂಷಣ್ ಮಿಡಿಗೇಶಿ

ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಬೋರನಕಣಿವೆ ಜಲಾಶಯಕ್ಕೆ ಮೊನ್ನೆ ಭೇಟಿ ಕೊಟ್ಟಾಗ ಅಲ್ಲಿದ್ದ ಕನ್ನಡ ಪಲಕ ಮತ್ತು ಅದರಲ್ಲಿದ್ದ ಅಕ್ಷರಗಳು ಅಪರೂಪವೆನಿಸಿ ಸಂಪದಿಗರಿಗಾಗಿ ಅಪ್ಲೋಡ್ ಮಾಡಿದ್ದೇನೆ.

ಪ್ರತಿಕ್ರಿಯೆಗಳು

ಡಾಕ್ಟ್ರೇ,
ಅಲ್ಲಿ ಕೆಲಸ ಮಾಡಿದ ಇಂಜಿನಿಯರ್ ಒಬ್ಬರು ತೆಲುಗಿನವರೆಂದು ಕಾಣ್ತಿದೆ.ಹಾಗಾಗಿ ತೆಲುಗಿನ ಪ್ರಭಾವ ಇರಬಹುದಲ್ಲವೇ.
ಭೂಷಣ್

ಇಂಜಿನಿಯರ್ ತೆಲುಗಿನವರು ಆಗಿರಲಿ. ಅದಕ್ಕೆ ಅಡ್ಡಿಯಿಲ್ಲ. ಆದರೆ, ಅವರೇ ಈ ಶಿಲಾಫಲಕವನ್ನು ಕೆತ್ತಿರುವರೇ ಎಂದು ನನ್ನ ಅನುಮಾನ!!!:):)

-ನಾಸೋ

>> ಎಷ್ಟೊಂದು ತೆಲುಗು ಅಕ್ಷರಗಳು

ಎಷ್ಟೊಂದು ಎಲ್ಲಿ ಬಂತು? ಎಲ್ಲವೂ ಕನ್ನಡ ಅಕ್ಷರಗಳೇ, ಅಂದಿನ ಕಾಲದಲ್ಲಿ ಕನ್ನಡ ಲಿಪಿಯ ಬಳಕೆಯೇ ಹಾಗಿತ್ತು. ರ‍್ ಕಾರಕ್ಕೆ ಈಗ ಹಲಂತ್ ಬಳಸುತ್ತಿದ್ದೇವೆ. ತೆಲುಗಿನಲ್ಲಿ ಅದೇ ರೂಪ ಇದೆ. ಇನ್ನು ನ್ ಕಾರವನ್ನು ನೋಡಿ, ಇಂದಿನ ಅರ್ಕಾವೊತ್ತಿಗೆ ಮತ್ತೊಂದು ಬಾಲಂಗೋಚಿ ಸೇರಿಸಿದಂತಿದೆ (ಎರಡು ಕಡೆ ಬಳಕೆಯಾಗಿದೆ) ಇದೂ ಕೂಡಾ ಮೊನ್ನೆಮೊನ್ನೆಯವರೆಗೂ ಕನ್ನಡದಲ್ಲಿ ಬಳಕೆಯಲ್ಲಿತ್ತು.

ಪ್ರೀತಿಯಿಂದ
ಸಿ ಮರಿಜೋಸೆಫ್

ಎಷ್ಟೋಂದು ತೆಲುಗು ಅಕ್ಷರಗಳು ಇಲ್ಲದಿರಬಹುದು. ಆದರೆ ರ್, ಸ್, ಲ್, ಪ್, ಟ್, ವ್ ಅಕ್ಷರಗಳು ಬರಹದಲ್ಲಿ “ಇಂದಿನ” ತೆಲುಗು ಅಕ್ಷರಗಳನ್ನು ಹೋಲುತ್ತವೆ ಎಂದು ಹೇಳುವುದಷ್ತೇ ನನ್ನ ಉದ್ದೇಶವಾಗಿತ್ತು. ತೆಲುಗು, ಆ ಅಕ್ಷರಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಕನ್ನಡವು ಮುಂದುವರೆದು ತನ್ನ ರೂಪವನ್ನು ಬದಲಿಸಿಕೊಂಡಿದೆ ಎಂಬ ತಮ್ಮ ಅಭಿಪ್ರಾಯವು ನನಗೆ ಅರ್ಥವಾಯಿತು!!!!

-ನಾಸೋ

ಕೃಷ್ಣದೇವರಾಯನಕಾಲಕ್ಕೆ ಕನ್ನಡ ಮತ್ತು ತೆಲುಗಿಗೆ ಒಂದೇ ಲಿಪಿ ಬೞಸುತ್ತಿದ್ದರು. ಹಾಗಾಗಿ ಕನ್ನಡದ ಹೞೆಯ ಬರಹಗಳು ತೆಲುಗಿನ ಬರಹಗಳಂತೆಯೇ ಕಾಣುತ್ತವೆ. ಹಾಗಾಗಿ ಈಗಲೂ ಕನ್ನಡ ಮತ್ತು ತೆಲುಗಿನ ಬರಹಗಳಲ್ಲಿ ಕೇವಲ ಹೆಚ್ಚೆಂದರೆ ೧೦% ವ್ಯತ್ಯಾಸ ಇರಬಹುದೇನೋ. ಈಗಲೂ ನಂಜನಗೂಡಿನ ದೇವಸ್ಥಾನದ ಸುತ್ತಲೂ ಕನ್ನಡದಲ್ಲಿ ಬರೆದ ದೇವರ ಹೆಸರುಗಳು ತೆಲುಗಿನಲ್ಲಿ ಬರೆದಿದ್ದಾರೇನೋ ಅನಿಸುತ್ತೆ. ಅಲ್ಲದೆ ವಿಜಯನಗರದ ಪತನದ ನಂತರ ಆ ವಂಶಸ್ಥರೇ ಮೊದಲು ಶ್ರೀರಂಗಪಟ್ಟಣ ನಂತರ ಮೈಸೂರಿನಲ್ಲಿ ಸಂಸ್ಥಾನ ಸ್ಥಾಪಿಸಿದರು.
ಕನ್ನಡಕಂದ.

ಕನ್ನಡದ ಮೇಲೆ ಪರಭಾಷಾ ಹಾವಳಿ ಇ೦ದು ನೆನ್ನೆಯದಲ್ಲ, ನೂರಾರು ವರ್ಶಗಳಿ೦ದ ನಡೆದು ಬರುತ್ತಿದೆ ಅನ್ನೋದನ್ನ ನಿರೂಪಿಸುವ೦ತಿದೆ :) "ಶ್ರೀ ಜಯಚಾಮರಾಜೇ೦ದ್ರ ಒಡೆಯರ್ ಬಹಾದ್ದೂರ್" ಆದಮೇಲೆ ಇರುವುದೇನು?

ಸಿಕ್ತು.. ಧನ್ಯವಾದಗಳು ನಾಸೋ ಅವರಿಗೆ.
ಮಹಾರಾಜರಿಗೆ ಕೊಟ್ಟಿದ್ದು ಜಿ. ಸಿ. ಎಸ್. ಐ (Knights Grand Commander of the Order of the Star of India)
ದಿವಾನರಿಗೆ ಕೊಟ್ಟಿದ್ದು ಕೆ.ಸಿ.ಎಸ್.ಐ (Knights Commander of the Order of the Star of India)

ಹೆಚ್ಚಿನ ವಿವರಗಳು : http://en.wikipedia.org/wiki/GCSI

ಅಮ್ಮಾ ವಿನುತಾ ಅವರೇ,

>> "ಶ್ರೀ ಜಯಚಾಮರಾಜೇ೦ದ್ರ ಒಡೆಯರ್ ಬಹಾದ್ದೂರ್" ಆದಮೇಲೆ

ಇಲ್ಲಿರುವುದು ಚಾಮರಾಜ ಒಡೆಯರು ಮಾತ್ರ, ಸರಿಯಾಗಿ ನೋಡಿ.

ಪ್ರೀತಿಯಿಂದ
ಸಿ ಮರಿಜೋಸೆಫ್

ಒಂದು ಒಳ್ಳೆಯ ಪಠ್ಯ ಕೊಟ್ಟಿರಿ ಮಾನ್ಯ ಭೂಷಣ್ ಅವರೇ,

ಬೋರನಕಣಿವೆ ಕಟ್ಟೆ
ರಾಜ್ಯಭಾರ
ಶ್ರೀಚಾಮರಾಜೇಂದ್ರ ಒಡೆಯರ‍್ ಬಹಾದೂರ‍್ ಜಿ ಸಿ ಎಸ್ ಐ
ದಿವಾನ್ ಬಹಾದೂರ‍್ ಸರ‍್ ಕೆ ಶೇಷಾದ್ರೈಯರ‍್ ಕೆ ಸಿ ಎಸ್ ಐ

ಮೇಲ್ ವಿಚಾರಣೆ
ಚೀಫ್ ಇಂಜಿನಿಯರ‍್ ಕರ್ನಲ್ ಸಿ ಬವನ್ ಆರ‍್ ಇ
ಅಸಿಸ್ಟೆಂಟ್ ಚೀಫ್ ಇಂಜಿನಿಯರ‍್ ಡಬ್ಳಿಯು ಮೆಕರ್ಟಿ ಯಸ್ಕ್ವಯರ‍್ ಸಿ ಇ

ಕೆಲಸದ ಮೇಲೆ
ಯಕ್ಸಿಕ್ಯುಟಿವ್ ಇಂಜಿನಿಯರ‍್ ಮ ರಾ ರಾ ಚೂನೀಲಾಲ್ ತಾರಾಚಂದ್ ದಲಾಲ್ ಯಲ್ ಸಿ ಇ
ಅಸಿಸ್ಟೆಂಟ್ ಇಂಜಿನಿಯರ‍್ ಮ ರಾ ರಾ ಬಿ ಪಿ ರಾಘವಲನಾಯುಡು
ಸೂಪರ‍್ವೈಜರ‍್ ಮ ರಾ ರಾ ಬಿ ವಸಂತಪ್ಪನವರು

ಕೆಲಸ ಸುರು ಸನ್ ೧೯೮೮ನೇ ಇಸವಿ
ಪೂರೈಸಿದ್ದು ಸನ್ ೧೮೯೨ನೇ ಇಸವಿ

ನಮ್ಮ ಊರಿನ್ ತಾವಲ್ಲೂ ಇಂಥದೊಂದು ಶಾಸನ ಐತೆ.

ಸ್ವಸ್ತಿ ಶ್ರೀ ತುಱೈನಾಟ್ಟು
ಇಡೈತ್ತುಱೈನ್ನಾಡು [ದೇ]
ಶಿ ಉಯ್ಯಕ್ಕೊಣ್ಡ [ಶೋ]
ೞ ಪಟ್ಟಣಮಾನ ಜಿ
ಯಮ್ಪೊೞುಲ್ಲುಡೈ
ಯನಾಯೞುಕಿೞವಾರ್
ಪೊನ್ನಾಣ್ಡಾನ್ ಮಗ
ನ್ ಅಙ್ಗಕ್ಕಾಱನಾನ ಇರ
ಣ್ಡ ಱುಸುಯಿರತ್ ತನ್
ಚೈ ಮಾನಗರ ನೂಱುನೂ
ಱಾಮಿನ್ದ ಶಮದಿ ಗಙ್ಗ
ಮಣ್ಡಲ ದೇಶಿ

ಪ್ರೀತಿಯಿಂದ
ಸಿ ಮರಿಜೋಸೆಫ್

dear mari josephravare,
bengalurige bandidde.i astonished to see how much discussion was made on a kannada board.thanks for all the people who participated and discuussed in the issue.thanks for one and all.
there is no baraha font in this system. so i typed in english.
bhushan medigeshi

ಭೂಷಣ್ ಅವರೇ, ಇಲ್ಲಿ ಕನ್ನಡ ಟೈಪಿಸಲು ಬರಹ ಇರಲೇಬೇಕು ಎಂಬ ಭಾವನೆ ಬೇಡ. ಸಂಪದಲ್ಲೇ ಪಕ್ಕದಲ್ಲಿರುವ ಪಟ್ಟಿ ನೋಡಿ.ನೋಡಿ.

*ಚಟುವಟಿಕೆ
*ಕನ್ನಡ ಬಟನ್ನುಗಳು
*ಮತ್ತಷ್ಟು ಓದು...
*ಕನ್ವರ್ಟರ್
*Log out

ಇಲ್ಲಿರುವ ಕನ್ವರ್ಟರ‍್ ಬಳಸಿ ಕನ್ನಡ ಟೈಪಿಸಬಹುದು.
ಅಂತರ್ಜಾಲ ಇದ್ದರೆ ನೂರೆಂಟು ದಾರಿಗಳಿವೆ. http://www.quillpad.com/kannada/ ಈ ಸೈಟು ತೆರೆದು ಬರಹದಲ್ಲಿಯಂತೆಯೇ ಕನ್ನಡ ಟೈಪಿಸಬಹುದು.

ಪ್ರೀತಿಯಿಂದ
ಸಿ ಮರಿಜೋಸೆಫ್