ನಾನಾರು?

ಈ ಕೂಡ ಕೊಟ್ಟಿರುವ ಕೀಟವು ಕೇವಲ ಸುಮಾರು ೩ ಸೆ.ಮೀ. ಉದ್ದ ಹಾಗು ೬ ಸೆ.ಮೀ ಎತ್ತರ (ಅದರ ಮೀಸೆಗಳ ಉದ್ದವೂ ಸೇರಿ) ಇರಬಹುದು. ನಮ್ಮ ಮನೆಯ ಬಾಗಿಲಲ್ಲಿ ಬೆಳೆಸಿರುವ ದಾಸವಾಳ ಗಿಡದ ರೆಂಬೆಯೊಂದರಿಂದ ಕಾಂಪೌಂಡ್ ಗೇಟಿಗೆ ನೆಗೆದು ಬಂದು ಕುಳಿತುಕೊಳ್ಳುವುದಕ್ಕೂ, ನಾನು ಕ್ಯಾಮರಾ ಹಿಡಿದು ಅಲ್ಲಿಗೆ ಹೋಗುವುದಕ್ಕೂ ಸರಿಹೋಯಿತು. ಅದು ಜಾಗ ಖಾಲಿ ಮಾಡುವುದಕ್ಕೆ ಮುಂಚೆಯೇ ಅದರ ಸೂಕ್ಷ್ಮ ಛಾಯಾಚಿತ್ರ ತೆಗೆದು ಸಂಪದೋದುಗರಿಗೆ ನೀಡುತ್ತಿರುವೆ. ಅದು ೪ ಕಾಲುಗಳಮೇಲೆ ಹಸುಕರುಗಳಂತೆ ನಡೆಯುತ್ತಿತ್ತು. ಇನ್ನಿತರ ವಿಚಿತ್ರ ರೀತಿಯ ಮೈಮಾಟ. ಸ್ವಲ್ಪಹೊತ್ತು ಹಾಗೆಯೇ ಕುಳಿತಿದ್ದು, ನಂತರ ತನ್ನ ದಾರಿ ಹಿಡಿದು ಹೊರಟುಹೋಯಿತು. ಸಂಪದೋದುಗರಿಗ್ಯಾರಿಗಾದರೂ ಇದರ ಬಗ್ಗೆ ತಿಳಿದಿದ್ದರೆ ತಿಳಿಸಿಕೊಡಿ.
ಧನ್ಯವಾದಗಳು.
ಎ.ವಿ. ನಾಗರಾಜು

Taxonomy upgrade extras: 

ಪ್ರತಿಕ್ರಿಯೆಗಳು

ನನಗೂ ಈ ಕೀಟದ ಬಗ್ಗೆ ತಿಳಿದಿಲ್ಲ. ಆದರೆ ಚಿತ್ರ ಮಾತ್ರ ಬಹಳ ಚೆನ್ನಾಗಿದೆ. ಮೀಸೆ ಅಂತು ಸೂಪರ್.