ಬಾನಿಗೇರಲಾಗದ ಗಾಳಿಪಟ

ಇದು ಟೀಂ ಮಂಗಳೂರಿನ ಕಲಾಸಕ್ತರು ಹಗಲಿರುಳು ಶ್ರಮಿಸಿ ಕಟ್ಟಿದ ಗಾಳಿಪಟ. ಫ್ರಾನ್ಸಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕಾಗಿ ತಯಾರಿಸಲಾದ ಈ ವಿಶೇಷ ಗಾಳಿಪಟಕ್ಕೆ ಮಂಗಳೂರಿನ ಕಡಲ ಕಿನಾರೆಯಲ್ಲಿ ಹಾರುವ ಸೌಭಾಗ್ಯವಿಲ್ಲ. ಇದನ್ನು ನೋಡಿದಾಗ ನಿಮಗೇನನಿಸುತ್ತದೆ? 

ಪ್ರತಿಕ್ರಿಯೆಗಳು

ಟೀಂ ಮಂಗಳೂರಿನ ಬಗ್ಗೆ ಬಹಳ ಕೇಳಿರುವೆ.

ನಿಮ್ಮ ಪ್ರಶ್ನೆಗೆ ಉತ್ತರ ನೇರ ಹೇಳಬೇಕೆಂದರೆ ಮಂಗಳೂರಿನಲ್ಲಿರುವುದು ಎನ್ನಲಾದ ಕಮ್ಯೂನಲ್ ವಾತಾವರಣ?
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

>>ನಿಮ್ಮ ಪ್ರಶ್ನೆಗೆ ಉತ್ತರ ನೇರ ಹೇಳಬೇಕೆಂದರೆ ಮಂಗಳೂರಿನಲ್ಲಿರುವುದು ಎನ್ನಲಾದ ಕಮ್ಯೂನಲ್ ವಾತಾವರಣ?

ಮಂಗಳೂರಲ್ಲಿ ಅಂತಹ ಸಮಸ್ಯೆಯೇನೂ ಇಲ್ಲ ನಾಡಿಗರೇ.. ಅದನ್ನು ಮಂಗಳೂರಲ್ಲಿ ಹಾರಿಸಲಾಗದಿರುವುದಕ್ಕೆ ಕಾರಣ, ಅದು ಫ್ರಾನ್ಸ್ ಉತ್ಸವಕ್ಕಾಗಿ ಮಾಡಿರುವುದು ಇರಬೇಕು....ಏನನ್ನಿಸುತದೆ ಎಂಬ ಪ್ರಶ್ನೆ ಗಾಳಿಪಟದ ಬಗೆಗಿದೆ ಅಲ್ಲವೇ? ಬಹಳ ಚೆನ್ನಾಗಿದೆ ಅಲ್ಲವೇ?
*ಅಶೋಕ್

ಮಿತ್ರರೆ, ನಿಮ್ಮಿಬ್ಬರ ಪ್ರತಿಕ್ರಿಯೆಗಳೂ ಸರಿಯೇ. ಈ ಸುಂದರವಾದ ಗಾಳಿಪಟಕ್ಕೆ ಕೋಮುವಾದಿಗಳ ಕಿರುಕುಳದಿಂದಾಗಿ ಬಾನಿಗೇರಲು ಸಾಧ್ಯವಾಗಿಲ್ಲ. ಈ ವಾಸನೆ ನಾಡಿಗರಿಗೆ ಹೊಡೆದದ್ದು ದ.ಕ. ಜಿಲ್ಲೆಯ ಸದ್ಯದ ರೆಪುಟೇಷನ್ನಿಗೆ ಸಾಕ್ಷಿ, ಆದರೆ ಇದಂತೂ ನಮಗೆಲ್ಲಾ ದುಃಖವನ್ನುಂಟು ಮಾಡುತ್ತಿರುವ ವಿಚಾರವೇ.

ಇದೇ ಸೆಪ್ಟೆಂಬರ್ 5ರಿಂದ 14ರವರೆಗೆ ಫ್ರಾನ್ಸಿನ ತೀಪೆಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಹಾರಿಸಲಿಕ್ಕೆಂದು ಗಣೇಶನ ಮುಖದಾಕೃತಿಯ ಸುಂದರವಾದ ಗಾಳಿಪಟವೊಂದನ್ನು ಟೀಂ ಮಂಗಳೂರು ತಂಡದವರು ತಯಾರಿಸಿ, ಆಗಸ್ಟ್ ಕೊನೆಯ ವಾರದಲ್ಲಿ ಅದನ್ನು ಪಣಂಬೂರಿನ ಕಡಲ ಕಿನಾರೆಯಲ್ಲಿ ಪರೀಕ್ಷಾರ್ಥವಾಗಿ ಹಾರಿಸಲು ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ‘ಹಿಂದೂ ದೇವರುಗಳ ಮಾನವನ್ನು ರಕ್ಷಿಸುವುದಾಗಿ’ ಹೇಳಿಕೊಳ್ಳುವ ಸಂಘಟನೆಯೊಂದು ಈ ಪ್ರಯತ್ನಗಳಿಗೆ ಅಡ್ಡಗಾಲು ಹಾಕಿತು; ಅಂತಹಾ ಗಾಳಿಪಟವನ್ನು ಹಾರಿಸುವುದರಿಂದ ‘ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆಯೆಂದೂ’, ಈ ಕಾರಣಕ್ಕಾಗಿ ಗಾಳಿಪಟವನ್ನು ಮಂಗಳೂರಷ್ಟೇ ಅಲ್ಲ, ಜಗತ್ತಿನ ಯಾವ ಭಾಗದಲ್ಲೂ ಹಾರಿಸಬಾರದೆಂದೂ, ಹಾರಿಸಿದರೆ ಪರಿಸ್ಥಿತಿಯು ನೆಟ್ಟಗಿರುವುದಿಲ್ಲವೆಂದೂ ಬೆದರಿಸಲಾಯಿತು. ಸಮಸ್ತ ಹಿಂದೂ ಧರ್ಮೀಯರ ವಕ್ತಾರರಾಗಿ ಇವರನ್ನಾರು ನೇಮಕಮಾಡಿದರೆನ್ನುವುದಾಗಲೀ, ಇವರು ಒಂದಿಬ್ಬರ ‘ಭಾವನೆಗಳಿಗೆ ನೋವಾದರೆ’ ಸಮಸ್ತ ಹಿಂದೂಗಳ ಭಾವನೆಗಳೂ ಅವೇ ಹೇಗಾಗುತ್ತವೆಯೆನ್ನುವುದಾಗಲೀ, ಒಂದಿಬ್ಬರಿಗೆ ಆ ಗಾಳಿಪಟವನ್ನು ನೋಡುವ ಇಷ್ಟವಿಲ್ಲದಿದ್ದರೆ ದಕ್ಷಿಣ ಕನ್ನಡದ ಸಮಸ್ತ ಜನತೆಯೂ ಆ ಸುಂದರವಾದ ಕಲಾಕೌಶಲ್ಯವನ್ನು ಕಂಡು ಆನಂದಿಸುವ ಅವಕಾಶದಿಂದ ಯಾಕೆ ವಂಚಿತರಾಗಬೇಕೆನ್ನುವುದಾಗಲೀ ಸ್ಪಷ್ಟವಿಲ್ಲ. ಅಷ್ಟೇ ಅಲ್ಲ, ಗಾಳಿಪಟದಲ್ಲಿ ಗಣೇಶನ ಮುಖವನ್ನು ಬಿಂಬಿಸುವುದರಿಂದ ಗಣೇಶನ ಅವಹೇಳನ ಮತ್ತು ಹಿಂದೂಗಳ ಅಪಮಾನ ಹೇಗಾಗುತ್ತದೆಯೆನ್ನುವುದಕ್ಕೆ ಮೂರು ಸದಸ್ಯರ ಸಂಘಟನೆಯ ವಕ್ತಾರನಲ್ಲಿ ಉತ್ತರವೂ ಲಭ್ಯವಿಲ್ಲ.(ಗಾಳಿಪಟ ತಯಾರಿಸಿದವರೆಲ್ಲರೂ ಹಿಂದೂ ಧರ್ಮೀಯರೇ ಆಗಿದ್ದಾರೆನ್ನುವುದೂ ಇನ್ನೊಂದು ವಿಪರ್ಯಾಸ!) ಕೆಲ ತಿಂಗಳ ಹಿಂದೆ ನಗರದ ಚಿತ್ರಮಂದಿರದಲ್ಲಿ ಜೋಧಾ ಅಕ್ಬರ್ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದ ಇದೇ ಸಂಘಟನೆಯು ಬಹುಷಃ ಅದರ ಯಶಸ್ಸಿನಿಂದ ಇನ್ನಷ್ಟು ಆತ್ಮಬಲವನ್ನು ಪಡೆದಿರಬೇಕು. ನಮ್ಮ ಮೌನದ ಪರಿಣಾಮವದು. ಈಗಲೂ ನಮ್ಮ ಮೌನವು ಮುಂದುವರಿದಿದೆ.

ಈ ಗಾಳಿಪಟವನ್ನು ನೋಡಿ ನಿಮ್ಮ 'ಭಾವನೆ'ಗಳಿಗೇನಾದರೂ 'ನೋವಾಗಿದೆಯೇ' ಎಂದು ತಿಳಿಯುವ ಆಸಕ್ತಿಯೂ ನನಗಿದೆ.

[quote]ನಿಮ್ಮಿಬ್ಬರ ಪ್ರತಿಕ್ರಿಯೆಗಳೂ ಸರಿಯೇ. ಈ ಸುಂದರವಾದ ಗಾಳಿಪಟಕ್ಕೆ ಕೋಮುವಾದಿಗಳ ಕಿರುಕುಳದಿಂದಾಗಿ ಬಾನಿಗೇರಲು ಸಾಧ್ಯವಾಗಿಲ್ಲ.[/quote]
ನಾಡಿಗರ ಟಿಪ್ಪಣಿ ಸರಿ ಎನ್ನುವುದು ತಿಳಿದು ಬೇಜಾರಾಯಿತು. :(
*ಅಶೋಕ್