ಆಷಾಢ ಮಾಸ ಅಶುಭವೇಕೆ ?

3.2

ಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ.
ಅದೇ ರೀತಿ ಆಷಾಡ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ, ಹೊಸ ಬಟ್ಟೆಗಳನ್ನು ಕೊಂಡುಕೊಳ್ಳುವುದಿಲ್ಲ, ಉಡುವುದಿಲ್ಲ, ವಧು/ವರಪರೀಕ್ಷೆ ನಡೆಸುವುದಿಲ್ಲ, ಹೊಸ ವಾಹನಗಳನ್ನು ಖರೀದಿಸುವುದಿಲ್ಲ. ಈ ರೀತಿ ಆಷಾಡದಲ್ಲಿ ಯಾವುದೇ ಶುಭಕಾರ್ಯಗಳು ನಿಷಿಧ್ಧವೇಕೆ ? ಇದಕ್ಕೆ ಯಾವುದೇ
ರೀತಿಯ ವೈಜ್ನಾನಿಕ ಕಾರಣಗಳಿವೆಯೇ ? ಏಕೆಂದರೆ, ಹಿಂದಿನವರು ಮಾಡಿದ ಪ್ರತಿಯೊಂದಕ್ಕೂ ಯಾವುದೋ ನಿರ್ಧಿಷ್ಟ ಕಾರಣಗಳಿರುತ್ತವೆ. ನಿಮ್ಮಲ್ಲಿ ಬಲ್ಲವರು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಮಾನ್ಯವಾಗಿ ಆಷಾಡದ ಸಮಯದಲ್ಲಿ ರೈತರು ಬೇಸಾಯದಲ್ಲಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಬಿತ್ತನೆ , ಕಳೆ ಕೀಳುವುದು ಇತ್ಯಾದಿ. ಈ ಸಮಯದಲ್ಲಿ ಸಾಕಷ್ಟು ಸಮಯ ಬೇಡುವ ಮದುವೆ ಮುಂಜಿ ಮುಂತಾದುವುಗಳನ್ನು ಇಟ್ಟುಕೊಳ್ಳುವುದಿಲ್ಲ.

ಸದಾ ಗಂಡನೊಂದಿಗಿರುವುದು ಶಾರೀರಿಕ ಹಾಗು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಇನ್ನು ಬೇರೆ ಕಾರಣಗಳಿರಬಹುದು.

JUST BE HAPPY

ಎನ್. ಅಂಜನ್ ಕುಮಾರ್

ಹೌದು ಈ ನಿಟ್ಟಿನಲ್ಲಿ ನಾನೂ ಯೋಚಿಸಿದ್ದಿದೆ. ಯಾರೂ ಸರಿಯಾದ ಕಾರಣವನ್ನು ಕೊಡಲಿಲ್ಲ.

ಆದರೆ ಆಷಾಡದಲ್ಲಿ ಗಂಡ ಹೆಂಡತಿ ಈಗ ಸೇರಿದರೆ ೯ ತಿಂಗಳ ನಂತರ ಅಂದರೆ ಬೇಸಿಗೆ ಕಾಲದಲ್ಲಿ ಮಗುವಾಗುವುದರಿಂದ ಬಹಳ ತ್ರಾಸಾಗುತ್ತದೆ , ಆದ್ದರಿಂದ ಅದು ನಿಷಿದ್ಧ ಎಂದು ತಿಳಿದುಬಂತು.

**************************
http://vikasavada.blogspot.com/
**************************

veena.

ಆದರೆ ಪ್ರತಿ ವರ್ಷದ ಆಷಾಡದಲ್ಲಿ ಗಂಡ ಹೆಂಡತಿಯರನ್ನು ಅಗಲಿಸುವುದಿಲ್ಲ. ಮದುವೆಯಾದ ಮೊದಲ ವರ್ಷ ಮಾತ್ರ ಈ ಪದ್ದತಿ. ಹಾಗೂ ಇಂದಿನ ಕಾಲದಲ್ಲಿ ಗಂಡ ಹೆಂಡತಿ ಒಂದು ಊರಿನಲ್ಲಿ, ಅತ್ತೆ-ಮಾವ ಒಂದು ಊರಿನಲ್ಲಿ ಇರುತ್ತಾರೆ. ಆಗಲೂ ಈ ರೀತಿ ಮಾಡಿದರೆ, ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾಗುತ್ತದೆ.

ಮೊದಲ ವರ್ಷ ಸಂಭವ ಜಾಸ್ತಿ ಮತ್ತು ಹೆಂಡತಿ ಸ್ವಲ್ಪ ಹೊಂದಿಕೊಳ್ಳಲಿ...ಮೊದಲ ಬೇಸಿಗೆ ಯಲ್ಲೇ ತೊಂದರೆಯಾಗುವುದು ಬೇಡ ಎಂದಿರಬೇಕು :)
ನಂತರವಾದರೆ ಸ್ವಲ್ಪ ಅನುಭವಸ್ಥೆ ಆಗಿರುತ್ತಾಳೆ.

ಈಗ ಒಂದೆ ಊರಲ್ಲಿರುತ್ತಾರೆ. ಆದರೆ ಮೊದಲು ಹಂಗಿರಲಿಲ್ಲವಲ್ಲ.
ಒಂದೆ ಊರಲ್ಲಿದ್ದರು ಮನೆ ಬೇರೆ ಇರುತ್ತೆ ತಾನೆ.
ಒಂದೇ ಮನೆಯಲ್ಲಿದ್ದೂ ಕೂಡ ಬೇರೆ ಬೇರೆ ಇರಬಹುದಲ್ಲವೇ?
ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಲಬಹುದು. ಆದ್ರೆ ಸಂಪ್ರದಾಯ ಹಾಗೆ ಇದೆ ಅಷ್ಟೆ.

**************************
http://vikasavada.blogspot.com/
**************************