ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

5

ನಾವೇಕೆ ಹೀಗೆ?

ಗುಡ್ಡ ಸುತ್ತಿ ಮೈಲಾರಕ್ಕೆ ಹೋದಹಾಗೆ? ಯಾವುದೇ ವಿಷಯವಿರಲಿ, ಆ ಪರಿಸ್ಥಿತಿಯ ಆಳ, ಅಗಲ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಗಮನಿಸದೇ ಸಾರ್ವತ್ರಿಕವಾಗಿ ಹೇರ ಹೋಗುವುದು?
ಹೋಗಲಿ. ಅದು ವ್ಯಕ್ತಿ, ಸಮುದಾಯ ಅಥವಾ ಪ್ರಾದೇಶಿಕ ಹಂತದಲ್ಲಿ ಪರಿಹಾರ ಕಂಡುಕೊಳ್ಳಬಲ್ಲ ಸಮಸ್ಯೆಯಾಗಿದ್ದರೆ ಅಡ್ಡಿ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ ಸಾರ್ ಅದು ನಿಭಂಧ!

ಇದು ಸಾರ್ವತ್ರಿಕ ವಿಷ್ಯನೇ ಹೌದಲ್ವಾ. ಹಿಂದೂ ಬಹುಸಂಖ್ಯಾತ ಭಾರತ ದೇಶದಲ್ಲಿ ಬಹಳ ಜನರು ಭೇಟಿ ಕೊಡುವ ಒಂದು ದೇವಾಲಯಕ್ಕೆ ಜಾಗ ಕೊಟ್ಟಿದ್ದನ್ನ ವಿರೋಧಿಸುವುದು, ಅದನ್ನು ವಾಪಸ್ ಪಡೆಯುವುದು ಇವೆಲ್ಲಾ ಜಾತ್ಯಾತೀತ ದೇಶದ ಲಕ್ಷಣಗಳಾ? ಪ್ರಾದೇಶಿಕ ಹಂತದ ಸಮಸ್ಯೆ ದೇಶದ ಜನರಿಗೆಲ್ಲಾ ಆದ ಅವಮಾನವಲ್ವಾ?

ನಾವೇಕೆ ಹೀಗೆ?

**************************
http://vikasavada.blogspot.com/
**************************

ನಿಜ. ಕಾಶ್ಮೀರದಲ್ಲಿರುವ ಸಮಸ್ಯೆಗಾಗಿ ದೂರದಲ್ಲಿರುವ ಒಂದು ಊರನ್ನು ದಿನವಿಡೀ ಸ್ಥಗಿತಗೊಳಿಸೋದು ಸರಿಯಲ್ಲ.

ಸಮಸ್ಯೆಗೆ ಡಿಪ್ಲೋಮ್ಯಾಟಿಕ್ ಪರಿಹಾರ ಕಂಡುಕೊಳ್ಳಬೇಕೇ ಹೊರತು ಇದನ್ನು ಹಿಂದು vs ಮುಸ್ಲಿಮ್ ಎಂದು project ಮಾಡ ಹೊರಟರೆ ಸಮಸ್ಯೆ ದೊಡ್ಡದಾಗುತ್ತದೇ ವಿನಃ ಉತ್ತರ ಸಿಗೋದಿಲ್ಲ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಒ.ಕೆ ಹಾಗಿದ್ರೆ some muslims v/s ಅಮರನಾಥ್ ಅಂತ project ಮಾಡಬೇಕಲ್ವ?

ಆದ್ರೆ ಅಮರನಾಧಕ್ಕೆ ಬರೀ ಕಾಶ್ಮೀರಿಗಳು ಮಾತ್ರ ಹೋಗೊಲ್ಲ ಅಲ್ವಾ.

ಈಗ ಸಿಕ್ಕಿಂ ರಾಜ್ಯದೊಳಕ್ಕೆ ಚೀನೀಯರು ಬಂದು ಕುಂತರೆ ಅದು ಅಲ್ಲೆಲ್ಲೋ ಆಗಿದ್ದು ಅಂತ ನಾವು ತಣ್ಣಗೆ ಕುಳಿತುಬಿಡಕ್ಕಾಗುತ್ತಾ?

**************************
http://vikasavada.blogspot.com/
**************************

ಅಮರನಾಥ ಕೇವಲ ಒಂದು ರಾಜ್ಯಕ್ಕೆ ಸಂಭಂಧಿಸಿದ್ದಲ್ಲ.
ಅದು ಹಿಂದೂಗಳ ಪವಿತ್ರ ದೇವಾಲಯ.
ಹಿಂದೂಗಳ ಭಾವನೆಗೆ ಧಕ್ಕೆ ಉಂಟಾದರೆ, ಅದು ಎಲ್ಲೇ ಆಗಲಿ ಅದನ್ನು ಪ್ರತಿಭಟಿಸುವುದು ಹಿಂದೂ ಧರ್ಮ . ಇದು ನಮಗೆ ಮಾತ್ರವಲ್ಲ ಎಲ್ಲಾ ಧರ್ಮಗಳವರೂ ಅವರ ಧರ್ಮ , ಅವರ ಕಡೆಯವರಿಗೆ ನೋವು ಹಾಗು ಹಾನಿಯಾದರೆ ಇನ್ನೂ ಉಗ್ರವಾಗಿ ಪ್ರತಿಭಟಿಸುತ್ತಾರೆ.
ಪ್ರತಿಭಟನೆ ಮಾಡದಿದ್ದರೆ ಕೇಂದ್ರ ಸರ್ಕಾರ ತಾನು ಮಾಡಿದ್ದನು ಸರಿ ಎಂದೇ ತಿಳಿದು ನಾಳೆ ಇನ್ನೊಂದು ದೇವಾಲಯದ ಭೂಮಿ ಕಿತ್ತುಕೊಳ್ಳುತ್ತದೆ, ಇದೇ ಪರಿಪಾಠ ಮುಂಡುವರಿಯುತ್ತದೆ
ಎಲ್ಲರೂ ನಾವು ನಮ್ಮ ಉದ್ಯೊಗಕ್ಕೆ ಧಕ್ಕೆ ಆಗದೆ ಇದ್ದರೆ ಸಾಕು ಇಡೀ ದೇಶ ಕೊಳ್ಳೆ ಹೋದರೂ ಪರವಾಗಿಲ್ಲ ಎಂದರೆ ಹೇಗೆ ?

http://thereda-mana.blogspot.com/

ರೂಪ

ಸರಿಯಾಗಿ ಹೇಳಿದ್ದೀರ ನೋಡಿ. ಅಲ್ಲೆಲ್ಲೋ ಅಮೆರಿಕಾದಲ್ಲಿ ಏನೋ ಆದರೆ ಬಟ್ಟೆ ಒಳೆಗೆ ಚೇಳು ಬಿಟ್ಟುಕೊಂಡವರಂತೆ ಆಡುವ ಕೆಲವರಿಗೆ ಕಾಶ್ವೀರದ ವಿಷಯ ಅವರ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ಒಳವಿಷಯವಂತೆ !!.

**************************
http://vikasavada.blogspot.com/
**************************

ತಮ್ಮನು ತಾವು ಬಹಳ ಒಳ್ಳೆಯವರು, ಹಾಗು ಜಾತ್ಯಾತಿವಾದಿ ಗಳು ಅನ್ನಿಸಿಕೊಳುವವರು ಇಂತವುಗಳನ್ನು ವಿರೊದಿಸ್ತಾರೆ. ಬೆಂಗಳೊರಿನಲ್ಲಿ ಯೆನಾದರು ಆದರೆ ಮಂಗಳೋರಿನವರು ಯಾಕೆ ತಲೆ ಕೆಡಿಸಿಕೊಳಬೇಕು ಅನ್ನುವಂತಿದೆ ಕೆಲವರ ಅಬಿಪ್ರಾಯ. ಕಾಶ್ಮೀರದ ಹಿಂದುಗಳ ಕಷ್ಟ ಇವರಿಗೆ ಯೇನು ಗೊತ್ತು? ಅವರೊಂದಿಗೆ ನಾವು ಇದ್ದೇವೆ ಅನ್ನುವ ಒಂದು ಸಂದೇಶ ಈ ಬಂದ್.. ಇದನ್ನು ರಾಜಕೀಯ ಮಾಡಿ ಬೇಷ್ ಅನ್ನಿಸಿಕೊಳೊರು ಇದ್ದಾರೆ..