ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

0

ನಮ್ಮೆ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಗುಲ್ಬರ್ಗ,ಬಿಜಾಪುರ,ಬೀದರ್,ಶಿವಮೊಗ್ಗ ಈ ಎಲ್ಲ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳ ಅವಶ್ಯಕತೆ ಇದಯೆ?
ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ, ದಯವಿಟ್ಟು ಆ ಸ್ಥಳಗಳಲ್ಲಿ ಈ ವಿಮಾನ ನಿಲ್ದಾಣದ ಯೋಜನೆಯ ಪ್ರಾಮುಖ್ಯತೆ ಎಷ್ಟಿದೆ ಅಂತ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ರೀತಿಯಲ್ಲಿ ಬೇಕು, ಅಭಿವೃದ್ಧಿಯಾಗಬೇಕಿದೆ, ಆದರೆ ಇರುವ ರೋಡುಗಳು ಸರಿ ಮಾಡದೆ, ಮೂಲ ಸೌಕರ್ಯಗಳನ್ನು ಉತ್ತಮಪಡಿಸದೇ ವಿಮಾನ ನಿಲ್ದಾಣಕ್ಕೇ ನೇರ ಕೈ ಹಾಕಿದರೆ ಹೊರಬರುವುದು ಪ್ರಶ್ನೆಗಳೇ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

ಸರ್ಕಾರದವರು ನಮಗೆ ಕೊಡಲು ಬಯಸಿರುವ ಉಡುಗೊರೆ ಎಂದ್ರೆ "ಹೊಟ್ಟೆಗೆ ಹಿಟ್ಟು ಇಲ್ಲದೆ ಹೋದ್ರೂನು ಜುಟ್ಟಿಗೆ ಮಲ್ಲಿಗೆ ಹೂ" ಮುಡಿಸುತ್ತೇವೆ ಎಂಬ ಭರವಸೆ

ರೋಡು ಮಾಡ್ಸಿ, ಅದು ಆ ಸರ್ಕಾರ ಬೀಳೋಕಿಂತ ಮುಂಚೇನೇ, ಮೂರ್-ಸಲ ಕಿತ್ತೋಗಿ, ಎರಡ್-ಸಲ ತೇಪೆ ಹಾಕಿ, ಎತ್ತಿನ ಗಾಡಿ ಹೋಗೋಕೂ ಲಾಯಕ್ಕಿಲ್ದಂಗಾಗಿ, ಜನ್ರ ಹತ್ರ ಕೆಟ್ಟ(?) impression ಬೀಳ್ಸಕೊಳೋದಕಿಂತ....., ಏರ್-ಪೋರ್ಟ್ ಕಟ್ಸಿ, ಅವ್ರವ್ರಿಗೆ ಬೇಕಾದ(?) ಹೆಸ್ರಿಟು, ’ನೋಡ್ರಪ್ಪಾ ನಾವು ಹದಿಕಾರದಾಗ ಇದ್ದಾಗ ಇಮಾನ ನಿಲ್ದಾಣಾ ಮಾಡಿದ್ವಿ, ನೀವೇನ್ ಕಿಸಿದಿದ್ರ್ಯಪಾ..’ಅಂತ ಎಲಕ್ಷನ್ ಟೈಮಲ್ಲಿ ಕಿಸ್ಕಳಾಕ ಇರ್ಲಿ ಅಂತ ಸರ್ಕಾರದೋರ ಇಂತ prestigous(?) ಯೋಜ್ನೆಗಳ್ನ ಮಾಡದು ಅಮ್ತ ನನ್ನ ಅನಿಸಿಕೆ.....

ಒಳ್ಳೆ ಪ್ರಶ್ನೆ ! ಈಗ ಬೆ೦ಗಳೂರಲ್ಲಿ ಹೊಸ ವಿಮಾನ ನಿಲ್ದಾಣ ಮಾಡಿದ ನ೦ತರ .. ಅವೆನ್ಯೂ ರೋಡ್ ದೊಡ್ಡದು ಮಾಡ್ತಾರ೦ತೆ..
ಯಾಕ೦ದರೆ ಸೀದಾ ಎರ್ ಪೊರ್ಟ್ಗೆ ಲಿ೦ಕ್ ಸಿಗಲಿ ಅ೦ತಾ . ಆದರೆ ಈಗ ಇ೦ದಿರಾನಗರದಲ್ಲಿ ಎರ್ ಪೊರ್ಟ್ಗೆ ಹೋಗೋದಕ್ಕೆ ಅ೦ತಾ
ಒ೦ದು Fly over ಕಟ್ಟಿದರು , ಆದರೆ ವಿಮಾನ ನಿಲ್ದಾಣ ಶಿಪ್ಟ್ ಆದ ಮೇಲೆ ಅಲ್ಲಿ ಅಷ್ಟು ಟ್ರಾಪಿಕ್ ಇಲ್ಲಾ.
ಹಿ೦ಗೆ ಸರ್ಕಾರ ಕೆಲ್ಸಾ ಮಾಡೊದು ನಮ್ಮ ಸರ್ಕಾರ.