(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??

0

ನಮ್ಮ ಮಾತುಗಳು ಹೀಗಿರುತ್ತವೆ
೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ?  ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು)
೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? ( ಇಲ್ಲಿ 'ಏನೊ' ಗಂಡ್-ತೋರುಗ ಒರೆ, ಗಂಡಿಗೆ ಕೇಳುತ್ತಿರುವ ವಾಕ್ಯ ಇದು)


ಹೀಗೂ ಇರುತ್ತವೆ
೧. ನಾ ಹೊಂಟೆ ..ನೀ ಬರ್ತಿ? (ಇಲ್ಲಿ  ಗಂಡ್-ತೋರುಗ ಮೇಣ್ ಹೆಣ್-ತೋರುಗಗಳನ್ನು ಬಳಸಿಲ್ಲ ..ಇದನ್ನ ಇಬ್ಬರಿಗೂ ಬಳಸಬಹುದು)
೨. ನಾ ಹೊಂಟೆ..ನೀ ಬರಾಕ್ ಹತ್ತಿ? (------,,--------)

ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ನೀನೇ ಕೂಡ್ ಮಾತಾಡಕ್ ಹತ್ತೀವಿ. ನನ್ ಬಗ್ಗೆ. ನಿನ್ ಬಗ್ಗೆ ನನಗ್ಗೊತ್ತು. ನಮಗಿಬ್ಬರಿಗಿರೋ ಉಸಾಬರಿ ಮೂಱನೆಯವರದ್ದು. ಅದಕ ಅಂವನೋ ಅವ್ಳೋ ಬೇಕಷ್ಟೆ. ಅದ್ಕ ನನ್ಗೂ ನಿನ್ಗೂ ನನ್‍ ಬಗ್ಗೆ ನಿನ್‍ ಬಗ್ಗೆ ಹೆಣ್ಣೊ ಗಂಡೋ ಎನ್ನೋ ಉಸಾಬರಿ ಬೇಡೆನ್ನೋದು. ಅದ್ಕ ಈ ಏ ಓ ನಮ್ಮಿಬ್ಬರ ಹತ್ರ ನಡಿಯಂಗಿಲ್ಲ.