ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?

3

ವಿಶೇಶ್ವರ ಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಘೋಷಣೆ ಮಾಡಿಕೊಂಡಿರುವ ವಿಜಯ ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಬರಿ ಬೀಜೆಪಿಯಾ ಮುಖವಾಹಿನಿ ಆಗಿಬಿಟ್ಟಿದೆ.. ಮುಂಚೆ ತಮ್ಮ ತೀಕ್ಷ್ಣ ಬರಹಗಳಿಂದ ಬೇಗನೆ ಪ್ರಸಿದ್ದಿ ಪಡೆದ ಪ್ರತಾಪ್ ಸಿಮ್ಹಾರ ಲೇಖನಗಲೂನ್ತೂ ಓದಕ್ಕೆ ಆಗಲ್ಲ.. ಬರಿ ಹಿಂದೂ,ಬೀಜೆಪಿ ಇದ್ದನ್ನೇ ಬಂಡವಾಳ ಮಾಡಿಕೊಂಡು ಕಾತಚಾರಕ್ಕೆ ಬರಿಯೋ ಆ ಪುನ್ಯತ್ಮನ್ನ ಇನ್ನು ಯಾಕೆ ಬೀಜೆಪಿಯವು ಯಾಕೆ ಟಿಕೆಟ್ ಕೊಟ್ಟಿಲ್ಲ ಅಂತ ಗೊತ್ತಾಗಿಲ್ಲ? ದಿನ ಪತ್ರಿಕೆಗಳು ಬರಿ ಸುದ್ದಿ ತಲುಪಿಸುವ ಮಾಧ್ಯಮಗಳು ಅಸ್ತೆ.. ಅದೂ ಬಿಟ್ಟೂ ಕ್ರೈಮ್ ಸ್ಟೋರಿ, ಮೋಜು ಗೋಜು ಅಗಿಬಿತ್ತ್ರೆ ಆ ಪೇಪರ್ನೂ ಎಲ್ಲಿ ಇದ್ದಬೇಕೂ ಅಲ್ಲೇ ಇದ್ತಾರೆ.. ಒಂಚುರುದ್ರು ವಿಶ್ ಭಟ್ರನೂ, ತಿರುಮಲೇಶ್, ಸುಧೀಂದ್ರ ,ಶತವದಾನಿ ಗಣೇಶ್ ಅವರನ್ನು ನೋಡಿಕೊಂಡು ಪ್ರತಾಪ್ ಸಿಮ್ಹರು ಗಮ್ಬೀರ ಲೇಖನ ಬರೆಯೋ ಪ್ರಯತ್ನ ಮಾಡಲಿ ಇಲ್ಲ ಸುಮ್ನೆ ಬೀಜೆಪಿ ಕಡೆ ಸೇರಿಕೊಂಡು ಯಡಿಯೂರಪ್ಪ ನ ಜೊತೆ ಸಂಸಾರ ಮಾಡಲಿ ? ಯಾರೂ ತಂಟೆಗೆ ಬರಲ್ಲ..ಅದು ಬಿಟ್ಟು ತಾನೆ ದೊಡ್ದವನ್ನು ,ತಮ್ಮದೇ ದೊಡ್ಡದು ಅಂತ ಇದ್ದರೆ ಜನ ಬುದ್ದಿ ಕಲಿಸುತ್ತಾರೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಗಮನಿಸಿದ ಪ್ರಕಾರ ಇತ್ತೀಚೆಗೆ ಬಿ.ಜೆ.ಪಿ ಯನ್ನು ವಿ.ಕ ಟೀಕಿಸಿ ಬರೆಯುತ್ತಿರುವಷ್ಟು ಯಾವ ಪತ್ರಿಕೆಯೂ ಬರೆಯುತ್ತಿಲ್ಲ. ಚುನಾವಣೆ ಘೋಷಣೆಯಾದ ಮೇಲಂತೂ ವಿ.ಕ ಪತ್ರಿಕೆಯು ಬಿ.ಜೆ.ಪಿ ಯ ಪ್ರತಿ ಸಣ್ಣ ಸಣ್ನ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ.

ನೀವು ಹೆಚ್ಚಾಗಿ ಪ್ರತಾಪ ಸಿಂಹ ಮತ್ತು ವಿಶ್ವೇಶ್ವರ ಭಟ್ಟರು ಮೋದಿಯ ಆಡಳಿತವನ್ನು ಹೊಗಳಿ ಬರೆದುದ್ದಕ್ಕೆ ಹಾಗಂದುಕೊಂಡಿದ್ದೀರೋ ಏನೋ!! ಪ್ರತಾಪ ಸಿಂಹ ನಾಗಲೀ ಯಾರೇ ಆಗಲೀ ನೀವಂದುಕೊಂಡಂತೆ ಬರೆಯಬೆಕೆಂದು ಅಪೇಕ್ಷಿಸಿದರೆ ಹೇಗೆ?! ಹೆಚ್ಚು ಜನ ಇಷ್ಟ ಪಡುವುದರಿಂದಲೇ ಅವರು ಆ ರೀತಿ ಬರೆಯುತ್ತಿರಬಹುದು ಅಲ್ವೆ? ಅದೂ ಅಲ್ದೆ ಹಿಂದೂಗಳ ಬಗ್ಗೆ ಬರೆಯೋದು ತಪ್ಪಾ? ನಾವೇನು ಅಫ್ಘಾನಿಸ್ಥಾನದಲ್ಲಿದ್ದೇವಾ?

ಇನ್ನುಳಿದಂತೆ ವಿ.ಕ ದ ಭಾಷೆ , ಬರವಣಿಗೆಯಲ್ಲಿ ಇತ್ತೀಚೆಗೆ ಟ್ಯಾಬ್ಲಾಯ್ಡ್ ಛಾಪು ಕಂಡು ಬರುತ್ತಿರುವುದಂತೂ ಹೌದು.