ವ್ಯಾಕರಣದೋಷ

1

ಸಾಮಾನ್ಯವಾಗಿ ಪ್ರಜಾವಾಣಿ, ಕನ್ನಡಪ್ರಭ ಇತ್ಯಾದಿ ಹಾಗೂ ದೂರದರ್ಶನ ವಾಹಿನಿಗಳಾದ ಕಸ್ತೂರಿ, ಉದಯ, ಈಟಿವಿ ಮಾಡುವ ಸಾಮಾನ್ಯ ತಪ್ಪುಗಳು

ಜನಾರ್ಧನ ತಪ್ಪು ಜನಾರ್ದನ ಸರಿ
ಕೂಲಂಕುಷ ತಪ್ಪು ಕೂಲಂಕಷ ಸರಿ
ಸೃಷ್ಠಿ, ದೃಷ್ಠಿ ತಪ್ಪು ಸೃಷ್ಟಿ, ದೃಷ್ಟಿ ಸರಿ
ಉಪಹಾರ ತಪ್ಪು ಉಪಾಹಾರ ಸರಿ
ಇನ್ನು ಇತ್ಯಾದಿ ಇತ್ಯಾದಿ ತಪ್ಪುಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವೆಲ್ಲ ತಪ್ಪುಗಳಾಗುವುದು ಕನ್ನಡದಲ್ಲಿ ಬಲವಂತವಾಗಿ ಮಹಾಪ್ರಾಣವಿಟ್ಟುಕೊಂಡಿರುವುದರಿಂದ. ಮತ್ತು ಈ ತಪ್ಪುಗಳು ಬರಹದಲ್ಲಿ ಮಾತ್ರ. ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ, ಉಲಿಯುವಿಕೆಯಲ್ಲಿ ಅಲ್ಪಪ್ರಾಣವೇ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಕನ್ನಡದ ಸೊಬಗಿರುವುದು ಕನ್ನಡಕ್ಕೆ ತಕ್ಕಂತೆ ಸಕ್ಕದ ಪದಗಳನ್ನು ಬದಲಾಯಿಸಿಕೊಳ್ಳುವುದಱಲ್ಲಿ ಬದಲಿಗೆ ಯಥಾವತ್ತಾದ‌ ಸಕ್ಕದದ‌ ಪದಗಳಲ್ಲಿ ಮಹಾಪ್ರಾಣ‌ ಅಲ್ಪಪ್ರಾಣಗಳನ್ನು ಬದಲಾಯಿಸಿಕೊಳ್ಳುವುದಱಲ್ಲಲ್ಲ‌. ದೃಷ್ಟಿ ಗೆ ದಿಟ್ಟಿ ಎನ್ನಿ. ಸೃಷ್ಟಿಗೆ ಸಿಟ್ಟಿ ಯೆನ್ನಿ. ನನ್ನ‌ ಅಭ್ಯಂತರವಿಲ್ಲ‌.